Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೆಕ್ಕೆ ಜೋಳದ ತೆನೆ ಇದುವೇ ಆರೋಗ್ಯದ ಗೊನೆ
ಪೇಟೆ, ಪ್ರಯಾಣ, ಜಾತ್ರೆಗಳಲ್ಲಿ ಮೆಕ್ಕೆಜೋಳದ ಪಾಪ್ (ಅಳ್ಳು) ಮಾರುವವರನ್ನು ನೀವು ನೋಡಿರಬಹುದು. ಮಕ್ಕಳಿಂದ ಹಿಡಿದು, ಮನೆಯ ಎಲ್ಲಾ ಸದಸ್ಯರಿಗೂ ಇದು ಮೆಚ್ಚಿನ ತಿನಿಸು. ಇದರ ಘಮವೇ ಎಲ್ಲರನ್ನೂ ತನ್ನ ಸೆಳೆಯುವಂತಹದ್ದು. ಈ ಪಾಪ್‌ಗಳು ಬಾಯಲ್ಲಿಟ್ಟರೇ ಕರಗುವುದರಿಂದ ವೃದ್ಧರಿಗೂ ಪ್ರಿಯವಾದವುಗಳಾಗಿವೆ.
ಪಾಪ್ ಕಾರ್ನ್ ಇಲ್ಲದೆ ಸಿನಿಮಾ ಊಹಿಸಲು ಸಾಧ್ಯವೇ ಇಲ್ಲ. ಹಾಗಿದ್ದರೆ ಬಾಯಲ್ಲಿ ನೀರೂರಿಸುವ ಈ ಮೆಕ್ಕೆಜೋಳದ ಅರಳುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಸಹಕಾರಿ... ? ಇಲ್ಲಿದೆ ವಿವರ.... ಇವು ನಮ್ಮ ಆರೋಗ್ಯಕ್ಕೆ ಪೂರಕವಾದ ಇಡಿಯಾದ ಧಾನ್ಯಗಳಿಂದ ಮಾಡಲ್ಪಟ್ಟಿರುತ್ತವೆ. ನಮ್ಮ ಜೀರ್ಣಕ್ರಿಯೆಯನ್ನು ವೃದ್ಧಿಸುವಂತಹ ನಾರಿನಂಶವೂ ಪಾಪ್ ಕಾರ್ನ್‌ಗಳಲ್ಲಿ ಹೇರಳವಾಗಿರುತ್ತದೆ. ಇದು ಸಿಹಿರಹಿತವಾಗಿರುವುದರಿಂದ ಮಧುಮೇಹಿಗಳೂ ಪಾಪ್ ಕಾರ್ನ್ ಸವಿಯನ್ನು ಸವಿಯಬಹುದು. ಅತಿ ಕಡಿಮೆ ಕೊಬ್ಬಿನಂಶ ಹಾಗೂ ಕಡಿಮೆ ಕ್ಯಾಲೋರಿ ಇರುವುದರಿಂದ ಎಲ್ಲರೂ ಇದರ ರುಚಿನೋಡಬಹುದು. ತಿಂದು ನೋಡಿ ಗರಿ ಗರಿ ಮಸಾಲಾ ಟಚ್ ಪಾಪ್ ಕಾರ್ನ್

ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ತಿನಿಸು
*ನಮ್ಮೆದುರಿಗೇ ಅರಳು ಹುರಿಯುವದರಿಂದ ಯಾವುದೇ ರೀತಿಯ ರಕ್ಷಕ ರಾಸಾಯನಿಕಗಳು ಇರುವುದಿಲ್ಲ. ನಕಲಿ ಬಣ್ಣಗಳ ಬಳಕೆಯೂ ಇಲ್ಲವಾದ್ದರಿಂದ ಆರೋಗ್ಯಕ್ಕೆ ಹಾನಿಕಾರಕವಾದದ್ದೇನು ಇದರಲ್ಲಿ ಇಲ್ಲ ಎಂದು ನಂಬಬಹುದು.
*ಬದಲಿಗೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಕಾರ್ಬೋಹೈಡ್ರೇಟ್ 71%, ಪ್ರೋಟೀನ್ 10.5%, ಕೇವಲ 3% ಕೊಬ್ಬು ಹಾಗೂ 15% ನೀರಿನಂಶವಿರುವ ಪಾಪ್ ಕಾರ್ನ್‌ಗಳಲ್ಲಿ ಶೇಂಗಾ ಹಾಗೂ ಪಾಲಕ್‌ಗಳಿಗಿಂತ ಹೆಚ್ಚು ಕಬ್ಬಿಣದ ಅಂಶ ಇರುವುದು ದೃಢಪಟ್ಟಿದೆ.
*ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವುದರಿಂದ ಎರಡು ಊಟಗಳ ನಡುವಿನ ಲಘು ಹಸಿವನ್ನು ಸಮತೋಲನ ಮಾಡಲು ಇದನ್ನು ಸೇವಿಸಬಹುದು. ಪಾಪ್‌ನಲ್ಲಿ ಪಿಷ್ಠ ಇರುವುದರಿಂದ ಊಟಕ್ಕಿಂತ ಮೊದಲು ಇದನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯ ಸತ್ವದೊರೆಯುವುದರ ಜೊತೆಗೆ ಹೊಟ್ಟೆ ತುಂಬಿದ ಅನುಭವವನ್ನೂ ನೀಡುತ್ತದೆ.
*ಇದರಿಂದ ಡಯಟ್ ಪ್ರಿಯರಿಗೆ ಪಾಪ್ ಒಂದು ವರವಾಗಿದೆ. ಇತ್ತೀಚಿನ ದಿನಗಳಲ್ಲಿ ಪಾಪ್ ಕಾರ್ನ್ ಡಯಟ್ ಕೂಡ ತುಂಬಾ ಜನಪ್ರೀಯವಾಗುತ್ತಿದೆ. ಕಾರ್ನ್ ತಿಂದರೆ ಆರೋಗ್ಯಕ್ಕೆ 6 ಪ್ರಯೋಜನಗಳು
ಯಾವ ಪಾಪ್ ಕಾರ್ನ್‍ಗಳಲ್ಲಿ ಎಷ್ಟು ಕೊಬ್ಬಿದೆ ?
*ಮೈಕ್ರೋವೇವ್‌ನಲ್ಲಿ ಹುರಿದ ಒಂದು ಬಟ್ಟಲು ಅರಳುಗಳಲ್ಲಿ ಕೇವಲ 4 ಗ್ರಾಂ ಕೊಬ್ಬಿನಂಶವಿರುತ್ತದೆ.
*ಸಿನೆಮಾ ಹಾಲ್‌ಗಳಲ್ಲಿ ಸಿಗುವ ಕಾರ್ನ್ ಗಳಲ್ಲಿ 15% ಕೊಬ್ಬಿದ್ದರೆ ಬೆಣ್ಣೆ, ಉಪ್ಪು, ಮಸಾಲೆ ಹಾಕಿ ಹುರಿದವುಗಳಲ್ಲಿ ಇದಕ್ಕಿಂತಲೂ ಹೆಚ್ಚು ಕೊಬ್ಬಿನಂಶವಿರುತ್ತದೆ.
*ಆದರೆ ಇವ್ಯಾವುದೂ ಇಲ್ಲದೆ ಕೇವಲ ಬಿಸಿ ಹವೆಯಲ್ಲಿ ಹುರಿದ ಪಾಪ್‌ಗಳಲ್ಲಿ ಕೇವಲ 30 ಕ್ಯಾಲೋರಿ ಇರುತ್ತದೆ.
*ಹಾಗಿದ್ದರೆ ಗೆಳೆಯರೆ, ಇನ್ನು ಮುಂದೆ ನಿಮ್ಮ ಮಕ್ಕಳೊ..ಹೆಂಡತಿಯೊ.. ಅಥವಾ ಗರ್ಲ್ ಫ್ರೆಂಡೋ .... ಪಾಪ್ ಕಾರ್ನ್ ಕೇಳಿದರೆ ಉಡಾಫೆ ಮಾಡದೆ ಅವರ ಒಟ್ಟಿಗೆ ನೀವೂ ಈ ಆರೋಗ್ಯಕರ ತಿನಿಸನ್ನು ಸವಿಯುತ್ತೀರಲ್ಲವೇ.....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

