For Quick Alerts
ALLOW NOTIFICATIONS  
For Daily Alerts

ಸೈಲೆಂಟ್ ಕಿಲ್ಲರ್‌ 'ಬಿಯರ್‌'ನ ಹಿಂದಿರುವ ಕರಾಳ ಸತ್ಯ

By Arshad
|

ಸಾಮಾನ್ಯವಾಗಿ ವ್ಯಸನಿಗಳು ತಮ್ಮ ಅಭ್ಯಾಸದ ಪಾನೀಯ ಅಥವಾ ಮಾದಕಪದಾರ್ಥಗಳ ಪರವಾಗಿ ವಾದಿಸಿ ತಾವು ಮಾಡುತ್ತಿರುವುದೇ ಸರಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇದಕ್ಕೆ ಮೆದುಳಿನಲ್ಲಿರುವ THIQ ಎಂಬ ರಾಸಾಯನಿಕವೇ ಕಾರಣ. ಆದರೆ ಕೆಲವರು ಬಿಯರ್ ಮಾದಕ ದ್ರವ್ಯವೇ ಅಲ್ಲವೆಂದೂ, ಇದೊಂದು ಅತ್ಯುತ್ತಮವಾದ ಲಘು ಪಾನೀಯವೆಂದೂ, ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳೂ ಕುಡಿಯುತ್ತಾರೆ ಎಂದೆಲ್ಲಾ ಸಬೂಬುಗಳನ್ನು ಹೇಳತೊಡಗುತ್ತಾರೆ. ಬಿಯರ್ ಕುಡಿದರೆ ಹೊಟ್ಟೆಯ ಬೊಜ್ಜು ಬರಲ್ಲ!

ವಾಸ್ತವವಾಗಿ ಬಿಯರ್ ಎಂಬುದು ಅತಿ ಕಡಿಮೆ ಆಲ್ಕೋಹಾಲ್ ಉಳ್ಳ ಮಾದಕ ಪಾನೀಯವೇ. ಆದರೆ ಇದರ ಸೇವನೆ ಚಳಿ ಹೆಚ್ಚಿರುವ ದೇಶಗಳ ನಿವಾಸಿಗಳಿಗೆ ಉತ್ತಮ. ಏಕೆಂದರೆ ಅಲ್ಪ ಪ್ರಮಾಣದ ಆಲ್ಕೋಹಾಲ್ ದೇಹವನ್ನು ಬೆಚ್ಚಗಾಗಿಸುವ ಮೂಲಕ ಕೊರೆಯುವ ಚಳಿಯಿಂದ ರಕ್ಷಿಸುತ್ತದೆ.

ಅದು ಏನೇ ಇರಲಿ, ಆದರೆ ಬಿಯರ್ ಪ್ರಿಯರಿಗೆ ಒಂದು ಬೇಸರದ ಸಂಗತಿ ಕಾದಿದೆ. ಅದು ಏನಪ್ಪಾ ಅಂದರೆ ಒಂದು ಕಂಭವನ್ನು ಕೀಟವೊಂದು ಒಳಗಿನಿಂದ ಕೊರೆಯುತ್ತಾ ಶಿಥಿಲಗೊಳಿಸುತ್ತಾ ಬಂದಂತೆಯೇ ಹೆಚ್ಚುವರಿ ಆಲ್ಕೋಹಾಲ್ ನಮ್ಮ ಸೂಕ್ಷ್ಮ ಅಂಗವಾದ ಮೂತ್ರಪಿಂಡಗಳ ಮೇಲೆ ಧಾಳಿಯಿಡುತ್ತದೆ. ಮೂತ್ರಪಿಂಡಗಳೂ ಅಷ್ಟೇ, ತಮ್ಮ ಸ್ಥಿತಿ ಅತಿ ಹೆಚ್ಚು ಹದಗೆಡುವವರೆಗೂ ಸುಮ್ಮನೇ ಇದ್ದು ಒಡೆಯನಿಗೆ 'ಗುಂಡುಕಲ್ಲಿನ' ಭಾವನೆಯನ್ನು ನೀಡುತ್ತವೆ. ಕಿಕ್ ನೀಡುವ ಬಿಯರ್‌ನ ಹಿಂದಿದೆ, ಇಂಟರೆಸ್ಟಿಂಗ್ ಸ್ಟೋರಿ!

