For Quick Alerts
ALLOW NOTIFICATIONS  
For Daily Alerts

ಬಿಯರ್ ಕುಡಿದು ಹೊಟ್ಟೆ ಮುಂದೆ ಬಂದಿದ್ದರೆ, ಈ ಟಿಪ್ಸ್ ಅನುಸರಿಸಿ

By Arshad
|

ಬಿಯರ್‌ನಲ್ಲಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಇರುವ ಕಾರಣ ಇದನ್ನು ಮತ್ತೇರಿಸುವ ಪಾನೀಯದ ಬದಲಿಗೆ ಮೋಜಿಗಾಗಿ ಸೇವಿಸುವ ಅಭ್ಯಾಸ ಕೆಲವರಲ್ಲಿದೆ. ಬಿಯರ್ ಸೇವಿಸುವವರು ಇದನ್ನು ಲಘು ಪಾನೀಯವೆಂದೇ ಪರಿಗಣಿಸುತ್ತಾರೆ. ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂಬ ಕನ್ನಡದ ಗಾದೆಗೆ ಈ ಸೇವನೆಯೂ ಅನ್ವಯಿಸುತ್ತದೆ.

ಆಲ್ಕೋಹಾಲ್ ಕಡಿಮೆ ಇದ್ದರೂ ಬಿಯರ್ ಸೇವನೆ ಆರೋಗ್ಯಕ್ಕೆ ಮಾರಕವಾಗದೇ ಇಲ್ಲ. ಇದರ ಸ್ಪಷ್ಟ ಪರಿಣಾಮವೆಂದರೆ ಕೆಳಹೊಟ್ಟೆ ಒಂದು ಚೆಂಡಿನಂತೆ ಉಬ್ಬುವುದು. ದೂರದಿಂದ ನೋಡಿದಾಗ ಫುಟ್ಬಾಲೊಂದನ್ನು ಶರ್ಟಿನ ಒಳಗೆ ಅಡಗಿಸಿಟ್ಟಂತೆ ಕಾಣುತ್ತದೆ! ಸೈಲೆಂಟ್ ಕಿಲ್ಲರ್‌ 'ಬಿಯರ್‌'ನ ಹಿಂದಿರುವ ಕರಾಳ ಸತ್ಯ

ಬಿಯರ್ ಸೇವನೆಯ ಇತರ ಲಕ್ಷಣಗಳೆಂದರೆ ಕೆನ್ನೆ ಬಿಳಿಚುವುದು, ಕೂದಲು ಕೆಂಚಗಾಗುವುದು ಮೊದಲಾದವು ಕಣ್ಣಿಗೆ ಕಾಣುವ ಲಕ್ಷಣಗಳಾದರೆ ಕಣ್ಣಿಗೆ ಕಾಣದ ಇದರ ಅಡ್ಡಪರಿಣಾಮಗಳು ಗಾಬರಿ ಮೂಡಿಸುತ್ತವೆ. ನಡುವಯಸ್ಸು ದಾಟಿದ ಬಳಿಕ ಯೋಚನಾ ಸಾಮರ್ಥ್ಯದಲ್ಲಿ ಕುಂದುವಿಕೆ, ಅಲ್ಜೀಮರ್ಸ್ ಕಾಯಿಲೆ, ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಳ್ಳುವುದು (osteoporosis), ಟೈಪ್ 2 ಮಧುಮೇಹ, ಇದರ ಮೂಲಕ ಹೃದಯ ಸಂಬಂಧಿ, ಮೂತ್ರಪಿಂಡ, ಪ್ರಾಸ್ಟೇಟ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಮುಖ್ಯವಾಗಿ Helicobacter pylori ಎಂಬ ಬ್ಯಾಕ್ಟೀರಿಯಾದ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವುದು (ಇದರಿಂದ ಅಲ್ಸರ್ಉಂ ಟಾಗುತ್ತದೆ. ಇದೇ ಕಾರಣಕ್ಕೆ ಮದ್ಯಪಾನಿಗಳು ಸುಲಭವಾಗಿ ಅಲ್ಸರ್‌ಗೆ ತುತ್ತಾಗುತ್ತಾರೆ) ಹೊಳೆಯುವ ಕೂದಲಿಗೂ, ತಂಪಾದ ಬಿಯರ್‌ಗೂ ಎತ್ತಿಂದೆತ್ತ ಸಂಬಂಧ?

