For Quick Alerts
ALLOW NOTIFICATIONS  
For Daily Alerts

ಒತ್ತಡ ನಿವಾರಣೆಗೆ ಅನುಸರಿಸಿ- 'ಊರ್ಧ್ವ ಹಸ್ತಾಸನ'

By Vani Naik
|

ಪ್ರಸ್ತುತ, ಸ್ಪರ್ಧಾತ್ಮಕ ಮನೋಭಾವಾ ಎಲ್ಲಾ ಕ್ಷೇತ್ರದಲ್ಲಿಯೂ ವ್ಯಾಪಕವಾಗಿ ಕಂಡು ಬರುತ್ತಿದೆ. ಕ್ರೀಡಾ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಕಛೇರಿಯ ಕೆಲಸ ಯಾವುದೇ ಆಗಿರಬಹುದು, ಒಂದು ಬಗೆಯ ಸ್ಪರ್ಧೆ ಒಳಗೊಂಡಿದ್ದು, ಇದರಿಂದಾಗಿ ಒತ್ತಡ ಉಂಟಾಗುತ್ತದೆ.

ಇದು ತೀವ್ರ ಸ್ವರೂಪದ್ದಾಗಿರಬಹುದು ಅಥವಾ ಲಗುವಾಗಿರಬಹುದು. ಯಾವುದೇ ರೀತಿಯಲ್ಲಿದ್ದರೂ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ, ಒತ್ತಡದಿಂದ ದೂರ ಉಳಿಯಲು, ನಮ್ಮ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಸಾಕಷ್ಟು ಒತ್ತಡ ನಿವಾರಣೆಯ ವಿಧಾನಗಳನ್ನು ನಾವು ಅಳವಡಿಸಿಕೊಳ್ಳಬಹುದು.

Urdhva Hastasana (Upward Salute Pose) To Relieve Stress

ಆದರೆ ಎಲ್ಲಾ ವಿಧಾನಗಳಲ್ಲಿ ಯೋಗಾಭ್ಯಾಸವು,ಒತ್ತಡ ನಿವಾರಿಸುವಲ್ಲಿ ಹೆಚ್ಚು ಸಹಾಯಕಾರಿಯೆಂದು ಸಾಬೀತಾಗಿದೆ. ಇರುವ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ, ಒತ್ತಡಮಯ ಸಂರ್ದಭಗಳನ್ನು ನಿಭಾಯಿಸಲೂ ಸಹಾಯಕಾರಿಯಾಗಿದೆ. ಊರ್ಧ್ವ ಹಸ್ತಾಸನವು, ಒತ್ತಡ ನಿವಾರೆಣೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಒತ್ತಡಕ್ಕೆ ಕಡಿವಾಣ ಹಾಕಲು 'ಉತ್ಥಾನ ಶಿಶೋ ಆಸನ' ಅನುಸರಿಸಿ

ಊರ್ಧ್ವ ಹಸ್ತಾಸನ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಊರ್ಧ್ವ" ಎಂದರೆ ಮೇಲಕ್ಕೆ ಎಂದರ್ಥ, "ಹಸ್ತ" ಎಂದರೆ ಕೈಗಳು ಎಂದರ್ಥ ಹಾಗು "ಆಸನ"ವೆಂದರೆ ಭಂಗಿ ಎಂದರ್ಥ. ಇದು ಅತ್ಯಂತ ಸುಲಭವಾದ ಆಸನವಾಗಿದ್ದು, ಸಾಮಾನ್ಯವಾಗಿ ಎಲ್ಲರೂ ಎದ್ದ ಕೂಡಲೇ ತಮಗೆ ಅರಿವಿಲ್ಲದೇ ಮಾಡುತ್ತಾರೆ. ಇಡೀ ದೇಹವನ್ನು ಹಿಗ್ಗಿಸಿದಂತಾಗುತ್ತದೆ. ಈ ಆಸನವನ್ನು ಹಾಕುವ ಬಗೆ ಹೇಗೆ ಎಂದು ನೋಡೋಣ.

