For Quick Alerts
ALLOW NOTIFICATIONS  
For Daily Alerts

ಏನಿದು ದಂತ ಕ್ಷಯ ಸಮಸ್ಯೆ? ಇದಕ್ಕೆ ಪರಿಹಾರವೇನು?

By Hemanth
|

ಹಲ್ಲು ನೋವು ಎಂದರೆ ಅದನ್ನು ತಡೆದುಕೊಳ್ಳುವುದು ತುಂಬಾ ಕಷ್ಟ. ಹಲ್ಲು ನೋವಿದ್ದರೆ ಯಾವುದೇ ಆಹಾರವನ್ನು ಸೇವಿಸಲು ಸಾಧ್ಯವಾಗಲ್ಲ. ಹಲ್ಲುನೋವಿಗೆ ಪ್ರಮುಖ ಕಾರಣ ದಂತಕ್ಷಯ. ಈ ದಂತಕ್ಷಯ ಬರುವುದು ದಂತಗಳ ಮೇಲಿನ ಕವಚ ನಿರ್ನಾಮವಾದಾಗ. ದಂತಕ್ಷಯವನ್ನು ಹಲ್ಲಿನ ಸವೆತ ಅಥವಾ ಹಲ್ಲಿನ ಕುಳಿಗಳು ಎಂದೂ ಕರೆಯುತ್ತೇವೆ, ದಂತಕವಚದಲ್ಲಿ ಶೇಖರಣೆಯಾಗುವಂತಹ ಬ್ಯಾಕ್ಟೀರಿಯಾಗಳಿಂದಾಗಿ ದಂತಕ್ಷಯವು ಉಂಟಾಗುತ್ತದೆ. ಹಲ್ಲು ನೋವನ್ನು ಶಮನಗೊಳಿಸಲು ಸೂಕ್ತ ಪರಿಹಾರ

ದಂತಗಳ ಪದರಗಳಲ್ಲಿ ಶೇಖರಣೆಯಾಗುವ ಕೆಲವೊಂದು ಸೂಕ್ಷ್ಮಾಣು ಜೀವಿಗಳು ಹಲ್ಲುಗಳಲ್ಲಿನ ಖನಿಜಾಂಶಗಳು ನಿರ್ನಾಮ ಮಾಡುವಂತಹ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಜೀವಂತವಾಗಿರುಂತ ಸೂಕ್ಷ್ಮಾಣುಜೀವಿಗಳು. ಇವುಗಳು ತಮಗೆ ಬೇಕಾಗಿರುವ ಆಹಾರವನ್ನು ನಾವು ತಿನ್ನುವಂತಹ ಆಹಾರದಲ್ಲಿರುವ ಸಕ್ಕರೆಯಂಶದಿಂದ ಪಡೆಯುತ್ತದೆ.

Tooth Decay

ಸಕ್ಕರೆ ಇರುವಂತಹ ಆಹಾರವನ್ನು ತಿಂದಾಗ ಸೂಕ್ಷ್ಮಾಣುಜೀವಿಗಳು ಆಮ್ಲವನ್ನು ಬಿಡುಗಡೆ ಮಾಡಿ ಹಲ್ಲಿನ ಪದರದ ಮೇಲೆ ದಾಳಿ ಮಾಡುತ್ತದೆ ಮತ್ತು ಇದರಿಂದ ದಂತಕ್ಷಯ ಕಾಡುತ್ತದೆ. ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ತಮ್ಮ ಪ್ರಮುಖ ಆಹಾರವನ್ನಾಗಿ ಮಾಡಿಕೊಳ್ಳುತ್ತವೆ. ಸಕ್ಕರೆಯನ್ನು ಸಂಸ್ಕರಿಸಲು ಬಳಸುವಂತಹ ಕೆಲವೊಂದು ತ್ಯಾಜ್ಯಗಳು ಆಮ್ಲವನ್ನು ಉತ್ಪತ್ತಿ ಮಾಡಿ ಹಲ್ಲುಗಳಲ್ಲಿನ ಖನಿಜಾಂಶವನ್ನು ನಿರ್ನಾಮ ಮಾಡಿ ದಂತಕ್ಷಯಕ್ಕೆ ಕಾರಣವಾಗುತ್ತದೆ. ಅಯ್ಯೋ ವಿಪರೀತ ಹಲ್ಲು ನೋವು, ನಿದ್ದೆಯೇ ಬರುತ್ತಿಲ್ಲ

