For Quick Alerts
ALLOW NOTIFICATIONS  
For Daily Alerts

ಕೆಮ್ಮು ಶೀತವಿದ್ದಾಗ ಸಿಟ್ರಸ್ ಹಣ್ಣುಗಳ ಸೇವನೆ ಸುರಕ್ಷಿತವೇ?

By Jaya subramanya
|

ಶೀತ ಕೆಮ್ಮು ಹೆಚ್ಚು ಕಡಿಮೆ ಸಾಮಾನ್ಯವಾಗಿ ಜನರನ್ನು ಕಾಡುವ ರೋಗವಾಗಿದೆ. ಶೀತದ ವಸ್ತುಗಳನ್ನು ಈ ಸಮಯದಲ್ಲಿ ಸೇವಿಸುವುದರಿಂದ ಇದು ಅತಿಯಾಗುತ್ತದೆ ಎಂಬ ಭಯವೂ ಇರುವುದರಿಂದ ಜನ ಆದಷ್ಟು ತಂಪಿನ ವಸ್ತುಗಳ ಸೇವನೆ ಮಾಡುವುದಿಲ್ಲ ಅಂತೆಯೇ ಧೂಳು ಮತ್ತು ಪ್ರದೂಷಿತ ವಾತಾವರಣ ಕೂಡ ಶೀತ ಇಲ್ಲವೇ ಕೆಮ್ಮನ್ನು ಅತಿಯಾಗಿಸುತ್ತದೆ. ರಾತ್ರಿಯ ಹೊತ್ತು ಕೆಮ್ಮು ಬರಲು ಕಾರಣಗಳೇನು?

ಆದರೆ ಇದರ ಜೊತೆಗೆ ಥಳುಕು ಹಾಕಿಕೊಂಡಿರುವ ಊಹಪೋಹವೆಂದರೆ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ಕೂಡ ಕೆಮ್ಮು ಶೀತ ತೀವ್ರವಾಗುತ್ತದೆ ಎಂದಾಗಿದೆ. ಇದು ಜನರ ಮೌಢ್ಯವೇ ಅಥವಾ ನಿಜಕ್ಕೂ ಇಂತಹ ಸಂಗತಿ ಒಂದಿದೆಯೇ ಎಂಬುದು ಆ ದೇವರೇ ಬಲ್ಲ. ಅದಾಗ್ಯೂ ಯಾವುದೇ ವೈಜ್ಞಾನಿಕ ಅನ್ವೇಷಣೆಗಳು ಈ ಮಾತನ್ನು ದೃಢೀಕರಿಸಿಲ್ಲ. ತೀವ್ರ ಶೀತ ಕೆಮ್ಮಿರುವಾಗ ಸಿಟ್ರಸ್ ಹಣ್ಣುಗಳನ್ನು ಸೇವಿಸಬಾರದು ಎಂಬುದನ್ನು ಖಾತ್ರಿಪಡಿಸಲು ಯಾವುದೇ ಮಾಹಿತಿಗಳಿಲ್ಲ. ಶೀತ, ಕೆಮ್ಮು, ಜ್ವರಕ್ಕೆಲ್ಲಾ ರಾಮಬಾಣ- ಬಿಸಿ ಬಿಸಿಯಾದ ಸೂಪ್!

ಆದರೂ ಜನರು ಇದನ್ನು ಪಾಲಿಸಿಕೊಂಡು ಬರುತ್ತಾರೆ. ಸಿಟ್ರಸ್ ಹಣ್ಣುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಲಿಂಬೆ, ಕಿತ್ತಳೆ, ದ್ರಾಕ್ಷಿ ಇದರಲ್ಲಿ ಪ್ರಮುಖವಾಗಿರುವಂತಹದ್ದು. ಅಂತೆಯೇ ವಿಟಮಿನ್ ಸಿ ಅಂಶಗಳನ್ನೊಳಗೊಂಡಿರುವ ಸೇಬು, ಸ್ಟ್ರಾಬೆರ್ರಿ, ಬ್ಲ್ಯೂಬೆರ್ರಿ ಮುಂತಾದವುಗಳೂ ಇವೆ. ದಿನಕ್ಕೊಂದು ಸೇಬು ತಿನ್ನಿ ವೈದ್ಯರನ್ನು ದೂರವಿಡಿ ಎಂಬ ಮಾತೇ ಇದ್ದು ಈ ಹಣ್ಣುಗಳು ಹೇಗೆ ಕೆಮ್ಮನ್ನು ತೀವ್ರವಾಗಿಸುತ್ತದೆ ಅಲ್ಲವೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಹಣ್ಣುಗಳ ಸೇವನೆಯನ್ನು ಮಾಡಬೇಕೇ ಬೇಡವೇ ಎಂಬುದನ್ನು ನಾವು ಕೆಲವೊಂದು ಮಾಹಿತಿಗಳ ಮೂಲಕ ತಿಳಿದುಕೊಳ್ಳೋಣ...

