For Quick Alerts
ALLOW NOTIFICATIONS  
For Daily Alerts

  ರಂಜಾನ್ ಪಥ್ಯ- ಕಷ್ಟವಾದರೂ, ಇಷ್ಟಪಟ್ಟು ಅನುಸರಿಸಿ

  By Manu
  |

  ಚಂದ್ರನನ್ನು ಆಧರಿಸದ ಮುಸ್ಲಿಂ ಕ್ಯಾಲೆಂಡರ್‌ನ ಒಂಬತ್ತನೆಯ ತಿಂಗಳಾದ ರಂಜಾನ್ (ರಂಜಾನ್ ಎನ್ನುವುದು ವಾಡಿಕೆಯಾದರೂ ರಮಧಾನ್ ಎಂಬುದೇ ಸರಿಯಾದ ಉಚ್ಛಾರಣೆಯಾಗಿದೆ) ಮುಸ್ಲಿಮರ ಪಾಲಿಗೆ ಅತಿ ಪವಿತ್ರವಾದ ಮಾಸವಾಗಿದ್ದು ಈ ಮಾಸದಲ್ಲಿ ಹಲವು ಕಟ್ಟುಪಾಡುಗಳನ್ನು ಆಚರಿಸುವುದು ಅನಿವಾರ್ಯವಾಗಿದೆ. ಸೂರ್ಯೋದಯಕ್ಕೂ ಸುಮಾರು ಒಂದು ಗಂಟೆ ಮೊದಲಿನಿಂದ ಹಿಡಿದು ಸೂರ್ಯಾಸ್ತದ ವರೆಗೆ ಇಡಿಯ ತಿಂಗಳು ಮಾನಸಿಕ ಮತ್ತು ದೈಹಿಹ ಇಚ್ಛೆಗಳನ್ನು ಹತ್ತಿಕ್ಕುವುದೇ ಇದರ ಪ್ರಮುಖ ಅಂಗವಾಗಿದ್ದು ಆಹಾರ ಸೇವನೆಯಿಂದ ದೂರವಿರುವುದೂ ಇದರಲ್ಲಿ ಒಂದು ಅಂಗವಾಗಿದೆ.

  ಹೆಚ್ಚಿನವರು ಉಪವಾಸ ಎಂದರೆ ಬರೆಯ ಆಹಾರ ನೀರು ಸೇವಿಸದೇ ಇರುವುದು ಮಾತ್ರ ಎಂದು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಇದು ಶೇಖಡಾ ಹತ್ತು ಮಾತ್ರ. ಉಳಿದ ತೊಂಭತ್ತು ಅಂಶ ಮಾನಸಿಕವಾಗಿ ಯಾವುದೇ ಬಯಕೆಗಳನ್ನು ಬಯಸದಿರುವುದು, ಸುಳ್ಳು ಹೇಳದಿರುವುದು, ಮನರಂಜನೆ ಇಲ್ಲದಿರುವುದು, ದಿನವಿಡೀ ಧಾರ್ಮಿಕ ಪಾರಾಯಣ, ದಾನ ಧರ್ಮ ಮೊದಲಾದವು ಎಲ್ಲವೂ ಈ ಉಪವಾಸದ ಭಾಗವಾಗಿದೆ. 

