Just In
Don't Miss
- Movies
ಸಂಜೆ 6 ಗಂಟೆಗೆ ಬಿಗ್ ಬಾಸ್-8 ಆರಂಭ: 17 ಸ್ಪರ್ಧಿಗಳು ಯಾರು?
- News
ಪುಣೆಯಲ್ಲಿ ಕೊರೊನಾ ಕಾಟ: ಮಾರ್ಚ್.14ರವರೆಗೂ ರಾತ್ರಿ ನಿಷೇಧಾಜ್ಞೆ
- Sports
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಜೀವಮಾನ ಶ್ರೇಷ್ಠ ಸ್ಥಾನಕ್ಕೇರಿದ ರೋಹಿತ್ ಶರ್ಮಾ, ಅಶ್ವಿನ್ ನಂಬರ್ 3
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೀವು ಖರೀದಿಸಿದ ಬ್ರಾ ನಿಮಗೆಷ್ಟು ಸುರಕ್ಷಿತ?
ಮಹಿಳೆಯರು ಉಡುಪುಗಳ ಖರೀದಿಯಲ್ಲಿ ಎತ್ತಿದ ಕೈ. ಅವರ ಆಯ್ಕೆಗಳು ಅನಂತಾನಂತ ವಿಧಗಳು. ಅದರಲ್ಲೂ ಉಡುಪುಗಳ ಖರೀದಿಗೆ ತೆರಳುವುದೇ ಒಂದು ಹಬ್ಬವಿದ್ದಂತೆ. ತಮ್ಮ ಖರೀದಿಯಲ್ಲಿ ಕನಿಷ್ಠವೆಂದರೂ ನೂರಕ್ಕಿಂತ ಅಧಿಕ ವಿನ್ಯಾಸಗಳನ್ನು ನೋಡುತ್ತಾರೆ. ಒಮ್ಮೊಮ್ಮೆ ಎಲ್ಲವನ್ನೂ ನೋಡಿ ಯಾವುದೂ ಹಿಡಿಸದೇ ಮನೆಗೆ ಹಿಂದಿರುಗುತ್ತಾರೆ. ಅವರನ್ನು ಒಪ್ಪಿಸುವುದೇ ಒಂದು ದೊಡ್ಡ ಸವಾಲು.
ಹೀಗಿರುವಾಗ ಹೆಚ್ಚಿನವರಿಗೆ ತಮ್ಮ ಉಡುಪುಗಳ ಆಯ್ಕೆಯಲ್ಲಿರುವ ಜ್ಞಾನ ತಮ್ಮ ಒಳಉಡುಪಿನ ಆಯ್ಕೆಯಲ್ಲಿ ಇರುವುದಿಲ್ಲ. ಏಕೆಂದರೆ ಅದು ಹೊರಗೆ ಕಾ ಣುವುದಿಲ್ಲವೆಂಬ ಭಾವನೆ ಸಾಕಷ್ಟು ಜನರಿಗಿದೆ. ಆದರೆ ಈ ಒಳಉಡುಪುಗಳು ನಿಮ್ಮ ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳುವುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹಿಂಜರಿಯುತ್ತೀರಿ. "32,34,36" ನಿಮ್ಮ ಬ್ರಾ ಸೈಜ್ ಯಾವುದು?
ಈ ಉದಾಸೀನ ಮನೋಭಾವ ಕೊನೆಗೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲು ಕಾರಣವಾಗುತ್ತದೆ. ಹೌದು, ನಾವಿಂದು ಮಹಿಳೆಯರ ಒಳಉಡುಪಾದ ಬ್ರಾ ಅಥವಾ ಸ್ತನಬಂಧದ ಬಗ್ಗೆ ಮಾತನಾಡುತ್ತಿದ್ದೀವಿ. ಹೌದು, ಬ್ರಾ ಖರೀದಿಸುವಾಗ ಹಿಂದೆ, ಮುಂದೆ ಯೋಚಿಸದೆ ತಮ್ಮ ದೇಹಕ್ಕೆ ಹೊಂದಿಕೆಯಾಗುವುದೇ ಎಂಬುದನ್ನು ಸಹ ಅರಿಯದೇ ಕೊಂಡುಕೊಳ್ಳುತ್ತಾರೆ.
