Just In
Don't Miss
- Movies
ತುಂಬು ಗರ್ಭಿಣಿ ಕರೀನಾ ಕಪೂರ್ ಯೋಗ ಮಾಡುತ್ತಿರುವ ಫೋಟೋ ವೈರಲ್
- News
ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆರೋಗ್ಯದ ಸಂಜೀವಿನಿ-ಮನೆಯಂಗಳದ 'ದಾಸವಾಳ'
"ಹೂವು ಚೆಲುವೆಲ್ಲಾ ತನದೆಂದಿತು, ಹೆಣ್ಣು ಹೂವು ಮುಡಿದು ಚೆಲುವೆ ತಾನೆಂದಿತು" ಎಂಬ ಗೀತೆಯನ್ನು ನೀವು ಕೇಳಿರಬಹುದು. ಹೂವು ಎಂದರೆ ಸೌಂದರ್ಯ, ಹೂವು ಎಂದರೆ ಮಧುರ ಭಾವನೆ, ಇತ್ಯಾದಿ ವಿಚಾರಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. ಕೆಲವೊಂದು ಹೂವುಗಳನ್ನು ನಾವು ಆಹಾರವಾಗಿ ಸಹ ಸೇವಿಸುತ್ತೇವೆ! ಕೆಲವೊಂದು ಹೂವುಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಹೂವುಗಳು ಎಂದರೆ ಸೌಂದರ್ಯ, ಮಧುರ ಸುವಾಸನೆ, ಆಹಾರ ಪದಾರ್ಥ ಇತ್ಯಾದಿಗಳ ಜೊತೆಗೆ ಆರೋಗ್ಯ ಮತ್ತು ಸೌಂದರ್ಯವನ್ನು ಸಹ ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಆರೋಗ್ಯದ ಗುಟ್ಟು ದಾಸವಾಳದಿಂದ ರಟ್ಟು
ಬರೀ ಬಾಯಿ ಮಾತಿನಲ್ಲಿ ಮಾತ್ರ ನೀವು ಸೌಂದರ್ಯಕ್ಕೆ ಹೂವುಗಳು ಒಳ್ಳೆಯದು ಎಂದು ಹೇಳುತ್ತಿದ್ದೀರಿ ಎಂದು ಭಾವಿಸಬೇಡಿ. ದಾಸವಾಳ ಹೂವು ನಿಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ತನ್ನ ಪಾಲಿನ ಸಹಾಯ ಮಾಡುತ್ತದೆ. ಹೌದು, ದಾಸವಾಳ, ಹೈಬಿಸ್ಕಸ್, ಶೂಫ್ಲವರ್ ಎಂದು ಕರೆಯಲ್ಪಡುವ ಈ ಹೂವು ನಿಮ್ಮ ಕೂದಲಿಗೆ ರಕ್ಷಣೆಯನ್ನು ನೀಡುವುದರ ಜೊತೆಗೆ ಹಲವಾರು ಕಾಯಿಲೆಗಳನ್ನು ನಿವಾರಿಸುತ್ತದೆ. ಬನ್ನಿ, ಈ ಹೂವಿನಿಂದ ಏನೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ತಿಳಿದುಕೊಂಡು ಬರೋಣ. ದಾಸವಾಳ ಹೂವಿನ ಚಹಾ-ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..!

ಮಧುಮೇಹಕ್ಕೆ ಸ್ವಾಭಾವಿಕ ಪರಿಹಾರ
ಬಯೋಕೆಮಿಕಲ್ ಅಂಡ್ ಬಯೋಫಿಸಿಕಲ್ ರಿಸರ್ಚ್ ಕಮ್ಯೂನಿಕೇಶನ್‌ರವರ ಅಧ್ಯಯನದಲ್ಲಿ ತಿಳಿದುಬಂದಿರುವಂತೆ, ದಾಸವಾಳದಿಂದ ತಯಾರಿಸಲಾಗುವ ಒಂದು ಔಷಧಿಯು ನಿಮ್ಮ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ದಾಸವಾಳದಲ್ಲಿ ಫೆರುಲಿಕ್ ಆಮ್ಲದಂತಹ ಪಾಲಿಫೆನಾಲ್‌ಗಳು ಲಭ್ಯವಿರುತ್ತವೆ. ಇದು ಮಧುಮೇಹವನ್ನು ನಿವಾರಿಸುವ ಅಂಶವಾಗಿ ಕಾರ್ಯ ನಿರ್ವಹಿಸುತ್ತದೆ.

