For Quick Alerts
ALLOW NOTIFICATIONS  
For Daily Alerts

ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು

By Jaya
|

ಉಪ್ಪಿಗಿಂತ ರುಚಿ ಬೇರೆ ಇಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಮಾತಿನಂತೆ ನಮ್ಮ ನಿತ್ಯದ ಜೀವನದಲ್ಲಿ ಉಪ್ಪು ನಿರ್ವಹಿಸುವ ಪಾತ್ರ ಅತ್ಯಂತ ಹಿರಿದಾದುದು. ನೀವು ಮಾಡುವ ತಿಂಡಿ ತಿನಿಸಿನಲ್ಲಿ ಉಪ್ಪಿನ ಪ್ರಮಾಣ ಕಡಿಮೆಯಾದರೆ ಅಥವಾ ಉಪ್ಪು ಹಾಕದೇ ಇದ್ದಲ್ಲಿ ಅದು ಅಡುಗೆಯ ಸ್ವಾದವನ್ನೇ ಕೆಡಿಸುತ್ತದೆ. ಆದ್ದರಿಂದಲೇ ಅಡುಗೆ ಮನೆಯಲ್ಲಿ ಉಪ್ಪಿಗೆ ಪ್ರಧಾನ್ಯತೆ ಹೆಚ್ಚು.ಸೌಂದರ್ಯ ಉತ್ಪನ್ನಗಳಲ್ಲಿ, ಆಹಾರ ಉತ್ಪನ್ನಗಳಲ್ಲಿ,

ಔಷಧಿಗಳಲ್ಲಿ ಉಪ್ಪಿನ ಬಳಕೆಯನ್ನು ಮಾಡುತ್ತಿದ್ದು ತನ್ನ ಹೆಚ್ಚಿನ ಗುಣಗಳಿಂದ ಉಪ್ಪು ಭಾರತೀಯ ಅಡುಗೆ ಪದ್ಧತಿಯಲ್ಲಿ ಸ್ಥಾನಮಾನವನ್ನು ಪಡೆದುಕೊಂಡಿದೆ. ಉಪ್ಪಿನ ವಿಶೇಷತೆಗಳು ಇಷ್ಟಕ್ಕೇ ಮುಗಿದಿಲ್ಲ. ಬರಿಯ ಆಹಾರ ಪದಾರ್ಥಗಳಲ್ಲಿ ಮಾತ್ರವಲ್ಲದೆ ಆರೋಗ್ಯ ವರ್ಧನೆಗೂ ಉಪ್ಪು ಹೆಚ್ಚು ಪ್ರಯೋಜನಕಾರಿಯಾಗಿದೆ. ಅದರಲ್ಲೂ ಸಂಸ್ಕರಿಸದೇ ಇರುವ ಉಪ್ಪು ಸಂಸ್ಕರಿಸಿದ ಉಪ್ಪಿಗಿಂತ ಹೆಚ್ಚಿನ ಧನಾತ್ಮಕ ಅಂಶಗಳನ್ನು ಒಳಗೊಂಡಿದೆ.

ನೈಸರ್ಗಿವಾಗಿ ದೊರೆಯುವ ಸಂಸ್ಕರಿಸಿಲ್ಲದ ಉಪ್ಪು ಹೆಚ್ಚು ಉತ್ತಮವಾಗಿದೆ. ಉಪ್ಪು 80 ಮಿನರಲ್‎ಗಳನ್ನು ಹೊಂದಿದ್ದು ನಿಮ್ಮ ಚಯಾಪಚಯ ಕ್ರಿಯೆ, ಮೂಳೆಗಳು, ರೋಗವರ್ಧಕ ವ್ಯವಸ್ಥೆಗೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಸಣ್ಣ ಜಗ್‎ನಲ್ಲಿ 3 ಚಮಚದಷ್ಟು ಸಂಸ್ಕರಿಸಿಲ್ಲದ ಉಪ್ಪನ್ನು ಹಾಕಿ ಮತ್ತು ಅದನ್ನು ನೀರಿನಿಂದ ತುಂಬಿಸಿಕೊಳ್ಳಿ. ಮುಚ್ಚಳ ಮುಚ್ಚಿ ಒಂದು ದಿನ ಹಾಗೆಯೇ ಬಿಡಿ. ಮರುದಿನ, ಬೆಚ್ಚಗಿನ ನೀರಿಗೆ ಈ ಉಪ್ಪಿನ ದ್ರಾವಣವನ್ನು ಬೆರೆಸಿ ಸೇವಿಸಿ.