  Nutritional Tips For Ramzan Fasting
   

  ಸೂರ್ಯೋದಯಕ್ಕಿಂತ ಒಂದು ಗಂಟೆಗೂ ಮುನ್ನ ಆಹಾರ ಸೇವಿಸಬೇಕಾಗಿದ್ದು ಇದಕ್ಕೆ ಸುಹೂರ್ ಎಂದು ಕರೆಯುತ್ತಾರೆ. ಬಳಿಕ ಸೂರ್ಯಾಸ್ತದವರೆಗೂ ಮಾನಸಿಕವಾಗಿ ಏನನ್ನೂ ಬಯಸುವಂತಿಲ್ಲ. ಸೂರ್ಯಾಸ್ತದ ಸಮಯದಲ್ಲಿ ಸೇವಿಸುವ ಆಹಾರಕ್ಕೆ ಇಫ್ತಾರ್ ಎಂದು ಕರೆಯುತ್ತಾರೆ. ಈ ಅವಧಿ ಸುಮಾರು ಹದಿನಾಲ್ಕು ಘಂಟೆಗಳಾಗಿದ್ದು ಈ ಅವಧಿಯಲ್ಲಿ ನೀರು, ಆಹಾರ, ಅಷ್ಟೇ ಏಕೆ, ಐಚ್ಛಿಕವಾಗಿ ಉಗುಳನ್ನೂ ನುಂಗುವಂತಿಲ್ಲವಾದುದರಿಂದ ಈ ಅವಧಿಯಲ್ಲಿ ಕೊಂಚ ತ್ರಾಸವಾಗಬಹುದು. ರಂಜಾನ್ ಉಪವಾಸ: ಪ್ರತಿನಿತ್ಯದ ಆಹಾರ ಕ್ರಮ ಹೀಗಿರಲಿ... 

  ಇಡಿಯ ದಿನ ಹೇಗೂ ಉಪವಾಸವಿರಬೇಕಲ್ಲ ಎಂದೇ ಹೆಚ್ಚಿನವರು ಸುಹೂರ್ ಸಮಯದಲ್ಲಿ ಹೊಟ್ಟೆ ಬಿರಿಯುವಷ್ಟು ತಿನ್ನುತ್ತಾರೆ. ಅಂತೆಯೇ ಇಡಿಯ ದಿನ ಉಪವಾಸವಿದ್ದೆವಲ್ಲಾ ಎಂದು ಇಫ್ತಾರ್ ಸಮಯದಲ್ಲಿಯೂ ಹೊಟ್ಟೆ ಬಿರಿಯುವಂತೆ ಆಹಾರವನ್ನು ಗಂಟಲಿನಲ್ಲಿಳಿಸುವವರನ್ನೂ ನೋಡಿದ್ದೇವೆ. ಆದರೆ ಇವೆರಡೂ ಅತ್ಯಂತ ಅನಾರೋಗ್ಯಕರ ಅಭ್ಯಾಸಗಳಾಗಿವೆ. ವಾಸ್ತವವಾಗಿ ಉಪವಾಸ ನಮ್ಮ ದೇಹದ ಕಲ್ಮಶಗಳನ್ನು ಹೊರಹಾಕಿ ಸ್ವಚ್ಛಗೊಳಿಸಲು ನಾವು ನೀಡುವ ಒಂದು ಅವಕಾಶವಾಗಿದೆ. ನೀರಿನ ಟ್ಯಾಂಕಿ ತೊಳೆಯಬೇಕಾದರೆ ಮೊದಲು ಖಾಲಿ ಮಾಡಬೇಕಲ್ಲವೇ ಹಾಗೆ! ಇದು ಮನಸ್ಸಿಗೇ ಹೆಚ್ಚು ಅನ್ವಯವಾಗಬೇಕು.

  ದೈಹಿಕ ಆರೋಗ್ಯ ಪರಿಗಣಿಸುವುದಾದರೆ ಕೆಲವು ಅಂಶಗಳನ್ನು ಅನುಸರಿಸುವ ಮೂಲಕ ಒಂದು ತಿಂಗಳ ಉಪವಾಸದ ಅವಧಿಯನ್ನು ಹೆಚ್ಚಿನ ಕಷ್ಟವಿಲ್ಲದೇ, ಆರೋಗ್ಯಕರವಾಗಿ ಪೂರೈಸಬಹುದು. ಈ ಬಗ್ಗೆ ಬೋಲ್ಡ್ ಸ್ಕೈ ತಂಡ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಇವು ಯಾವುವು ಎಂಬ ಕುತೂಹಲವನ್ನು ಕೆಳಗಿನ ಮಾಹಿತಿಯ ಮೂಲಕ ತಣಿಸಲಿದೆ, ಮುಂದೆ ಓದಿ... ಈ ಮಾಹಿತಿಗಳು ಅಪ್ಪಟವಾಗಿ ಆಹಾರಕ್ಕೆ ಸಂಬಂಧಿಸಿದುದಾಗಿವೆ. ವಿಶೇಷವಾಗಿ ಜೀರ್ಣಾಂಗಗಳ ಬಗ್ಗೆ ಮಾಹಿತಿ ಮತ್ತು ಇದಕ್ಕೆ ಸಂಬಂಧಿಸಿದ ತೊಂದರೆಗಳಿಂದ ಕಾಪಾಡುವುದು ಮುಖ್ಯ ಉದ್ದೇಶವಾಗಿದೆ.

