For Quick Alerts
ALLOW NOTIFICATIONS  
For Daily Alerts

ಕಿಡ್ನಿ ಕಾಳಜಿ: ಸ್ವಲ್ಪ ಯಾಮಾರಿದರೂ, ಜೀವಕ್ಕೆ ಸಂಚಕಾರ!

By Manu
|

ನೋಡಲು ಸುಂದರವಾಗಿರುವುದು ಆರೋಗ್ಯಕರವಾಗಿರಬೇಕಾಗಿಲ್ಲ. ಅಂತೆಯೇ ಆರೋಗ್ಯವಾಗಿರುವುದು ಸುಂದರವಾಗಿರಬೇಕಾಗಿಯೂ ಇಲ್ಲ. ಆದರೆ ನಾವು ಸುಂದರವಾಗಿ ಕಾಣುವ ಜಾಹೀರಾತುಗಳಿಗೆ ಮನಸೋತು ಅನಾರೋಗ್ಯಕರ ಸಿದ್ಧ ಆಹಾರ, ಬುರುಗು ಬರುವ, ಅತಿಹೆಚ್ಚು ಎಣ್ಣೆ, ಅಜಿನೋಮೋಟೋ, ಉಪ್ಪು, ಕೊಲೆಸ್ಟ್ರಾಲ್, ಕೊಬ್ಬು ಮೊದಲಾದವು ಇರುವ ಆಹಾರಗಳನ್ನೇ ಇಷ್ಟಪಟ್ಟು ತಿನ್ನುತ್ತೇವೆ.

ಹೊಟ್ಟೆಗೆ ಬಂದ ಬಳಿಕ ಈ ಕಲ್ಮಶಗಳನ್ನು ಹೊರಹಾಕಲು ನಮ್ಮ ಮೂತ್ರಪಿಂಡಗಳು ಅಪಾರವಾಗಿ ಶ್ರಮಿಸಬೇಕಾಗುತ್ತದೆ. ಅಲ್ಲದೇ ಸತತವಾಗಿ ಈ ಕಲ್ಮಶಗಳು ಬರುತ್ತಿದ್ದರೆ ಮೂತ್ರಪಿಂಡದ ಸಾಮರ್ಥ್ಯ ಮೀರಿ ಕೆಲಸ ಮಾಡಬೇಕಾಗಿ ಬರುವ ಕಾರಣ ಕೊಂಚ ಕಲ್ಮಶ ಮತ್ತು ವಿಷಕಾರಿ ವಸ್ತುಗಳು ಹಾಗೇ ಉಳಿದುಬಿಡುತ್ತವೆ. ಕಿಡ್ನಿಯ ಆರೋಗ್ಯಕ್ಕೆ ಸರಳ ಟಿಪ್ಸ್, ಮರೆಯದೇ ಅನುಸರಿಸಿ

ನಮ್ಮ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ರಕ್ತ ಹೊತ್ತು ತರುತ್ತದೆ. ಈ ವಿಷಕಾರಿ ವಸ್ತುಗಳನ್ನು ರಕ್ತದಿಂದ ಬೇರ್ಪಡಿಸಿ ಶುದ್ದ ರಕ್ತವನ್ನು ಒದಗಿಸುವ ಮೂಲಕ ಮೂತ್ರಪಿಂಡ ಅತಿಮುಖ್ಯವಾದ ಕಾರ್ಯವನ್ನು ನಿರ್ವಹಿಸುತ್ತಾ ಇರುತ್ತದೆ. ಒಂದು ವೇಳೆ ಇದು ವಿಫಲವಾದರೆ ಜೀವಕ್ಕೇ ಅಪಾಯವಿದೆ. ಆದ್ದರಿಂದಲೇ ಮೂತ್ರಪಿಂಡಗಳ ಕಾರ್ಯ ಸುಗಮವಾಗಲು ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಇದರ ಜೊತೆಗೇ ಪೊಟ್ಯಾಶಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಉತ್ತಮವಾಗಿದೆ. ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?

