For Quick Alerts
ALLOW NOTIFICATIONS  
For Daily Alerts

ಮಾನಸಿಕ ಸಮಸ್ಯೆ ಮಹಿಳೆಯರ ಸಂಖ್ಯೆಯೇ ಜಾಸ್ತಿ!

By Jaya Subramanya
|

ಮಾನಸಿಕ ಆರೋಗ್ಯ ಸಮಸ್ಯೆಗಳು ಇಂತಹುದೇ ಕಾರಣದಿಂದ ಹುಟ್ಟಬಲ್ಲವು ಎಂಬುದಾಗಿ ಹೇಳಲಾಗುವುದಿಲ್ಲ. ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಝರಿತಗೊಂಡ ಸಂದರ್ಭದಲ್ಲಿ ಈ ಅಸ್ವಸ್ಥತೆ ಪರಿಣಾಮಕಾರಿಯಾಗಿ ಅವರನ್ನು ಹಿಂಸಿಸುತ್ತದೆ.

ಇಂತಹ ಆರೋಗ್ಯ ಸಮಸ್ಯೆಗಳಿಂದ ಪ್ರತಿಯೊಬ್ಬರೂ ಬಳಲುವುದು ಸರ್ವೇ ಸಾಮಾನ್ಯವಾಗಿದ್ದರೂ ಮಹಿಳೆಯರು ಈ ಪರಿಣಾಮಗಳಿಗೆ ಅತಿ ಬೇಗನೇ ಒಳಗಾಗುತ್ತಾರೆ. ಮಹಿಳೆಯರು ಆಘಾತ ನಂತರದ ಒತ್ತಡ ಅಸ್ವಸ್ಥತೆಯಿಂದ ಬಳಲುತ್ತಾರೆ.

Mental Health Issues That Are More Common In Women

ಪುರುಷರಿಗಿಂತ ಮಹಿಳೆಯರು ಇಂತಹ ರೀತಿಯ ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಾರೆ ಅಂತೆಯೇ ಆಘಾತ ಮತ್ತು ಲೈಂಗಿಕ ದುರ್ಬಳೆಕೆಗೆ ಮಹಿಳೆಯರು ಕಾರಣವಾಗುತ್ತಾರೆ ಎಂಬುದಾಗಿ ಅಧ್ಯಯನಗಳಿಂದ ತಿಳಿದು ಬಂದಿದೆ. ಮಾನಸಿಕ ಆರೋಗ್ಯ ಸಮಸ್ಯೆಯು ಪ್ಯಾನಿಕ್ ಭಯವನ್ನು ಉಂಟುಮಾಡಲಿದ್ದು, ಬೇರ್ಪಡುವಿಕೆಯ ಆತಂಕವನ್ನು ಸೃಷ್ಟಿಸಲಿದೆ. ಪುರುಷರಿಗಿಂತ ಮಹಿಳೆಯರೇ ದುಪ್ಪಟ್ಟು ಪಟ್ಟು ಈ ಸಮಸ್ಯೆಯನ್ನು ಅನುಭವಿಸಲಿದ್ದಾರೆ ಎಂಬುದಾಗಿ ಸಂಶೋಧನೆಗಳಿಂದ ತಿಳಿದು ಬಂದಿದೆ. ಮಾನಸಿಕ ಸಮಸ್ಯೆ ಮಹಿಳೆಯರ ಸಂಖ್ಯೆಯೇ ಜಾಸ್ತಿ! ಯಾಕಿರಬಹುದು?