ಹಿಂದಿನ ತಲೆಮಾರುಗಳು ಸಂಸ್ಕರಿಸಿಲ್ಲದ ಸ್ವಾಭಾವಿಕ ಉಪ್ಪನ್ನು ಅಡುಗೆ ಉದ್ದೇಶಗಳಿಗೆ ಬಳಸುತ್ತಿದ್ದವು. ಬೆಳಗ್ಗಿನ ಸಮಯದಲ್ಲಿ ಸೇವಿಸುವ ಉಪ್ಪಿನ ದ್ರಾವಣವನ್ನು ಪ್ರಯತ್ನಿಸುವ ಮುನ್ನ ನಿಮ್ಮ ವೈದ್ಯರನ್ನು ಕಾಣಿರಿ. ಉಪ್ಪಿನ ಇನ್ನಷ್ಟು ಪರಿಣಾಮಕಾರಿ ಗುಣಗಳನ್ನು ಕೆಳಗಿನ ಸ್ಲೈಡರ್‎ಗಳಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ...

ಜೀರ್ಕ್ರಿಯೆಗೆ ಉತ್ತಮ

ಜೀರ್ಕ್ರಿಯೆಗೆ ಉತ್ತಮ

ನೈಸರ್ಗಿಕ ಉಪ್ಪಿನ ನೀರನ್ನು ಸೇವಿಸಿದ ನಂತರ, ನಿಮ್ಮ ಜೊಲ್ಲು ಗ್ರಂಥಿಗಳು ಉತ್ತೇಜನಗೊಳ್ಳುತ್ತದೆ ನಿಮ್ಮ ಹೊಟ್ಟೆಯಲ್ಲಿರುವ ಆಸಿಡ್ ಉತ್ತೇಜನಗೊಳ್ಳುತ್ತದೆ. ಇವೆರಡೂ ಜೀರ್ಣಕ್ರಿಯೆಗೆ ಅತ್ಯುತ್ತಮ.

ಉರಿಯೂತ ನಿವಾರಣೆ

ಉರಿಯೂತ ನಿವಾರಣೆ

ನಿಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಸೋಡಿಯಂ ಅನ್ನು ಈ ಉಪ್ಪು ನೀರಿನ ಮಿಶ್ರಣ ನೀಡುತ್ತದೆ. ಇದರಿಂದ ಉರಿಯೂತವನ್ನು ಉಂಟು ಮಾಡುವ ರೆನಿನ್ (ಕಿಣ್ವ) ಮತ್ತು ಅಲ್ಡೊಸ್ಟಿರೋನ್ (ಹಾರ್ಮೋನ್) ಹೆಚ್ಚಾಗುವುದನ್ನು ತಡೆಯುತ್ತದೆ. ಆದ್ದರಿಂದ ಬೆಳಗ್ಗೆ ಉಪ್ಪು ನೀರನ್ನು ಸೇವಿಸಿ ಉರಿಯೂತವನ್ನು ಹತೋಟಿಯಲ್ಲಿಟ್ಟುಕೊಳ್ಳಿ.

ಮೂಳೆಗಳು

ಮೂಳೆಗಳು

ನಿಮ್ಮ ಮೂಳೆಗಳಿಗೆ ಉಪ್ಪು ನೀರು ಸಹಾಯಕ. ನಿಮ್ಮ ರಕ್ತ ಆಮ್ಲೀಯಗೊಂಡಾಗ, ಅದನ್ನು ತಟಸ್ಥಗೊಳಿಸಲು ನಿಮ್ಮ ದೇಹವು ಮೂಳೆಗಳಿಂದ ಕ್ಯಾಲ್ಶಿಯಂ ಅನ್ನು ಬಳಸಿಕೊಳ್ಳುತ್ತದೆ. ಉಪ್ಪು ನೀರು ನಿಮ್ಮ ದೇಹವನ್ನು ಆಲ್ಕಾಲೈಸ್ ಮಾಡುವುದರಿಂದ, ಮೂಳೆಗಳು ಸುರಕ್ಷಿತವಾಗಿರುತ್ತವೆ.

