ಆಹಾರಗಳನ್ನು ಫ್ರಿಜ್ಜಿನಲ್ಲಿ ಇಟ್ಟ ಮಾತ್ರಕ್ಕೆ ಅದು ಸುರಕ್ಷಿತವೇ?

By Manu
Subscribe to Boldsky

ಆಹಾರಗಳನ್ನು ತಾಜಾರೂಪದಲ್ಲಿ ಸೇವಿಸಿದಷ್ಟೂ ಉತ್ತಮ. ಏಕೆಂದರೆ ಒಮ್ಮೆ ತಯಾರಿಸಿದ ಆಹಾರ ಕೊಂಚಹೊತ್ತಿನ ಬಳಿಕ ಹಳಸಲು ತೊಡಗುತ್ತದೆ. ಈ ಹಳಸುವಿಕೆಯನ್ನು ತಡವಾಗಿಸಲು ಈಗ ನಮ್ಮೆಲ್ಲರ ಮನೆಗಳಲ್ಲಿ ಫ್ರಿಜ್ಜುಗಳಿವೆ. ಆದ್ದರಿಂದ ನಾವೆಲ್ಲಾ ಕೊಂಚ ಹೆಚ್ಚಿನ ಪ್ರಮಾಣವನ್ನು ತಯಾರಿಸಿ ಫ್ರಿಜ್ಜಿನಲ್ಲಿಟ್ಟು ಮುಂದಿನ ಒಂದೆರಡು ದಿನಗಳವರೆಗೆ ಸೇವಿಸುತ್ತೇವೆ. ಆದರೆ ಫ್ರಿಜ್ಜಿನಲ್ಲಿಟ್ಟ ಆಹಾರವನ್ನೇ ಪ್ರತಿ ಬಾರಿ ಸೇವಿಸಲು ಮೂರು ಅಥವಾ ನಾಲ್ಕು ಬಾರಿ ಬಿಸಿ ಮಾಡಿ ಮತ್ತೆ ತಣಿಸಿ ಇಡುವುದು ಖಂಡಿತಾ ಆರೋಗ್ಯಕರವಲ್ಲ.   ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!

ಫ್ರಿಜ್ಜಿನಲ್ಲಿಟ್ಟರೂ ಪ್ರತಿ ಆಹಾರವಸ್ತು ತಾಜಾ ಇರುವ ಅವಧಿ ಬೇರೆಬೇರೆಯಾಗಿರುತ್ತದೆ. ಕೆಲವು ಒಂದೆರಡು ದಿನಗಳಲ್ಲಿಯೇ ಹಳಸಿದರೆ ಕೆಲವು ತಿಂಗಳುಗಟ್ಟಲೆ ಇರಬಲ್ಲವು. ಏಕೆಂದರೆ ಫ್ರಿಜ್ಜಿನಲ್ಲಿಟ್ಟ ಬಳಿಕ ಬ್ಯಾಕ್ಟೀರಿಯಾಗಳ ಕ್ಷಮತೆ ಕಡಿಮೆಯಾಗುತ್ತದೆಯೇ ವಿನಃ ಸಂಪೂರ್ಣವಾಗಿ ಹೋಗುವುದಿಲ್ಲ. ಈ ಬ್ಯಾಕ್ಟೀರಿಯಾ ಶಿಲೀಂಧ್ರ ಮತ್ತು ಇತರ ಸೂಕ್ಷ್ಮಾಣುಗಳು ನಿಧಾನವಾಗಿಯಾದರೂ ಕ್ರಮೇಣ ಆಹಾರವನ್ನು ಹಳಸುತ್ತವೆ.    ನಿಮ್ಮ ಆರೋಗ್ಯಕ್ಕೆ ಫ್ರಿಜ್ ಹೀಗಿರಲಿ

