For Quick Alerts
ALLOW NOTIFICATIONS  
For Daily Alerts

ನೀರು ಮತ್ತು ಹಣ್ಣಿನ ಜ್ಯೂಸ್-ಇವೆರಡರಲ್ಲಿ ಯಾರು ಹಿತವರು?

By Manu
|

ಮನೆಯ ಹೊರಗಿದ್ದಾಗ ಹೆಚ್ಚಿನವರು ನೀರು ಕುಡಿಯುವ ಬದಲು ಕಾಫಿ ಟೀ ಹಣ್ಣಿನ ರಸಗಳನ್ನೇ ಕುಡಿಯಲು ಇಚ್ಛಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ನೀರು ಕುಡಿಯುವ ಅಗತ್ಯತೆ ಕಂಡುಬಂದಾಗ ತಾಜಾ ಹಣ್ಣಿನ ರಸವನ್ನು ಬಯಸುತ್ತಾರೆ. ಅಂತೆಯೇ ಕೆಲವು ಕಡೆಗಳಲ್ಲಿ ನೀರಿಗಿಂತ ಹಣ್ಣಿನ ರಸಗಳೇ ಸುಲಭವಾಗಿ ಲಭ್ಯವಾಗುತ್ತವೆ. ಒಂದು ಅರ್ಥದಲ್ಲಿ ಇದು ನೀರಿಗಿಂತ ಉತ್ತಮವೇ.

ಆದರೆ ಸಕ್ಕರೆ ಇಷ್ಟವಿಲ್ಲದವರಿಗೆ? ನಿಮ್ಮ ಇಷ್ಟದ ಹಣ್ಣಿನ ರಸ ಲಭ್ಯವಿಲ್ಲದಿದ್ದರೆ? ಹಣ್ಣು ತಾಜಾ ಇದೆಯೋ ಇಲ್ಲವೋ, ಕೊಳೆತಿದ್ದನ್ನೆಲ್ಲಾ ಗೊಟಾಯಿಸಿ ಕೊಟ್ಟಿದ್ದಾರೋ ಎಂಬ ಅನುಮಾನ ಮೂಡಿದರೆ? (ಹೆಚ್ಚಿನ ಹಣ್ಣಿನ ಅಂಗಡಿಗಳಲ್ಲಿ ತಾಜಾ ಇರುವುದನ್ನು ಗಿರಾಕಿಗೆ ಕಾಣುವ ತರಹ ಇಟ್ಟು ರಸ ತೆಗೆಯುವಾಗ ಬೇರಾವುದೋ ಹಳೆಯ, ಧಕ್ಕೆ ಬಂದಿರುವ ಅರ್ಧ ಹಾಳಾದ ಭಾಗವನ್ನು ತುಂಡರಿಸಿ ಉಳಿದರ್ಧ ಭಾಗವನ್ನೇ ರಸಹಿಂಡಿ ಚೆನ್ನಾಗಿ ಸಕ್ಕರೆ ಸೇರಿಸಿ ಸುಂದರವಾದ ಗಾಜಿನ ಬಾಟಲಿಯಲ್ಲಿ ಹಾಕಿ ಕೊಡುತ್ತಾರೆ) ಆದರೆ ಆಹಾರ ಪರಿಣಿತರ ಪ್ರಕಾರ ದೇಹಕ್ಕೆ ದ್ರವದ ಅಗತ್ಯವನ್ನು ನೀರಿಗಿಂತ ಚೆನ್ನಾಗಿ ಪೂರೈಸುವ ದ್ರವ ಈ ಜಗತ್ತಿನಲ್ಲಿಯೇ ಇಲ್ಲ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಆದರೆ ದೇಹಕ್ಕೆ ಎಲ್ಲಾ ಪೋಷಕಾಂಶಗಳೂ ಸಂತುಲಿತ ಪ್ರಮಾಣದಲ್ಲಿ ಅಗತ್ಯವಿವೆ. ನಮ್ಮ ಆಹಾರದಲ್ಲಿ ಎಲ್ಲವೂ ಸಿಗುವಂತಿದ್ದರೆ ಮಾತ್ರ ದ್ರವದ ಅಗತ್ಯವನ್ನು ನೀರಿನಿಂದ ಪೂರೈಸಿಕೊಳ್ಳುವುದೇ ಉತ್ತಮ. ಒಂದು ವೇಳೆ ಹಣ್ಣುಗಳಲ್ಲಿ ಸಿಗುವ ಪೋಷಕಾಂಶಗಳು ಆಹಾರದಲ್ಲಿ ಸಿಗದೇ ಹೋದರೆ? ಆಗ ಹಣ್ಣಿನ ರಸವನ್ನು ಒಂದು ಆಯ್ಕೆಯಾಗಿ ಪರಿಗಣಿಸಿ ಉಳಿದಂತೆ ಆಹಾರದಲ್ಲಿ ವಿಟಮಿನ್‌ಗಳು, ಖನಿಜಗಳು, ಪ್ರೋಟೀನುಗಳು ಮತ್ತು ಕಾರ್ಬೋಹೈಡ್ರೇಟುಗಳಿರುವ ಆಹಾರಗಳನ್ನು ಸೇವಿಸುವುದೇ ಜಾಣತನ. ಲವಲವಿಕೆಯ ಆರೋಗ್ಯಕ್ಕೆ 'ತರಕಾರಿ ಜ್ಯೂಸ್' ಸಹಕಾರಿ

