Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೃದ್ರೋಗ ಓಡಿಸುವ ವೃದ್ಧಾಪ್ಯದ ಧನಾತ್ಮಕತೆ!
ಜೀವನದಲ್ಲಿ ಏನೇ ಕಷ್ಟ ಬಂದರೂ ಎದೆ ಗುಂದದೆ ಗುಣಾತ್ಮಕ ಚಿಂತನೆಯಿಂದ ಅದನ್ನು ಎದುರಿಸಿದರೆ, ಒತ್ತಡಗಳಿಂದ ಉದ್ಭವಿಸಬಹುದಾದ ಅದೆಷ್ಟೋ ಬಗೆಯ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ. ವಯೋ ವೃದ್ಧರಿಗೆ ಈ ಮಾತು ಹೆಚ್ಚು ಅನ್ವಯಿಸುತ್ತದೆ, ಎನ್ನುತ್ತದೆ, ಒಂದು ಹೊಸ ಸಂಶೋಧನೆ.
ಋಣಾತ್ಮಕ ಚಿಂತನೆಗಳು ನಮ್ಮ ಜೀವನದ ಮೌಲ್ಯವನ್ನೇ ಹಾಳುಗೆಡವುತ್ತವೆ. ಅದೇ ಗುಣಾತ್ಮಕ ಚಿಂತನೆ ಉಳ್ಳವರು ವೃದ್ಧಾಪ್ಯ ತಲುಪಿದರೂ ಅವರ ವಯಸ್ಸಿನ ಇತರರಿಗೆ ಕಾಡುವ ಕಾಯಿಲೆಗಳು ಇವರತ್ತ ಚಿಂತೆಯಿಂದ ನಡುವಿನ ಸೊನ್ನೆ ಮಾಯವಾಗಿ " ಚಿತೆ" ಹತ್ತಿರವಾಗುತ್ತದೆ ಎಂಬ ನಾಣ್ಣುಡಿ ಕೇಳಿದ್ದೇವೆ. ನೆಮ್ಮದಿ ಕೆಡಿಸುವ ಮಾನಸಿಕ ಒತ್ತಡಕ್ಕೆ ಕಾರಣವೇನು?
ಅಮೇರಿಕಾದ ನಾರ್ತ್ ಕೆರೋಲಿನಾ ಯೂನಿವರ್ಸಿಟಿಯ ಪ್ರೊಫೆಸರ್ ಶೆವಾನ್ ನ್ಯೂಪರ್ಟ್ ಹೇಳುತ್ತಾರೆ" ಅಘಾತಗಳಿಂದ ತಬ್ಬಿಬ್ಬಾಗಿ ಧೃತಿಗೆಡುವವರು ಬೇಗನೇ ವೃದ್ಧರಾಗುತ್ತಾರೆ. ಋಣಾತ್ಮಕ ಚಿಂತನೆ ಉಳ್ಳವರು ವಯಸ್ಸಾದಂತೆಲ್ಲ ಒತ್ತಡಕ್ಕೊಳಗಾಗಿ ತನ್ಮೂಲಕ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ ಧನಾತ್ಮಕ ಧೋರಣೆ ಉಳ್ಳವರು ಇದಕ್ಕೆ ವಿರುದ್ಧವಾದ ಸತ್ಪರಿಣಾಮ ಪಡೆಯುತ್ತಾರೆ". ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!

ಇವರು ತಮ್ಮ ಸಂಶೋಧನೆಗಾಗಿ 60 ರಿಂದ 96 ವಯಸ್ಸಿನ 43 ಜನರಿಗೆ ಎಂಟು ದಿನಗಳ ಕಾಲ ನಿರಂತರ ಸಂದರ್ಶನ ನಡೆಸಿದರು. ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅವರ ಜೀವನದ ಕುರಿತಾದ ಧೋರಣೆಯನ್ನು ಪರಿಶೀಲಿಸಲಾಯ್ತು. ಉದಾಹರಣೆಗೆ: ಅವರಿಗೆ ತಾವು ಯೌವ್ವನದಲ್ಲಿ ಎಲ್ಲರಿಗೂ ಸಲ್ಲುವಂತಿದ್ದು, ಈಗಲೂ ಹಾಗೆಯೇ ಇದ್ದೀರೋ ಅಥವ ತಾನು ನಿಷ್ಪ್ರಯೋಜಕ ಎನ್ನಿಸುತ್ತಿದೆಯೇ? ಎಂದು ಕೇಳಿದರು.
ಯೌವ್ವನದಲ್ಲಿ ಆನಂದವಾಗಿದ್ದು, ಈಗ ಹಾಗಿಲ್ಲ ಎನಿಸುತ್ತಿದೆಯೇ? ಎಂಬಿತ್ಯಾದಿಯಾಗಿ, ಎಂಟು ದಿನಗಳ ಪ್ರಶ್ನೆಗಳೂ ಹೀಗೆಯೇ ಇರುತ್ತಿದ್ದವು. ವ್ಯಕ್ತಿಗಳ ಧೋರಣೆಯಿಂದ ಧನಾತ್ಮಕವೋ ಇಲ್ಲಾ ಋಣಾತ್ಮಕವೋ ಎಂಬುದನ್ನು ತಿಳಿಯುವುದು ಮತ್ತು ಅದಕ್ಕನುಗುಣವಾಗಿ ಅವರ ಶರೀರ ಖಾಯಿಲೆಗಳಿಗೆ ಎರವಾದ ರೀತಿಯನ್ನು ಪರಿಶೀಲಿಸುವುದು ಈ ಸಂಶೋಧನೆಯ ಹಿಂದಿದ್ದ ಚಿಂತನೆ.
" ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಜೀವನದ ಕುರಿತಂತೆ ವ್ಯಕ್ತಿಯ ಧೋರಣೆ ಹೇಗಿರುತ್ತದೆ ಎಂದು ಹೇಳಲಾಗದು. ಅದು ಆ ವ್ಯಕ್ತಿ . ಬೆಳೆದು ಬಂದ ಸಂಸ್ಕೃತಿ, ರೀತಿ-ರಿವಾಜುಗಳನ್ನು ಹೊಂದಿಕೊಂಡಿರುತ್ತದೆ " ಎನ್ನುತ್ತಾರೆ, ಆ ವಿದ್ಯಾಲಯದ ಸಂಶೋಧಕ ವಿದ್ಯಾರ್ಥಿನಿ ಜೆನ್ನಿಫರ್.
ನಿಜ...ನಮ್ಮ ಧೋರಣೆಯ ಹಿಂದೆ ನಮ್ಮ ಹಿರಿಯರು ನಮಗೆ ನೀಡಿದ ಸಂಸ್ಕಾರದ ಪರಿಣಾಮ ಇದ್ದೇ ಇದೆ. ಅದೊಂದು ವೇಳೆ ಋಣಾತ್ಮಕವಾಗಿದ್ದರೂ ಇಂದಿನ ವಿದ್ಯಾವಂತ ಜನತೆ ಅದನ್ನು ಧನಾತ್ಮಕವಾಗಿ ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ, ಅನ್ನಿಸುತಿಲ್ಲವೇ?.
ಐಎಎನ್ಎಸ್ ವರದಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