ಆದರೆ ಒಮ್ಮೆ ತೊಂದರೆ ಪ್ರಾರಂಭವಾಯಿತೋ, ಇನ್ನೆಂದೂ ನೂರು ಜನ್ಮಕ್ಕೂ ಬಿಯರ್ ಕುಡಿಯಲಾರೆ ಎನ್ನಿಸುವಷ್ಟು ನೋವು ಮತ್ತು ಅಪಾಯವನ್ನು ತಂದೊಡ್ಡುತ್ತದೆ. ಗುಂಡುಕಲ್ಲಿನ ಗುಟುರು ಹಾಕುವವರು ಕೊಂಚ ಸಮಾಧಾನಚಿತ್ತದಿಂದ ಕೆಳಗಿನ ಸ್ಲೈಡ್ ಶೋ ಗಮನಿಸಿದರೆ ಬಿಯರ್ ನಮ್ಮ ಮೂತ್ರಪಿಂಡಗಳಿಗೆ ಎಷ್ಟು ಹಾನಿಕರವಾಗಿದೆ ಎಂಬುದನ್ನು ನೋಡಿ ವಿಮರ್ಶಿಸಿಕೊಳ್ಳಬಹುದು...

ಮೂತ್ರಪಿಂಡಗಳ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಕಡಿಮೆಗೊಳಿಸುತ್ತದೆ

ಮೂತ್ರಪಿಂಡಗಳ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಕಡಿಮೆಗೊಳಿಸುತ್ತದೆ

ಮೂತ್ರಪಿಂಡಗಳ ಪ್ರಮುಖ ಕೆಲಸವೆಂದರೆ ರಕ್ತವನ್ನು ಸೋಸುವುದು. ಟೀಯಲ್ಲಿನ ಟೀಪುಡಿಯನ್ನು ಸೋಸಿದ ಬಳಿಕ ಉಳಿಯುವ ಪುಡಿಯಂತೆ ಕಲ್ಮಶಗಳು ಮೂತ್ರಪಿಂಡಗಳಲ್ಲಿ ಉಳಿದು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಆದರೆ ಈ ಸೋಸುವ ಸಾಮರ್ಥಕ್ಕೂ ಹತ್ತು ಪಟ್ಟು ಹೆಚ್ಚಿನ ಟೀ ಸುರಿದರೆ? ಒಂದು ಹಂತದಲ್ಲಿ ಸೋಸುವ ಬಟ್ಟೆಯೇ ಹರಿದು ಹೋಗಬಹುದು. ಮಿತಿಗಿಂತ ಹೆಚ್ಚಿನ ಪ್ರಮಾಣದ ಬಿಯರ್ ಕುಡಿಯುವ ಮೂಲಕ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೂತ್ರಪಿಂಡಗಳ ಮೇಲೆ ಭಾರ ಬೀಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂತ್ರಪಿಂಡಗಳ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಕಡಿಮೆಗೊಳಿಸುತ್ತದೆ

ಮೂತ್ರಪಿಂಡಗಳ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಕಡಿಮೆಗೊಳಿಸುತ್ತದೆ

ಅದರಲ್ಲೂ ಬಿಯರ್‌ನಲ್ಲಿರುವ ಆಲ್ಕೋಹಾಲ್ ಮೂತ್ರಪಿಂಡಗಳ ಮೇಲೆ ಅತಿಹೆಚ್ಚಿನ ಪ್ರಭಾವ ಬೀರಿ ದಿನಗಳೆದಂತೆ ಇದರ ಸಾಮರ್ಥ ಮತ್ತು ಕ್ಷಮತೆಯನ್ನು ಕ್ಷೀಣಿಸುತ್ತಾ ಹೋಗುತ್ತದೆ. ಆದರೆ ತಾನು ಸೋಲುತ್ತಿರುವ ವಿಷಯವನ್ನು ಒಂದಿನಿತೂ ತೋರ್ಪಡಿಸದಿರುವುದೇ 'ಗುಂಡುಕಲ್ಲಿನ' ಮನೋಭಾವಕ್ಕೆ ಕಾರಣ. ಒಂದು ಹಂತದಲ್ಲಿ ಸೋಸುವ ಕ್ಷಮತೆ ಉಡುಗಿ ಮೂತ್ರಪಿಂಡಗಳು ಥಟ್ಟನೇ ವಿಫಲವಾಗುತ್ತವೆ.