ಆದ್ದರಿಂದ ಫ್ರಿಜ್ಜಿನಲ್ಲಿಟ್ಟ ಆಹಾರಗಳೂ ಒಂದು ನಿಗದಿತ ಅವಧಿಯ ಬಳಿಕ ಸೇವೆನೆಗೆ ಸುರಕ್ಷಿತವಲ್ಲ. ಉದಾಹರಣೆಗೆ ಹಾಲು, ಚೀಸ್, ಬ್ರೆಡ್, ಹಣ್ಣು ತರಕಾರಿಗಳು ವಾರಗಟ್ಟಲೆ ಇಡುವಂತಿಲ್ಲ. ಆದರೆ ಇವುಗಳು ಕಡದಂತೆ ಕಾಣುವ ಕಾರಣ ನಾವೆಲ್ಲಾ ಫ್ರಿಜ್ಜಿನಲ್ಲಿಟ್ಟ ಆಹಾರ ತಾಜಾ ಇದೆ ಎಂದೇ ತಿಳಿಯುತ್ತೇವೆ.

ವಾಸ್ತವವಾಗಿ ಸೂಕ್ಷ್ಮಕ್ರಿಮಿಗಳು ಒಳಗಿನಿಂದ ನಿಧಾನವಾಗಿ ತಮ್ಮ ಪ್ರಭಾವ ಬೀರಲು ಪ್ರಾರಂಭಿಸಿರುತ್ತವೆ, ಇದು ಗೋಚರವಾಗುವುದೇ ಇಲ್ಲ. ಆದ್ದರಿಂದ ಯಾವ ಆಹಾರವನ್ನು ಎಷ್ಟು ದಿನಗಳ ಕಾಲ ಫ್ರಿಜ್ಜಿನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಬ್ರೆಡ್

ಬ್ರೆಡ್

ಫ್ರಿಜ್ಜಿನಲ್ಲಿಟ್ಟರೂ ಬ್ರೆಡ್ಡಿನ ಅಂಚುಗಳಲ್ಲಿ ಬೂಸು ಬರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಎರಡು ದಿನಗಳ ಬಳಿಕ ಈ ಬೂಸು ಬರುವುದು ಪ್ರಾರಂಭವಾದರೂ ಇದು ನಮ್ಮ ಕಣ್ಣಿಗೆ ಕಾಣಲು ತೊಡಗುವುದು ನಾಲ್ಕನೆಯ ಅಥವಾ ಆರನೆಯ ದಿನದ ಬಳಿಕವೇ. ಅಂದರೆ ಒಳಗಿನ ಭಾಗವನ್ನು ಆವರಿಸಿದ ಬಳಿಕ ಹೊರಗೆ ಬರಲು ತೊಡಗುತ್ತದೆ. ಪ್ಲಾಸ್ಟಿಕ್ ಕವರ್ ನೊಳಗೆ ಇರುವ ಬ್ರೆಡ್ಡಿನ ಪದರ ಮತ್ತು ಪ್ಲಾಸ್ಟಿಕ್ ಹೊರಪದರ ಅಂಟಿಕೊಳ್ಳದೇ ಕೊಂಚವೇ ಜಾಗ ಇರುವ ಸ್ಥಳ ಬೂಸು ಬರಲು ಅತ್ಯುತ್ತಮವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬ್ರೆಡ್

ಬ್ರೆಡ್

ಈ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೂಸು ಬರತೊಡಗಿದೆಯೇ ಎಂದು ಕಂಡುಹಿಡಿಯಬಹುದು. ಒಂದು ವೇಳೆ ಕೊಂಚವೂ ಬೂಸು ಇದ್ದರೆ ಈ ಬ್ರೆಡ್ ಅನ್ನು ನೇರವಾಗಿ ತ್ಯಜಿಸಿ ಬಿಡಿ. ಆದಾಗ್ಯೂ ಯಾವುದೇ ಬ್ರೆಡ್ ಬನ್ ಮೊದಲಾದ ಬೇಕರಿ ಉತ್ಪನ್ನಗಳನ್ನು ಫ್ರಿಜ್ಜಿನಲ್ಲಿಟ್ಟರೂ ನಾಲ್ಕು ದಿನಗಳ ಒಳಗೇ ಖಾಲಿ ಮಾಡಿ. ಎಚ್ಚರ: ನೀವು ಅಂದುಕೊಂಡಷ್ಟು, ಬ್ರೆಡ್ ಆರೋಗ್ಯಕರವಲ್ಲ!

