For Quick Alerts
ALLOW NOTIFICATIONS  
For Daily Alerts

ಜ್ಞಾಪಕ ಶಕ್ತಿ ಹೆಚ್ಚಳಕ್ಕೆ 'ಮೆಡಿಟರೇನಿಯನ್ ಆಹಾರ' ಸೇವಿಸಿ

By Hemanth
|

ಆರೋಗ್ಯದ ಬಗ್ಗೆ ಕಾಳಜಿಯು ಪ್ರತೀ ದಿನವು ಹೆಚ್ಚಾಗುತ್ತಾ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವಂತಹ ಅಧ್ಯಯನಗಳು ನಡೆಯುತ್ತಲೇ ಇರುತ್ತದೆ. ಪ್ರತಿಯೊಂದು ದೇಶದಲ್ಲಿ ವಿಭಿನ್ನವಾಗಿರುವಂತಹ ಆಹಾರ ಪದ್ಧತಿಯಿರುತ್ತದೆ. ಆಯಾಯ ಹವಾಮಾನಕ್ಕೆ ಹೊಂದಿಕೊಂಡು ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಆಹಾರವನ್ನು ಬಳಸುತ್ತಾರೆ. ಆಹಾರವನ್ನು ಕಾಪಾಡಲು ನಮ್ಮ ದೇಶದ ಆಹಾರವೇ ಶ್ರೇಷ್ಠ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಾ ಇರುತ್ತದೆ.

ಆದರೆ ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ಮೆಡಿಟೇರಿಯನ್ ಆಹಾರವು ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ಇದು ನಿಮ್ಮ ಅರಿವಿನ ಚಟುವಟಿಕೆ ಮತ್ತು ಹೃದಯದ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಅಲ್ಝೀಮೆರ್ ಬರದಂತೆ ತಡೆಯುತ್ತದೆ. ಮೆಡಿಟರೇನಿಯನ್ ಆಹಾರ ಪದ್ಧತಿಯಲ್ಲಿರುವ ಪ್ರಮುಖ ಆಹಾರವೆಂದರೆ ಹಸಿರೆಲೆಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳು, ದ್ವಿದಳ ಧಾನ್ಯಗಳು, ಬೀನ್ಸ್, ಬೀಜಗಳು, ಕಾಯಿಗಳು ಮತ್ತು ಕಾಳುಗಳು.

Want A Better Memory? Eat Mediterranean Diet

ಮೆಡಿಟರೇನಿಯನ್ ನಲ್ಲಿ ಸಿಗುವಂತಹ ಆಲಿವ್ ತೈಲವನ್ನು ಇಲ್ಲಿ ಹೆಚ್ಚಾಗಿ ಕೊಬ್ಬಿನ ಮೂಲವಾಗಿ ಬಳಸಲಾಗುತ್ತದೆ. ಮೆಡಿಟರೇನಿಯನ್ ಆಹಾರದಲ್ಲಿ ಹಾಲಿನ ಉತ್ಪನ್ನಗಳು ಮತ್ತು ಕೆಂಪು ಮಾಂಸದ ಬಳಕೆ ಕಡಿಮೆ. ಜ್ಞಾಪಕ ಶಕ್ತಿ ಹೆಚ್ಚಿಸಲು ಸರಳ ಸೂತ್ರ

ಜರ್ನಲ್ ಫ್ರಂಟೈರ್ಸ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾಗಿರುವಂತಹ ಅಧ್ಯಯನದಲ್ಲಿ ಮೆಡಿಟರೇನಿಯನ್ಆಹಾರವು ಅರಿವಿನ ಕ್ರಿಯೆಗೆ ಹೇಗೆ ಮತ್ತು ಯಾವ ರೀತಿ ನೆರವಾಗುತ್ತದೆ ಎಂದು ತಿಳಿಸಲಾಗಿದೆ. ವಿಶ್ವದೆಲ್ಲೆಡೆಯ ರಾಷ್ಟ್ರಗಳಲ್ಲಿ ಮೆಡಿಟರೇನಿಯನ್ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿರುವವರಲ್ಲಿ ಧನಾತ್ಮಕವಾಗಿರುವ ಫಲಿತಾಂಶವು ಕಂಡುಬಂದಿದೆ.