ದ್ರವದ ಮೂಲ

ದ್ರವದ ಮೂಲ

ಕೆಮ್ಮು ಮತ್ತು ಶೀತದ ಸಂದರ್ಭದಲ್ಲಿ, ನಿಮ್ಮ ದೇಹಕ್ಕೆ ಸಾಕಷ್ಟು ನೀರು ಬೇಕು. ನೀವು ಯಾವಾಗಲೂ ನೀರು ಕುಡಿಯುತ್ತಲೇ ಇರಲು ಸಾಧ್ಯವಿಲ್ಲ ಅಲ್ಲವೇ? ಈ ಹಣ್ಣುಗಳಲ್ಲಿ ಹೇರಳವಾಗಿ ನೀರಿನ ಅಂಶವಿದ್ದು ಇದು ಕೆಮ್ಮು ಮತ್ತು ಶೀತದ ಸಂದರ್ಭದಲ್ಲಿ ದೇಹಕ್ಕೆ ಸಾಕಷ್ಟು ನೀರಿನ ಪೂರೈಕೆಯನ್ನು ಮಾಡುತ್ತದೆ.ಅಂತೆಯೇ ನಾಲಗೆಗೆ ರುಚಿಯನ್ನೂ ನೀಡುತ್ತವೆ.

ನ್ಯೂಟ್ರೀನ್‎ಗಳ ಮೂಲ

ನ್ಯೂಟ್ರೀನ್‎ಗಳ ಮೂಲ

ಲಿಂಬೆ, ಕಿತ್ತಳೆ, ದ್ರಾಕ್ಷಿ ಇತರೆ ಹಣ್ಣುಗಳು ವಿಟಮಿನ್ ಬಿ, ಸಿ ಮತ್ತು ಇತರೆ ಮಿನರಲ್‎ಗಳಾದ ಪೊಟ್ಯಾಶಿಯಮ್, ಫೈಬರ್, ಕಾರ್ಬೋಹೈಡ್ರೇಟ್ಸ್ ಮುಂತಾದವುಗಳನ್ನು ಒಳಗೊಂಡಿರುತ್ತವೆ. ವೈರಲ್ ದಾಳಿಯ ವಿರುದ್ಧ ನಿಮ್ಮ ದೇಹ ಹೋರಾಡುತ್ತಿರುವಾಗ ಇವುಗಳು ನಿಮಗೆ ಅತ್ಯವಶ್ಯಕವಾಗಿರುತ್ತವೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕೆಮ್ಮು ಇರುವಾಗ ಸಿಟ್ರಸ್ ಹಣ್ಣುಗಳನ್ನು ಸೇವಿಸಿದಾಗ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಿಟ‎ಮಿನ್ ಅಂಶಗಳು ಇದರಲ್ಲಿ ಹೇರಳವಾಗಿದ್ದು ಇದರಲ್ಲಿರುವ ಮಿನರಲ್‎ಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬ್ಯಾಕ್ಟೀರಿಯಾ ಮತ್ತು ವೈರಲ್ ದಾಳಿಯ ವಿರುದ್ಧ ಹೋರಾಡಲು ಉತ್ತೇಜನವನ್ನು ನೀಡುತ್ತದೆ. ಈ ಹಣ್ಣುಗಳಲ್ಲಿರುವ ನಾರಿನಂಶ ಯಾವುದೇ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ನಿಮಗೆ ಒದಗಿಸುತ್ತದೆ.