ಊರ್ಧ್ವ ಹಸ್ತಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ಮೊದಲನೆಯದಾಗಿ, ತಾಡಾಸನದಂತೆ ನೇರವಾಗಿ ನಿಂತುಕೊಳ್ಳಿ.
2. ಎರಡೂ ತೋಳುಗಳನ್ನು ಸಮಾನಂತರವಾಗಿರುವಂತೆ ಬದಿಯಲ್ಲಿರಿಸಬೇಕು.
3. ನಿಧಾನವಾಗಿ ಎರಡೂ ತೋಳುಗಳನ್ನು ಚಾವಣಿಯತ್ತ ಮೇಲಕ್ಕೆ ಎತ್ತಬೇಕು.
4. ತೋಳುಗಳ ಜೊತೆಯಲ್ಲಿ ನಿಮ್ಮ ಅಂಗೈಗಳು ಸಹ ನಿಮ್ಮ ತಲೆಯ ಮೇಲೆ ಒಂದಕ್ಕೊಂದು ಮುಖ ಮಾಡುವಂತೆ ಇರಬೇಕು.
5. ನಿಮ್ಮ ಬಾಹುಗಳು ನೇರವಾಗಿರಬೇಕು.
6. ಮೇಲಕ್ಕೆ ನೋಡಬೇಕು.
7. ಹಿಂದಕ್ಕೆ ಬಾಹುಗಳನ್ನು ಅದುಮಬೇಕು.
8. ಕಾಲುಗಳನ್ನು ನೇರವಾಗಿಟ್ಟುಕೊಂಡಿರಬೇಕು, ಮಂಡಿಗಳನ್ನು ಮೇಲೆಳೆದುಕೊಳ್ಳಬೇಕು.
9. ಇದೇ ಭಂಗಿಯಲ್ಲಿ ಸ್ವಲ್ಪ ಕಾಲವಿದ್ದು ಧೀರ್ಘವಾಗಿ ಉಸಿರಾಡಿಸಿ.
10. ನಿಧಾನವಾಗಿ ಭಂಗಿಯಿಂದ ಹೊರಗೆ ಬನ್ನಿ. ಈ ಟಾಪ್ 10 ಕೊಡುಗೆ ಯೋಗ ಮಾಡುವವರಿಗೆ ಮಾತ್ರ

ಊರ್ಧ್ವ ಹಸ್ತಾಸನದಿಂದಾಗುವ ಇತರ ಲಾಭಗಳು
*ಬೆನ್ನೆಲಬನ್ನು ಎಳೆದು ಹಿಗ್ಗಿಸಲು ನೆರವಾಗುತ್ತದೆ.
*ಹೊಟ್ಟೆಯನ್ನು ಎಳೆದು ಹಿಗ್ಗಿಸಲು ನೆರವಾಗುತ್ತದೆ.
*ತೋಳುಗಳನ್ನು ಎಳೆದು ಹಿಗ್ಗಿಸಲು ನೆರವಾಗುತ್ತದೆ.
*ಆಯಾಸ ಮತ್ತು ಆತಂಕವನ್ನು ತಗ್ಗಿಸುತ್ತದೆ.
*ರಕ್ತನಿಬಿಡತೆಯನ್ನು ನಿವಾರಿಸಲು ನೆರವಾಗುತ್ತದೆ.
*ಅಸ್ತಮಾ ತೊಂದರೆಯ ನಿವಾರಣೆಗೂ ಸಹಾಯಕಾರಿ.

ಎಚ್ಚರಿಕೆ:
ಯಾರಿಗೆ ಕುತ್ತಿಗೆ ಹಾಗು ತೋಳುಗಳಲ್ಲಿ ಗಾಯಗಳಾಗಿದೆಯೋ ಅಂತಹವರು ಈ ಊರ್ಧ್ವ ಹಸ್ತಾಸನವನ್ನು ಮಾಡತಕ್ಕದ್ದಲ್ಲ. ನುರಿತ ಯೋಗಾತರಬೇತಿದಾರರ ಸಲಹೆ ಸೂಚನೆಗಳ ಮೇರೆಗೆ ಮಾಡುವುದು ಹೆಚ್ಚು ಸೂಕ್ತ.

English summary

Urdhva Hastasana (Upward Salute Pose) To Relieve Stress

Competition in every form is on the rise. Work, studies, games and everyting involve competition and this in fact gives rise to stress. It may be in severe form or in traces, but whatever form it might be, it does affect one's health. Hence, there needs to be a proper balance in our body in order to keep away the stress. There are several stress-management methods that people could take up.
X
Desktop Bottom Promotion