For Quick Alerts
ALLOW NOTIFICATIONS  
For Daily Alerts

ಬರೀ 15 ದಿನಗಳಲ್ಲಿಯೇ ಬೊಜ್ಜು ಕರಗಿಸುವ ಪಾನೀಯಗಳು

By Arshad
|

ರುಚಿಯಾದ ಆಹಾರ, ಸುಖವಾದ ನಿದ್ದೆ, ಓಡಾಡಲು ವಾಹನ, ಹೊಟ್ಟೆ ಬರಲಿಕ್ಕೆ ಇಷ್ಟೇ ಸಾಕು. ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ನಡುವಯಸ್ಸು ದಾಟುತ್ತಿದ್ದಂತೆಯೇ ಹೊಟ್ಟೆ ಮುಂದೆ ಬರುವುದು ಸರ್ವೇ ಸಾಮಾನ್ಯವಾಗಿದೆ. ಈಗ ತಾನೇ ತಿಳಿಸಿದ ಮೂರು ಕಾರಣಗಳ ಹೊರತಾಗಿ ಇನ್ನೊಂದು ಕಾರಣವಿದೆ, ಅದೇ ಸೋಮಾರಿತನ. ಸವಲತ್ತು ಹೆಚ್ಚಿದಂತೆ ದೈಹಿಕ ಕಸರತ್ತು ಕಡಿಮೆಯಾಗಿ ಬೊಜ್ಜು ತುಂಬಿಕೊಳ್ಳುತ್ತಾ ಹೋಗುತ್ತದೆ. ಬೇರೆಲ್ಲಿ ಬೊಜ್ಜು ಬಂದರೂ ನಮಗೆ ಸಂಕಟವಾಗುವುದಿಲ್ಲ, ಆದರೆ ಹೊಟ್ಟೆ ಮುಂದೆ ಬಂದರೆ ಮಾತ್ರ ಅತೀವ ಸಂಕಟವಾಗುತ್ತದೆ.

ಇದರಿಂದ ಪಾರಾಗಿ ಸಪಾಟಾದ ಹೊಟ್ಟೆ ಪಡೆಯುವುದು ಎಲ್ಲರ ಇಚ್ಛೆ. ಆದರೆ ಹೊಟ್ಟೆಯ ಕೊಬ್ಬು ಮೊತ್ತ ಮೊದಲನೆಯದಾಗಿ ಸಂಗ್ರಹಗೊಂಡರೂ ಕಟ್ಟ ಕಡೆಯದಾಗಿ ಕರಗುವುದರಿಂದ ಇದರಿಂದ ಪಾರಾಗುವುದು ಕೊಂಚ ಕಷ್ಟ. ಆದರೆ ಇದಕ್ಕೊಂದು ಸುಲಭ ಉಪಾಯವಿದೆ. ಅದೆಂದರೆ ಹೊಟ್ಟೆಯ ಕೊಬ್ಬನ್ನು ಕರಗಲು ಅನಿವಾರ್ಯವಾಗಿಸುವ ಆಹಾರ ಸೇವಿಸುವುದು. ಅಂದರೆ ಈ ಆಹಾರಗಳನ್ನು ಜೀರ್ಣಿಸಲು ಇತರ ಆಹಾರಗಳಿಗಿಂತಲೂ ಹೆಚ್ಚು ಕೊಬ್ಬು ಬೇಕಾಗುತ್ತದೆ. ಅದರಲ್ಲೂ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿದರೆ ಇದರ ಪರಿಣಾಮ ನೂರುಪಟ್ಟು ಹೆಚ್ಚುತ್ತದೆ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

ಇಂದು ಈ ಪರಿಣಾಮ ಬೀರುವ ಕೆಲವು ಪಾನೀಯಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪರಿಚಯಿಸಲಾಗಿದೆ. ಇದು ಆರೋಗ್ಯಕರ ಮಾತ್ರವಲ್ಲ, ನಿಮ್ಮ ನಿತ್ಯದ ದಿನಚರಿಯನ್ನೂ ಬದಲಿಸಿ ಇಡಿಯ ದಿನ ಚಟುವಟಿಕೆಯಿಂದಿರುವಂತೆ ಮಾಡುತ್ತದೆ. ಆದರೆ ಬರೆಯ ಈ ಪಾನೀಯಗಳನ್ನು ಕುಡಿದ ಮಾತ್ರಕ್ಕೇ ಕೊಬ್ಬು ಕರಗುವುದಿಲ್ಲ. ಎರಡೂ ಕೈಗಳಿಂದ ಚಪ್ಪಾಳೆ ಎಂಬಂತೆ ಕೊಬ್ಬು ಕರಗಿಸುವ ಮೊದಲು ಕೊಬ್ಬು ಹೆಚ್ಚಿಸುವ ಆಹಾರ ವರ್ಜನೆ ಅಗತ್ಯ.

