For Quick Alerts
ALLOW NOTIFICATIONS  
For Daily Alerts

ಬೇಸಿಗೆಯ ಬಿಸಿಯನ್ನು ತಂಪಾಗಿಸಲು ಆರೋಗ್ಯ ಟಿಪ್ಸ್

By Suma
|

ಅಬ್ಬಾ ಬೇಸಿಗೆಯೆಂಬುದು ಧಗೆಯೊಂದಿಗೆ ಮೈಯಿಂದ ಸೋರಿಹೋಗುವ ಬೆವರನ್ನು ಸಾಕಷ್ಟು ದಯಪಾಲಿಸುತ್ತದೆ. ನೆತ್ತಿಯ ಮೇಲೆ ಸುಡುವ ಸೂರ್ಯ ನಮ್ಮಲ್ಲಿರುವ ಶಕ್ತಿಯನ್ನು ಹೀರಿಬಿಟ್ಟಿದ್ದಾನೆ ಎಂದೇ ನಮಗೆನಿಸುವಷ್ಟು ಆಯಾಸ, ಸುಸ್ತು, ಬಾಯಾರಿಕೆ ನಮಗುಂಟಾಗುತ್ತದೆ. ತಣ್ಣಗಿನ ನೀರಿನಲ್ಲೇ ಆದಷ್ಟು ಸಮಯ ಕಳೆದುಬಿಡುವಾ ಎಂಬ ಭಾವನೆ ನಮ್ಮಲ್ಲಿ ಉದ್ಭವವಾಗುವುದೇ ಬಿರುಬೇಸಿಗೆಯಲ್ಲಿ.

ಈ ಸಮಯದಲ್ಲಿ ಹಸಿವು ಕಡಿಮೆಯಾಗಿ ದ್ರವಾಹಾರದತ್ತಲೇ ಮನಸ್ಸು ವಾಲುತ್ತದೆ. ದೇಹಕ್ಕೆ ಸಾಧ್ಯವಾದಷ್ಟು ನೀರಿನ ಪೂರೈಕೆಯನ್ನು ಈ ಕಾಲದಲ್ಲಿ ನಾವು ಮಾಡುತ್ತಿರಬೇಕು. ಉಷ್ಣದ ಆಹಾರವನ್ನು ತ್ಯಜಿಸಿ ಆದಷ್ಟು ತಂಪಿನ ಆಹಾರದತ್ತ ನಾವು ಒಲವು ತೋರಿಸಬೇಕು. ಜೇನು ಮೊದಲಾದ ಉಷ್ಣ ಪದಾರ್ಥಗಳನ್ನು ಆದಷ್ಟು ಸೇವಿಸದಿರುವುದೇ ಉತ್ತಮವಾಗಿರುತ್ತದೆ.

ಆದಷ್ಟು ತಾಜಾ ಹಣ್ಣಿನ ರಸ, ಹಣ್ಣುಗಳ ಸೇವನೆ ಅಂತೆಯೇ ಲೀಟರುಗಟ್ಟಲೆ ನೀರನ್ನು ಸೇವಿಸುತ್ತಲೇ ಇರಬೇಕು. ಬೇಸಿಗೆಯಲ್ಲಿ ನೀವು ಏನು ಮಾಡಬೇಕು ಏನು ಮಾಡಬಾರದು ಎಂಬ ಚಿಕ್ಕ ಸಲಹೆಗಳನ್ನು ನಾವು ನಿಮ್ಮ ಹಿತಕ್ಕಾಗಿ ಇಂದಿಲ್ಲಿ ನೀಡಲಿದ್ದು ಇದರಿಂದ ಬೇಸಿಗೆಯ ಧಗೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬ ಟಿಪ್ಸ್ ನಿಮಗೆ ದೊರೆಯುತ್ತದೆ. ಹಾಗಿದ್ದರೆ ಬನ್ನಿ ತಡ ಮಾಡದೇ ಕೆಳಗಿನ ಸ್ಲೈಡರ್ ಕ್ಲಿಕ್ ಮಾಡುತ್ತಾ ಬೇಸಿಗೆಯ ಬಿಸಿಯನ್ನು ತಂಪಾಗಿಸುವ ಬಗೆಯನ್ನು ಕಂಡುಕೊಳ್ಳಿ...

ಹೆಚ್ಚುಚ್ಚು ನೀರು ಕುಡಿಯಿರಿ

ಹೆಚ್ಚುಚ್ಚು ನೀರು ಕುಡಿಯಿರಿ

ಡೀಹೈಡ್ರೇಶನ್ ಅನ್ನು ಬೇಸಿಗೆ ಉಂಟುಮಾಡುತ್ತದೆ. ದೇಹದಲ್ಲಿ ನೀರು ಬೆವರಿನ ರೂಪದಲ್ಲಿ ಹರಿದು ಹೋಗುವುದು ಬೇಸಿಗೆಯಲ್ಲಾಗಿದ್ದು ಈ ಸಮಯದಲ್ಲಿ ದೇಹಕ್ಕೆ ಸಾಕಷ್ಟು ನೀರಿನ ಪೂರೈಕೆಯನ್ನು ನೀವು ಮಾಡಬೇಕಾಗುತ್ತದೆ. ನೀರನ್ನು ಆಗಾಗ್ಗೆ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ನೀರಡಿಕೆಯನ್ನು ನೀಗಿಸಿಕೊಳ್ಳಬಹುದಾಗಿದೆ.

