For Quick Alerts
ALLOW NOTIFICATIONS  
For Daily Alerts

ಸಿಗರೇಟ್‌ ಚಟಕ್ಕೆ ಚಟ್ಟ ಕಟ್ಟುವ ಪವರ್ ಫುಲ್ 'ಆಹಾರ ಪಥ್ಯ'...

By
|

ಈ ಲೋಕದ ಅತ್ಯಂತ ಅಪಾಯಕರ ಪದಗಳೆಂದರೆ "ಒಮ್ಮೆ ಟ್ರೈ ಮಾಡು, ಇಷ್ಟವಾಗಲಿಲ್ಲವೆಂದರೆ ಬಿಟ್ಟುಬಿಡು", ಧೂಮಪಾನಿಗಳ ಮಟ್ಟಿಗೆ ಹೆಚ್ಚಿನವರ ಪ್ರಾರಂಭ ಈ ಪದಗಳಿಂದಲೇ ಆಗುತ್ತದೆ. ಒಮ್ಮೆ ಧೂಮಪಾನದ ರುಚಿ ಕಂಡವರು ಇದನ್ನು ಬಿಡುವುದು ಕಷ್ಟ. ಒಂದು ವೇಳೆ ಇಂತಹ ಯಾವುದೋ ಕಾರಣಕ್ಕೆ ನೀವೂ ಧೂಮಪಾನಿಯಾಗಿದ್ದು ಇಂದು ಇದರಿಂದ ಹೊರಬರಲು ಸಾಧ್ಯವಾಗದೇ ಪರಿತಪಿಸುತ್ತಿದ್ದೀರಾ? ಧೂಮಪಾನದ ಪರಿಣಾಮದಿಂದಾಗಿ ನಿಮ್ಮ ಅರೋಗ್ಯವೂ ಪ್ರಭಾವಿತಗೊಂಡಿದೆಯೇ? ನೈಸರ್ಗಿಕವಾಗಿ ಧೂಮಪಾನವನ್ನು ತ್ಯಜಿಸುವ ಸರಳ ವಿಧಾನಗಳು

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಪ್ಯಾಕೆಟ್ ಮೇಲೆ ಮುದ್ರಿಸಿದ್ದೂ ಇದನ್ನು ಗಣನೆಗೇ ತೆಗೆದುಕೊಳ್ಳದೇ ರಾಜಾರೋಷವಾಗಿ ಸೇದುವವರು ವಾಸ್ತವವಾಗಿ ತಮ್ಮ ಆತ್ಮಕ್ಕೇ ದ್ರೋಹ ಬಗೆಯುತ್ತಿದ್ದೇವೆಂದೇ ಅರಿತಿರುವುದಿಲ್ಲ. ಇವರ ಮೆದುಳಿನಲ್ಲಿ ಈಗಾಗಲೇ ಉತ್ಪತ್ತಿಯಾಗಿರುವ "Thique" ಎಂಬ ರಾಸಾಯನದ ಕಾರಣ ಇವರು ಧೂಮಪಾನದ ಪರವಾಗಿ ವಾದಿಸುವ ವಕೀಲನಂತೆ ವರ್ತಿಸುತ್ತಾರೆ.

ವಾಸ್ತವವಾಗಿ ಧೂಮಪಾನದಿಂದ ಶ್ವಾಸಕೋಶ, ಗಂಟಲು, ಬಾಯಿ ಮೊದಲಾದ ಅಂಗಗಳಿಗೆ ಕ್ಯಾನ್ಸರ್ ಆವರಿಸುವುದು ಪ್ರಮುಖ ರೋಗಗಳಾದರೆ ಉಳಿದಂತೆ ಸೈನಸ್, ಅಸ್ತಮಾ, ಸುಸ್ತು, ಕೆಳಹೊಟ್ಟೆಯಲ್ಲಿ ಭಾರೀ ತುರಿಕೆ ಮೊದಲಾದ ಇತರ ಪರಿಣಾಮಗಳೂ ಎದುರಾಗಬಹುದು. ಸಿಗರೇಟ್ ಸೇದಿದರೆ ತಲೆ ಬೋಳಾಗುತ್ತೆ, ಹುಷಾರ್!

