For Quick Alerts
ALLOW NOTIFICATIONS  
For Daily Alerts

ದ್ರಾಕ್ಷಿ ಹಣ್ಣು- ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು

By Arshad
|

ವಿಶ್ವದಲ್ಲಿ ಅತಿ ಸಾಮಾನ್ಯವಾದ ಹಣ್ಣುಗಳೆಂದರೆ ಬಾಳೆ ಮತ್ತು ದ್ರಾಕ್ಷಿ. ದ್ರಾಕ್ಷಿಯಲ್ಲಿ ವಿಟಮಿನ್ ಎ, ಬಿ6, ಸಿ ಮತ್ತು ಖನಿಜಗಳಾದ ಪೊಟ್ಯಾಶಿಯಂ, ಮೆಗ್ನೀಶಿಯಂ, ಸೆಲೆನಿಯಂ, ಗಂಧಕ ಮತ್ತು ಕಬ್ಬಿಣಗಳಿವೆ. ಹಲವು ಪೋಷಕಾಂಶಗಳಿರುವ ದ್ರಾಕ್ಷಿ ಉತ್ತಮ ಮೈಕಟ್ಟು ಉಳಿಸಿಕೊಳ್ಳುವವರಿಗಾಗಿ ಒಂದು ಉತ್ತಮ ಆಹಾರವೂ ಆಗಿದೆ.

ಇದರಲ್ಲಿರುವ ಫ್ಲೇವನಾಯ್ಡುಗಳು ಮತ್ತು ಪ್ರಬಲ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಿ ವಿವಿಧ ಕ್ಯಾನ್ಸರ್‌ಗಳು ಬರದಂತೆ ತಡೆಯುತ್ತವೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ತಕ್ಷಣವೇ ಜೀರ್ಣಗೊಂಡು ರಕ್ತಕ್ಕೆ ಸೇರುವ ಮೂಲಕ ತಕ್ಷಣವೇ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ.

ಒಂದು ಸಂಶೋಧನೆಯಲ್ಲಿ ಇದರಲ್ಲಿರುವ ರೆಸ್ವರೆಟಾಲ್ (resveratrol) ಎಂಬ ಪೋಷಕಾಂಶ ಮೆದುಳಿಗೆ ರಕ್ತಸಂಚಾರದ ಪ್ರಮಾಣವನ್ನು ಹೆಚ್ಚಿಸಲು ನೆರವಾಗುವ ಮೂಲಕ ಮಾನಸಿಕ ಪ್ರತಿಕ್ರಿಯೆ ನೀಡುವ ಗತಿಯನ್ನು ಹೆಚ್ಚಿಸಬಹುದು ಎಂದು ಕಂಡುಕೊಳ್ಳಲಾಗಿದೆ. ಅಲ್ಲದೇ ದ್ರಾಕ್ಷಿಯ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಲೂ ನೆರವಾಗುತ್ತದೆ. ಅಲ್ಲದೇ ಜೀರ್ಣಕ್ರಿಯೆಯಲ್ಲಿಯೂ ನೆರವಾಗುತ್ತವೆ. ಇಂತಹ ಹಲವಾರು ಅಮೂಲ್ಯ ಮಾಹಿತಿಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ, ಮುಂದೆ ಓದಿ...

ಹೃದಯದ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ

ಹೃದಯದ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ

ದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಿ ಹಲವು ಬಗೆಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ಆದ LDL ಜಿಡ್ಡು ರಕ್ತನಾಳಗಳಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದರಿಂದ ಹಲವು ಹೃದಯದ ತೊಂದರೆಗಳಿಂದ ರಕ್ಷಣೆ ದೊರೆತಂತಾಗುತ್ತದೆ.

