For Quick Alerts
ALLOW NOTIFICATIONS  
For Daily Alerts

ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...

By manu
|

ಬಣ್ಣ ಕೆಂಪಗಿದೆ ಎಂಬ ಒಂದೇ ಕಾರಣಕ್ಕೆ ಹೆಚ್ಚಿನವರು ಬೀಟ್‌ರೂಟ್ ಗಡ್ಡೆಯನ್ನು ಸೇವಿಸುವುದರಿಂದ ದೂರ ಉಳಿಯುತ್ತಾರೆ. ಆದರೆ ವಾಸ್ತವವಾಗಿ ಬೀಟ್‌ರೂಟ್ ಒಂದು ಅತ್ಯುತ್ತಮವಾದ ಆಹಾರವಾಗಿದ್ದು ಇದರ ಸೇವನೆಯಿಂದ ಹಲವು ಪೋಷಕಾಂಶಗಳು ಮತ್ತು ಕರಗುವ ನಾರು ಜೀರ್ಣಕ್ರಿಯೆ ಹಾಗೂ ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ. ಗೌರವರ್ಣದ ತ್ವಚೆಗಾಗಿ ಪ್ರಯತ್ನಿಸಿ- ಬೀಟ್‌ರೂಟ್ ಜ್ಯೂಸ್

ಅದರಲ್ಲೂ ಬೀಟ್‌ರೂಟ್‌ನ್ನು ತುರಿದು ಹಿಂಡಿ ತೆಗೆದ ರಸವನ್ನು ನಿತ್ಯವೂ ಸೇವಿಸುವ ಮೂಲಕ ಆರೋಗ್ಯವನ್ನು ಇನ್ನಷ್ಟು ಉತ್ತಮವಾಗಿಸುತ್ತದೆ. ಹೇಗೆ ಎಂಬ ಕುತೂಹಲ ಮೂಡಿತೇ? ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲವನ್ನು ತಣಿಸಲಿದೆ..

ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ

ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ

ದೇಹದ ರಕ್ತದಲ್ಲಿ ನೈಟ್ರಿಕ್ ಆಮ್ಲದ ಕೊರತೆಯಿಂದ ರಕ್ತಪರಿಚಲನೆಯಲ್ಲಿ ಕೊಂಚ ಕಡಿತ ಕಂಡುಬರುತ್ತದೆ. ಲೈಂಗಿಕ ಶಕ್ತಿಯನ್ನು ಈ ಕೊರತೆ ಬಹುವಾಗಿ ತಗ್ಗಿಸುತ್ತದೆ. ಬೀಟ್ರೂಟಿನಲ್ಲಿ ಉತ್ತಮ ಪ್ರಮಾಣದ ನೈಟ್ರೇಟುಗಳಿದ್ದು ಇದು ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ

ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ

ರಕ್ತದಲ್ಲಿ ನೈಟ್ರಸ್ ಆಕ್ಸೈಡ್ ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಸುಲಭಗೊಳಿಸುತ್ತದೆ. ಇದು ವಿಶೇಷವಾಗಿ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಿ ಲೈಂಗಿಕ ಶಕ್ತಿಯನ್ನು ಬಹುವಾಗಿ ಹೆಚ್ಚಿಸುತ್ತದೆ. ಇದು ದಂಪತಿಗಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಲು ಭದ್ರ ಬುನಾದಿಯಾಗಿದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