ಮೂತ್ರಪಿಂಡಗಳ ಕಾರ್ಯವಿಧಾನಕ್ಕೆ ಅಡ್ಡಿಯಾಗುತ್ತದೆ

ಮೂತ್ರಪಿಂಡಗಳ ಕಾರ್ಯವಿಧಾನಕ್ಕೆ ಅಡ್ಡಿಯಾಗುತ್ತದೆ

ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸುವ ಜೊತೆಗೇ ದೇಹದಲ್ಲಿ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗಿರುವಂತೆಯೂ ನೋಡಿಕೊಳ್ಳುತ್ತದೆ. ಅಂದರೆ ನೀರು ಹೆಚ್ಚಾದಾಗ ಹೊರಹಾಕಿ, ಕಡಿಮೆಯಾದಾಗ ನೀರಡಿಕೆಯ ಮೂಲಕ ಬೇಡಿಕೆ ಸಲ್ಲಿಸುವುದರ ಮೂಲಕ ನೀರಿನ ಪ್ರಮಾಣ ಸಮನಾಗಿರುವಂತೆ ನೋಡಿಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂತ್ರಪಿಂಡಗಳ ಕಾರ್ಯವಿಧಾನಕ್ಕೆ ಅಡ್ಡಿಯಾಗುತ್ತದೆ

ಮೂತ್ರಪಿಂಡಗಳ ಕಾರ್ಯವಿಧಾನಕ್ಕೆ ಅಡ್ಡಿಯಾಗುತ್ತದೆ

ಬಿಯರ್‌ನಿಂದ ಈ ಬುದ್ಧಿಗೆ ಮಂಕು ಕವಿಯುತ್ತದೆ. ಅತಿಹೆಚ್ಚಿನ ನೀರು ಹೊರಹರಿದು ನೀರಿನ ಕೊರತೆಯುಂಟಾಗಿ ನಿತ್ರಾಣತೆ ಆವರಿಸುತ್ತದೆ. ಬಿಯರ್ ಕುಡಿದ ಮರುದಿನ ಬೆಳಿಗ್ಗೆ ಅತಿ ಹೆಚ್ಚು ಮೂತ್ರ ಹೊರಹೋಗುವುದು ಮತ್ತು ಆ ದಿನ ಮಧ್ಯಾಹ್ನದವರೆಗೂ ಸುಸ್ತು ಆವರಿಸಿರುವುದು ಇದೇ ಕಾರಣಕ್ಕೆ.

ಬಿಯರ್ ಸೇವನೆ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ

ಬಿಯರ್ ಸೇವನೆ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ

ಸುರಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಬಿಯರ್ ಕುಡಿದರೆ ರಕ್ತದೊತ್ತಡದ ಮೇಲೂ ನೇರವಾದ ಪರಿಣಾಮ ಬೀರುತ್ತದೆ. ಅಂದರೆ ಹೆಚ್ಚು ಬಿಯರ್ ಕುಡಿದಷ್ಟೂ ರಕ್ತದ ಒತ್ತಡವೂ ಹೆಚ್ಚುತ್ತಾ ಹೋಗುತ್ತದೆ. ಒಂದು ವೇಳೆ ಈಗಾಗಲೇ ನಿಮಗೆ ಅಧಿಕ ರಕ್ತದೊತ್ತಡವಿದ್ದರೆ ಬಿಯರ್ ಸೇವನೆಯಿಂದ ಇದರ ಪ್ರಮಾದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದ್ದೀರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಿಯರ್ ಸೇವನೆ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ

