For Quick Alerts
ALLOW NOTIFICATIONS  
For Daily Alerts

  ಕೆಮ್ಮು ಶೀತವಾಗಿದೆಯೇ? ಮೊದಲು ಅಡುಗೆ ಮನೆಗೆ ಓಡಿ!

  By manu
  |

  ಮಳೆಗಾಲದಲ್ಲಿ ಅನೈಚ್ಛಿಕವಾಗಿ ಬರುವ ಕಾಯಿಲೆಗಳೆಂದರೆ ಸುರಿಯುವ ಮೂಗು, ಗಂಟಲಬೇನೆ, ಸತತ ಸೀನು, ಕೆಮ್ಮು ಇತ್ಯಾದಿ. ಇವನ್ನು ಒಂದೇ ಪದದಲ್ಲಿ ಹೇಳುವುದಾದರೆ ಶೀತವಾಗಿದೆ ಎನ್ನಬಹುದು. ವಾಸ್ತವವಾಗಿ ಶೀತ ಎಂದರೆ ಒಂದು ಕಾಯಿಲೆಯೇ ಅಲ್ಲ, ನಮ್ಮ ದೇಹದ ಜೀವ ನಿರೋಧಕ ಶಕ್ತಿ ದೇಹದೊಳಗೆ ನುಸುಳಿದ್ದ ವೈರಿ ವೈರಸ್ಸುಗಳನ್ನು ಕೊಂದು ಹೊರಹಾಕುವ ಒಂದು ವ್ಯವಸ್ಥೆ.

  ತೇವಾಂಶ ಹೆಚ್ಚಾದ ಹಾಗೆ ಗಾಳಿ, ನೀರಿನಿಂದ ಹರಡುವ ಈ ವೈರಸ್ಸು ಒಬ್ಬರಿಂದ ಇನ್ನೊಬ್ಬರಿಗೆ ಹರಡಲು ಹೆಚ್ಚು ಸಮಯ ಬೇಕಾಗಿಲ್ಲ. ಅದರಲ್ಲೂ ರೋಗಿ ಮೂಗಿಗೆ ಕೈ ಅಡ್ಡ ಇಡದೇ ಸೀನಿದರೆ ಗಾಳಿಯಲ್ಲಿ ಸಿಡಿದ ರಸದ ಮೂಲಕ ಸೋಂಕು ಹರಡಬಲ್ಲ ವೈರಸ್ಸುಗಳು ಸುತ್ತಮುತ್ತ ಇತರರಿಗೂ ಹರಡುತ್ತವೆ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು 

  ಶೀತಕ್ಕೆ ಮದ್ದು ತೆಗೆದುಕೊಂಡರೆ ಒಂದೇ ವಾರದಲ್ಲಿ ವಾಸಿಯಾಗುತ್ತೆ, ಇಲ್ಲದಿದ್ದರೆ ಏಳು ದಿನ ಬೇಕು ನೋಡಿ ಎಂದು ವೈದ್ಯರೇ ನಗೆಚಟಾಕಿ ಹಾರಿಸುತ್ತಾರೆ. ಏಕೆಂದರೆ ಶೀತಕ್ಕೆ ತೆಗೆದುಕೊಳ್ಳುವ ಮದ್ದು ಕೊಂಚ ಶಮನ ನೀಡಬಲ್ಲದೇ ಹೊರತು ನಮ್ಮ ರಕ್ಷಣಾ ವ್ಯವಸ್ಥೆ ಶೀತಕ್ಕೆ ಕಾರಣವಾದ ವೈರಸ್ಸಿಗೆ ಸೂಕ್ತ ಪ್ರತಿರೋಧವನ್ನು ದೇಹದಲ್ಲಿ ಅಳವಡಿಸಿದ ಬಳಿಕವೇ ಇದರಿಂದ ಮುಕ್ತಿ ದೊರಕುತ್ತದೆ.

  Kitchen Ingredients To Treat Cold And Cough!
    