ಮೆಡಿಟರೇನಿಯನ್ ಪ್ರದೇಶಕ್ಕಿಂತಹ ಹೊರಗಡೆಯಿದ್ದರೂ ಮೆಡಿಟರೇನಿಯನ್ ಆಹಾರ ಪದ್ಧತಿ ಅಳವಡಿಸಿಕೊಂಡಿರುವವರಲ್ಲಿ ಹೆಚ್ಚಿನ ಅರಿವಿನ ಕ್ರಿಯೆಯು ಕಂಡು ಬಂದಿರುವುದಾಗಿ ಸ್ವೈನ್ಬರ್ನ್ ವಿಶ್ವವಿದ್ಯಾನಿಲಯದ ರಾಯ್ ಹರ್ಡ್ಮನ್ ತಿಳಿಸಿದ್ದಾರೆ.

ಮೆಡಿಟರೇನಿಯನ್ ಆಹಾರ ಪದ್ಧತಿ ಅಳವಡಿಸಿಕೊಂಡಿರುವವರಲ್ಲಿ ಏಕಾಗ್ರತೆ, ಭಾಷೆ ಮತ್ತು ನೆನಪಿನ ಶಕ್ತಿಯ ಮೇಲೆ ಧನಾತ್ಮಕವಾದ ಪರಿಣಾಮ ಬೀರಿದೆ. ಗುರುತಿಸುವಿಕೆ ಮತ್ತು ದೃಶ್ಯ ರಚನೆಗಳಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿದೆ. ಮೆಡಿಟರೇನಿಯನ್ ಆಹಾರಪದ್ಧತಿಯು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಇದರಿಂದ ಉರಿಯೂತ ಕಡಿಮೆಯಾಗುವುದು, ಸಣ್ಣ ಮಟ್ಟಿನ ಪೋಷಕಾಂಶಗಳ ಹೆಚ್ಚಳ, ವಿಟಮಿನ್ ಹೆಚ್ಚಳ ಮತ್ತು ಖನಿಜಾಂಶಗಳ ಅಸಮತೋಲನವನ್ನು ಕಡಿಮೆ ಮಾಡುತ್ತದೆ. ಆಲಿವ್ ತೈಲವನ್ನು ಕೊಬ್ಬಿಗೆ ಪ್ರಮುಖ ಮೂಲವಾಗಿ ಬಳಸುವ ಕಾರಣದಿಂದ ಇದು ಆರೋಗ್ಯಕಾರಿ.

ಮೆಡಿಟರೇನಿಯನ್ ಆಹಾರ ಸೇವನೆ ಮಾಡುವವರು ತೂಕವನ್ನು ನಿಯಂತ್ರಣದಲ್ಲಿರಿಸಿ ಬೊಜ್ಜನ್ನು ಕರಗಿಸಬಹುದು. ಇದು ರಕ್ತದಲ್ಲಿ ಫಾಲಿಪಿನಾಲ್ ಅನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯ ಶಕ್ತಿಯನ್ನು ವೃದ್ಧಿಸುತ್ತದೆ. ಮುಂದಿನ 20-30 ವರ್ಷಗಳಲ್ಲಿ ವಯಸ್ಸಾಗುವವರ ಸಂಖ್ಯೆಯು ಹೆಚ್ಚಾಗುತ್ತದೆ. ಇದರಿಂದ ಈ ಬಗ್ಗೆ ಸಂಶೋಧನೆ ನಡೆಸುವುದು ತುಂಬಾ ಮುಖ್ಯವಾಗುತ್ತದೆ ಎಂದು ಅಧ್ಯಯನವು ಹೇಳಿದೆ.

ಒಳ್ಳೆಯ ಜೀವನ ಶೈಲಿಗಾಗಿ ಮೆಡಿಟರೇನಿಯನ್ ನಂತಹ ಆಹಾರಕ್ರಮವನ್ನು ಅನುಸರಿಸಿಕೊಂಡು ಹೋಗುವುದು ತುಂಬಾ ಮುಖ್ಯ. ಇದರಿಂದ ಅರಿವಿನ ಸಮಸ್ಯೆಯಿಂದ ಉಂಟಾಗುವಂತಹ ಸಾಮಾಜಿಕ ಹಾಗೂ ಆರ್ಥಿಕ ಹೊರೆಯು ಕಡಿಮೆಯಾಗುತ್ತದೆ ಎಂದು ಅಧ್ಯಯನವು ಸಲಹೆ ಮಾಡಿದೆ.

English summary

Want A Better Memory? Eat Mediterranean Diet

A Mediterranean diet can improve your cognitive function, reduce chances of Alzheimer's disease and improve heart conditions, shows a new study. The main foods in the Mediterranean diet include plant foods, such as leafy greens, fresh fruits and vegetables, cereals, beans, seeds, nuts and legumes.
Story first published: Thursday, August 11, 2016, 19:29 [IST]
X
Desktop Bottom Promotion