  Nutritional Tips For Ramzan Fasting
   

  ಇಫ್ತಾರ್‌ನಲ್ಲಿ ಅಲ್ಪವಾದ ಆಹಾರ ಸೇವಿಸಿ

  ಮಧ್ಯಾಹ್ನವಾಗುತ್ತಿದ್ದಂತೆಯೇ ಹೆಚ್ಚಿನವರಿಗೆ ಹೊಟ್ಟೆ ಚುರುಗುಟ್ಟಲು ಪ್ರಾರಂಭಿಸುತ್ತದೆ. ಆದರೆ ಸಂಜೆಯಾಗುತ್ತಿದ್ದಂತೆಯೇ ಇದು ಇಲ್ಲವಾಗುತ್ತದೆ. ನಮ್ಮ ಜೀರ್ಣಾಂಗಗಳು ಖಾಲಿಯಾದ ಬಳಿಕ ಹೊಟ್ಟೆ ಮೆದುಳಿಗೆ ನೀಡುವ ಸಂದೇಶವೇ ಹಸಿವು. ಆದರೆ ಆ ಬಳಿಕ ಆಹಾರ ಸಿಗದೇ ಇದ್ದರೆ ಅನಿವಾರ್ಯವಾಗಿ ನಮ್ಮ ದೇಹ ಈಗಾಗಲೇ ಸಂಗ್ರಹಗೊಂಡಿದ್ದ ಕೊಬ್ಬನ್ನು ಬಳಸಲು ಪ್ರಾರಂಭಿಸುತ್ತದೆ. ಆಗ ಈ ಸಂದೇಶ ನಿಲ್ಲುತ್ತದೆ. ಇದನ್ನೇ ನಾವು ಹಸಿವು ಸತ್ತು ಹೋಯಿತು ಎನ್ನುತ್ತೇವೆ.     ರಂಜಾನ್ ಮಾಸದಲ್ಲಿ ಮಧುಮೇಹಿ ರೋಗಿಗಳ ಪಾಡೇನು?

  ವಾಸ್ತವವಾಗಿ ನಮ್ಮ ದೇಹದ ಅನಗತ್ಯ ಕೊಬ್ಬನ್ನು ಕರಗಿಸಲು ಇದೊಂದು ವರವಾಗಿದೆ. ಈ ವರವನ್ನು ಉಳಿಸಿಕೊಳ್ಳಬೇಕಾದರೆ ಇಫ್ತಾರ್ ಅಥವಾ ಉಪವಾಸವನ್ನು ಸಂಪನ್ನಗೊಳಿಸುವ ಸಂದರ್ಭದಲ್ಲಿ ಅತಿ ಹೆಚ್ಚು ಆಹಾರ ಸಲ್ಲದು. ಅದರಲ್ಲೂ ಈ ಸಮಯದಲ್ಲಿ ಅತಿ ಖಾರ, ಅತಿ ಕೊಬ್ಬಿನ, ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಉಪವಾಸದಿಂದ ಕರಗಿಸಿದ್ದ ಕೊಬ್ಬನ್ನು ಮತ್ತೆ ನಾವೇ ಕೈಯಾರೆ ತುಂಬಿಕೊಡಲು ಅನುವು ಮಾಡಿಕೊಡುತ್ತೇವೆ. ಅಷ್ಟೇ ಅಲ್ಲ, ಅಲ್ಪ ಪ್ರಮಾಣದ ಆಹಾರ ಸೇವಿಸುವ ಮೂಲಕ ಜೀರ್ಣಾಂಗಗಳ ಮೇಲೂ ಹೆಚ್ಚಿನ ಭಾರ ಬೀಳದೇ ಯಾವುದೇ ತೊಂದರೆಗೆ ಆಸ್ಪದ ಇಲ್ಲವಾಗುತ್ತದೆ.