  ಮುಂದಿನ ಬಾರಿ ಶೀತ ಬಂದಾಗ ಬೇರೆಯೇ ವೈರಸ್ಸು ಕಾರಣವಾಗಿರುತ್ತದೆ. ಅಂತೆಯೇ ಪ್ರತಿ ಬಾರಿಯ ಶೀತಕ್ಕೂ ಬೇರೆ ಬೇರೆ ವೈರಸ್ಸು ಕಾರಣವಾಗುತ್ತವೆ. ಶೀತದ ಮದ್ದುಗಳು ತಾತ್ಕಾಲಿಕ ಉಪಶಮನ ನೀಡುತ್ತವಾದರೂ ಇದರ ಅಡ್ಡಪರಿಣಾಮಗಳಾದ ತಲೆಸುತ್ತುವಿಕೆ, ಹೊಟ್ಟೆ ಉಬ್ಬರಿಕೆ, ತಲೆನೋವು ಇತ್ಯಾದಿಗಳನ್ನು ಸಹಿಸಬೇಕಾಗುತ್ತದೆ.

  ಒಂದರ್ಥದಲ್ಲಿ ಶೀತಕ್ಕಿಂತಲೂ ಈ ಅಡ್ಡಪರಿಣಾಮಗಳೇ ಹೆಚ್ಚು ನೋವು ನೀಡುತ್ತವೆ ಹಾಗೂ ಸುಸ್ತು ಮಾಡುತ್ತವೆ. ಇವು ದೈನಂದಿನ ಚಟುವಟಿಕೆಯನ್ನೇ ಏರುಪೇರುಗೊಳಿಸಬಹುದು. ಜಾಣತನದ ಕ್ರಮವೆಂದರೆ ಶೀತ ಯಾವಾಗ ಪ್ರಾರಂಭವಾಯಿತು ಎನ್ನಿಸುತ್ತದೆಯೋ ಆಗಲೇ ಸೂಕ್ತ ಮದ್ದು ತೆಗೆದುಕೊಂಡು ಬಿಡುವುದು.

  ಅದಕ್ಕೆ ವೈದ್ಯರ ಬಳಿ ಓಡಬೇಕಾಗಿಲ್ಲ, ಬರೆಯ ಅಡುಗೆ ಮನೆಗೆ ಓಡಿದರೆ ಸಾಕು ಅಷ್ಟೇ. ನಮ್ಮ ಅಡುಗೆಗೆ ಬಳಸುವ ಸುಲಭ ಸಾಮಾಗ್ರಿಗಳು ಶೀತವನ್ನು ಎದುರಿಸಲು ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡದೇ ದಿನದ ಚಟುವಟಿಕೆಗಳು ಯಥಾವತ್ತಾಗಿ ನಡೆಯಲು ನೆರವಾಗುತ್ತವೆ.

  ಶೀತಕ್ಕೆ ಸೂಕ್ತವಾದ ಎರಡು ಮನೆಮದ್ದುಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಮಾಹಿತಿಯನ್ನು ಸಂಗ್ರಹಿಸಿದ್ದು ಕೆಳಗಿನ ಮಾಹಿತಿ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತಿದೆ. ಸಾಮಾನ್ಯವಾಗಿ ಬಳಕೆಯಾಗುವ ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಬಳಸಿ ಕೆಲವು ಮನೆಮದ್ದುಗಳನ್ನು ತಯಾರಿಸಲಾಗಿದ್ದು ಶತಮಾನಗಳಿಂದ ಶೀತ ಕೆಮ್ಮು ನೆಗಡಿಗಳಿಗೆ ಸಮರ್ಥವಾದ ಉತ್ತರ ನೀಡುತ್ತದೆ. ಅಲ್ಲದೇ ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸಲು ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣಗಳು ನೆರವಾಗುತ್ತವೆ. ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

  Kitchen Ingredients To Treat Cold And Cough!
   

