For Quick Alerts
ALLOW NOTIFICATIONS  
For Daily Alerts

ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು, ಇದೋ ಇಲ್ಲಿದೆ ಸರಳ ಟ್ರಿಕ್ಸ್...

By Manu
|

ಕೆಲವರು ಎಷ್ಟೇ ವಿದ್ಯಾವಂತರಾಗಿದ್ದರೂ, ಸಾಕ್ಷರತೆ ಹೊಂದಿದ್ದರೂ ಸಹ ಅವರಿಗೆ ಒಳ್ಳೆಯ ನೆನಪಿನ ಶಕ್ತಿಯ ಕೊರತೆಯಿರುತ್ತದೆ. ಅವರು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದರೂ ಸಹ ಕೆಲವೊಂದು ಬಾರಿ ನೆನಪಿಸಿಕೊಳ್ಳಲು ವಿಫಲರಾಗುತ್ತಾರೆ. ಈ ನಿಟ್ಟಿನಲ್ಲಿ ಹಲವು ಉತ್ಪನ್ನಗಳೂ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇವು ದೀರ್ಘಾವಧಿಯಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗುವುದಿಲ್ಲ. ಆದ್ದರಿಂದ ನೈಸರ್ಗಿಕ ಪದ್ಧತಿಗಳನ್ನು ಅನುಸರಿಸುವುದು ಹೆಚ್ಚು ಸೂಕ್ತ. ನೆನಪಿನ ಶಕ್ತಿ ವರ್ಧಕ-ಒಂದೆಲಗದ ತಂಬುಳಿ

ವಿದ್ಯಾವಂತನಿಗೆ ನೆನಪಿನ ಶಕ್ತಿ ಕಡಿಮೆಯಿದ್ದಲ್ಲಿ ಆತನಲ್ಲಿ ಆತ್ಮವಿಶ್ವಾಸದ ಕೊರತೆಯುಂಟಾಗಿ ಸಹಜವಾಗಿಯೇ ಮುಜುಗರ ಪಡಬೇಕಾದ ಸ್ಥಿತಿ ಎದುರಾಗುತ್ತದೆ. ಕೆಲವೊಮ್ಮೆ ಇತರರಿಂದ ಅಪಹಾಸ್ಯಕ್ಕೆ ಒಳಗಾಗಬೇಕಾಗುತ್ತದೆ. ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು 5 ಮಾರ್ಗೋಪಾಯಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಈ ಮಾರ್ಗಗಳನ್ನು ಅನುಸರಿಸಿದರೆ ನಿಮ್ಮ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೇ ನಿಮ್ಮ ದೈಹಿಕ ಆರೋಗ್ಯವನ್ನು ಸಹ ಸುಸ್ಥಿತಿಯಲ್ಲಿಡುತ್ತದೆ. ವಿವರಗಳಿಗೆ ಓದಿ...

ಪ್ರತಿದಿನ ಓಡುವುದನ್ನು ರೂಢಿಸಿಕೊಳ್ಳಿ

ಪ್ರತಿದಿನ ಓಡುವುದನ್ನು ರೂಢಿಸಿಕೊಳ್ಳಿ

ಪ್ರತಿದಿನ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಾಗುತ್ತವೆ. ಇದು ನಿಮ್ಮ ನೆನಪಿನ ಶಕ್ತಿಯನ್ನು ಮತ್ತು ಅಧ್ಯಯನದ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಓಡುವುದನ್ನು ರೂಢಿಸಿಕೊಂಡರೆ ನಿಮ್ಮ ಮಾನಸಿಕ ಸಾಮರ್ಥ್ಯ ಇಮ್ಮಡಿಯಾಗುತ್ತದೆ. ಇದನ್ನು ಪ್ರೇರೇಪಿಸಲು ಈ ಪ್ರಕ್ರಿಯೆಯಲ್ಲಿ ನಿಮಗಿಷ್ಟವೆನಿಸಿದ ಹಾಡುಗಳನ್ನು ಆಯ್ದು ಕೇಳಬಹುದಾಗಿದೆ. ನಿಧಾನವಾದ ಓಟ, ಮೆದುಳಿಗೆ ಊಟ, ಇದು ನಿತ್ಯದ ಪಾಠ!

ಕ್ಯಾಮೊಮೈಲ್ ಚಹಾ ಸೇವಿಸಿ

ಕ್ಯಾಮೊಮೈಲ್ ಚಹಾ ಸೇವಿಸಿ

ಕ್ಯಾಮೊಮೈಲ್ ಎಂಬುದು ಒಂದು ಹೂವಿನ ಜಾತಿಯ ಸಸ್ಯವಾಗಿದ್ದು, ಇದರಲ್ಲಿರುವ ಆಪಿಜೆನಿನ್ ಎಂಬ ಸತ್ವವು ಮೆದುಳಿನ ಜೀವಕೋಶಗಳನ್ನು ಒಂದಕ್ಕೊಂದು ಸೇರುವಂತೆ ಮಾಡಿ ನ್ಯೂರೋನಲ್ ಸೆಲ್ಸ್ ನ ವರ್ಗದ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಇದರಿಂದ ಈ ಚಹಾ ಸೇವನೆ ಮಾಡಿದರೆ ನೆನಪಿನ ಶಕ್ತಿಯು ಅಧಿಕಗೊಂಡು ಓದುವ ಅಭ್ಯಾಸವು ಹೆಚ್ಚುತ್ತದೆ. ಇದರ ಪೂರ್ಣ ಪ್ರತಿಫಲ ಹೊಂದಲು ಪ್ರತಿದಿನ ಎರಡು ಬಾರಿ ಈ ಚಹಾ ಆನ್ನು ಸೇವಿಸಿ ನೋಡಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಕೆಂಪು ಮೆಣಸನ್ನು ಆಹಾರ ಶೈಲಿಯಲ್ಲಿ ಅಳವಡಿಸಿಕೊಳ್ಳಿ