ಶ್ವಾಸಕೋಶವನ್ನು ನಿರಾಳಗೊಳಿಸುತ್ತದೆ

ಶ್ವಾಸಕೋಶವನ್ನು ನಿರಾಳಗೊಳಿಸುತ್ತದೆ

ನಿಮ್ಮ ಕೆಮ್ಮಿನ ಹಿಂದೆ ಶ್ವಾಸಕೋಶದ ಸಮಸ್ಯೆ ಇದ್ದಲ್ಲಿ, ಒಂದು ಸಿಟ್ರಸ್ ಹಣ್ಣು ನಿಮಗೆ ಸಹಕಾರಿಯಾಗಿದೆ. ಅದುವೇ ದ್ರಾಕ್ಷಿ. ದ್ರಾಕ್ಷಿಯನ್ನು ಕೆಮ್ಮಿರುವಾಗ ಸೇವಿಸಬಾರದು ಎನ್ನುವುದು ಸುಳ್ಳಾಗಿದೆ. ನೀವು ದ್ರಾಕ್ಷಿ ಅಥವಾ ಅದರ ರಸವನ್ನು ಸೇವಿಸಿದಾಗ ಶ್ವಾಸಕೋಶದಲ್ಲಿ ಕಟ್ಟುವಿಕೆ ನಿರಾಳವಾಗಿ ಕೆಮ್ಮು ಉಂಟಾಗುವುದಿಲ್ಲ.

ನೋಯುತ್ತಿರುವ ಗಂಟಲು

ನೋಯುತ್ತಿರುವ ಗಂಟಲು

ಕೆಮ್ಮಿನ ತೀವ್ರ ಲಕ್ಷಣ ಎಂದೆನಿಸಿರುವ ನೋಯುತ್ತಿರುವ ಗಂಟಲನ್ನು ಗುಣಪಡಿಸಲು ಈ ಹಣ್ಣುಗಳು ಸಮರ್ಥವಾಗಿವೆ. ಲಿಂಬೆ ಜ್ಯೂಸ್ ಅನ್ನು ಜೇನಿನೊಂದಿಗೆ ಅಥವಾ ಸ್ವಲ್ಪ ಕಿತ್ತಳೆ ರಸವನ್ನು ಸೇವಿಸಿದಾಗ ನಿಮಗೆ ಕೊಂಚ ಆರಾಮ ಎಂದೆನಿಸುತ್ತದೆ.

ಫ್ರುಟ್ ಸಲಾಡ್ ಬೌಲ್

ಫ್ರುಟ್ ಸಲಾಡ್ ಬೌಲ್

ನಿಮ್ಮ ಕುಟುಂಬದಲ್ಲಿ ನೀವು ಅಥವಾ ನಿಮ್ಮಲ್ಲಿ ಯಾರಾದರೂ ಕೆಮ್ಮಿನಿಂದ ಬಳಲುತ್ತಿದ್ದೀರಿ ಎಂದಾದಲ್ಲಿ ಲಿಂಬೆ, ಕಿತ್ತಳೆ, ಪೈನಾಪಲ್ ಮತ್ತು ದ್ರಾಕ್ಷಿ ಇರುವ ರುಚಿಕರವಾದ ಫ್ರುಟ್ ಸಲಾಡ್ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಲಿಂಬೆ ರಸವನ್ನು ಹಿಂಡಿಕೊಳ್ಳಿ ಮತ್ತು ನಿಮ್ಮ ಕೆಮ್ಮಿಗೆ ಇದು ಹೇಗೆ ಸಹಕಾರಿಯಾಗಿದೆ ಎಂಬುದನ್ನು ನಿಮಗೇ ಕಂಡುಕೊಳ್ಳಬಹುದಾಗಿದೆ.

English summary

Is It Safe To Consume Citrus Fruit When You Have Cough?

Can a citrus fruit cure cough? Actually, there is so much myth related to cough and cold that people often get confused. Some say dairy products are not good for cough and cold and certain people also forbid from having citrus fruits when suffering from a severe cough. Read on to know more if citrus fruits are good to be taken during cough or cold.
Story first published: Wednesday, April 27, 2016, 19:58 [IST]
X
Desktop Bottom Promotion