ಬಿಯರ್ ಸೇವನೆ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ

ಅಲ್ಲದೇ ರಕ್ತದ ಒತ್ತಡಕ್ಕಾಗಿ ನೀಡಿರುವ ಔಷಧಿಗಳೂ ಬಿಯರ್‌ನ ಪ್ರಭಾವದಿಂದ ಅಡ್ಡಾದಿಡ್ಡಿಯಾಗಿ ಪರಿಣಾಮಬೀರಿ ವೈದ್ಯರನ್ನೂ ತಬ್ಬಿಬ್ಬುಗೊಳಿಸುತ್ತವೆ. ಆದ್ದರಿಂದ ಎಷ್ಟೇ ವ್ಯಸನಿಗಳಾಗಿದ್ದರೂ ಒಂದು ದಿನಕ್ಕೆ ಗರಿಷ್ಠ ಎರಡು ಸೇವನೆಗಿಂತ ಹೆಚ್ಚು ಸೇವಿಸದಿರಿ.

ಯಕೃತ್‌ಗೂ ಹಾನಿ ಎಸಗುತ್ತದೆ

ಯಕೃತ್‌ಗೂ ಹಾನಿ ಎಸಗುತ್ತದೆ

ಆಲ್ಕೋಹಾಲ್‌ನ ಪ್ರಭಾವ ಯಕೃತ್‌ನ (ಲಿವರ್) ಮೇಲೆ ಅತ್ಯಧಿಕ ಪರಿಣಾಮ ಬೀರುತ್ತದೆ. ಈ ಪರಿಣಾಮ ಪರೋಕ್ಷವಾಗಿ ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ. ಯಕೃತ್ ಮತ್ತು ಮೂತ್ರಪಿಂಡಗಳು ರಕ್ತ ಶುದ್ಧೀಕರಣದಲ್ಲಿ ಸಮನಾಗಿ ಪಾಲ್ಗೊಳ್ಳುವುದರಿಂದ ಒಂದಕ್ಕೆ ಆಗುವ ಪ್ರಭಾವ ಇನ್ನೊಂದರ ಮೇಲೂ ಆಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಯಕೃತ್‌ಗೂ ಹಾನಿ ಎಸಗುತ್ತದೆ

ಯಕೃತ್‌ಗೂ ಹಾನಿ ಎಸಗುತ್ತದೆ

ಅತಿ ಹೆಚ್ಚು ಆಲ್ಕೋಹಾಲ್ ರಕ್ತದ ಹರಿವಿನ ಗತಿಯನ್ನೂ ಬದಲಿಸಬಹುದು. ಕೆಲವೊಮ್ಮೆ ರಕ್ತದ ಹರಿವು ಮೂತ್ರಪಿಂಡ ತಾಳುವ ಒತ್ತಡಕ್ಕೂ ಹೆಚ್ಚಿದ್ದರೆ ಮೂತ್ರಪಿಂಡಗಳು ವಿಫಲವಾಗಬಹುದು.

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ತೆಳ್ಳಗಿನ ಸ್ಟ್ರಾ ಒಂದರ ತುದಿಗೆ ಸಡಿಲವಾಗಿ ಗಂಟುಹಾಕಿ ಕೊಂಚವೇ ನೀರು ಹೊರಬರುವಂತೆ ಮಾಡಿ. ಒಂದು ಪೈಪಿನ ಮೂಲಕ ನೀರು ಒತ್ತಡದಲ್ಲಿ ಸ್ಟ್ರಾ ಮೂಲಕ ಹರಿಯುವಂತೆ ಮಾಡಿ. ಒತ್ತಡ ಕಡಿಮೆ ಇದ್ದರೆ ಪರವಾಗಿಲ್ಲ, ಗಂಟಾಗಿದ್ದ ತುದಿಯಿಂದ ಕೊಂಚವೇ ನೀರು ಹರಿಯುತ್ತಾ ಇರುತ್ತದೆ. ಮುಂದೆ ಓದಿ

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ಆದರೆ ಇತ್ತ ನಲ್ಲಿಯಿಂದ ನೀರಿನ ಒತ್ತಡ ಹೆಚ್ಚಾಗಿಸಿದಷ್ಟೂ ಸ್ಟ್ರಾದ ಗೋಡೆಗಳ ಮೇಲೆ ಒತ್ತಡ ಹೆಚ್ಚಾಗುತ್ತಾ ಉಬ್ಬುತ್ತಾ ಹೋಗುತ್ತದೆ. ಇನ್ನಷ್ಟು ಒತ್ತಡ ಹೇರಿದಂತೆ ಸ್ಟ್ರಾ ಇನ್ನಷ್ಟು ಉಬ್ಬಿ ಕಡೆಗೆ ಹರಿದೇ ಹೋಗುತ್ತದೆ.ಮುಂದೆ ಓದಿ