ಬಿಯರ್ ಕುಡಿಯುವುದರ ದುಷ್ಪರಿಣಾಮಗಳನ್ನು ಕಂಡುಕೊಂಡ ಬಳಿಕ ಒಂದು ವೇಳೆ ನೀವು ಬಿಯರ್ ವ್ಯಸನವಾಗಿದ್ದರೆ ಇದನ್ನು ತ್ಯಜಿಸುವತ್ತ ನಿಮ್ಮ ವೈದ್ಯರ ಸಹಾಯ ಪಡೆಯುವುದು ಮೇಲು. ಆದರೆ ಇದರ ಪರಿಣಾಮದಿಂದ ಊದಿದ್ದ ನಿಮ್ಮ ಪುಟ್ಟ ಹೊಟ್ಟೆಯನ್ನು ಕರಗಿಸಲು ಈ ಲೇಖನ ಓದಿದರೆ ಸಾಕು....

ಸಮಾನ ಪ್ರಮಾಣದ ನೀರು ಕುಡಿಯಿರಿ

ಸಮಾನ ಪ್ರಮಾಣದ ನೀರು ಕುಡಿಯಿರಿ

ಬಿಯರ್ ಪ್ರಿಯರು ದಿನದ ನೀರಿನ ಅಗತ್ಯತೆಯನ್ನು ಬಿಯರ್ ನಿಂದಲೇ ಪೂರೈಸಿಕೊಳ್ಳುತ್ತಾರೆ. ಆದರೆ ಇದು ಸರ್ವಥಾ ತಪ್ಪು. ನೀರಿನ ಅಗತ್ಯವನ್ನು ನೀರೇ ಪೂರೈಸಬೇಕೇ ವಿನಃ ಬೇರಾವ ದ್ರವವೂ ನೀರಿಗೆ ಸಾಟಿಯಲ್ಲ. ಒಂದು ವೇಳೆ ನೀವು ಬಿಯರ್ ವ್ಯಸನಿಗಳಾಗಿದ್ದರೆ ಥಟ್ಟನೇ ಬಿಡುವುದು ಸಾಧ್ಯವೂ ಇಲ್ಲ...

ಸಮಾನ ಪ್ರಮಾಣದ ನೀರು ಕುಡಿಯಿರಿ

ಸಮಾನ ಪ್ರಮಾಣದ ನೀರು ಕುಡಿಯಿರಿ

ಕ್ರಮೇಣವಾಗಿ ಕಡಿಮೆಯಾಗಿಸುತ್ತಾ ಬರಬೇಕು. ಆದ್ದರಿಂದ ಪ್ರತಿದಿನದ ನೀರಿನ ಅಗತ್ಯತೆಯನ್ನು ಅರ್ಧಭಾಗ ನೀರು ಮತ್ತು ಅರ್ಧ ಭಾಗ ಬಿಯರ್ ನಿಂದ ಪ್ರಾರಂಭಿಸಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚಿಸುತ್ತಾ ಹೋಗಿ. ಕೆಲವೇ ದಿನಗಳಲ್ಲಿ ನಿಮ್ಮ ಹೊಟ್ಟೆ ನಿಧಾನವಾಗಿ ಕರಗುತ್ತಾ ಬರುವುದಲ್ಲದೇ ಬಿಯರ್ ಚಟವೂ ದೂರವಾಗಿರುತ್ತದೆ.

ಉತ್ತಮ ಪ್ರಮಾಣದ ಪ್ರೋಟೀನ್ ಸೇವಿಸಿ

ಉತ್ತಮ ಪ್ರಮಾಣದ ಪ್ರೋಟೀನ್ ಸೇವಿಸಿ

ಬಿಯರ್‌ನಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟುಗಳ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. ವಾಸ್ತವವಾಗಿ ಹೊಟ್ಟೆಯ ಕೊಬ್ಬಿಗೆ ಇವೇ ಕಾರಣ. ಇದನ್ನು ಹತ್ತಿಕ್ಕಲು ನಿಮ್ಮ ಆಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಬೇಕು.