  ಜೇನು ಮತ್ತು ಬೆಳ್ಳುಳ್ಳಿಯ ಸಿರಪ್

  ಒಂದು ಬೆಳ್ಳುಳ್ಳಿಯ ಎಸಳನ್ನು ಸುಲಿದು ಚಿಕ್ಕದಾಗಿ ಹೆಚ್ಚಿ ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ. ಇದಕ್ಕೆ ಎರಡರಿಂದ ಮೂರು ದೊಡ್ಡಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಿನದಲ್ಲಿ ಹಲವಾರು ಬಾರಿ ಕೊಂಚಕೊಂಚವಾಗಿ ನಿಯಮಿತವಾಗಿ ಸೇವಿಸುತ್ತಾ ಬನ್ನಿ. ಇದರಿಂದ ಕೆಮ್ಮು ಮತ್ತು ಶೀತ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.

  ಜೇನು ಮತ್ತು ಬೆಳ್ಳುಳ್ಳಿಯ ಟೀ

  ಒಂದೆರಡು ಬೆಳ್ಳುಳ್ಳಿಯ ಎಸಳುಗಳನ್ನು ಚಿಕ್ಕದಾಗಿ ಹೆಚ್ಚಿ ಸಾಮಾನ್ಯ ಪ್ರಮಾಣದ ಅರ್ಧದಷ್ಟು ಟೀಪುಡಿಯೊಂದಿಗೆ ನೀರಿನಲ್ಲಿ ಕೊಂಚ ಕಾಲ ಕುದಿಸಿ ಬಳಿಕ ಸಕ್ಕರೆಯ ಬದಲಿಗೆ ಜೇನು ಸೇರಿಸಿ ಟೀ ತಯಾರಿಸಿ. ಹಾಲು ಅಗತ್ಯವಿಲ್ಲ ಎನಿಸಿದರೆ ಮೊದಲು ಕೊಂಚಕಾಲ ಬೆಳ್ಳುಳ್ಳಿಯನ್ನು ಕುದಿಸಿ ನಂತರ ಟೀಪುಡಿಹಾಕಿ ಕೊಂಚವೇ ಕುದಿಸಿ ಸೋಸಿಬಿಡಿ. ಈ ಟೀ ಅನ್ನು ದಿನವಿಡೀ ಬಿಸಿಬಿಸಿಯಾಗಿ ನಿಧಾನವಾಗಿ ಗುಟುಕರಿಸಿ. ಇದರಿಂದ ಗಂಟಲಿನಲ್ಲಿದ್ದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ನಿವಾರಣೆಯಾಗಿ ಉತ್ತಮ ಪರಿಹಾರ ದೊರಕುತ್ತದೆ. ಇನ್ನು ಶೀತ, ಗಂಟಲು ಕೆರೆತಕ್ಕೆ ಗುಡ್ ಬೈ ಹೇಳಿ!

  Kitchen Ingredients To Treat Cold And Cough!
   

  ಈ ಎರಡೂ ವಿಧಾನಗಳು ನೂರಾರು ವರ್ಷಗಳಿಂದ ಭಾರತದಾದ್ಯಂತ ಬಳಕೆಯಲ್ಲಿದ್ದು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಉಪಯುಕ್ತವಾಗಿವೆ. ಶೀತವಾಗದೇ ಇದ್ದರೂ ಈ ಟೀ ಅನ್ನು ದಿನಕ್ಕೊಂದು ಬಾರಿ ಕುಡಿಯುವ ಮೂಲಕ ಶೀತ ಬರದೇ ಇರುವಂತೆ ದೇಹವನ್ನು ಸನ್ನದ್ಧಗೊಳಿಸಬಹುದು. ಆದರೆ ಒಂದು ವೇಳೆ ನಿಮಗೆ ಬೇರೆ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಇದ್ದರೆ ಈ ಟೀ ಕುಡಿಯುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ.

  English summary

  Kitchen Ingredients To Treat Cold And Cough!

  Today we're letting you know about 2 remarkable natural ingredients that can effectively treat cold and cough. Since centuries, these 2 kitchen ingredients, honey and garlic, have been a tried-and-true favourite for resolving the symptoms of this viral infection. The antibacterial properties of these ingredients enable them to fight off the infection by destroying the harmful bacteria.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more