ಹಣ್ಣಿನ ರಸದ ಬದಲು ತಾಜಾ ಹಣ್ಣಿನ ತಿರುಳು, ಹಸಿ ತರಕಾರಿ ಮೊದಲಾದವುಗಳನ್ನು ಸೇವಿಸುವ ಮೂಲಕ ಪೋಷಕಾಂಶಗಳು ಲಭ್ಯವಾಗುವ ಜೊತೆಗೇ ವಿಷಕಾರಿ ವಸ್ತುಗಳೂ ದೇಹದಿಂದ ಸುಲಭವಾಗಿ ನಿವಾರಣೆಯಾಗುತ್ತವೆ. ಆದ್ದರಿಂದ ಹಣ್ಣಿನ ರಸ, ಅದರಲ್ಲೂ ಸಕ್ಕರೆ ಸೇರಿಸಿದ ಹಣ್ಣಿನರಸ ಅಥವಾ ಲಘುಪಾನೀಯಗಳನ್ನು ಎಂದಾದರೊಮ್ಮೆ ಎಂಬಂತೆ ಹೊರತು ನೀರಿನ ಬದಲಿಗೆ ಸೇವಿಸುವುದು ಉತ್ತಮವಲ್ಲ. ಈ ಬಗ್ಗೆ ಪರಿಣಿತರು ನಡೆಸಿದ ಚರ್ಚೆಯ ಗ್ರಾಸವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಕ್ಯಾಲೋರಿಗಳು

