For Quick Alerts
ALLOW NOTIFICATIONS  
For Daily Alerts

ಮನೆಮದ್ದು: ಲಿಂಬೆ ಹಣ್ಣಿನ ಸಿಪ್ಪೆ-ಎಷ್ಟು ಹೊಗಳಿದರೂ ಸಾಲದು!

ಲಿಂಬೆರಸದ ಮಹತ್ವವನ್ನು ನಾವೆಲ್ಲಾ ಬಲ್ಲೆವು. ಆದರೆ ರಸ ಹಿಂಡಿದ ಬಳಿಕ ಉಳಿದ ಸಿಪ್ಪೆ? ಕಸದ ಬುಟ್ಟಿಗೆ ಎಸೆಯುತ್ತೇವೆ ಅಲ್ಲವೇ? ಆದರೆ ಇದರಲ್ಲಿ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳಿವೆ.....

By Arshad
|

ಬೀಜವಿರದಿದ್ದರೆ ಲಿಂಬೆ ಸಂಜೀವಿನಿಯಾಗುತ್ತಿತ್ತು, ತೊಟ್ಟಿಲ್ಲದಿದ್ದರೆ ಬದನೆ ಹಾಲಾಹಲವಾಗುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹಲವು ವ್ಯಾಧಿಗಳನ್ನು ಗುಣಪಡಿಸಲು ಶಕ್ತವಿರುವ ಲಿಂಬೆಯ ಬೀಜಗಳು ಮಾತ್ರ ವಿಷಕಾರಿಯಾಗಿವೆ. ಆದ್ದರಿಂದ ಲಿಂಬೆರಸವನ್ನು ಹಿಂಡಿದಾಗ ಬೀಜಗಳು ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು.

ಲಿಂಬೆರಸದ ಹುಳಿಯಾದ ರುಚಿ ಇತರ ಆಹಾರಗಳ ರುಚಿಯನ್ನು ಹೆಚ್ಚಿಸುವುದರಿಂದ ರುಚಿಯೊಂದಿಗೆ ಆರೋಗ್ಯವನ್ನೂ ಪಡೆದಂತಾಗುತ್ತದೆ. ಆದರೆ ಇದರ ಸಿಪ್ಪೆಯನ್ನು ಮಾತ್ರ ಎಸೆದುಬಿಡುತ್ತೇವೆ. ವಾಸ್ತವವಾಗಿ ಲಿಂಬೆ ರಸದಂತೆ ಸಿಪ್ಪೆಯೂ ಹಲವಾರು ರೋಗಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಲಿಂಬೆ ಹಣ್ಣಿನ ಸಿಪ್ಪೆ- ತ್ವಚೆಯ ಸರ್ವರೋಗಕ್ಕೂ ರಾಮಬಾಣ

ಲಿಂಬೆ ರಸದಲ್ಲಿರುವಂತೆಯೇ ಸಿಪ್ಪೆಯಲ್ಲಿಯೂ ವಿಟಮಿನ್ ಎ ಮತ್ತು ಸಿ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಬೀಟಾ ಕ್ಯಾರೋಟಿನ್ ಮತ್ತು ಪೊಟ್ಯಾಶಿಯಂ ಇದೆ. ಇವೆಲ್ಲವೂ ಲಿಂಬೆ ರಸದಲ್ಲಿಯೂ ಇದ್ದರೂ ಸಿಪ್ಪೆಯಲ್ಲಿ ಇವುಗಳ ಪ್ರಮಾಣ ಐದರಿಂದ ಹತ್ತು ಪಟ್ಟು ಹೆಚ್ಚು ಇರುವ ಕಾರಣದಿಂದ ಸಿಪ್ಪೆ ಹೆಚ್ಚು ಹುಳಿ ಮತ್ತು ಕಹಿಯಾಗಿರುತ್ತದೆ.

ಲಿಂಬೆರಸಕ್ಕಿಂತಲೂ ಪ್ರಬಲವಾಗಿರುವ ಈ ಸಿಪ್ಪೆಯ ಪೇಯವನ್ನು ಕುಡಿದಾಗ ಲಿಂಬೆರಸಕ್ಕೂ ಹೆಚ್ಚಿನ ಪೋಷಣೆ ದೊರಕುತ್ತದೆ. ಬನ್ನಿ, ಈ ಪೇಯವನ್ನು ಹೇಗೆ ತಯಾರಿಸಬಹುದು ಎಂಬುದನ್ನು ಈಗ ನೋಡೋಣ.....