  ಇಫ್ತಾರ್‌ನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ

  ಇಫ್ತಾರ್ ಸಮಯಕ್ಕೆ ಅತ್ಯಂತ ಸೂಕ್ತವಾದ ಆಹಾರವೆಂದರೆ ಖರ್ಜೂರ. ಇದರೊಂದಿಗೆ ಕೆಲವು ಹಣ್ಣುಗಳು ಮತ್ತು ಹಸಿಯಾಗಿ ಸೇವಿಸಬಹುದಾದ ತರಕಾರಿಗಳನ್ನು ಸೇವಿಸುವ ಮೂಲಕ ಉಪವಾಸವನ್ನು ಪರಿಪೂರ್ಣವಾಗಿಸಬಹುದು. ನೀರಿನ ಅಂಶ ಹೆಚ್ಚಿರುವ ಹಣ್ಣುಗಳನ್ನು ಆರಿಸಿಕೊಳ್ಳುವುದು ಜಾಣತನ. ಸುಹೂರ್ ಸಮಯಕ್ಕೆ ನೀರು ಹೆಚ್ಚಿರುವ ಹಣ್ಣುಗಳನ್ನು ಸೇವಿಸುವ ಮೂಲಕ ಇಡಿಯ ದಿನ ದೇಹ ನೀರಿನ ಕೊರತೆಯಿಂದ ದೂರವಾಗಿರುತ್ತದೆ. ರಂಜಾನ್ ಮಾಸದಲ್ಲಿ ಖರ್ಜೂರಕ್ಕೆ ಏಕೆ ಅಷ್ಟೊಂದು ಮಹತ್ವ?

  Nutritional Tips For Ramzan Fasting
   

  ಸುಹೂರ್‌ನಲ್ಲಿ ಪ್ರೋಟೀನು ಮತ್ತು ಕಾರ್ಬೋಹೈಡ್ರೇಟುಗಳು ಹೆಚ್ಚಿರುವ ಆಹಾರ ಇರಲಿ

  ಜೀರ್ಣಿಸಿಕೊಳ್ಳಲು ಹೆಚ್ಚು ಸಮಯದ ಅಗತ್ಯವಿರುವ, ಕಾರ್ಬೋಹೈಡ್ರೇಟುಗಳು ಹೆಚ್ಚಿರುವ ಮತ್ತು ಪ್ರೋಟೀನುಗಳೂ ಹೆಚ್ಚಿರುವ ಆಹಾರವನ್ನು ಸುಹೂರ್ ಸಮಯದಲ್ಲಿ ಸೇವಿಸುವುದು ಉತ್ತಮ. ಇದರಿಂದ ಇಡಿಯ ದಿನದ ಚಟುವಟಿಕೆಗೆ ಅಗತ್ಯವಾದ ಶಕ್ತಿ ನಿಧಾನವಾಗಿ ಲಭಿಸುತ್ತಾ ಹೋಗುತ್ತದೆ. ಬಾದಾಮಿ, ಓಟ್ಸ್, ಬೀನ್ಸ್, ರಾಗಿಯ ರೊಟ್ಟಿ, ಜೋಳದ ರೊಟ್ಟಿ, ಕುಚ್ಚಿಗೆ ಅಕ್ಕಿಯ ಅನ್ನ, ಬೇಳೆಗಳು ಮೊದಲಾದವು ಸುಹೂರ್‌ಗೆ ಅತ್ಯಂತ ಸೂಕ್ತವಾಗಿವೆ. ಆದರೆ ಮೈದಾ ಮಾತ್ರ ಬೇಡವೇ ಬೇಡ. ಇದು ಮಲಬದ್ಧತೆಗೆ ನೇರವಾದ ಆಹ್ವಾನವಾಗಿದೆ.

  English summary

  Nutritional Tips For Ramzan Fasting

  Across the world, Muslims are observing Ramzan, the holy month of the lunar calender. During this holy month, they fast during daylight and eat after sundown. They eat 2 meals per day, one known as Suhoor and the other known as the Iftar. Lack of food and water during the day could take a toll on a person's health and well-being and also make fasting quiet challenging. Following these tips will ensure a hassle-free, devoted month of fasting.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more