ತೇವಾಂಶವಿರುವ ಆಹಾರ

ತೇವಾಂಶವಿರುವ ಆಹಾರ

ನೀರಿನಲ್ಲಿ ಬೇಯಿಸಿದ ಯಾವುದೇ ಆಹಾರವನ್ನು ಡಬ್ಬಿಯಲ್ಲಿ ಮುಚ್ಚಿಡುವುದಾದರೆ ತಣಿದ ಬಳಿಕ ಇಡುವುದು ಉತ್ತಮ. ಏಕೆಂದರೆ ಬಿಸಿಯಾಗಿಟ್ಟ ಆಹಾರದಲ್ಲಿರುವ ನೀರಾವಿ ಫ್ರಿಜ್ಜಿನಲ್ಲಿಟ್ಟ ಬಳಿಕ ತಣಿದು ನೀರ ಹನಿಗಳ ರೂಪ ಪಡೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೇವಾಂಶವಿರುವ ಆಹಾರ

ತೇವಾಂಶವಿರುವ ಆಹಾರ

ಈ ಹನಿಗಳು ಸೂಕ್ಷ್ಮಾಣುಗಳಿಗೆ ತಕ್ಕ ತಾಣವಾಗಿದ್ದು ಆಹಾರವನ್ನು ಶೀಘ್ರವಾಗಿ ಹಳಸುತ್ತವೆ. ಆದ್ದರಿಂದ ತೇವಾಂಶವಿರುವ ಯಾವುದೇ ಆಹಾರ, ಉದಾಹರಣೆಗೆ ಅನ್ನ, ಮೊಸರನ್ನ ಇತ್ಯಾದಿಗಳನ್ನು ಒಂದು ದಿನಕ್ಕಿಂತ ಹೆಚ್ಚು ಇಡುವುದು ಉತ್ತಮವಲ್ಲ.

ಮೀನು ಮತ್ತು ಮಾಂಸ

ಮೀನು ಮತ್ತು ಮಾಂಸ

ಮೀನು ಮತ್ತು ಮಾಂಸವನ್ನು ಸಂಗ್ರಹಿಸಲು ಫ್ರೀಜರ್ ಅನ್ನು ಮಾತ್ರ ಬಳಸಬೇಕು. ಫ್ರಿಜ್ಜಿನ ಕೆಳಭಾಗದಲ್ಲಿ ಸರ್ವಥಾ ಸಂಗ್ರಹಿಸಬಾರದು. ತಾಜಾ ತಂದ ಮೀನು ಮತ್ತು ಮಾಂಸವನ್ನು ಚೆನ್ನಾಗಿ ತೊಳೆದ ಬಳಿಕವೇ ಫ್ರೀಜರಿನಲ್ಲಿಡುವುದು ಜಾಣತನ.

ಮೀನು ಮತ್ತು ಮಾಂಸ

ಮೀನು ಮತ್ತು ಮಾಂಸ

ಬಳಕೆಗಾಗಿ ಡೀಫ್ರೀಜ್ ಅಂದರೆ ಸಾಮಾನ್ಯ ತಾಪಮಾನಕ್ಕೆ ತಂದ ಬಳಿಕ ಮತ್ತೆ ತಣಿಸಬಾರದು. ಸರಿಯಾದ ಕ್ರಮದಲ್ಲಿ ಸಂಗ್ರಹಿಸಿದರೆ ಫ್ರೀಜರಿನಲ್ಲಿ ಮಾಂಸವನ್ನು ಸುಮಾರು ಒಂದು ತಿಂಗಳಿನಿಂದ ಮೂರು ತಿಂಗಳವರೆಗೂ ಸುರಕ್ಷಿತವಾಗಿಡಬಹುದು. ಆದರೆ ಯಾವುದೇ ಕಾರಣಕ್ಕೆ ಮಾಂಸದಲ್ಲಿ ವಾಸನೆ ಬಂದರೆ ಮಾತ್ರ ಸೇವಿಸಬಾರದು.

