For Quick Alerts
ALLOW NOTIFICATIONS  
For Daily Alerts

ವಾತ ಪಿತ್ತ ಕಫಗಳಿಗಾಗಿ ಸೂಕ್ತ ಯೋಗಾಸನಗಳು

|

ಯೋಗ ಮತ್ತು ಆಯುರ್ವೇದಗಳು ಭಾರತದ ಹೆಮ್ಮೆಯ ಕೊಡುಗೆಗಳು. ಇವುಗಳು ಎಂತಹ ರೋಗವನ್ನು ಸಹ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಯೋಗ ಮತ್ತು ಆಯುರ್ವೇದಗಳು ಶತಮಾನಗಳ ಕಾಲದಿಂದ ಜನರ ರೋಗ ಮತ್ತು ದೈಹಿಕ ಸ್ವಾಸ್ಥತೆಯನ್ನು ಕಾಪಾಡುವಲ್ಲಿ ಗಣನೀಯ ಪಾತ್ರವನ್ನು ನಿರ್ವಹಿಸಿವೆ. ಒಮ್ಮೊಮ್ಮೆ ಇವೆರಡು ಒಟ್ಟಿಗೆ ಸೇರಿ ನಮ್ಮ ಆರೋಗ್ಯವನ್ನು ಸುಧಾರಿಸುತ್ತವೆ. ಇವೆರಡು ಶಾಸ್ತ್ರಗಳು ನಮ್ಮ ವೇದಗಳ ಜ್ಞಾನದಿಂದ ಜನ್ಮ ತಾಳಿವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಆರೋಗ್ಯವನ್ನು ವೃದ್ಧಿಸಿ, ಅದನ್ನು ಕಾಪಾಡುವ ಆಯುರ್ವೇದವು ಅಥರ್ವಣ ವೇದ ಮತ್ತು ಋಗ್ವೇದಗಳಿಂದ ಜನ್ಮ ತಾಳಿದೆ. ಇವೆರಡು ಸತ್ವ, ರಜಸ್ ಮತ್ತು ತಮಸ್‌ ಎಂಬ ತ್ರಿಗುಣಗಳು ಎಂದು ಕರೆಯಲ್ಪಡುವ ತತ್ವಗಳು ಹಾಗು ಭೂಮಿ, ಅಗ್ನಿ, ಆಕಾಶ, ನೀರು ಮತ್ತು ಗಾಳಿಗಳೆಂಬ ಪಂಚಭೂತಗಳ ತತ್ವಗಳ ಮೇಲೆ ಆಧಾರಪಟ್ಟಿವೆ. ಅಲ್ಲದೆ ಇವೆರಡು ಸಹ ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳುತ್ತವೆ.

The right yoga asana for a Vata, Pitta or Kapha constitution

ಆಯುರ್ವೇದವು ನಮ್ಮ ದೇಹ ಹೇಗೆ ಕೆಲಸ ಮಾಡುತ್ತದೆ (ದೋಷಗಳು) ಮತ್ತು ಆಹಾರದಿಂದ ದೇಹದ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ. ತಜ್ಞರ ಪ್ರಕಾರ 'ನಿಮ್ಮ ದೋಷಗಳನ್ನು ಅರ್ಥ ಮಾಡಿಕೊಂಡು ಸರಿಪಡಿಸುವ ಮೂಲಕ ನಿಮ್ಮನ್ನು ನೀವು ಮತ್ತಷ್ಟು ಸುಧಾರಿಸಿ ಕೊಳ್ಳಬಹುದಂತೆ". ಹಾಗಾದರೆ ನಮ್ಮ ಆರೋಗ್ಯವನ್ನು ಯೋಗಾಸನಗಳ ಮೂಲಕ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಮತ್ತು ಆ ಆಸನಗಳ ಸಂಖ್ಯೆಯು ಕಡಿಮೆ ಇರಬೇಕು ಎಂಬ ಆಸೆ ನಿಮಗಿದೆಯಲ್ಲವೇ? ಬನ್ನಿ ನಮ್ಮ ದೇಹದಲ್ಲಿರುವ ವಾತ, ಪಿತ್ತ ಮತ್ತು ಕಫಗಳನ್ನು ನಿಯಂತ್ರಣದಲ್ಲಿಡುವ ಆ ಮುಖ್ಯ ಯೋಗಾಸನಗಳನ್ನು ತಿಳಿದುಕೊಳ್ಳೋಣ. ಆರೋಗ್ಯಕರ ಜೀವನಶೈಲಿಗೆ ಬೇಕು ನಿತ್ಯ ಯೋಗ

ವಾತ ದೋಷ ಇರುವ ಜನರು ಮಾನಸಿಕವಾಗಿ ಚುರುಕಾಗಿರುತ್ತಾರೆ ಮತ್ತು ಸೃಜನಶೀಲತೆಯನ್ನು ಹೊಂದಿರುತ್ತಾರೆ. ಆದರೆ ಇನ್ಸೋಮ್ನಿಯಾ ಮತ್ತು ಆತಂಕ ಇವರನ್ನು ಹೆಚ್ಚಾಗಿ ಕಾಡುತ್ತದೆ. ಈ ಸಮಸ್ಯೆಗಳನ್ನು ಹೊಂದಿರುವವರು ನಿಧಾನವಾದ ಮತ್ತು ನಿಂತ ಭಂಗಿಯ ಯೋಗಾಸನಗಳನ್ನು ಮಾಡುವುದು ಒಳ್ಳೆಯದು.