ಕ್ಯಾಲೋರಿಗಳು

ನೀರಿನಲ್ಲಿ ಕ್ಯಾಲೋರಿಗಳೇ ಇಲ್ಲದ ಕಾರಣ ಎಷ್ಟು ನೀರು ಕುಡಿದರೂ ತೂಕ ಏರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಹೆಚ್ಚಿನ ಹಣ್ಣಿನ ರಸಗಳು, ಅದರಲ್ಲೂ ವಿಶೇಷವಾಗಿ ಸಕ್ಕರೆ ಸೇರಿಸಿದ ಪಾನೀಯಗಳು ಮತ್ತು ಲಘುಪಾನೀಯಗಳು (ಇದರಲ್ಲಿ ಏಳು ಪಟ್ಟು ಹೆಚ್ಚು ಸಕ್ಕರೆ ಇರುತ್ತದೆ) ಅಪಾರ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ದೇಹದಲ್ಲಿ ತುಂಬಿಸುತ್ತವೆ. ಈ ಆಗಾಧ ಪ್ರಮಾಣವನ್ನು ಏನು ಮಾಡುವುದು? ದೇಹ ಇದನ್ನು ಕೊಬ್ಬನ್ನಾಗಿ ಪರಿವರ್ತಿಸಿ ತೂಕ ಹೆಚ್ಚಿಸುತ್ತದೆ. ಆದರೆ ನಿಜವಾದ ತಾಜಾ (ಅರ್ಧ ಕೊಳೆತ ಹಣ್ಣಲ್ಲ) ಹಣ್ಣುಗಳ ರಸವನ್ನು ಹಿಂಡದೇ ಇಡಿಯ ತಿರುಳನ್ನೇ ನೀರು ಅಥವಾ ಹಾಲಿನೊಂದಿಗೆ ಗೊಟಾಯಿಸಿ ಇದರ ನಾರನ್ನು ಬೇರ್ಪಡಿಸದೇ, ಸಕ್ಕರೆ ಸೇರಿಸದೇ ಕುಡಿದರೆ ಹಣ್ಣುಗಳ ಪೋಷಕಾಂಶಗಳ ಗರಿಷ್ಟ ಪ್ರಯೋಜನ ಪಡೆಯಬಹುದು ಅಲ್ಲದೇ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಸಕ್ಕರೆ

ಸಕ್ಕರೆ

ನೀರಿನಲ್ಲಿ ಸಕ್ಕರೆಯ ಅಂಶ ಇಲ್ಲವೇ ಇಲ್ಲ. ಆದರೆ ಹಣ್ಣಿನ ರಸದಲ್ಲಿರುವ ಸಕ್ಕರೆಯ ಅಂಶ ಥಟ್ಟನೇ ಜೀರ್ಣಗೊಂಡು ರಕ್ತಕ್ಕೆ ಬಂದುಬಿಡುತ್ತದೆ. ಇದು ರಕ್ತದ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸಿ ಹಲವು ತೊಂದರೆಗಳನ್ನು ಆಹ್ವಾನಿಸುತ್ತದೆ. ಆದರೆ ಸಕ್ಕರೆ ಹಾಕದ ಹಣ್ಣಿನ ರಸವನ್ನು ಒಂದು ಆಯ್ಕೆಯಾಗಿ ಅಥವಾ ಹೆಚ್ಚು ಬಳಲಿಕೆಯಾಗಿದ್ದ ಸಮಯದಲ್ಲಿ ಕುಡಿಯಬಹುದು.

ಜಲಸಂಚಯನ (Hydration)

ಜಲಸಂಚಯನ (Hydration)

ದೇಹದ ನೀರಿನ ಅಗತ್ಯತೆಯನ್ನು ಅಥವಾ ಜಲಸಂಚಯನವನ್ನು ಪೂರೈಸಲು ನೀರಿಗೇ ಸಾಧ್ಯ. ಇದರ ಬದಲಿಗೆ ಹಣ್ಣಿನ ರಸವನ್ನು ಕುಡಿದರೆ ದೇಹದ ನೀರಿನ ಅಗತ್ಯತೆ ಪೂರೈಸುವುದಿಲ್ಲ. ಆದ್ದರಿಂದ ದಿನದ ನೀರಿನ ಅಗತ್ಯವನ್ನು ನೀರಿನಿಂದಲೇ ಪೂರೈಸಿ ಇದಕ್ಕೂ ಹೊರತಾಗಿ ಕೊಂಚ ಹಣ್ಣಿನ ರಸವನ್ನು ಕುಡಿದರೆ ಆರೋಗ್ಯಕರ.

ವಿಷಕಾರಿ ವಸ್ತುಗಳ ವಿಸರ್ಜನೆ

ವಿಷಕಾರಿ ವಸ್ತುಗಳ ವಿಸರ್ಜನೆ

ಕೆಲವು ದಿನಗಳಿಂದ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಕೆಲವು ಹಣ್ಣುಗಳ ರಸಗಳು ಸಮರ್ಥವಾಗಿದ್ದರೂ ನೀರು ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕುವಷ್ಟು ಕ್ಷಮತೆಯನ್ನು ಯಾವುದೇ ದ್ರವ ಹೊಂದಿಲ್ಲ. ಆದ್ದರಿಂದ ನೀರನ್ನು ಹೆಚ್ಚು ಮತ್ತು ಹಣ್ಣಿನ ರಸವನ್ನು ಕಡಿಮೆ ಕುಡಿಯಬೇಕು.