ಮೂತ್ರನಾಳದ ಇನ್‌ಫೆಕ್ಷನ್ ಅನ್ನು ನಿವಾರಿಸುತ್ತದೆ
ಏಶಿಯನ್ ಪೆಸಿಫಿಕ್ ಜರ್ನಲ್ ಆಫ್ ಟ್ರಾಪಿಕಲ್ ಬಯೋಮೆಡಿಸಿನ್‌ರವರ ಅಧ್ಯಯನದ ಪ್ರಕಾರ ದಾಸವಾಳದಲ್ಲಿರುವ ಶಿಲೀಂಧ್ರ ನಿರೋಧಕ ಮತ್ತು ಸೂಕ್ಷ್ಮಾಣು ಜೀವಿನಾಶಕ ಗುಣಗಳು ಮೂತ್ರನಾಳದ ಇನ್‌ಫೆಕ್ಷನ್‌ಗೆ ಕಾರಣವಾದ ಕ್ಯಾಂಡಿಡ ಆಲ್‌ಬಿಕಾನ್‌ಗಳ ವಿರುದ್ಧ ಹೋರಾಡುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂತ್ರನಾಳದ ಇನ್‌ಫೆಕ್ಷನ್ ಅನ್ನು ನಿವಾರಿಸುತ್ತದೆ
ದಾಸವಾಳದಲ್ಲಿರುವ ಪೋಷಕಾಂಶಗಳು ಮೂತ್ರನಾಳದ ಇನ್‌ಫೆಕ್ಷನ್‌ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಮತ್ತು ಈ ಇನ್‌ಫೆಕ್ಷನ್‌ನಿಂದ ನಿಮಗೆ ಮುಕ್ತಿಯನ್ನುಂಟು ಮಾಡುತ್ತದೆ. ದಾಸವಾಳದಲ್ಲಿರುವ ಫ್ಲಾವೊನಾಯ್ಡ್‌ಗಳನ್ನು ದಾಸವಾಳ ಟೀ ಮಾಡಿಕೊಂಡು ಸೇವಿಸುವುದರಿಂದ ನಾವು ಸೇವಿಸಬಹುದು. ಇವು ನಮ್ಮ ದೇಹದಲ್ಲಿ ಇ.ಕೊಲಿ ಬೆಳೆಯುವುದನ್ನು ಸಹ ತಡೆಯುತ್ತವೆ.

ಜ್ವರವನ್ನು ನಿವಾರಿಸುತ್ತದೆ
ಫ್ಲೂ ಅಥವಾ ಜ್ವರದಿಂದ ಬಳಲ್ಲುತ್ತಿದ್ದೀರಾ? ಚಿಂತೆ ಮಾಡದೆ ಒಣ ದಾಸವಾಳದ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಟೀಯನ್ನು ತಯಾರಿಸಿಕೊಳ್ಳಿ. ಇವು ಜ್ವರದ ಸಮಯದಲ್ಲಿ ನಿಮಗೆ ಉಪಶಮನವನ್ನು ನೀಡುತ್ತದೆ ಎಂದು ಇಂಟರ್‌ನ್ಯಾಶನಲ್ ಜರ್ನಲ್ ರಿಸರ್ಚ್ ಇನ್ ಫಾರ್ಮಾಸೆಟಿಕಲ್ ಅಂಡ್ ಬಯೋಮೆಡಿಕಲ್ ಸೈನ್ಸಸ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಇದರಲ್ಲಿರುವ ಡೆಮುಲ್ಸೆಂಟ್ ಮತ್ತು ಉರಿಬಾವು ನಿರೋಧಕ ಗುಣಗಳು ಉರಿಬಾವನ್ನು ಕಡಿಮೆ ಮಾಡುತ್ತವೆ ಮತ್ತು ಸಿಂಬಳವನ್ನು ಕಡಿಮೆ ಮಾಡಿ ನಿಮಗೆ ಆರಾಮವನ್ನು ನೀಡುತ್ತದೆ.