ಒಂದು ವೇಳೆ ನೀವು ಈ ದುರಭ್ಯಾಸದಿಂದ ಹೊರಬರಲು ಯತ್ನಿಸುತ್ತಿದ್ದರೆ ಕೆಲವು ಆಹಾರಗಳು ನಿಮ್ಮ ದೇಹದಲ್ಲಿ ಈಗಾಗಲೇ ಸಂಗ್ರಹವಾಗಿದ್ದ ನಿಕೋಟಿನ್ ಅಂಶವನ್ನು ನಿವಾರಿಸಲು ಸಮರ್ಥವಾಗಿದ್ದು ನಿಮ್ಮ ಪ್ರಯತ್ನಕ್ಕೆ ಹೆಚ್ಚಿನ ಬೆಂಬಲ ನೀಡುತ್ತವೆ. ಬನ್ನಿ ಈ ಆಹಾರಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ: ಸಿಗರೇಟ್ ಧೂಮದಲ್ಲಿರುವ ಐದು ಭಸ್ಮಾಸುರರು

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಈ ಸೊಪ್ಪಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಇತರ ವಿಟಮಿನ್ನುಗಳು ಶ್ವಾಸಕೋಶದಲ್ಲಿ ಸೇರಿರುವ ಟಾರು ಮತ್ತು ನಿಕೋಟಿನ್ ಅಂಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿರುವ ನಿಕೋಟಿನ್ ಅಂಶವನ್ನು ನಿವಾರಿಸಲು ಮತ್ತು ಇದಕ್ಕೆ ವ್ಯಸನರಾಗಿದ್ದ ನಿಮ್ಮನ್ನು ನಿಧಾನವಾಗಿ ಹೊರತರಲು ನೆರವಾಗುತ್ತದೆ.

ಬ್ರೋಕೋಲಿ

ಬ್ರೋಕೋಲಿ

ನೋಡಲು ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಬಿ5 ಇರುವ ಕಾರಣ ಶ್ವಾಸಕೋಶದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಶ್ವಾಸಕೋಶವನ್ನು ಮುಂದೆ ಕಲ್ಮಶಗಳಿಂದ ರಕ್ಷಿಸಲೂ ಸಾಧ್ಯವಾಗುತ್ತದೆ.

ಕಿತ್ತಳೆ

ಕಿತ್ತಳೆ

ಕಿತ್ತಳೆ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಇವು ರಕ್ತ ಮತ್ತು ಶ್ವಾಸಕೋಶಗಳಿಂದ ವಿಷಕಾರಿ ವಸ್ತುಗಳನ್ನು ನಿವಾರಿಸಿ ಹೊರದೂಡಲು ನೆರವಾಗುತ್ತವೆ. ಅಲ್ಲದೇ ರಕ್ತದಲ್ಲಿದ್ದ ನಿಕೋಟಿನ್ ಅಂಶವನ್ನು ನಿವಾರಿಸಲು ಹೆಚ್ಚು ಸಕ್ಷಮವಾಗಿದೆ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್‌ನಲ್ಲಿ ಉತ್ತಮ ಪ್ರಮಾನದ ವಿಟಮಿನ್ ಎ, ಕೆ ಮತ್ತು ಸಿ ಇವೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿರುವ ಜೊತೆಗೇ ರಕ್ತ ಮತ್ತು ಶ್ವಾಸಕೋಶಗಳಲ್ಲಿ ಸಂಗ್ರಹವಾಗಿದ್ದ ಧೂಮಪಾನದ ಟಾರಿನ ಸಹಿತ ಹಲವು ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.

ವಿವಿಧ ಬೆರ್ರಿ ಹಣ್ಣುಗಳು

ವಿವಿಧ ಬೆರ್ರಿ ಹಣ್ಣುಗಳು

ವಿವಿಧ ಬೆರ್ರಿ ಹಣ್ಣುಗಳಾದ ಸ್ಟ್ರಾಬೆರಿ, ರಾಸ್ಪ್ ಬೆರಿ, ಬ್ಲೂಬೆರಿ ಮೊದಲಾದವುಗಳು ಹುಳಿಮಿಶ್ರಿತ ಸಿಹಿ ರುಚಿ ಹೊಂದಿದ್ದು ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ರಕ್ತವನ್ನು ಶುದ್ಧೀರಿಸಲು ಅತ್ಯಂತ ಸಮರ್ಥವಾದ ಹಣ್ಣು ಎಂದರೆ ದಾಳಿಂಬೆ. ಧೂಮಪಾನಿಗಳಿಗೂ ಅಲ್ಲದವರಿಗೂ ಈ ಹಣ್ಣು ಅತ್ಯಂತ ಸೂಕ್ತವಾಗಿದ್ದು ರಕ್ತದಲ್ಲಿ ಸೇರಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.

English summary

These Foods Will Make A Smoker's Body Healthy In Just 15 Days!

Do you feel that you cannot go even for a couple of hours without smoking a cigarette? Are you worried that smoking is a habit that has taken over your life and could possibly ruin your health? If yes, then you are right because cigarette smoking can be extremely harmful to a person's health. But dont worry, there are certain foods that can flush the nicotine out of your system and make your system healthier, even if you smoke on a regular basis? Have a look below to find out what they are.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more