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ದ್ರಾಕ್ಷಿಯಲ್ಲಿರುವ ವಿವಿಧ ಪೋಷಕಾಂಶಗಳು ಜೀರ್ಣರಸಗಳ ಜೊತೆ ಬೆರೆತು ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುತ್ತವೆ. ಅಲ್ಲದೇ ನಾರಿನ ಕೊರತೆಯಿಂದ ದೊಡ್ಡ ಕರುಳಿನಲ್ಲಿ ಗಟ್ಟಿಯಾಗಿರುವ ಮಲಿನವನ್ನು ಮೃದುಗೊಳಿಸಿ ಸುಲಭ ವಿಸರ್ಜನೆಗೆ ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆ

ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಗುಣ ದ್ರಾಕ್ಷಿಯಲ್ಲಿದೆ. ಇದರಿಂದ ರಕ್ತನಾಳಗಳ ಒಳಗೆ ಕೆಟ್ಟ ಕೊಲೆಸ್ಟ್ರಾಲ್ ಜಿಡ್ಡುಗಟ್ಟುವ ಸಂಭವ ಕಡಿಮೆಯಾಗುತ್ತದೆ. ಅಲ್ಲದೆ ಇದರಲ್ಲಿರುವ ಸ್ಯಾಪೋನಿನ್ (saponins) ಎಂಬ ಪೋಷಕಾಂಶಗಳು ರಕ್ತದಲ್ಲಿರುವ ಕೊಲೆಸ್ಟ್ರಾಲ್ ರಕ್ತದಲ್ಲಿ ಕರಗದಿರಲು ನೆರವಾಗುತ್ತದೆ. ಇದರಿಂದ ಹಲವು ತೊಂದರೆಗಳಿಗೆ ಒಳಗಾಗುವುದರಿಂದ ರಕ್ಷಣೆ ಪಡೆಯಬಹುದು.

ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ

ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ

ಮೂತ್ರಪಿಂಡಗಳಿಗೆ ಸವಾಲಾಗಿರುವ ರಾಸಾಯನಿಕವೆಂದರೆ ಯೂರಿಕ್ ಆಮ್ಲ. ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಯೂರಿಕ್ ಆಮ್ಲದ ಪ್ರಾಬಲ್ಯವನ್ನು ಕಡಿಮೆಗೊಳಿಸುವ ಮೂಲಕ ಮೂತ್ರಪಿಂಡದ ಮೇಲೆ ಬೀಳುವ ಭಾರವನ್ನು ಅಪಾರವಾಗಿ ತಗ್ಗಿಸುತ್ತದೆ. ಇದು ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ, ತನ್ಮೂಲಕ ಮೂತ್ರಪಿಂಡಗಳು ದೇಹದ ಕಲ್ಮಶಗಳನ್ನು ಶುದ್ಧೀಕರಿಸಲು ಹೆಚ್ಚು ಸಮರ್ಥವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದ್ರಾಕ್ಷಿಯಲ್ಲಿರುವ ವಿವಿಧ ವಿಟಮಿನ್ನುಗಳು ಮತ್ತು ವಿಶೇಷವಾಗಿ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಇದರಿಂದ ಸಾಮಾನ್ಯ ತೊಂದರೆಗಳಾದ ಶೀತ, ಫ್ಲೂ ಜ್ವರ, ಕೆಮ್ಮು ನೆಗಡಿಗಳಿಂದ ದೇಹ ಉತ್ತಮ ರಕ್ಷಣೆ ಪಡೆಯುತ್ತದೆ.

English summary

Surprising Health Benefits Of Grapes

Grapes are a universal fruit that come in various varieties. They are rich in vitamins A, B6, C and minerals such as potassium, magnesium, selenium, calcium, phosphorous and iron. Grapes are a power-house of nutrients that can help keep a person healthy and fit. The flavonoids present in grapes are effective antioxidants that reduce the damage caused by free radicals.Therefore, in this article, we at Boldsky will be listing out some of the surprising health benefits of consuming grapes. Read on to know more about it.
Story first published: Monday, March 21, 2016, 13:12 [IST]
X
Desktop Bottom Promotion