ಕೆಫೇನ್ ತ್ಯಜಿಸಿ

ಕೆಫೇನ್ ತ್ಯಜಿಸಿ

ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡು ಕೆಫೇನ್ ಮತ್ತು ಸಕ್ಕರೆ ಬೆರೆತ ಪಾನೀಯಗಳನ್ನು ಆದಷ್ಟು ಬೇಸಿಗೆಯಲ್ಲಿ ಕಡಿಮೆ ಸೇವಿಸುವುದು ಒಳಿತು. ಜೀರ್ಣಕ್ರಿಯೆ ವ್ಯವಸ್ಥೆಗೆ ಧಕ್ಕೆಯನ್ನು ತರುವ ಫಾಸ್ಫರಿಕ್ ಆಸಿಡ್‎ನ ರಚನೆಗೆ ಇದು ಕಾರಣವಾಗುವುದರಿಂದ ಇವುಗಳ ಸೇವನೆ ಬೇಡವೇ ಬೇಡ.

ಒಣ ಹಣ್ಣುಗಳನ್ನು ಸೇವಿಸದಿರಿ

ಒಣ ಹಣ್ಣುಗಳನ್ನು ಸೇವಿಸದಿರಿ

ಒಣ ಹಣ್ಣುಗಳು ಆರೋಗ್ಯಕರ ಮತ್ತು ಪೋಷಕಾಂಶಭರಿತವಾಗಿರುತ್ತವೆ. ಅದಾಗ್ಯೂ ಇವುಗಳು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತವೆ ಆದ್ದರಿಂದ ಬೇಸಿಗೆಯಲ್ಲಿ ಇವುಗಳನ್ನು ಸೇವಿಸದಿರುವುದೇ ಒಳಿತು. ಬೇಸಿಗೆಯಲ್ಲಿ ಒಣಹಣ್ಣುಗಳ ಬದಲಿಗೆ ತಾಜಾ ಹಣ್ಣುಗಳನ್ನೇ ಅಧಿಕವಾಗಿ ಸೇವಿಸಿ.

ಉಷ್ಣ ಆಹಾರಗಳನ್ನು ಸೇವಿಸದಿರಿ

ಉಷ್ಣ ಆಹಾರಗಳನ್ನು ಸೇವಿಸದಿರಿ

ಬೇಸಿಗೆಯಲ್ಲಿ ಉಷ್ಣವನ್ನುಂಟು ಮಾಡುವ ಆಹಾರಗಳನ್ನು ಸೇವಿಸದಿರಿ. ಪಾಲಾಕ್, ಕರಿಮೆಣಸು, ಮೂಲಂಗಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸದಿರಿ. ಮಸಾಲೆ ಪದಾರ್ಥಗಳ ಸೇವನೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಸಕ್ಕರೆ ಭರಿತ ಆಹಾರ ಸೇವನೆ ನಿಲ್ಲಿಸಿ

ಸಕ್ಕರೆ ಭರಿತ ಆಹಾರ ಸೇವನೆ ನಿಲ್ಲಿಸಿ

ದೇಹದ ಉಷ್ಣತೆನ್ನು ಸಕ್ಕರೆ ಇರುವ ಆಹಾರ ಪದಾರ್ಥಗಳೂ ಹೆಚ್ಚಿಸುತ್ತವೆ. ಜೇನು ಮತ್ತು ಕಾಕಂಬಿ ಸೇವನೆಯನ್ನು ಬಿಡಿ. ತರಕಾರಿ ಮತ್ತು ಹಣ್ಣುಗಳಲ್ಲಿ ಇರುವ ನೈಸರ್ಗಿಕ ಸಕ್ಕರೆಯನ್ನು ಅಧಿಕವಾಗಿ ಸೇವಿಸಿ.

English summary

Tips for Staying Healthy & Cool this Summer

Summer causes dehydration and exhaustion. Not just that, it reduces the appetite too. Thus, there is definitely a need to take precautions to beat the heat of the sun and other discomforts caused by the sun. Following a few healthy tips can prevent us from falling a victim to the extreme heat condition. in this article, we at Boldsky will be listing out some of the health tips to follow in summer. Read on to know more about it.
Story first published: Wednesday, March 30, 2016, 18:11 [IST]
X
Desktop Bottom Promotion