ಚೀಸ್

ಚೀಸ್

ಚೀಸ್ ಸಹಾ ಕ್ರಿಮಿಗಳಿಗೆ ಪ್ರಿಯವಾದ ಆಹಾರವಾಗಿದೆ. ಚೀಸ್ ಬಾಟಲಿಯನ್ನು ತೆರೆದ ಬಳಿಕ ಆದಷ್ಟು ಶೀಘ್ರ ಬಳಸಿ ಖಾಲಿ ಮಾಡಬೇಕು. ಆದ್ದರಿಂದ ಮನೆಯ ಸದಸ್ಯರ ಸಂಖ್ಯೆಯನ್ನು ಪರಿಗಣಿಸಿ ಸಾಧ್ಯವಾದಷ್ಟು ಚಿಕ್ಕದನ್ನೇ ಬಳಸುವುದು ಜಾಣತನ.

ಚೀಸ್

ಚೀಸ್

ಕೆಲವೇ ಸದಸ್ಯರಿದ್ದರೆ ಚೀಸ್‌ನ ಒಂದು ಬಾರಿ ಬಳಸಬಹುದಾದ ಚಿಕ್ಕ ಪ್ಯಾಕೆಟ್ಟುಗಳನ್ನು ಖರೀದಿಸಿ ಅಂದಿನ ಪ್ರಮಾಣವನ್ನು ಮಾತ್ರ ತೆರೆಯುವುದು ಉತ್ತಮ ಕ್ರಮ. ಬಾಟಲಿಯಾದರೆ ಮೊದಲ ಬಾರಿ ತೆರೆದ ಬಳಿಕ ಒಂದು ವಾರದೊಳಗೇ ಖಾಲಿ ಮಾಡಬೇಕು .

ಮೊಟ್ಟೆಗಳು

ಮೊಟ್ಟೆಗಳು

ಈಗ ಮೊಟ್ಟೆಗಳ ಮೇಲೂ ಬಳಕೆಯ ಗರಿಷ್ಟ ದಿನಾಂಕವನ್ನು ನಮೂದಿಸಲಾಗುತ್ತಿದೆ. ಆದರೂ ಮೊಟ್ಟೆಯ ಪ್ರಾರಂಭಿಕ ದಿನದಿಂದ ಹಿಡಿದು ಒಂದು ತಿಂಗಳವರೆಗೆ ಬಳಸಬಹುದು. ಇದಕ್ಕೂ ಹೆಚ್ಚಿನ ಅವಧಿಯ ಮೊಟ್ಟೆಗಳನ್ನು ಸೇವಿಸುವ ಮೊದಲು ಒಂದು ಮೊಟ್ಟೆಯನ್ನು ನೀರಿನಲ್ಲಿ ಮುಳುಗಿಸಿ ನೋಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಟ್ಟೆಗಳು

ಮೊಟ್ಟೆಗಳು

ಮುಳುಗಿದರೆ ಉತ್ತಮ, ಪೂರ್ಣ ಮುಳುಗದೇ ತೇಲಿದರೆ ಅಥವಾ ನೀರಿನಡಿಯಲ್ಲಿ ನೆಟ್ಟಗೆ ನಿಂತಿದ್ದರೂ ಈ ಮೊಟ್ಟೆಯನ್ನು ಸೇವಿಸಬೇಡಿ.

 
For Quick Alerts
ALLOW NOTIFICATIONS
For Daily Alerts

    English summary

    Signs It's Better To Throw The Food

    Some of us tend to eat fresh food all the time. But it may not be possible all the time. In fact, there are refrigerators to serve that purpose. As it isn't possible to spend lot of time every day to cook food 3-4 times, you can store it in the fridge.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more