ದ್ರಾಕ್ಷಿ, ಕಿತ್ತಳೆ, ಸಿಹಿಲಿಂಬೆ, ಕಿವಿ, ಬಾಳೆಹಣ್ಣು, ಆಪ್ರಿಕಾಟ್ ಮತ್ತು ಪ್ರೂನ್ ಹಣ್ಣುಗಳಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು ಮೂತ್ರಪಿಂಡದ ಕ್ಷಮತೆ ಹೆಚ್ಚಿಸುವಲ್ಲಿ ನೆರವಾಗುತ್ತವೆ. ಇದರಿಂದ ನಮ್ಮ ದೇಹದಲ್ಲಿರುವ ಯೂರಿಕ್ ಆಮ್ಲವನ್ನು ಸುಲಭವಾಗಿ ಹೊರಹಾಕಲು ಸಾಧ್ಯವಾಗುತ್ತದೆ. ಮೂತ್ರಪಿಂಡಗಳ ಆರೋಗ್ಯಕ್ಕಾಗಿಯಾದರೂ ಮದ್ಯಪಾನ, ಚಾಕಲೇಟು ಮತ್ತು ಹೆಚ್ಚಿನ ಕೆಫೀನ್ ಸೇವನೆ ತ್ಯಜಿಸುವುದು ಆರೋಗ್ಯಕರ ಮತ್ತು ಜಾಣತನದ ಕ್ರಮವಾಗಿದೆ. ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.. ಕಿಡ್ನಿ ಕಲ್ಲಿನ ಸಮಸ್ಯೆಗೆ ಗಿಡಮೂಲಿಕೆಗಳ ನಲ್ಮೆಯ ಆರೈಕೆ

ಲಘು ಮೂತ್ರಪಿಂಡದ ಗಾಯ

ಲಘು ಮೂತ್ರಪಿಂಡದ ಗಾಯ

ಈ ವಿಷಕಾರಿ ವಸ್ತುಗಳು ನಿಧಾನವಾಗಿ ಮೂತ್ರಪಿಂಡಕ್ಕೆ ರಕ್ತ ಒದಗಿಸುವ ರಕ್ತನಾಳಗಳಲ್ಲಿ ಇಳಿದು ರಕ್ತವನ್ನು ಹೆಪ್ಪುಗಟ್ಟಿಸತೊಡಗುತ್ತವೆ. ನಿಧಾನವಾಗಿ ಹೆಚ್ಚುತ್ತಾ ಹೋಗುವ ಈ ತೊಂದರೆ ಉಲ್ಬಣಗೊಂಡರೆ ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು.

ಮೂತ್ರಪಿಂಡದ ಕಲ್ಲುಗಳು

ಮೂತ್ರಪಿಂಡದ ಕಲ್ಲುಗಳು

ಕೆಲವು ವಿಷಕಾರಿ ವಸ್ತುಗಳು ಒಂದಕ್ಕೊಂದು ಅಂಟಿಕೊಳ್ಳುತ್ತಾ ಚಿಕ್ಕ ಕಲ್ಲಿನ ರೂಪ ತಳೆಯುತ್ತವೆ. ಇವನ್ನೇ ಮೂತ್ರಪಿಂಡದ ಕಲ್ಲುಗಳು ಎನ್ನುತ್ತೇವೆ. ಮೂತ್ರದಲ್ಲಿ ಯೂರಿಕ್ ಆಮ್ಲ, ಕ್ಯಾಲ್ಸಿಯಂ ಅಥವಾ ಆಕ್ಸಲೇಟ್ ಲವಣಗಳು ಹೆಚ್ಚಾದರೆ ಈ ಕಲ್ಲುಗಳು ಹೆಚ್ಚು ಹೆಚ್ಚಾಗಿ ದೊಡ್ಡದಾಗುತ್ತಾ ಹೋಗುತ್ತವೆ. ಕಿರಿಯದಾಗಿದ್ದಾಗ ಅರಿವಿಗೇ ಬರದ ಇವು ಮೂತ್ರನಾಳದ ವ್ಯಾಸದಷ್ಟು ಬೆಳೆದ ಬಳಿಕ ಮೂತ್ರಧಾರೆಗೆ ತಡೆಯೊಡ್ಡಿ ಅಪಾರ ನೋವು ನೀಡುತ್ತವೆ.

ಹೆಮಚೂರಿಯಾ (Hematuria)

ಹೆಮಚೂರಿಯಾ (Hematuria)

ಮೂತ್ರಪಿಂಡದ ಕಲ್ಲುಗಳ ಹರಿತ ಅಂಚುಗಳು ಮೂತ್ರನಾಳವನ್ನು ಗಾಯಗೊಳಿಸಿದರೆ ಇದರಿಂದ ಒಸರುವ ರಕ್ತ ಮೂತ್ರದೊಂದಿಗೆ ಮಿಶ್ರಣಗೊಂಡು ಹೊರಹೋಗಬಹುದು. ಇತರ ಕಾರಣಗಳಿಂದಲೂ ಮೂತ್ರದಲ್ಲಿ ರಕ್ತ ಕಂಡುಬರುವುದಕ್ಕೆ ಹೆಮಚೂರಿಯಾ ಎಂದು ಕರೆಯುತ್ತಾರೆ. ಇದು ಅಪಾರ ಉರಿಯಿಂದ ಕೂಡಿದ್ದು ಬಳಿಕ ಕ್ಯಾನ್ಸರ್‌ಗೂ ತಿರುಗಬಹುದು.