ಪರ್ವತಾಸನ, ಅರ್ಧ ಮತ್ಸ್ಯೇಂದ್ರಾಸನ ಮತ್ತು ತಲೆ ಕೆಳಗೆ ಮಾಡಿ ಕಾಲು ಮೇಲೆತ್ತುವ ಶಿರಸಾಸನ ಮತ್ತು ಸರ್ವಾಂಗಾಸನಗಳು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಈ ಯೋಗಾಸನಗಳ ಜೊತೆಗೆ ದೀರ್ಘ ಉಸಿರಾಟ ಕ್ರಿಯೆಯನ್ನು ಮಾಡಿದಲ್ಲಿ, ನಿಮಗೆ ಒಳ್ಳೆಯದಾಗುತ್ತದೆ ಮತ್ತು ಅಧಿಕ ಫಲ ನಿಮ್ಮ ದೇಹಕ್ಕೆ ಸಿಕ್ಕುತ್ತದೆ. ಪ್ರಶಾಂತ ಪ್ರಕೃತಿ ಮತ್ತು ಶಾಂತ ಮನಃಸ್ಥಿತಿಯು ಆತಂಕವನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಪಿತ್ತ
ಪಿತ್ತ ದೋಷ ಇರುವವರಲ್ಲಿ ಉಮ್ಮಸ್ಸು, ಧೈರ್ಯ ಮತ್ತು ಉತ್ಸಾಹಗಳು ಇರುತ್ತವೆ. ಇವುಗಳು ಸಮತೋಲನ ಕಳೆದುಕೊಂಡಾಗ, ಜನರಲ್ಲಿ ಕೋಪ ಮತ್ತು ಸ್ಪರ್ಧಾತ್ಮಕ ಮನೋಭಾವವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ದೇಹವನ್ನು ತಂಪು ಮಾಡುವ ಮತ್ತು ವಿಶ್ರಾಂತಿಯನ್ನು ನೀಡುವ ಆಸನಗಳಾದ ಉತ್ತರಾಸನದಂತಹವು ನಿಮಗೆ ಈ ಕುರಿತು ಸಹಾಯ ಮಾಡುತ್ತವೆ. ಧನುರಾಸನವು ಉಷ್ಣ ಮತ್ತು ಒತ್ತಡವನ್ನು ನಿವಾರಿಸುತ್ತವೆ ಹಾಗು ತಾಳ್ಮೆ, ಸಹಾನುಭೂತಿಯ ಗುಣಗಳನ್ನು ನಿಮಗೆ ನೀಡುತ್ತವೆ.

ಕಫ
ಕಫ ಪ್ರಕೃತಿಯಿರುವವರು ಸದೃಢ, ಅರ್ಪಣಾ ಮನೋಭಾವದ, ಸ್ಥಿರ ಮನಸ್ಸಿನವರಾಗಿರುತ್ತಾರೆ. ಇವರು ಸೋಮಾರಿಗಳು, ಮಂದ ಬುದ್ಧಿಯವರು ಮತ್ತು ಗೊಂದಲ ಪ್ರವೃತ್ತಿಯವರು ಸಹ ಆಗಿರುತ್ತಾರೆ. ಇವರಿಗೆ ಸೂರ್ಯ ನಮಸ್ಕಾರದಂತಹ ಆಸನಗಳು ಹೇಳಿ ಮಾಡಿಸಿದಂತಹವಾಗಿರುತ್ತವೆ. ಆರೋಗ್ಯ ವೃದ್ಧಿಸುವ ಬೆಳಗಿನ ಜಾವದ ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ ಮತ್ತು ಪ್ರಾಣಾಯಮಗಳು ಹಾಗು ಕಪಾಲಭಾತಿ ಮತ್ತು ಉಜ್ಜಯಿ ಪ್ರಾಣಾಯಮಗಳ ಭಂಗಿಗಳು ಸಹ ಇವರಿಗೆ ಉತ್ತಮವಾದ ಪ್ರಯೋಜನಗಳನ್ನು ನೀಡುತ್ತವೆ. ಇನ್ನೇಕೆ ತಡ ನಿಮ್ಮ ಆಯುರ್ವೇದದ ಪ್ರಯೋಗಗದ ಜೊತೆಗೆ ಯೋಗಾಸನಗಳನ್ನು ಸಹ ಆರಂಭಿಸಿ, ಏನು ಹೇಳುತ್ತೀರಿ?

English summary

The right yoga asana for a Vata, Pitta or Kapha constitution

Yoga and Ayurveda are inseparable sisters who walk hand in hand. Both yoga and Ayurveda originated from a greater system of Vedic knowledge. Yoga originated from the Yajur Veda while Ayurveda originated from the Atharva Veda and Rig Veda. They are both based on the principles of trigunas (satva, rajas and tamas) and panchamahabuthas (earth, fire, space and water).
X
Desktop Bottom Promotion