ಒತ್ತಡದಿಂದ ಬಳಲುವ ಸಂಭವವೂ ಮಹಿಳೆಯರಲ್ಲಿ ಹೆಚ್ಚಾಗಿದೆ. ಮಹಿಳೆಯರು ತಮ್ಮ ಜೀವಮಾನದುದ್ದಕ್ಕೂ ಹಾರ್ಮೋನು ಏರಿಳಿತ ಮತ್ತು ಅಸಮತೋಲನದಿಂದ ಬಳಲುವ ಸಾಧ್ಯತೆ ಇದ್ದು ಮುಟ್ಟು ಮತ್ತು ಗರ್ಭಧಾರಣೆಯ ಸಮಸ್ಯೆಗಳನ್ನು ಇದು ಒಳಗೊಳ್ಳಲಿದೆ. ಇದರ ಪರಿಣಾಮವಾಗಿ ಖಿನ್ನತೆಗೆ ಅವರು ಒಳಗಾಗುತ್ತಾರೆ.

ಮಹಿಳೆಯ ಜೀವನದಲ್ಲಿ ಸಂಭವಿಸುವ ಜೈವಿಕ ಬದಲಾವಣೆಗಳು ಖಿನ್ನತೆಯನ್ನು ಉಂಟುಮಾಡಲಿದೆ. ಹೆರಿಗೆಯ ಸಮಯದಲ್ಲಿ ಮಹಿಳೆಯರು ಖಿನ್ನತೆಯಿಂದ ಬಳಲುತ್ತಾರೆ. ಪೂರ್ವ ಋತುಚಕ್ರ ಅಸ್ವಸ್ಥತೆಯಿಂದ ಬಳಲುವ ಸಾಧ್ಯತೆ ಕೂಡ ಇದೆ. ಸಮಾಜ ಮತ್ತು ಜನರು ಹೇಳುವ ಮಾತುಗಳಿಗೆ ಮಹಿಳೆಯರು ಭಾವನಾತ್ಮಕವಾಗಿರುತ್ತಾರೆ ಮತ್ತು ಸುಲಭವಾಗಿ ಇದಕ್ಕೆ ತುತ್ತಾಗುತ್ತಾರೆ ಇದರಿಂದಾಗಿ ಖಿನ್ನತೆ ಕಂಡುಬರಲಿದೆ.

ಅಧ್ಯಯನದ ಪ್ರಕಾರ ಪುರುಷರಿಗಿಂತ ಮಹಿಳೆಯರಲ್ಲಿ ಆತಂಕ ಕಾಯಿಲೆಗಳು ಹೆಚ್ಚಾಗಲಿದೆ. ಇಂತಹ ಮಹಿಳೆಯರು ಒತ್ತಡ, ಚಿಂತೆ, ಭಯ ಮತ್ತು ಆತಂಕದಿಂದ ಬಳಲುವ ಸಾಧ್ಯತೆ ಇರುತ್ತದೆ. ಇದು ಕೂಡ ಪುರುಷರಿಗಿಂತ ಮಹಿಳೆಯರಲ್ಲಿ ಕಾಯಿಲೆಗಳನ್ನು ಪ್ರಚೋದಿಸಲು ಕಾರಣವಾಗಿವೆ.

ಆಹಾರ ಸೇವಿಸುವ ವಿಷಯದಲ್ಲಿ ಕೂಡ ಪುರುಷರಿಗಿಂತ ಮಹಿಳೆಯರು ಹೆಚ್ಚು ಬಳಲುತ್ತಾರೆ. ತಮ್ಮ ತೂಕ, ದೇಹದ ಆಕಾರ ಮತ್ತು ತಮ್ಮ ಒಟ್ಟಾರೆ ನೋಟದ ವಿಷಯದಲ್ಲಿ ಹೆಚ್ಚು ಚಟವನ್ನು ಹೊಂದಿರುತ್ತಾರೆ. ಅತಿಯಾದ ಹಸಿವು ಮತ್ತು ಅನೋರೆಕ್ಸಿಯಾದಿಂದ ಮಹಿಳೆಯರು ಬಳಲುತ್ತಾರೆ.

English summary

Mental Health Issues That Are More Common In Women

Men and women both suffer from certain mental health issues. However, there are certain mental illnesses that women are more prone to suffer from than men. Let us discuss the health issues that women are more prone to suffer from than men.
X
Desktop Bottom Promotion