ಉತ್ತಮ ಪ್ರಮಾಣದ ಪ್ರೋಟೀನ್ ಸೇವಿಸಿ

ಉತ್ತಮ ಪ್ರಮಾಣದ ಪ್ರೋಟೀನ್ ಸೇವಿಸಿ

ವಿಶೇಷವಾಗಿ ಕಾಳುಗಳು, ದ್ವಿದಳ ಧಾನ್ಯಗಳು, ಮೊಳಕೆ ಬರಿಸಿದ ದ್ವಿದಳ ಧಾನ್ಯಗಳು, ಒಣಫಲಗಳು ಮೊದಲಾದವುಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿದ್ದು ಕಾರ್ಬೋಹೈಡ್ರೇಟುಗಳ ಸೇವನೆಯ ಬಯಕೆಯನ್ನು ಕಡಿಮೆ ಮಾಡಿಸುತ್ತದೆ. ಪರಿಣಾಮವಾಗಿ ಹಸಿವೂ ಕಡಿಮೆಯಾಗುತ್ತದೆ ಹಾಗೂ ಹೊಟ್ಟೆ ಕರಗುತ್ತಾ ಬರುತ್ತದೆ.

ಕ್ಯಾಲೋರಿ ಕರಗಿಸುವ ವ್ಯಾಯಾಮ ಮಾಡಿ

ಕ್ಯಾಲೋರಿ ಕರಗಿಸುವ ವ್ಯಾಯಾಮ ಮಾಡಿ

ನಿಮ್ಮ ದಿನದ ವ್ಯಾಯಾಮಗಳಲ್ಲಿ ಹೊಟ್ಟೆ ಕರಗಿಸುವ ಕೆಲವು ವ್ಯಾಯಾಮಗಳನ್ನು ಹೆಚ್ಚಿಸಿ. ವಿಶೇಷವಾಗಿ ಬರ್ಪೀ, ಇಳಿಜಾರಿನಲ್ಲಿ ಪಾದ ಮೇಲಿರುವಂತೆ ಏಳುವುದು ಮೊದಲಾದವುಗಳನ್ನು ದಿನಕ್ಕೆ ಕನಿಷ್ಠ ಹತ್ತು ನಿಮಿಷಗಳಾದರೂ ಅನುಸರಿಸಿ. ಇದರಿಂದಲೂ ಹೊಟ್ಟೆಯ ಕೊಬ್ಬು ಕರಗುತ್ತದೆ.

ಕನಿಷ್ಠ ಎರಡು ವಾರ ಬಿಯರ್ ಮುಟ್ಟಬೇಡಿ

ಕನಿಷ್ಠ ಎರಡು ವಾರ ಬಿಯರ್ ಮುಟ್ಟಬೇಡಿ

ಒಂದು ವೇಳೆ ನಿಮಗೆ ಬಿಯರ್ ಇಲ್ಲದೇ ಸಾಧ್ಯವಿಲ್ಲ ಎನ್ನುವಷ್ಟು ಮಾತ್ರ ವ್ಯಸನವಿದ್ದರೆ ಗಟ್ಟಿಮನಸ್ಸು ಮಾಡಿ ಎರಡು ವಾರಗಳವರೆಗೆ ಬಿಯರ್ ಸೇವಿಸದಿರಿ.

ಕನಿಷ್ಠ ಎರಡು ವಾರ ಬಿಯರ್ ಮುಟ್ಟಬೇಡಿ

ಕನಿಷ್ಠ ಎರಡು ವಾರ ಬಿಯರ್ ಮುಟ್ಟಬೇಡಿ

ಇದರಿಂದ ಹೊಟ್ಟೆಯ ಕೊಬ್ಬು ಪೂರ್ಣವಾಗಿ ಕರಗದೇ ಇದ್ದರೂ ಒಂದೆಡೆ ಸಾಂದ್ರೀಕೃತವಾಗಿದ್ದುದು ಹರಡಲಿಕ್ಕೆ ಸಮಯ ಸಿಗುತ್ತದೆ. ಇದರಿಂದ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಹೊಟ್ಟೆ ಕೊಂಚ ಒಳಗೆ ಹೋದಂತೆ ಕಾಣುತ್ತದೆ.