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ಇದು ಅರ್ಥವಾದರೆ ಅತಿಹೆಚ್ಚಿನ ಪ್ರಮಾಣದಲ್ಲಿ (ಎರಡು ಗಂಟೆಗಳ ಅವಧಿಯಲ್ಲಿ ನಾಲ್ಕರಿಂದ ಐದು ಪಿಚರ್ ಪ್ರಮಾಣದ ಬಿಯರ್) ಸೇವಿಸಿದರೆ ಮೂತ್ರಪಿಂಡಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಅಂದಾಜಿಸಬಹುದು. ಇದು ಮೂತ್ರಪಿಂಡದ ಗೋಡೆಯನ್ನೇ ಹರಿದು ಅತ್ಯಧಿಕ ನೋವು ಮತ್ತು ಪ್ರಜ್ಞೆ ತಪ್ಪಿ ಬೀಳಿಸಬಹುದು.

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ತಕ್ಷಣ ಆಸ್ಪತ್ರೆಗೆ ಧಾವಿಸಿ ಡಯಾಲಿಸಿಸ್ ಮಾಡಿಸಿದರೆ ಮಾತ್ರ ಜೀವ ಉಳಿಯಬಹುದು. ಸೂಕ್ತ ಔಷಧ ಮತ್ತು ಆರೈಕೆಯಿಂದ ಮಾತ್ರ ಮೂತ್ರಪಿಂಡ ಕೊಂಚ ಸುಧಾರಿಸಿಕೊಳ್ಳಬಹುದೇ ವಿನಃ ಮೂಲ ಸ್ವರೂಪಕ್ಕೆ ಬರಲು ಸಾಧ್ಯವಿಲ್ಲ.

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ಅತಿ ಹೆಚ್ಚಿನ ಸೇವನೆ ಮೂತ್ರಪಿಂಡಗಳ ಗೋಡೆಯನ್ನೇ ಹರಿಯಬಹುದು

ಇದು ಅತ್ಯಂತ ದೀರ್ಘಕಾಲದ ಚಿಕಿತ್ಸೆಯಾಗಿದ್ದು ಲಕ್ಷಗಟ್ಟಲೆ ಹಣ ಖರ್ಚಾಗುವ ಸಂಭವವಿದೆ. ಕೆಲವು ಸಂದರ್ಭಗಳಲ್ಲಿ ಮೂತ್ರಪಿಂಡ ವಿಫಲವಾಗಿ ದಾನಿಯಿಂದ ಮೂತ್ರಪಿಂಡವನ್ನು ಪಡೆದುಕೊಳ್ಳಬೇಕಾಗಿ ಬರಬಹುದು.

ಸಲಹೆಗಳು

ಸಲಹೆಗಳು

*ಬಿಯರ್, ಅಲ್ಕೋಹಾಲ್, ಮಾದಕ ಪಾನೀಯ, ಧೂಮಪಾನ ಇವೆಲ್ಲಾ ಆರೋಗ್ಯಕ್ಕೆ ಯಾವತ್ತಿದ್ದರೂ ಹಾನಿಕರವೇ. ಇದನ್ನು ತ್ಯಜಿಸುವತ್ತ ಮನಸ್ಸು ಮಾಡಿ.

*ಸಂಭ್ರಮಕ್ಕೂ ದುಃಖಕ್ಕೂ ಬಿಯರ್ ಕುಡಿದು ಸಂಭ್ರಮಿಸುವುದೆಲ್ಲಾ ಹೇಡಿಗಳ ಲಕ್ಷಣ. ಸ್ಥೈರ್ಯವುಳ್ಳವರಿಗೆ ಇವೆಲ್ಲಾ ಅಗತ್ಯವೇ ಇಲ್ಲ. ಸ್ಥೈರ್ಯವನ್ನು ಹೊಂದಲು ಮನಸ್ಸನ್ನು ಬಲಪಡಿಸಿ.