ಎಣ್ಣೆಯ ತಿಂಡಿಗಳು, ಸಿದ್ಧ ಆಹಾರಗಳು, ಸಕ್ಕರೆ ಹೆಚ್ಚಿರುವ ತಿನಿಸುಗಳನ್ನು ವರ್ಜಿಸಿ ಕರಗದ ನಾರು ಹೆಚ್ಚಿರುವ ಆಹಾರಗಳು, ಉದಾಹರಣೆಗೆ ಗೋಧಿ ಹಿಟ್ಟಿನ ತಿಂಡಿಗಳು, ಓಟ್ಸ್, ಹಣ್ಣುಗಳು, ಹಸಿಯಾಗಿ ತಿನ್ನಬಹುದಾದ ತರಕಾರಿಗಳು ಇತ್ಯಾದಿಗಳನ್ನು ಸೇವಿಸಬೇಕು. ಪ್ರತಿದಿನ ಒಂದು ಗಂಟೆಯಾದರೂ ವೇಗದ ನಡಿಗೆ ನಡೆಯಬೇಕು. ಇವೆಲ್ಲವೂ ಕೂಡಿದರೆ ಮಾತ್ರ ಹೊಟ್ಟೆಯ ಕೊಬ್ಬು ಕರಗಲು ಸಾಧ್ಯ. ಹೊಟ್ಟೆಯ ಕೊಬ್ಬು ಹೆಚ್ಚುತ್ತಿದ್ದಂತೆಯೇ ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳಿಗೂ ಆಹ್ವಾನ ನೀಡುವ ಕಾರಣ ಈ ಕ್ರಮ ಅನಿವಾರ್ಯವೂ ಹೌದು...

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 1

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 1

ಅಗತ್ಯವಿರುವ ಸಾಮಾಗ್ರಿಗಳು: ಒಂದು ಎಳೆ ಸೌತೆ, ಎರಡು ಲಿಂಬೆ, ಕೆಲವು ಪುದಿನಾ ಎಲೆಗಳು, ಎರಡು ದೊಡ್ಡಚಮಚ ತುರಿದ ಶುಂಠಿಯ ನೀರು.

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 1

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 1

ತಯಾರಿಸುವ ವಿಧಾನ:

ಮೊದಲು ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆಸಹಿತ ಮಿಕ್ಸಿಯಲ್ಲಿ ಗೊಟಾಯಿಸಿ. ಬಳಿಕ ಇದಕ್ಕೆ ಎರಡು ಲಿಂಬೆಹಣ್ಣಿನ ರಸ, ಪುದಿನಾ ಎಲೆ, ಶುಂಠಿ ರಸದ ನೀರು (ತುರಿದ ಶುಂಠಿಯನ್ನು ಕೊಂಚ ನೀರಿನಲ್ಲಿ ಕುದಿಸಿ ಬಳಿಕ ತಣಿಸಿ ಸೋಸಿದ ನೀರು) ಹಾಕಿ ಮಿಶ್ರಣ ಮಾಡಿ. ಇದಕ್ಕೆ ನಿಮಗೆ ಸೂಕ್ತವೆನಿಸಿದಷ್ಟು ನೀರು ಸೇರಿಸಿ ರಾತ್ರಿ ಒಂದು ಜಗ್ ನಲ್ಲಿ ಮುಚ್ಚಿಡಿ. ಬೆಳಿಗ್ಗೆದ್ದು ಪ್ರಥಮ ಆಹಾರವಾಗಿ ಒಂದು ದೊಡ್ಡ ಲೋಟ ಕುಡಿಯಿರಿ. ಇದನ್ನು ಕನಿಷ್ಠ ಹದಿನೈದು ದಿನಗಳ ಕಾಲ ಸೇವಿಸಿದರೆ ಉತ್ತಮ ಪರಿಣಾಮ ಕಂಡುಬರುತ್ತದೆ.

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 2

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 2

ಅಗತ್ಯವಿರುವ ಸಾಮಾಗ್ರಿಗಳು: ಬೆಳ್ಳುಳ್ಳಿ ಮೂರು ಎಸಳು, ಒಂದು ದೊಡ್ಡಚಮಚ ಜೇನು, ಒಂದು ಲಿಂಬೆಯ ರಸವನ್ನು ಬೆರೆಸಿದ ಉಗುರುಬೆಚ್ಚನೆಯ ನೀರು.

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 2

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 2

ತಯಾರಿಸುವ ವಿಧಾನ: ಲಿಂಬೆಯ ರಸದ ನೀರಿನಲ್ಲಿ ಜೇನು ಸೇರಿಸಿ ಕಲಕಿ. ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಮೊದಲು ಬೆಳ್ಳುಳ್ಳಿಯನ್ನು ಅಗಿದು ಈ ನೀರಿನೊಂದಿಗೆ ಕುಡಿಯಿರಿ. ಒಂದು ವೇಳೆ ಬೆಳ್ಳುಳ್ಳಿ ಜಗಿಯುವುದು ಇಷ್ಟವಾಗದಿದ್ದಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಕುಡಿಯುವ ಮೊದಲು ಲೋಟದಲ್ಲಿ ಸೇರಿಸಿ ಕಲಕಿ ಕುಡಿಯಿರಿ. ಈ ನೀರನ್ನು ಉಗುರುಬೆಚ್ಚನೆ ಬಿಸಿಯಾಗಿಸಿದರೆ ಇನ್ನೂ ಉತ್ತಮ.