ಅಗತ್ಯವಿರುವ ಸಾಮಾಗ್ರಿಗಳು:

ಅಗತ್ಯವಿರುವ ಸಾಮಾಗ್ರಿಗಳು:

ಒಂದು ಲಿಂಬೆ ಹಣ್ಣು (ಸಾವಯವ ವಿಧಾನದಿಂದ ಬೆಳಿಸಿದ್ದು)

ಅರ್ಧ ಲೀಟರ್ ನೀರು

ಕೊಂಚ ಮಂಜುಗಡ್ಡೆ (ಅಗತ್ಯವೆನಿಸಿದರೆ ಮಾತ್ರ)

ಜೇನು-ರುಚಿಗನುಸಾರ

ವಿಧಾನ

ವಿಧಾನ

ಒಂದು ಲಿಂಬೆಯನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಬೀಜಗಳನ್ನು ನಿವಾರಿಸಿ. ಈ ತುಂಡುಗಳನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಗೊಟಾಯಿಸಿ. ಬಳಿಕ ಜೇನು ಸೇರಿಸಿ. ಅಗತ್ಯ ಎನಿಸಿದರೆ ಮಂಜುಗಡ್ಡೆ ಸೇರಿಸಿ. ಈ ಪೇಯವನ್ನು ಬಾಯಾರಿಕೆಯಾದಾಗಲೆಲ್ಲಾ ಕುಡಿಯುತ್ತಿರಿ.

ವಿಧಾನ

ವಿಧಾನ

ಸಾಮಾನ್ಯ ಲಿಂಬೆ ಶರಬತ್ತಿಗಿಂತಲೂ ಕೊಂಚ ಭಿನ್ನವಾದ ರುಚಿಯನ್ನು ಈ ಪೇಯ ಹೊಂದಿದ್ದು ಹೊಸದಾದ ಈ ರುಚಿಯನ್ನು ಎಲ್ಲರೂ ಇಷ್ಟಪಡುತ್ತಾರೆ.

ಲಿಂಬೆಯ ಸಿಪ್ಪೆಯ ಟೀ

ಲಿಂಬೆಯ ಸಿಪ್ಪೆಯ ಟೀ

ಲಿಂಬೆಯ ಸಿಪ್ಪೆಯ ಪ್ರಯೋಜನವನ್ನು ಅತಿಹೆಚ್ಚಾಗಿ ಪಡೆಯಬೇಕೆಂದರೆ ಈ ಸಿಪ್ಪೆಯ ಟೀ ಕುಡಿಯಬೇಕು.

ಅಗತ್ಯವಿರುವ ಸಾಮಾಗ್ರಿಗಳು

ಎರಡು ಲಿಂಬೆಗಳು (ಸಾವಯವ ವಿಧಾನದಿಂದ ಬೆಳಿಸಿದ್ದು)

ಒಂದು ಲೀಟರ್ ನೀರು

ಜೇನು :ಅಗತ್ಯವೆನಿಸಿದಷ್ಟು ತೂಕ ಇಳಿಕೆಗಾಗಿ ಲಿಂಬೆ ಚಹಾ

ವಿಧಾನ

ವಿಧಾನ

*ಲಿಂಬೆಯನ್ನು ಹಿಂಡಿ ರಸವನ್ನು ಪ್ರತ್ಯೇಕವಾಗಿಡಿ. ಸಿಪ್ಪೆಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ.

*ಈ ತುಂಡುಗಳನ್ನು ನೀರಿನಲ್ಲಿ ಸುಮಾರು ಹದಿನೈದು ನಿಮಿಷಗಳವರೆಗೆ ಕುದಿಸಿ.

ಬಳಿಕ ಇದೇ ಲಿಂಬೆಯ ರಸವನ್ನು ಸೇರಿಸಿ. ಇದು ಹೆಚ್ಚು ಹುಳಿಯಾಗಿರುವ ಕಾರಣ ಕೊಂಚ ಜೇನು ಸೇರಿಸಿ

*ಬಿಸಿಬಿಸಿಯಾಗಿಸಿ ಸೇವಿಸಿ.