ಮೌಲ್ಯ

ಮೌಲ್ಯ

ಭಾರತದಂತಹ ರಾಷ್ಟ್ರಗಳಲ್ಲಿ ಅತಿಥಿಗಳನ್ನು ಸತ್ಕರಿಸಲು ಮೊದಲು ನೀಡುವುದೇ ನೀರು. ಹಾಗಾಗಿ ಸರಿಸುಮಾರು ಎಲ್ಲೆಡೆಯೂ ನೀರು ಉಚಿತ ಅಥವಾ ಅಗ್ಗವಾಗಿ ದೊರಕುತ್ತದೆ. ಆದರೆ ಯಾವುದೇ ಹಣ್ಣಿನ ರಸ ಕೊಂಚವಾದರೂ ಬೆಲೆ ಬಾಳುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಎಲ್ಲಾ ಪೋಷಕಾಂಶಗಳು ದೊರಕುತ್ತಿವೆ ಎಂದ ಹೊರತು ಕೇವಲ ನೀರು ಕುಡಿಯಬೇಡಿ. ಆಗಾಗ ಹಣ್ಣಿನ ರಸವನ್ನೂ ಸೇವಿಸಿ.

ಸಿದ್ಧಪಡಿಸಲು ತಗಲುವ ಸಮಯ

ಸಿದ್ಧಪಡಿಸಲು ತಗಲುವ ಸಮಯ

ನೀರು ಎತ್ತಿ ಕುಡಿಯಬಹುದಾದಷ್ಟೇ ಸುಲಭವಾದುದರಿಂದಲೇ ನೀರು ಕುಡಿದಷ್ಟು ಸುಲಭ ಎಂಬ ನಾಣ್ಣುಡಿ ಬಂದಿದೆ. ಆದರೆ ಹಣ್ಣಿನ ರಸವನ್ನು ಸಿದ್ಧಪಡಿಸಲು ಕೊಂಚ ಶ್ರಮ, ಕೊಂಚ ಸಮಯ ವ್ಯಯವಾಗುತ್ತದೆ.

ದೇಹದ ಕಲ್ಮಶ ಹೊರಹಾಕಲು...

ದೇಹದ ಕಲ್ಮಶ ಹೊರಹಾಕಲು...

ನಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ನೀರಿಗಿಂತ ಉತ್ತಮವಾದ ವಸ್ತು ಇನ್ನೊಂದಿಲ್ಲ. ಆದರೆ ಕೆಲವು ವಿಶೇಷ ಅಗತ್ಯಗಳಿಗೆ ಹಣ್ಣಿನ ರಸಗಳನ್ನು ಉಪಯೋಗಿಸಬಹುದಾದರೂ ನೀರಿನಷ್ಟು ಉತ್ತಮವಾಗಿ ಅಲ್ಲ. ಅಲ್ಲದೇ ನೀರು ದೇಹದ ಕಲ್ಮಶಗಳನ್ನು ಹೊರಹಾಕಲು ಹಣ್ಣಿನ ರಸಕ್ಕಿಂತ ಹೆಚ್ಚು ಸಕ್ಷಮವಾಗಿದೆ.

English summary

Water & fruits Juice- which one is better for health

Everyone around you promotes drinking fruit juices. Of course, it is a good habit. But what if you hate to add that sugar to your system? What if you simply hate the sweet taste to your tongue? What if you love water more? Are you depriving yourself of any advantage? Well, health experts say that drinking water has more benefits than drinking fruit juices. But wait; remember to eat a balanced diet that contains salads and foods rich in vitamins,
X
Desktop Bottom Promotion