Nursing and Health Science ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ರಕ್ತಹೀನತೆಯಿಂದ ಬಳಲುತ್ತಿದ್ದ ಹದಿಹರೆಯದ ಹಣ್ಣುಮಕ್ಕಳ ರಕ್ತದಲ್ಲಿ ಬ್ರೀಟ್ರೂಟ್ ರಸವನ್ನು ಸೇವಿಸಲು ಪ್ರಾರಂಭಿಸಿದ ಇಪ್ಪತ್ತೇ ದಿನದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅಂಶ ಇರುವ ಕಾರಣ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶ ಉತ್ಪತ್ತಿಗೊಳ್ಳಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತದ ಕೆಂಪು ರಕ್ತಕಣಗಳಲ್ಲಿರುವ ಪ್ರಮುಖ ಪ್ರೋಟೀನ್ ಆಗಿರುವ ಈ ಹೀಮೋಗ್ಲೋಬಿನ್ ಶ್ವಾಸಕೋಶಗಳಿಂದ ರಕ್ತವನ್ನು ದೇಹದ ಇತರ ಭಾಗಗಳಿಗೆ ಕೊಂಡೊಯ್ಯಲು ಅತ್ಯಂತ ಅಗತ್ಯವಾಗಿದೆ. ಇದು ವಿಶೇಷವಾಗಿ ಗರ್ಭಿಣಿಯರಿಗೆ ನೆರವಾಗುತ್ತದೆ. ಗರ್ಭಾವಸ್ಥೆಯಲ್ಲಿ ಒಡಲಲ್ಲಿ ಬೆಳೆಯುತ್ತಿರುವ ಕಂದನಿಗಾಗಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅವಶ್ಯವಿದೆ. ಅಲ್ಲದೇ ಮಾಸಿಕ ರಜಾದಿನಗಳ ಬಳಿಕ ಮಹಿಳೆಯರ ದೇಹದಲ್ಲಿ ಉಂಟಾಗಿದ್ದ ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ.

ಹೃದಯವನ್ನು ಉತ್ತಮ ಆರೋಗ್ಯದಲ್ಲಿರಿಸುತ್ತದೆ

ಹೃದಯವನ್ನು ಉತ್ತಮ ಆರೋಗ್ಯದಲ್ಲಿರಿಸುತ್ತದೆ

ಬೀಟ್ರೂಟ್ ರಸದಲ್ಲಿರುವ ನೈಟ್ರೇಟುಗಳು ರಕ್ತಪರಿಚಲನೆಯನ್ನು ಉತ್ತಮಗೊಳಿಸುವ ಜೊತೆಗೇ ಹೃದಯದ ಆರೋಗ್ಯವನ್ನೂ ವೃದ್ಧಿಸುತ್ತದೆ. ವಿಶೇಷವಾಗಿ ಅಧಿಕ ರಕ್ತದೊತ್ತಡದಿಂದ ಬಳಲುವ ರೋಗಿಗಳಿಗೆ ಇದು ವರದಾನವಾಗಿದೆ. ಇದರ ನಿತ್ಯದ ಸೇವನೆಯಿಂದ ರಕ್ತನಾಳಗಳು ಸಡಿಲಗೊಂಡು ರಕ್ತಪರಿಚಲನೆ ಸುಗಮಗೊಳ್ಳುತ್ತದೆ.