ನಿದ್ದೆ

ನಿದ್ದೆ

ನಿಮ್ಮ ನರ ವ್ಯವಸ್ಥೆಯನ್ನು ವಿಶ್ರಾಂತಿಗೊಳಿಸುವ ಅಂಶವನ್ನು ನೈಸರ್ಗಿಕ ಉಪ್ಪಿನಲ್ಲಿರುವ ಮಿನರಲ್ ಹೊಂದಿರುವುದರಿಂದ ಒತ್ತಡ ಹಾರ್ಮೋನುಗಳ ಮಟ್ಟಗಳನ್ನು ಕಡಿಮೆ ಮಾಡುತ್ತದೆ. ಸಮಾಧಾನಕರವಾಗಿ ನಿದ್ದೆ ಮಾಡಲು ಇದು ನಿಮಗೆ ಸಹಾಯಕ.

ದೇಹ ವ್ಯವಸ್ಥೆಯನ್ನು ಹೈಡ್ರೇಟ್ ಮಾಡುತ್ತದೆ

ದೇಹ ವ್ಯವಸ್ಥೆಯನ್ನು ಹೈಡ್ರೇಟ್ ಮಾಡುತ್ತದೆ

ನೈಸರ್ಗಿಕ ಉಪ್ಪು ನೀರನ್ನು ಸೇವಿಸುವುದು ನಿಮ್ಮ ದೇಹಕ್ಕೆ ನೀರನ್ನು ಹೀರಿಕೊಳ್ಳುವ ಶಕ್ತಿಯನ್ನು ನೀಡುತ್ತದೆ ಮತ್ತು ಅದನ್ನು ಸರಿಯಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಸಾಮಾನ್ಯವಾಗಿ ನೀವು ಸಾದಾ ನೀರನ್ನು ಕುಡಿದಾಗ, ಅದು ಮೂತ್ರ ರೂಪದಲ್ಲಿ ಹೊರಹೋಗುತ್ತದೆ ಆದರೆ ಉಪ್ಪು ನೀರು ನಿಮ್ಮ ದೇಹದಲ್ಲಿ ಆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಡಿಟಾಕ್ಸಿಫೈ ಮಾಡುತ್ತದೆ

ಡಿಟಾಕ್ಸಿಫೈ ಮಾಡುತ್ತದೆ

ಹಲವಾರು ಖನಿಜಾಂಶಗಳು ಉಪ್ಪು ನೀರಿನಲ್ಲಿ ಇರುತ್ತವೆ. ಇವು ನಿಮ್ಮ ದೇಹವನ್ನು ಡಿಟಾಕ್ಸಿಫೈ ಅಂದರೆ ನಂಜು ನಿವಾರಕಗೊಳಿಸುತ್ತದೆ. ಇದು ಒಂದು ಉತ್ತಮ ಆಂಟಿ ಬ್ಯಾಕ್ಟೀರಿಯಾ ಏಜೆಂಟ್ ಆಗಿರುವ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

ತ್ವಚೆಗೆ ಉತ್ತಮ

ತ್ವಚೆಗೆ ಉತ್ತಮ

ಉಪ್ಪು ನೀರು ಹೆಚ್ಚಿನ ಮಿನರಲ್‎ಗಳನ್ನು ಒಳಗೊಂಡಿರುವುದರಿಂದ ಇದು ನಿಮ್ಮ ತ್ವಚೆಗೆ ಉತ್ತಮವಾಗಿದೆ. ಸಲ್ಫರ್, ಜಿಂಕ್, ಐಯೋಡಿನ್ ಮತ್ತು ಕ್ರೋಮಿಯಮ್ ಮೊದಲಾದ ಮಿನರಲ್‎ಗಳು ಇದರಲ್ಲಿ ಇರುವುದರಿಂದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡಿ ತ್ವಚೆಯನ್ನು ಸ್ವಚ್ಛವಾಗಿರಿಸುತ್ತದೆ.

English summary

Reasons why You Should Drink Warm Salt Water Every Morning

Unrefined salt is rich in minerals. It contains certain healing properties. Here, we are not talking about the salt that we use in daily life, that is processed salt which is unhealthy. Natural unrefined salt is good your metabolism, bones, immune system and blood sugar levels. To try this out, fill a small jug with 3 spoons of unrefined natural salt and fill it with water
Story first published: Friday, February 26, 2016, 14:57 [IST]
X
Desktop Bottom Promotion