ತೀವ್ರವಾದ ಮೂತ್ರಪಿಂಡದ ತೊಂದರೆಗಳು

ತೀವ್ರವಾದ ಮೂತ್ರಪಿಂಡದ ತೊಂದರೆಗಳು

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಮೂತ್ರಪಿಂಡ ವಿಫಲವಾಗುವುದು ಸಾಮಾನ್ಯ. ಆದ್ದರಿಂದ ಮೂತ್ರಪಿಂಡಗಳನ್ನು ಸುಸ್ಥಿತಿಯಲ್ಲಿಡಲು ಮಧುಮೇಹ ಮತ್ತು ರಕ್ತದೊತ್ತಡವನ್ನು ಆರೋಗ್ಯಕರ ಮಿತಿಯಲ್ಲಿರಿಸುವುದು ಸಹಾ ಅಗತ್ಯ.

ಪಾಲಿ ಸಿಸ್ಟಿಕ್ ಮೂತ್ರಪಿಂಡದ ಕಾಯಿಲೆ

ಪಾಲಿ ಸಿಸ್ಟಿಕ್ ಮೂತ್ರಪಿಂಡದ ಕಾಯಿಲೆ

ಕೆಲವರಿಗೆ ಹುಟ್ಟಿದಂದಿನಿಂದ ಬಂದಿರುವ ಈ ತೊಂದರೆಯಿಂದ ಮೂತ್ರಪಿಂಡಗಳ ಒಳಗೆ ಚಿಕ್ಕ ಚಿಕ್ಕ ಗಡ್ಡೆಗಳಾಗುತ್ತವೆ. ಕಲ್ಮಶಗಳ ಉಪಸ್ಥಿತಿ ಈ ಗಡ್ಡೆಗಳನ್ನು ದೊಡ್ಡದಾಗಿಸುತ್ತವೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸೋಲುವ ಮೂತ್ರಪಿಂಡಗಳು ಸುಲಭವಾಗಿ ಕಾಯೆಲೆಗೆ ತುತ್ತಾಗುತ್ತವೆ.

ಪ್ರೋಟೀನೂರಿಯಾ (Proteinuria)

ಪ್ರೋಟೀನೂರಿಯಾ (Proteinuria)

ಒಂದು ವೇಳೆ ಆಹಾರದ ಮೂಲಕ ಸೇವಿಸಲಾಗಿದ್ದ ಪ್ರೋಟೀನುಗಳು ಮೂತ್ರದ ಮುಖಾಂತರ ವಿಸರ್ಜನೆಗೊಂಡರೆ ಈ ಸ್ಥಿತಿಯನ್ನು ಪ್ರೋಟೀನೂರಿಯಾ ಎಂದು ಕರೆಯುತ್ತಾರೆ. ಇದು ಮೂತ್ರಪಿಂಡಗಳಲ್ಲಿ ಉರಿ ಮತ್ತು ಅಪಾರ ನೋವು ಉಂಟುಮಾಡುತ್ತದೆ. ಆದ್ದರಿಂದ ಯಾವುದೇ ನೋವು ಕಂಡು ಬಂದರೂ ತಕ್ಷಣ ವೈದ್ಯರ ಬಳಿ ತಪಾಸಣೆಗೊಳಗಾಗುವುದು ಅಗತ್ಯ.

ನೆಫ್ರೋಟಿಕ್ ಸಿಂಡ್ರೋಮ್

ನೆಫ್ರೋಟಿಕ್ ಸಿಂಡ್ರೋಮ್

ಒಂದು ವೇಳೆ ಮೂತ್ರದಲ್ಲಿ ಪ್ರೋಟೀನುಗಳ ಪ್ರಮಾಣ ಅಪಾರವಾಗಿದ್ದರೆ, (ವಿಶೇಷವಾಗಿ ಇದು ಮಧುಮೇಹಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ) ಈ ಸ್ಥಿತಿಗೆ ನೆಫ್ರೋಟಿಕ್ ಸಿಂಡ್ರೋಂ ಎಂದು ಕರೆಯುತ್ತಾರೆ. ಇದು ಮೂತ್ರಪಿಂಡಗಳ ವೈಫಲ್ಯಕ್ಕೆ ಪ್ರಮುಖ ಕಾರಣವಾಗುತ್ತವೆ.

English summary

Reasons To Detox Your Kidneys

Your kidneys tend to work very hard to flush all the toxins you ingest. When you keep bombarding your system with more toxins, your kidneys tend to feel the burden. Your kidneys are very important. They remove the waste from your blood and keep your body healthy. When kidneys fail, it is tough to survive. You need to drink lots of water to help your kidneys work well.
X
Desktop Bottom Promotion