ಹೃದಯವನ್ನು ಉತ್ತಮ ಆರೋಗ್ಯದಲ್ಲಿರಿಸುತ್ತದೆ

ಹೃದಯವನ್ನು ಉತ್ತಮ ಆರೋಗ್ಯದಲ್ಲಿರಿಸುತ್ತದೆ

ಒಂದು ಸಂಶೋಧನೆಯ ಪ್ರಕಾರ ಎರಡು ವಾರಗಳ ಕಾಲ ಪ್ರತಿದಿನ ಅರ್ಧ ಕೇಜಿ ಬೀಟ್ರೂಟಿನಿಂದ ತೆಗೆದ ರಸವನ್ನು ಕುಡಿದ ಬಳಿಕ ಅಧಿಕ ರಕ್ತದೊತ್ತಡ ಸೇವನೆಯ ಕೇವಲ ಆರು ಘಂಟೆಗಳಲ್ಲಿ ಆರೋಗ್ಯಕರ ಮಟ್ಟಕ್ಕಿಳಿಸಿದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಒಂದು ಸಂಶೋಧನೆಯ ಪ್ರಕಾರ ಮೆದುಳಿಗೆ ಹರಿಯುವ ರಕ್ತದಲ್ಲಿ ನೈಟ್ರೇಟ್ ಆಕ್ಸೈಡ್ ಕೊರತೆಯ ಕಾರಣ ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ. ಇದರಿಂದ ಮೆದುಳಿನ ಜೀವಕೋಶಗಳಾದ ನ್ಯೂರಾನುಗಳು ಅಧಿಕ ಸಂಖ್ಯೆಯಲ್ಲಿ ಸಾಯುತ್ತವೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಬೀಟ್ರೂಟ್ ರಸವನ್ನು ನಿತ್ಯವೂ ಕುಡಿಯುವ ಮೂಲಕ ಈ ಕೊರತೆ ನೀಗುತ್ತದೆ. ವಿಶೇಷವಾಗಿ ಮೆದುಳಿನ ಮುಂಭಾಗದ ಹೊದಿಕೆ (frontal cortex) ಸವೆತದಿಂದ ಚೇತರಿಸಿಕೊಳ್ಳುತ್ತದೆ. ಇದರಿಂದ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಬೀಟ್ರೂಟ್ ರಸ ಸಿಹಿಯಾಗಿರುವುದರಿಂದ ಮಧುಮೇಹಿಗಳಿಗೆ ತಕ್ಕುದಲ್ಲ ಎಂದು ಹೆಚ್ಚಿನವರು ತಿಳಿದಿದ್ದಾರೆ. ಆದರೆ ಇದು ಸತ್ಯವಲ್ಲ, ಇದರ ರಸದ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಅದರಲ್ಲೂ ಊಟದ ಬಳಿಕ ಕುಡಿದ ರಸ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಇದಕ್ಕೆ ಕಾರಣ ಈ ರಸದಲ್ಲಿರುವ betalain ಮತ್ತು neo betanin ಎಂಬ ಪೋಷಕಾಂಶಗಳು.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಇವು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಹೆಚ್ಚಾಗದಂತೆ ನೋಡಿಕೊಳ್ಳಲು ನೆರವಾಗುತ್ತವೆ. ಜೊತೆಗೇ ಇನ್ಸುಲಿನ್ ಬಳಕೆಯಾಗಲು ನೆರವಾಗುತ್ತವೆ ಮತ್ತು ಮಧುಮೇಹಿಗಳಿಗೆ ಸಿಂಹಸ್ವಪ್ನವಾಗಿರುವ ಮಾಗುವ ಗುಣವನ್ನು ವೃದ್ಧಿಸುತ್ತದೆ. ಗಾಯಗಳಾದರೆ ಮಧುಮೇಹಿಗಳಿಗೆ ಮಾಗಲು ಬಲು ಹೆಚ್ಚಿನ ಸಮಯ ತೆಗೆದುಕೊಳ್ಳಲು ಇದೇ ಕಾರಣ.

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಬೀಟ್ರೂಟ್ ನಲ್ಲಿ betanin ಎಂಬ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಇದೊಂದು ವಿಷಕಾರಿ ವಸ್ತುಗಳನ್ನು ನಿವಾರಿಸುವ ಕಣಗಳಾದ ಬೀಟಾಸಯಾನಿನ್ (betacyanin)ನ ಮುಖ್ಯ ಘಟಕವಾಗಿದ್ದು ದೇಹದಲ್ಲಿ ಕ್ಯಾನ್ಸರ್ ಕಾರಕ ಕಣಗಳು ವೃದ್ಧಿಯಾಗುವುದರಿಂದ ರಕ್ಷಿಸುತ್ತದೆ.

English summary

Ways beetroot juice can save your life!

Drinking a glass of beetroot juice daily means consuming a whole lot of goodness — antioxidants, vitamins and minerals. Of course, minus the fibre that you only get when you eat the whole vegetable. However, only the juice will also do you great deal of good, here’s how:
X
Desktop Bottom Promotion