ಕೆಲವು ಸಂದರ್ಭಗಳಲ್ಲಿ ಅವರು ಖರೀದಿಸಿದ ಬ್ರಾಗಳು ತಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತಿರುವ ಬಗ್ಗೆ ಅರಿಯಲು ವಿಫಲರಾಗುತ್ತಾರೆ. ನಿಮ್ಮ ದೇಹಕ್ಕೆ ಸರಿ ಹೊಂದದ ಬ್ರಾ ಯಿಂದ ನಿಮ್ಮ ಆರೋಗ್ಯಕ್ಕೆ ಮಾರಕವಾಗುವ ಕೆಲವು ವಿಶಿಷ್ಟ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ, ಮುಂದೆ ಓದಿ
*ಒಂದು ವೇಳೆ ಬ್ರಾ ಧರಿಸಿದ ನಂತರ ನಿಮ್ಮ ಭುಜಗಳಲ್ಲಿ ಆಗಾಗ ತುರಿಕೆ ಅಥವಾ ಕೆಂಪು ನವೆಗಳು ಬರುವ ಪ್ರವೃತ್ತಿ ಇದ್ದಲ್ಲಿ ಮುಗಿದೇ ಹೋಯಿತು. ಸಂಶಯವೇ ಬೇಡ, ತಪ್ಪು ಗಾತ್ರದ ಬ್ರಾಯಿಂದ ನಿಮ್ಮ ಚರ್ಮಕ್ಕೆ ಅಪಾಯ ಗ್ಯಾರಂಟಿ. ಇದರಿಂದ ಶಿಲೀಂಧ್ರದ ಸೋಂಕು ಹೆಚ್ಚಲು ಕಾರಣವಾಗುತ್ತದೆ. ತಪ್ಪಾದ ಸೈಜ್ ನ ಬ್ರಾ ಬ್ಯೂಟಿ ಮತ್ತು ಹೆಲ್ತ್ ಗೆ ಆಪತ್ತು!
*ದೇಹದ ಆಕಾರಕ್ಕೆ ಸರಿಹೊಂದದ ಬ್ರಾಗಳು ನಿಮ್ಮ ಸ್ತನಗಳಿಗೆ ಅಹಿತವನ್ನು ನೀಡಿ, ನಿಮ್ಮ ಕುತ್ತಿಗೆ ಮತ್ತು ಸ್ನಾಯುಗಳಿಗೆ ಹೆಚ್ಚು ಒತ್ತಡ ನೀಡಿ ನೋವನ್ನುಂಟು ಮಾಡುತ್ತವೆ. ಇದರಿಂದ ನಿಮ್ಮ ತಲೆಯ ಭಾಗಕ್ಕೆ ರಕ್ತ ಸಂಚಲನದಲ್ಲಿ ಕೊರತೆಯುಂಟಾಗುವುದರ ಜೊತೆಗೆ, ಕುತ್ತಿಗೆ ನೋವು ಜಾಸ್ತಿಯಾಗಿ ಇದರಿಂದ ವಿಪರೀತ ತಲೆನೋವು ಉಂಟಾಗಲು ಕಾರಣವಾಗುತ್ತದೆ.
*ಗಾತ್ರದಲ್ಲಿ ಸರಿಹೊಂದದ ಬ್ರಾಗಳಿಂದ ಎದೆಯ ಭಾಗಕ್ಕೆ ಒತ್ತಡ ಹೇರಿ, ಉರಿಯು ಉಂಟಾಗಿ ಅಂತಿಮವಾಗಿ ಉಸಿರಾಟಕ್ಕೆ ತೊಡಕುಂಟಾಗುತ್ತದೆ. ಸಿಲಿಕಾನ್ ಬ್ರಾ ಸ್ತನಗಳ ಆರೋಗ್ಯಕ್ಕೆ ಎಷ್ಟು ಸೂಕ್ತ?
*ಈ ರೀತಿಯ ಬ್ರಾಗಳಿಂದ ಜೀರ್ಣಕ್ರಿಯೆಗೆ ತೊಂದರೆಯುಂಟಾಗಿ ಕರುಳು ಬೇನೆ ಬರುತ್ತದೆ ಎಂಬುದು ನಿಮಗೆ ಅರಿವಿದೆಯೇ? ಹೌದು, ಈ ರೀತಿಯ ಬ್ರಾಗಳ ಬಳಕೆಯಿಂದ ಸೊಂಟದ ಭಾಗಕ್ಕೆ ಅತಿಯಾದ ಒತ್ತಡ ಉಂಟಾಗಿ ಅಜೀರ್ಣ ತೊಂದರೆಯನ್ನೂ ಎದುರಿಸಬೇಕಾದೀತು...!