For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಭೇದಿಯ ಬಾಧೆಗೆ ಫಲಪ್ರದ ಮನೆಮದ್ದುಗಳು

|

ಭೇದಿ ಸಮಸ್ಯೆ ಇರುವಂತಹ ವ್ಯಕ್ತಿಗೆ ಚಿಕಿತ್ಸೆ ನೀಡುವ ವೇಳೆ ಕಾಡುವ ಚಿಂತೆ ಎಂದರೆ ಅದು ನಿರ್ಜಲೀಕರಣ ವಾಗುವುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ ಇದ್ದರೆ ಆಗ ಭೇದಿಯಿಂದಾಗಿ ದೇಹದಿಂದ ಹೊರಹೋದ ದ್ರವ ಮತ್ತು ಉಪ್ಪಿನಾಂಶವು ಗಂಭೀರವಾದ ಸಮಸ್ಯೆ ಉಂಟು ಮಾಡಬಹುದು. ತುಂಬಾ ಗಂಭೀರ ಪರಿಸ್ಥಿತಿಯಲ್ಲಿ ರೋಗಿಗೆ ಡ್ರಿಪ್ಸ್ ನಲ್ಲಿ ಇಡಬೇಕಾಗಬಹುದು.

ನೈಸರ್ಗಿಕ ಚಿಕಿತ್ಸಾ ಕ್ರಮದ ಪ್ರಕಾರ ನೀರಿಗೆ ಉಪ್ಪು, ಒಂದು ಚಮಚ ಗ್ಲೂಕೋಸ್ ಮತ್ತು ಲಿಂಬೆ ಹಾಕಿರುವಂತಹ ಬಿಸಿ ನೀರನ್ನು ಕುಡಿಸಬೇಕು. ಆಹಾರ ಸೇವನೆ ಬಳಿಕ ವಾಂತಿ ಮಾಡುತ್ತಲಿದ್ದರೆ ಆಗ ಈ ಪಾನೀಯವು ತುಟಿಗಳಲ್ಲಿ ತೇವಾಂಶವನ್ನು ಕಾಪಾಡುವುದು. ನೀರಿನ ಬದಲು ಗಂಜಿ ನೀರನ್ನು ನೀಡಿ. ಮೂರು ದಿನಕ್ಕಿಂತ ಹೆಚ್ಚು ಕಾಲ ಭೇದಿ ಕಾಡುತ್ತಿದ್ದರೆ ಆಗ ವೈದ್ಯರನ್ನು ಭೇಟಿಯಾಗುವುದು ಅನಿವಾರ್ಯ. ಇಲ್ಲಿ ಸೂಚಿಸಲಾಗಿರುವ ಕೆಲವೊಂದು ಮನೆಮದ್ದುಗಳನ್ನು ನೀವು ಪ್ರಯತ್ನಿಸಿ ನೋಡಬಹುದು...

ಅರ್ಧ ಚಮಚ ಅರಿಶಿನ!

ಅರ್ಧ ಚಮಚ ಅರಿಶಿನ!

ಅರಿಶಿನದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಇದ್ದು, ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು. ಒಂದು ಲೋಟ ನೀರಿಗೆ ಅರ್ಧ ಚಮಚ ಅರಿಶಿನ ಹಾಕಿ ಕುಡಿಯಿರಿ. ದಿನದಲ್ಲಿ ಎರಡು ಸಲ ಇದನ್ನು ಕುಡಿಯಬೇಕು.

ಶುಂಠಿ

ಶುಂಠಿ

ಶುಂಠಿಯಲ್ಲಿ ಶಮನಕಾರಿ ಗುಣಗಳಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುವುದು. ಒಂದು ತುಂಡು ಶುಂಠಿಯನ್ನು ನೀರಿನಲ್ಲಿ ಬಿಸಿ ಮಾಡಿ ಆ ನೀರನ್ನು ಕುಡಿಯಿರಿ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಭೇದಿಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣ ಆಪಲ್ ಸೀಡರ್ ವಿನೇಗರ್ ನಲ್ಲಿದೆ. ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಕುಡಿದರೆ ಭೇದಿ ನಿವಾರಣೆಯಾಗುವುದು. ದಿನಕ್ಕೆ ಎರಡು ಸಲ ಇದನ್ನು ಕುಡಿಯಿರಿ.

ಮೊಸರು

ಮೊಸರು

ಮೊಸರು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಶೇಖರಣೆ ಮಾಡುತ್ತದೆ. ಭೇದಿ ಸಮಸ್ಯೆ ಇದ್ದಾಗ ನೀವು ದಿನಕ್ಕೆ ಎರಡು ಸಲ ಮೊಸರು ತಿನ್ನಿ.

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆಯಲ್ಲಿ ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಇದೆ. ಇದು ಕೆಟ್ಟ ಬ್ಯಾಕ್ಟೀರಿಯಾಗಳ ನಿವಾರಣೆ ಮಾಡುತ್ತದೆ. ಇದು ಭೇದಿಗೆ ಒಳ್ಳೆಯ ಮನೆಮದ್ದು. ಇದರ ಜ್ಯೂಸ್ ನ್ನು ಒಂದು ಲೋಟ ಕುಡಿಯಿರಿ.

English summary

How To Treat Loose Motions

The problem could be chronic or acute. When the contents of your stomach pass through your colon very fast, it could lead to watery stools. Sometimes, stomach cramps, pain, bloating, fever and weakness could also occur due to loose motions. Also, due to the repeated visits to the bathroom, the rectal area may develop burning sensation and irritation. Sometimes, infections could also affect your bowel movements.
X
Desktop Bottom Promotion