*ನಿಮ್ಮ ವ್ಯಸನ ನಿಮ್ಮ ಮಕ್ಕಳಿಗೂ ಅಂಟಬಹುದು, ಯೋಚಿಸಿ

ಸಂಭ್ರಮದಲ್ಲಿ ಬಿಯರ್ ಕುಡಿಸುವ ಸ್ನೇಹಿತರು ಮೂತ್ರಪಿಂಡ ವಿಫಲವಾದಾಗ ಹತ್ತಿರ ಬರುತ್ತಾರೆಯೇ? ಕೊಂಚ ಯೋಚಿಸಿ

ಸಲಹೆಗಳು

ಸಲಹೆಗಳು

*ಬಿಯರ್ ಕುಡಿದು ತಾವು ಉನ್ನತರ ಪಟ್ಟಿಗೆ ಸೇರಿದ್ದೇವೆ ಎಂಬಂತೆ ವರ್ತಿಸುವವರು ವಾಸ್ತವವಾಗಿ ಉನ್ನತ ವ್ಯಕ್ತಿಗಳು ಬಿಯರ್ ಅಥವಾ ಮಾದಕ ಪಾನೀಯಗಳನ್ನು ಕುಡಿಯದವರ ಬಗ್ಗೆ ಹೆಚ್ಚು ಅಭಿಮಾನ ಹೊಂದಿರುತ್ತಾರೆ ಎಂದು ತಿಳಿದುಕೊಳ್ಳಬೇಕು.

*ನಿಮ್ಮ ಜೊತೆಯಲ್ಲಿದ್ದವರಿಗೆ ಕಂಪೆನಿ ನೀಡುವುದಕ್ಕಾಗಿ ಎಂದಿಗೂ ಬಿಯರ್ ಸೇವಿಸಿ ಜೊತೆ ನೀಡಬೇಡಿ. ನಾಳೆ ನಿಮ್ಮ ಕಿಡ್ನಿ ವಿಫಲಗೊಂಡರೆ ಕಂಪೆನಿಗೆ ಅವರು ಬರುವುದಿಲ್ಲ

ಸಲಹೆಗಳು

ಸಲಹೆಗಳು

* ಪುಕ್ಕಟೆ ಸಿಗುತ್ತದೆ ಎಂದು ಖಂಡಿತಾ ಸೇವಿಸಬೇಡಿ. ತಮ್ಮ ಬೇಳೆ ಬೇಯಿಸಿಕೊಳ್ಳಲು ಪುಕ್ಕಟೆ ಕುಡಿಸಿ ಬಳಿಕ ನಿಮ್ಮನ್ನು ಬಳಸಿಕೊಳ್ಳುವ ಹುನ್ನಾರವಿರಬಹುದು. ಇದಕ್ಕೆ ಇತಿಹಾಸದಲ್ಲಿ ಸಾವಿರಾರು ಬಿಡಿ, ಲಕ್ಷಾಂತರ ನಿದರ್ಶನಗಳಿವೆ.

ಸಲಹೆಗಳು

ಸಲಹೆಗಳು

ಬಿಯರ್ ಅಥವಾ ಮಾದಕ ಪಾನೀಯ ಕುಡಿದ ಬಳಿಕ ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ. ವಿವೇಕ ಕಾಣೆಯಾಗುತ್ತದೆ. ದಾರಿಯಲ್ಲಿ ಬರುವ ಮಹಿಳೆಯರನ್ನು ಕಂಡಾಗ ಮನಸ್ಸು ವಿಕೃತವಾಗುತ್ತದೆ. ನಿರ್ಭಯಾ ಪ್ರಕರಣದ ಆರೋಪಿಗಳು ಆ ಕ್ಷಣ ತಾವು ರಾಕ್ಷಸರಾಗಲು ಏನು ಕಾರಣ ಎಂದು ಹೇಳಿದರು ಗೊತ್ತೇ?

English summary

How Does Beer Affect Your Kidneys?

Do you have the habit of drinking beer? How often do you drink? Do you know about the adverse effects of beer? In majority of the cases, the harmful effects of beer consumption are directly proportional to the amount of beer that you consume. if you are already suffering from kidney disease then excess beer consumption can make it worse. How does beer affect your kidneys? This post will enlighten you about the same.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more