ಲಿಂಬೆ ಸಿಪ್ಪೆಯ ತುರಿ

ಲಿಂಬೆ ಸಿಪ್ಪೆಯ ತುರಿ

ನಿಮ್ಮ ನೆಚ್ಚಿನ ಸಾಲಾಡ್ ಮೊದಲಾದವುಗಳ ಮೇಲೆ ಲಿಂಬೆ ರಸ ಸೇರಿಸುವುದರಿಂದ ಹೇಗೆ ರುಚಿಯನ್ನು ಹೆಚ್ಚಿಸಬಹುದೋ ಹಾಗೇ ಲಿಂಬೆಸಿಪ್ಪೆಯ ತುರಿಯಿಂದಲೂ ರುಚಿಯನ್ನು ಹೆಚ್ಚಿಸಬಹುದು.

ಇದಕ್ಕಾಗಿ ಹೀಗೆ ಮಾಡಿ

ಇದಕ್ಕಾಗಿ ಹೀಗೆ ಮಾಡಿ

ಒಂದು ಲಿಂಬೆಯಹಣ್ಣಿನ ರಸವನ್ನು ಚೆನ್ನಾಗಿ ಹಿಂಡಿ ಸಿಪ್ಪೆಯನ್ನು ಪ್ರತ್ಯೇಕಿಸಿ. ನಂತರ ಸಿಪ್ಪೆಯನ್ನು ಚಿಕ್ಕದಾಗಿ ತುರಿಯಿರಿ. ಈ ತುರಿಯನ್ನು ನಿಮ್ಮ ನೆಚ್ಚಿನ ಖಾದ್ಯಗಳ ಮೇಲೆ ಚಿಕ್ಕದಾಗಿ ಉದುರಿಸಿ ಮಿಶ್ರಣ ಮಾಡಿ ಸೇವಿಸಿ. ಸಾಲಾಡ್ ಮಾತ್ರವಲ್ಲ, ಹುರಿದ ಮೀನು, ಮಾಂಸ, ಖಾರವಾದ ಖಾದ್ಯಗಳು, ಬಿಸಿಯಾದ ಪಾನೀಯಗಳು ಮೊದಲಾದವುಗಳ ರುಚಿಯನ್ನೂ ಈ ತುರಿ ಹೆಚ್ಚಿಸುತ್ತದೆ.

ನೆನಪಿಡಿ

ನೆನಪಿಡಿ

ಲಿಂಬೆಹಣ್ಣು ಸಾವಯವ ವಿಧಾನದಿಂದ ಬಳೆದಿರುವುದೇ ಉತ್ತಮ. ಏಕೆಂದರೆ ಕೃತಕ ವಿಧಾನದಲ್ಲಿ ಚಿಮುಕಿಸಲಾಗಿರುವ ಕೀಟನಾಶಕಗಳು ಲಿಂಬೆ ಸಿಪ್ಪೆಯಲ್ಲಿ ಹೀರಲ್ಪಟ್ಟು ಕೊಂಚ ವಿಷಕಾರಿಯಾಗಿರುತ್ತವೆ. ಇವುಗಳನ್ನು ತೊಳೆದು ನಿವಾರಿಸಲು ಸಾಧ್ಯವಿಲ್ಲ.

ನೆನಪಿಡಿ

ನೆನಪಿಡಿ

ಒಂದು ವೇಳೆ ನೀವು ಕೊಂಡು ತಂದಿರುವ ಲಿಂಬೆ ಸಾವಯವ ವಿಧಾನದಿಂದ ಬೆಳೆದಿದ್ದು ಹೌದೋ ಅಲ್ಲವೋ ಎಂಬ ದ್ವಂದ್ವವಿದ್ದರೆ ಇದಕ್ಕೊಂದು ಉಪಾಯವಿದೆ. ಸಮಪ್ರಮಾಣದಲ್ಲಿ ಉಗುರುಬೆಚ್ಚನೆಯ ನೀರು ಮತ್ತು ಸೇಬಿನ ಶಿರ್ಕಾ ಬೆರೆಸಿ ಈ ನೀರಿನಲ್ಲಿ ಲಿಂಬೆಗಳನ್ನು ಸುಮಾರು ಹದಿನೈದು ನಿಮಿಷ ಮುಳುಗಿಸಿಡಿ. ಬಳಿಕ ಇವನ್ನು ತೊಳೆದಾಗ ಒಂದು ವೇಳೆ ಸಿಪ್ಪೆಯಲ್ಲಿ ಕೀಟನಾಶಕಗಳಿದ್ದರೆ ಹೊರಹೋಗಿರುತ್ತವೆ. ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

English summary

The Healing Power of Lemon Peel

Most people throw away the lemon peel, not realizing that lemon peels contain 5 to 10 times more nutrients than the juice, including vitamins A and C, calcium, magnesium, beta-carotene and potassium.
X
Desktop Bottom Promotion