ಸಿದ್ಧ ಆಹಾರಗಳಿಂದ ದೂರವಿರಿ

ಸಿದ್ಧ ಆಹಾರಗಳಿಂದ ದೂರವಿರಿ

ಉಬ್ಬಿದ ಹೊಟ್ಟೆ ಕರಗಬೇಕಾದರೆ ನೋಡಲು ಸುಂದರವಾಗಿರುವ ಆದರೆ ಕೊಬ್ಬು ಹೆಚ್ಚಿಸುವ ಯಾವುದೇ ಸಿದ್ಧ ಆಹಾರಗಳತ್ತ ನೋಡುವುದನ್ನೇ ನಿಲ್ಲಿಸಿ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟುಗಳೂ, ಕೊಬ್ಬು ಮತ್ತು ಸಕ್ಕರೆ ಇರುತ್ತದೆ. ಪೊಟಾಟೋ ಚಿಪ್ಸ್, ಬರ್ಗರ್, ಸಿಹಿತಿಂಡಿಗಳು, ಕ್ಯಾಂಡಿಗಳು ಮೊದಲಾದವುಗಳತ್ತ ಒಲವು ತೋರದಿರಿ.

ಲಿವರ್ ಅಥವಾ ಯಾಕೃತ್ ಅನ್ನು ಸ್ವಚ್ಛಗೊಳಿಸುವ ತರಕಾರಿ ಸೇವಿಸಿ

ಲಿವರ್ ಅಥವಾ ಯಾಕೃತ್ ಅನ್ನು ಸ್ವಚ್ಛಗೊಳಿಸುವ ತರಕಾರಿ ಸೇವಿಸಿ

ಬ್ರೋಕೋಲಿ, ಕೋಸು, ಕೇಲ್ ಎಲೆಗಳು ಮೊದಲಾದ ತರಕಾರಿಗಳ ಸೇವನೆಯಿಂದ ಯಕೃತ್ ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಹೊಟ್ಟೆಯ ಕೊಬ್ಬು ನಿವಾರಣೆಯಾಗಲೂ ಸಹಕಾರಿಯಾಗುತ್ತದೆ.

ಉಪಾಹಾರ ತಪ್ಪದೇ ಸೇವಿಸಿ

ಉಪಾಹಾರ ತಪ್ಪದೇ ಸೇವಿಸಿ

ಬೆಳಗ್ಗಿನ ಉಪಾಹಾರ ದಿನದ ಯಾವುದೇ ಆಹಾರಕ್ಕಿಂತ ಹೆಚ್ಚು ಮಹತ್ವದ್ದಾಗಿದೆ. ಉಪಾಹಾರ ತಡವಾಗಿಸುವುದೂ, ಸೇವಿಸದೇ ಇರುವುದೂ ಎರಡೂ ಮಹಾಪರಾಧಗಳು. ವಿಶೇಷವಾಗಿ ಮೆದುಳಿಗೆ ಬೆಳಗ್ಗಿನ ಹೊತ್ತಿನಲ್ಲಿ ಹೆಚ್ಚಿನ ರಕ್ತ ಸಂಚಾರದ ಅಗತ್ಯವಿದ್ದು ಉಪಾಹಾರದ ಮೂಲಕ ಈ ಶಕ್ತಿ ಲಭಿಸುತ್ತದೆ.

ಉಪಾಹಾರ ತಪ್ಪದೇ ಸೇವಿಸಿ

ಉಪಾಹಾರ ತಪ್ಪದೇ ಸೇವಿಸಿ

ವಾಸ್ತವವಾಗಿ ಈ ಶಕ್ತಿಯನ್ನು ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಹಹಿಸುವ ಮೂಲಕವೇ ಪಡೆದುಕೊಳ್ಳಲಾಗುತ್ತದೆ. ಆದ್ದರಿಂದ ನಿಮ್ಮ ಉಪಾಹಾರ ಅಲ್ಪವಾಗಿದ್ದು ಸತ್ವಯುತವಾಗಿರಬೇಕು.

English summary

Quick & Simple Ways To Get Rid Of Beer Belly

if you are looking out for a quick way to get rid of your beer belly then there are certain quick and simple ways that are explained in this article. Here is a list of quick and simple ways that help to get rid of beer belly. Take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more