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 3

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 3

ಅಗತ್ಯವಿರುವ ಸಾಮಾಗ್ರಿಗಳು: ಮೂಲಂಗಿ ನೂರು ಗ್ರಾಂ, ತುರಿದ ಶುಂಠಿ ಒಂಚು ಇಂಚಿನಷ್ಟು, ಮೂರು ಲಿಂಬೆಗಳ ರಸ, ನಾಲ್ಕು ದೊಡ್ಡಚಮಚ ಜೇನು, ಎರಡು ಚಿಕ್ಕ ಚಮಚ ಚೆಕ್ಕೆಪುಡಿ. (cinnamon)

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 3

ಕೊಬ್ಬು ಕರಗಿಸಲು ಉತ್ತಮ ಪಾನೀಯ, ಸಂಖ್ಯೆ 3

ತಯಾರಿಸುವ ವಿಧಾನ: ಮೊದಲು ಶುಂಠಿ ಮತ್ತು ಮೂಲಂಗಿಯನ್ನು ತುರಿದು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಇದಕ್ಕೆ ಜೇನು, ಲಿಂಬೆರಸ ಮತ್ತು ಚೆಕ್ಕೆಪುಡಿ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ನಿಮಗೆ ಸೂಕ್ತವೆನಿಸಿದಷ್ಟು ತೆಳುವಾಗುವಂತೆ ನೀರು ಸೇರಿಸಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಪ್ರಥಮ ಆಹಾರವಾಗಿ ಕೊಂಚವೇ ಬಿಸಿಮಾಡಿ ಕುಡಿಯಿರಿ.

ಲೋಳೆಸರ ಮತ್ತು ಜೇನಿನ ಪಾನೀಯ

ಲೋಳೆಸರ ಮತ್ತು ಜೇನಿನ ಪಾನೀಯ

ಹೊಟ್ಟೆಯ ಕೊಬ್ಬು ಕರಗಿಸಲು ಲೋಳೆಸರವೂ ಉತ್ತಮವಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಆಮ್ಲೀಯತೆ, ಅಜೀರ್ಣ, ಹೊಟ್ಟೆ ಉಬ್ಬರಿಕೆ ಮೊದಲಾದ ತೊಂದರೆಗಳಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಎರಡು ದೊಡ್ಡಚಮಚ ಲೋಳೆಸರದ ರಸ ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಕೊಂಚವೇ ಬಿಸಿ ಮಾಡಿಕೊಂಡು ಪ್ರಥಮ ಆಹಾರವಾಗಿ ಸೇವಿಸಿ. ಒಂದು ಘಂಟೆಯ ಬಳಿಕವೇ ಉಪಾಹಾರ ಸೇವಿಸಿ.

ಸೇಬಿನ ಶಿರ್ಕಾದ (Apple Cider Vinegar) ಪಾನೀಯ

ಸೇಬಿನ ಶಿರ್ಕಾದ (Apple Cider Vinegar) ಪಾನೀಯ

ಒಂದು ದೊಡ್ಡ ಲೋಟದಲ್ಲಿ ತಣ್ಣೀರು ತುಂಬಿ ಎರಡು ದೊಡ್ಡಚಮಚ ಸೇಬಿನ ಶಿರ್ಕಾ ಸೇರಿಸಿ. ಇದಕ್ಕೆ ಒಂದು ಮಧ್ಯಮ ಗಾತ್ರದ ಲಿಂಬೆಯ ರಸ, ಚಿಟಿಕೆಯಷ್ಟು ದಾಲ್ಚಿನ್ನಿ ಪುಡಿ ಮತ್ತು ಅರ್ಧ ಚಿಕ್ಕ ಚಮಚ ಜೇನು ಸೇರಿಸಿ. ಪ್ರತಿದಿನ ಬೆಳಿಗ್ಗೆ ಈ ಪಾನೀಯವನ್ನು ಕುಡಿಯುವ ಮೂಲಕ ಹೊಟ್ಟೆಯ ಕೊಬ್ಬು ಶೀಘ್ರವಾಗಿ ಕರಗುತ್ತದೆ. ಅಲ್ಲದೇ ಬೇಗನೇ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ.

English summary

Morning Drinks To Tighten Drooping Belly In 15 Days!

We all desire to have a flat and well-toned belly, don't we? This is not only to look attractive but also to reflect that we are in a good state of heath. Here are some of the best belly-melting drinks that you can have 1 hour before having your breakfast to make your belly flat.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X