For Quick Alerts
ALLOW NOTIFICATIONS  
For Daily Alerts

ಚೋಟುದ್ದ ಬೆಂಡೆಕಾಯಿಯಲ್ಲಿದೆ, ಬೆಟ್ಟದಷ್ಟು ಆರೋಗ್ಯಕರ ಗುಣಗಳು

By Manu
|

ಮೂತ್ರಪಿಂಡಗಳಲ್ಲಿರುವ (ಕಿಡ್ನಿ) ಕಲ್ಮಶಗಳನ್ನು ಹೊರಹಾಕಲು ಕೆಲವಾರು ವಿಧಾನಗಳಿವೆ. ಇದರಲ್ಲಿ ಅತಿ ಸುಲಭವಾದ ವಿಧಾನವೆಂದರೆ ಎಳೆಯ ಬೆಂಡೆಕಾಯಿಯ ಬಳಕೆ. ಇದು ಮಧುಮೇಹ, ಅಸ್ತಮಾ ಮತ್ತು ಕೊಲೆಸ್ಟ್ರಾಲ್ ಹೆಚ್ಚಳದ ತೊಂದರೆಯನ್ನು ಸಮರ್ಥವಾಗಿ ನಿವಾರಿಸುತ್ತದೆ. ಆರೋಗ್ಯದ ಗಣಿ-ಎಲೆಮರೆ ಕಾಯಿಯಂತಿರುವ ಬೆಂಡೆಕಾಯಿ

Simple Remedy To Stabilise Blood Sugar

ಬೆಂಡೆಕಾಯಿಯಲ್ಲಿ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ತೂಕ ಹೆಚ್ಚದೇ ಇರಲು ಇದರ ಖಾದ್ಯಗಳು ನೆರವಾಗುತ್ತವೆ. ಬೆಂಡೆಯ ಇನ್ನೊಂದು ಒಳ್ಳೆಯ ಗುಣವೆಂದರೆ ಇದನ್ನು ಯಾವ ರೂಪದಲ್ಲಿ ಸೇವಿಸಿದರೂ, ಅಂದರೆ ಬೇಯಿಸಿ, ಹುರಿದು, ಕರಿದು ಅಥವಾ ಅರೆಬೇಯಿಸಿ ತಿಂದರೂ ಇದರ ಗುಣಗಳು ಬದಲಾಗುವುದಿಲ್ಲ.

ಎಳೆಬೆಂಡೆಯನ್ನು ಹಸಿಯಾಗಿಯೂ ತಿನ್ನಬಹುದು. ಉಪ್ಪಿನ ಕಾಯಿಯ ರೂಪದಲ್ಲಿಯೂ ನಂಜಿಕೊಳ್ಳಬಹುದು. ಒಂದು ಕಪ್ ಬೆಂಡೆಕಾಯಿಯಲ್ಲಿ ಎರಡು ಗ್ರಾಂ ಪ್ರೋಟೀನ್, ಏಳು ಗ್ರಾಂ ಕಾರ್ಬೋಹೈಡ್ರೇಟುಗಳು, ಮೂರು ಗ್ರಾಂ ಕರಗದ ನಾರು, 0.1 ಗ್ರಾಮ್ ಕೊಬ್ಬು, 30 ಕ್ಯಾಲೋರಿ ಶಕ್ತಿ, 60ಮಿಲಿಗ್ರಾಂ ಮೆಗ್ನೀಶಿಯಂ ಮತ್ತು 21ಮಿಲಿಗ್ರಾಂ ವಿಟಮಿನ್ ಸಿ ಇವೆ. ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿದರೆ ಹತ್ತಾರು ಲಾಭ

ಒಂದು ವೇಳೆ ನಿಮ್ಮ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿಲ್ಲದಿದ್ದರೆ, ನಿತ್ಯವೂ ಬೆಂಡೆಕಾಯಿಯನ್ನು ಸೇವಿಸಲು ಮರೆಯದಿರಿ. ಅಷ್ಟೇ ಅಲ್ಲದೆ, ಮಧುಮೇಹಿಗಳೂ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ

ಒಂದು ವೇಳೆ ನಿಮ್ಮ ರಕ್ತದ ಸಕ್ಕರೆಯ ಪ್ರಮಾಣ ಏರುಪೇರಾಗುತ್ತಿದ್ದರೆ ಇದನ್ನು ಸರಿಪಡಿಸಲು ಬೆಂಡೆಯಿಂದ ತಯಾರಿಸಬಹುದಾದ ಒಂದು ಸುಲಭ ವಿಧಾನವಿದೆ. ಸುಮಾರು ಆರು ಎಳೆ ಬೆಂಡೆಕಾಯಿಗಳನ್ನು ಚಿಕ್ಕದಾಗಿ ತುಂಡರಿಸಿ ಈ ತುಂಡುಗಳನ್ನು ಒಂದು ಪಾತ್ರೆ ನೀರಿನಲ್ಲಿ ಹಾಕಿ ಇಡಿಯ ರಾತ್ರಿ ನೆನೆಸಿಡಬೇಕು. ಸರ್ವ ರೋಗಕ್ಕೂ ರಾಮಬಾಣವಾಗಿರುವ ಬೆಂಡೆಕಾಯಿಯ ಪ್ರಯೋಜನಗಳೇನು?

ಮರುದಿನ ಬೆಳಿಗ್ಗೆ ಎದ್ದ ತಕ್ಷಣ ಬೇರಾವುದನ್ನೂ ಮಾಡುವುದಕ್ಕೂ ಮುನ್ನವೇ ಅಂದರೆ ಕಣ್ಣುಜ್ಜಿಕೊಳ್ಳುತ್ತಿದ್ದಂತೆಯೇ ಈ ನೀರನ್ನು ಸೋಸಿ ಗಟಗಟ ಕುಡಿದುಬಿಡಬೇಕು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲ, ಇಡಿಯ ದಿನ ಅನಗತ್ಯವಾಗಿ ತಿನ್ನುವ ಬಯಕೆಯೂ ಕಡಿಮೆಯಾಗುತ್ತದೆ.

English summary

Simple Remedy To Stabilise Blood Sugar

Though there are so many home remedies to cleanse kidneys, one of the easiest one among them is using okra or lady finger. This remedy can also deal with diabetes, asthma and cholesterol issues. Also, as okra is very low in calories, you can use it in your recipes to include it in your diet. The best thing about okra is that you can get its health benefits even when you consume it in any form.
X
Desktop Bottom Promotion