ಕೂದಲು ಉದುರುವಿಕೆ
ದಾಸವಾಳದ ದಳಗಳು ನಿಮ್ಮ ಕೂದಲು ಉದುರುವಿಕೆಗೆ ಹೇಳಿ ಮಾಡಿಸಿದ ಔಷಧಿಯಾಗಿರುತ್ತವೆ. ಇದನ್ನು ಎಣ್ಣೆಯಲ್ಲಿ ನೆನೆಸಿ ಲೇಪಿಸುವುದರಿಂದ ನಿಮ್ಮ ಕೂದಲಿನ ಬುಡಗಳು ಗಟ್ಟಿಗೊಳ್ಳುತ್ತವೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಇರುತ್ತವೆ. ಈ ದಾಸವಾಳದ ಎಣ್ಣೆಯನ್ನು ಮಸಾಜ್ ಮಾಡುವುದರಿಂದಾಗಿ, ರಕ್ತ ಸಂಚಾರ ಹೆಚ್ಚಾಗುತ್ತದೆ ಮತ್ತು ಇದರಲ್ಲಿರುವ ಪೋಷಕಾಂಶಗಳನ್ನು ಕೂದಲಿನ ಬೇರು ಹೀರಿಕೊಂಡು, ಚೆನ್ನಾಗಿ ಬೆಳೆಯುತ್ತದೆ.

ಕೂದಲು ಬೆಳ್ಳಗಾಗುವಿಕೆ
ಏಶಿಯನ್ ಜರ್ನಲ್ ಆಫ್ ಎಕ್ಸ್‌ಪೆರಿಮೆಂಟಲ್ ಬಯೋಲಾಜಿಕಲ್ ಸೈನ್ಸಸ್ ಪ್ರಕಟಿಸಿರುವ ಅಧ್ಯಯನದ ಪ್ರಕಾರ ದಾಸವಾಳದಲ್ಲಿರುವ ಅಂಶಗಳು ನಿಮ್ಮ ಕೂದಲು ಬೆಳ್ಳಗಾಗುವಿಕೆಯನ್ನು ನಿಯಂತ್ರಿಸುತ್ತವೆ. ಇದಕ್ಕಾಗಿ ಈ ಹೂವುಗಳನ್ನು ಬಿಸಿ ನೀರಿನಲ್ಲಿ ಹಾಕಿ 20 ನಿಮಿಷ ಕಾಯಿಸಿ. ಆನಂತರ ಅದನ್ನು ತಣ್ಣಗೆ ಮಾಡಿ, ಪೇಸ್ಟ್ ರೀತಿ ಮಾಡಿಕೊಳ್ಳಿ.

ಕೂದಲು ಬೆಳ್ಳಗಾಗುವಿಕೆ
ಇನ್ನು ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಕೂದಲಿನ ಬುಡಕ್ಕೆ ಲೇಪಿಸಿ. 20 ನಿಮಿಷ ಬಿಟ್ಟು ನಂತರ ಇದನ್ನು ತೊಳೆಯಿರಿ. ಇದನ್ನು ಪ್ರತಿದಿನ ಮಾಡಿ, ಅದರ ನಂತರ ದಾಸವಾಳ ನೆನೆಸಿದ ಎಣ್ಣೆಯನ್ನು ಹಚ್ಚಿಕೊಳ್ಳಿ, ಇದರಿಂದ ನಿಮ್ಮಕೂದಲು ನಳನಳಿಸುತ್ತದೆ.