ಹಲ್ಲುಗಳ ಪದರಗಳನ್ನು ನಾಶ ಮಾಡಲು ಇದಕ್ಕೆ ಹಲವಾರು ಗಂಟೆಗಳು ಬೇಕಾಗುತ್ತದೆ. ಮನೆಯಲ್ಲಿ ಅಥವಾ ಹಲ್ಲಿನ ವೈದ್ಯರ ಬಳಿ ಹೋದಾಗ ಫ್ಲೋರೈಡ್ ಅನ್ನು ಬಳಸುವುದರಿಂದ ಹಲ್ಲುಗಳನ್ನು ಸರಿಪಡಿಸಲು ನೆರವಾಗುವುದು. ದಂತಕ್ಷಯಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಅದರಿಂದ ಮುಂದೆ ಹೆಚ್ಚಿನ ಹಾನಿಯಾಗಬಹುದು.

ಹಲ್ಲಿನ ಕವಚವು ತುಂಡಾದ ಬಳಿಕ ಹಲ್ಲುಗಲನ್ನು ಸರಿಪಡಿಸಲು ಸಾಧ್ಯವಿಲ್ಲ. ದಂತಕುಳಿಯನ್ನು ದಂತವೈದ್ಯರು ಸ್ವಚ್ಛಗೊಳಿಸಿ ಸರಿಪಡಿಸಬೇಕು. ದಂತಕುಳಿಗೆ ಚಿಕಿತ್ಸೆ ನೀಡದೆ ಇದ್ದರೆ ಹಲ್ಲಿನ ಬುಡಕ್ಕೆ ಬಂದು ನರ ಹಾಗೂ ರಕ್ತನಾಳಗಳಿಗೆ ತೊಂದರೆ ಉಂಟು ಮಾಡಬಹುದು. ಈ ಭಾಗದಲ್ಲಿ ಬಾವು ಅಥವಾ ಗುಳ್ಳೆಗಳು ಕಾಣಿಸಿಕೊಳ್ಳಬಹುದು.

ಆಹಾರ ತಿಂದ ಬಳಿಕ ಬಾಯಿ ಮುಕ್ಕಳಿಸಿಕೊಳ್ಳುವುದು ಅಥವಾ ಹಲ್ಲುಜ್ಜುವುದರಿಂದ ದಂತಕ್ಷಯವನ್ನು ತಡೆಯಬಹುದು. ಹಲ್ಲುಜ್ಜಲು ಮತ್ತು ಬಾಯಿ ಮುಕ್ಕಲಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಿ. ಬ್ರಷ್ ತಲುಪದೆ ಇರುವ ಸ್ಥಳಗಳಲ್ಲಿ ಬ್ಯಾಕ್ಟೀರಿಯಾ ವಾಸಿಸುತ್ತದೆ. ಇದಕ್ಕಾಗಿ ಸರಿಯಾಗಿ ಬಾಯಿ ಮುಕ್ಕಳಿಸಿಕೊಳ್ಳಿ. ನಿದ್ದೆ ಕೆಡಿಸುವ ಹಲ್ಲು ನೋವಿಗೆ, ಪವರ್ ಫುಲ್ ಮನೆಮದ್ದು

ದಂತಕ್ಷಯವು ಸಾಮಾನ್ಯವಾದ ಸಮಸ್ಯೆಯಾಗಿದೆ. ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸಿಕೊಳ್ಳುವುದರೊಂದಿಗೆ ಆಗಾಗ ಹಲ್ಲಿನ ವೈದ್ಯರಲ್ಲಿಗೆ ಹೋಗಿ ಪರೀಕ್ಷಿಸಿ ಸ್ವಚ್ಛ ಮಾಡಿಕೊಂಡರೆ ಒಳ್ಳೆಯದು. ಕ್ಯಾಂಡಿ, ಬಿಸ್ಕಿಟ್, ಸೋಡಾ ಮತ್ತು ಸಿಹಿ ತಂಪುಪಾನೀಯಗಳನ್ನು ಕಡೆಗಣಿಸಿ. ನೀವು ಇವುಗಳನ್ನು ಸೇವಿಸಿದರೂ ತಕ್ಷಣ ಬಾಯಿ ತೊಳೆಯಿರಿ. ಏನೇ ತಿಂದರೂ ಬಾಯಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ.

English summary

What Causes Tooth Decay And How Can We Prevent It?

Tooth decay is the destruction of the enamel of the tooth. Tooth decay is also known as dental caries or cavities. Tooth decay is caused by the bacteria that accumulate on the tooth enamel.
X
Desktop Bottom Promotion