ಕೆಂಪು ಮೆಣಸನ್ನು ಆಹಾರ ಶೈಲಿಯಲ್ಲಿ ಅಳವಡಿಸಿಕೊಳ್ಳಿ

ಕ್ಯಾಮೊಮೈಲ್ ನಲ್ಲಿರುವಂತೆಯೇ ಕೆಂಪು ಮೆಣಸಿನಲ್ಲಿಯೂ ಸಹ ಆಪಿಜೆನಿನ್ ಎಂಬ ಸತ್ವವು ಅಡಗಿದ್ದು, ಆಲ್ಸೈಮರ್ಸ್ ನೊಂದಿಗೆ ಹೋರಾಡಿ ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಪಾರ್ಸ್ಲೇ ಮತ್ತು ಥೈಮ್ ಸಹ ಈ ರೀತಿಯ ಆಹಾರಗಳಲ್ಲೊಂದು. ಈ ಆಹಾರಗಳನ್ನು ನಿಮ್ಮ ಸೇವನೆಯಲ್ಲಿ ಅಳವಡಿಸಿಕೊಂಡರೆ ನೈಸರ್ಗಿಕವಾಗಿ ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಹುದಾಗಿದೆ.

ಹಸಿರು ಎಲೆಯುಕ್ತ ತರಕಾರಿಗಳನ್ನು ಹೊಂದಿರಿ

ಹಸಿರು ಎಲೆಯುಕ್ತ ತರಕಾರಿಗಳನ್ನು ಹೊಂದಿರಿ

ಅಮೇರಿಕಾದ ಸಂಶೋಧಕರು ಹೇಳುವ ಪ್ರಕಾರ ಬಸಲೆ, ಕೋಸಿನ ಬಗೆಯ ತರಕಾರಿಗಳು ಮತ್ತು ಕೊಲ್ಲಾರ್ಡ್ಸ್ ನಂತಹ ತರಕಾರಿಗಳನ್ನು ನಿಮ್ಮ ಆಹಾರ ಶೈಲಿಯಲ್ಲಿ ಅಳವಡಿಸಿಕೊಂಡರೆ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೇ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ. ಈ ರೀತಿಯ ಹಸಿರು ಎಲೆಯುಕ್ತ ತರಕಾರಿಗಳನ್ನು ಹೆಚ್ಚು ಸೇವಿಸಿದರೆ ಬುದ್ಧಿಮಾಂಧ್ಯತೆಯಿಂದ ದೂರವಿರಬಹುದು.

ಕ್ರಮವಾಗಿ 8 ಗಂಟೆಗಳ ಕಾಲ ನಿದ್ರಿಸಿ

ಕ್ರಮವಾಗಿ 8 ಗಂಟೆಗಳ ಕಾಲ ನಿದ್ರಿಸಿ

ಒಳ್ಳೆಯ ನಿದ್ರೆಯು ವಿವಿಧ ಬಗೆಯ ನೆನಪಿನ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಅವರ ಸಂಶೋಧನೆಯಲ್ಲಿ ಭಾಗವಹಿಸಿದವರಿಗೆ 20 ಚಿತ್ರಗಳನ್ನು ನೀಡಿ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೇಳಲಾಗಿತ್ತು. 12 ಗಂಟೆಗಳ ನಂತರ ಅವರಿಗೆ ಅದೇ ಚಿತ್ರಗಳನ್ನು ಮತ್ತೊಮ್ಮೆ ತೋರಿಸಲಾಯಿತು. ಒಂದು ನಿಯಂತ್ರಿತ ವಾತಾವರಣದಲ್ಲಿ 8 ಗಂಟೆಗಳ ಕಾಲ ನಿದ್ರಿಸಿದ ಸ್ಪರ್ಧಿಗಳು ತೋರಿಸಿದ ಚಿತ್ರಗಳ ಹೆಸರುಗಳನ್ನು ಶೇಖಡಾ 12ರಷ್ಟು ನಿಖರವಾಗಿ ಗುರುತಿಸಿದರು. ಆದ್ದರಿಂದ ನಿದ್ರೆಯನ್ನು ಅಲಕ್ಷ್ಯ ಮಾಡಬೇಡಿ.

English summary

Top good habits that can boost your memory

Having a strong memory can enhance one’s life as it could result in improved performance both, academically and professionally. These 5 easy and routine habits can go a long way in improving your cognitive functioning and also protecting your mental abilities as well as health.
Story first published: Friday, January 29, 2016, 20:35 [IST]
X
Desktop Bottom Promotion