For Quick Alerts
ALLOW NOTIFICATIONS  
For Daily Alerts

'ಕೋಸುಗಡ್ಡೆ' ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗೆ ರಾಮಬಾಣ

By Deepak M
|

ಬ್ರೊಕೋಲಿ (ಕೋಸುಗಡ್ಡೆ) ಎಂಬ ಸೂಪರ್ ತರಕಾರಿಯ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದಾಗಿ ಕುತ್ತಿಗೆ ಮತ್ತು ತಲೆಯಲ್ಲಿ ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗುವುದನ್ನು ತಡೆಯಬಹುದು ಎಂದು ಹೊಸ ಅಧ್ಯಯನವೊಂದು ಸಾಬೀತು ಮಾಡಿದೆ.

"ತಲೆಯ ಮತ್ತು ಕುತ್ತಿಗೆಯ ಕ್ಯಾನ್ಸರ್ ಇರುವಂತಹ ರೋಗಿಗಳು, ಕೆಲವು ವರ್ಷಗಳ ನಂತರ ಗಂಭೀರ ಪ್ರಮಾಣದ ಕ್ಯಾನ್ಸರಿನೊಂದಿಗೆ ನಮ್ಮ ಬಳಿಗೆ ಬರುತ್ತಾರೆ" ಎಂದು ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಜೂಲಿ ಬೌಮನ್ ತಿಳಿಸಿದ್ದಾರೆ.

ಬ್ರೊಕೋಲಿಯಲ್ಲಿ ಸ್ವಾಭಾವಿಕವಾಗಿ ಕ್ಯಾನ್ಸರ್‌ಕಾರಕವಾದ ಕಾರ್ಸಿನೋಜೆನ್‌ಗಳನ್ನು ನಿವಾರಿಸುವಂತಹ ಅಧಿಕ ಪ್ರಮಾಣದ ಸಲ್ಫೋರಫೋನ್ ಲಭ್ಯವಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಬ್ರೊಕೋಲಿಯನ್ನು ಸೇವಿಸುವುದರಿಂದ ಕೋಶಗಳಲ್ಲಿ ಸಲ್ಫೋರಫೋನ್ ಬಿಡುಗಡೆಯಾಗುತ್ತದೆ. ಇದರಿಂದ ಈ ತರಕಾರಿಯಲ್ಲಿನ ಜೀನ್ಸ್‌ಗಳಲ್ಲಿನ ಪ್ರೋಟೀನ್‌ಗಳು "ಡಿಟಾಕ್ಸಿಫಿಕೇಶನ್" ಕ್ರಿಯೆಯನ್ನು ಸಕ್ರಿಯಗೊಳಿಸುತ್ತವೆ.

This Veggie Can Fight Head, Neck Cancer

ಈ ಜೀನ್ಸ್‌ಗಳು ಕ್ಯಾನ್ಸರ್ ಕೋಶಗಳಿಂದ ನಿಮ್ಮನ್ನು ಕಾಪಾಡುತ್ತವೆ. ಇವು ನಿಮ್ಮದೇಹದಿಂದ ಸಿಗರೇಟ್ ಸೇವನೆಯಿಂದ ಬಂದಿರುವ ಕಾರ್ಸಿನೋಜೆನ್‌ಗಳನ್ನು ಹೊರ ಹಾಕುತ್ತವೆ. ಕ್ಯಾನ್ಸರ್ ಪ್ರಿವೆನ್ಶನ್ ರಿಸರ್ಚ್ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನದ ಪ್ರಕಾರ ತಲೆ ಮತ್ತು ಕುತ್ತಿಗೆಯಲ್ಲಿರುವ ವಿವಿಧ ಬಗೆಯ ಕ್ಯಾನ್ಸರ್‌ ಕೋಶಗಳಿಗೆ ಸಲ್ಫೋರಫೇನ್‌ನಿಂದ ಚಿಕಿತ್ಸೆ ನೀಡಿದಾಗ ಆ ಕೋಶಗಳು ನಿವಾರಣೆಯಾಗಿ, ಅವುಗಳ ಭಾಗದಲ್ಲಿ ಆರೋಗ್ಯವಂತ ಕೋಶಗಳು ಕಾಣಿಸಿಕೊಂಡವಂತೆ. ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ

ಇದರ ಜೊತೆಗೆ ಇದೇ ಬಗೆಯ ಚಿಕಿತ್ಸೆಯನ್ನು ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಇರುವ ಇಲಿಗಳ ಮೇಲೆ ಸಹ ಪ್ರಯೋಗ ಮಾಡಿದಾಗ ಅವುಗಳು ಸಹ ಧನಾತ್ಮಕವಾಗಿ ಪ್ರತಿಕ್ರಿಯಿಸಿದವಂತೆ. ಬ್ರೊಕೋಲಿಯ ಸಲ್ಫೋರಫೇನ್‌ ಅಂಶವನ್ನು ನೀಡಿದ ಇಲಿಗಳು, ಈ ಅಂಶವನ್ನು ಪಡೆಯದ ಇಲಿಗಳಲ್ಲಿ ಕಡಿಮೆ ಟ್ಯೂಮರ್‌ಗಳ ಬೆಳವಣಿಗೆ ಕಂಡುಬಂದಿತಂತೆ. ಮೌನ ಕೊಲೆಗಾರ ಮೇದೋಜೀರಕ ಕ್ಯಾನ್ಸರ್‌‌ನ ಲಕ್ಷಣಗಳು

"ತರಕಾರಿ ಮುಂತಾದ ಸಸ್ಯಗಳ ಅಂಶವನ್ನು ಔಷಧಿಗಳಾಗಿ ನೀಡುವುದರಿಂದ ಔಷಧಗಳ ಉತ್ಪಾದನೆ ಮತ್ತು ವಿತರಣೆಯ ವೆಚ್ಚದ ಮೇಲೆ ಗಣನೀಯ ಪರಿಣಾಮ ಬೀರುತ್ತದೆ ಮತ್ತು ಕ್ಯಾನ್ಸರಿನಿಂದ ಸಾಯುವವರ ಸಂಖ್ಯೆಯಲ್ಲೂ ಸಹ ಇಳಿಮುಖವಾಗುತ್ತದೆ" ಎಂದು ಬೌಮನ್ ಸಲಹೆ ಮಾಡಿದ್ದಾರೆ.
(IANS ಪ್ರಕಟಿತ)

English summary

This Veggie Can Fight Head, Neck Cancer

Increased consumption of the superfood broccoli may help prevent the recurrence of cancer cells in survivors of head and neck cancer, a new study has found. "With head and neck cancer, we often clear patients of cancer only to see it come back with deadly consequences a few years later," said lead author Julie Bauman from the University of Pittsburgh.
X
Desktop Bottom Promotion