For Quick Alerts
ALLOW NOTIFICATIONS  
For Daily Alerts

ಮುಳ್ಳು ಸೌತೆಕಾಯಿ ಜ್ಯೂಸ್‌ನ ಜಬರ್ದಸ್ತ್ ಪವರ್...

By Deepak M
|

ಸೌತೆಕಾಯಿ ಯಾವುದೇ ತರಕಾರಿ ಅಂಗಡಿಯಲ್ಲಿ ದೊರೆಯುವ ಒಂದು ಪದಾರ್ಥವಾಗಿದೆ. ಇದನ್ನು ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಇದು ಒಂದು ಅತ್ಯುತ್ತಮವಾದ ಡಿಟಾಕ್ಸಿಫಿಕೇಶನ್ ಡೈಯಟ್ ವಸ್ತುವಾಗಿ ಅಥವಾ ಸ್ವಾಭಾವಿಕ ಕ್ಲೀನ್ಸರ್ ಆಗಿ ಪ್ರಯೋಜನಕಾರಿಯಾಗಿದೆ. ಸೌತೆಕಾಯಿಯು ಬಾಹ್ಯವಾಗಿ ಮತ್ತು ಆಂತರಿಕವಾಗಿ ಪ್ರಯೋಜನಗಳನ್ನು ನೀಡುವ ತರಕಾರಿಯಾಗಿದೆ.

How Can Cucumber Juice Benefit You?

ಇದು ವಿಟಮಿನ್ ಕೆ, ಸಿ ಮತ್ತು ಎ ಹಾಗು ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಒಳಗೊಂಡಿರುತ್ತದೆ. ರಸವಿರುವ ಸೌತೆಕಾಯಿ ನಿಮಗೆ ಜೀರ್ಣವಾಗುವ ನಾರಿನಂಶವನ್ನು ಒದಗಿಸುತ್ತದೆ. ಇದು ನಿಮಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇವು ಕರುಳಿನಲ್ಲಿ ಸುಲಭವಾಗಿ ಜೀರ್ಣವಾಗುತ್ತವೆ. ಈ ಸೌತೆಕಾಯಿ ಉಗುರು, ಕೂದಲು ಮತ್ತು ತ್ವಚೆಯ ಆರೋಗ್ಯವನ್ನು ನೀಡುತ್ತದೆ. ದೇಹಕ್ಕೆ ತಂಪುಣಿಸುವ ಸೌತೆಕಾಯಿ ಜ್ಯೂಸ್‌ನ ಕರಾಮತ್ತೇನು?

ಹಲವಾರು ಮಹಿಳೆಯರು ಕಣ್ಣಿನ ಮೇಲೆ ಸೌತೆಕಾಯಿಯನ್ನು ಇರಿಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇದು ಕಣ್ಣಿನ ಊತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ನೋವು ನಿವಾರಕ ಗುಣಗಳು ಕಣ್ಣಿನಲ್ಲಿರುವ ಕೊಳೆಯನ್ನು ತೆಗೆದು, ಅದರ ಸುತ್ತಿನ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ.

ಸೌತೆಕಾಯಿಯಲ್ಲಿರುವ ಮೊಡವೆ ನಿವಾರಕ ಗುಣಗಳು ಇದನ್ನು ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಸಿಲಿಕಾ ಎಂಬ ಖನಿಜಾಂಶವು ನಮ್ಮ ದೇಹದ ಅಂಗಾಂಶಗಳನ್ನು ಕಂಡೀಶನಿಂಗ್ ಮಾಡುವ ಗುಣಗಳನ್ನು ಹೊಂದಿದೆ. ಸೌತೆಕಾಯಿಯಲ್ಲಿ ಬಹುತೇಕ ನೀರಿನಂಶವು ಇರುತ್ತದೆ. ಇದರಿಂದಾಗಿಯೇ ಇದು ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರ ಹಾಕುವಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಟಾಕ್ಸಿನ್‌ಗಳು ನಮ್ಮ ದೇಹದ ಕೋಶಗಳಲ್ಲಿ ಸೇರಿದಾಗ ಉರಿಯೂತವು ಕಾಣಿಸಿಕೊಳ್ಳುತ್ತದೆ.

ನೀರಿನಂಶವಿರುವುದಷ್ಟೇ ಅಲ್ಲದೆ ಈ ತರಕಾರಿಯಲ್ಲಿ ಎಲೆಕ್ಟ್ರೋಲೈಟ್‌ಗಳು ಸಹ ಇರುತ್ತವೆ. ಇವು ದೇಹದಲ್ಲಿರುವ ತೇವಾಂಶವು ಮತ್ತೆ ಶೇಖರಣೆಗೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹದಲ್ಲಿನ ದ್ರವ ಪದಾರ್ಥಗಳನ್ನು ಸಮತೋಲನದಲ್ಲಿಡುತ್ತದೆ. ಈ ಕಾರಣಕ್ಕಾಗಿ ಸೌತೆಕಾಯಿಯು ನಿಮ್ಮ ದೇಹದ ತೂಕವನ್ನು ಇಳಿಸಲು ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಈ ಪ್ರಯೋಜನಗಳಿಂದ ಕೂಡಿದ ಈ ರಸವು ಅರ್ಥರಿಟಿಸ್‌ನಿಂದ ಬರುವ ತುರಿಕೆಯನ್ನು ನಿವಾರಿಸುತ್ತದೆ. ಯಾವಾಗ ನೀವು ಒಂದು ಸೌತೆಕಾಯಿ ರಸವನ್ನು ತೆಗೆಯಲು ಬಯಸುತ್ತೀರೋ, ಆಗ ಅದರ ಹಸಿರು ಸಿಪ್ಪೆಯನ್ನು ಸಹ ಸೇರಿಸಿ ರಸವನ್ನು ತೆಗೆಯಿರಿ. ಅದು ಸಾವಯವ ಪದಾರ್ಥವಾಗದಿದ್ದಲ್ಲಿ, ಅದನ್ನು ಚೆನ್ನಾಗಿ ತೊಳೆದು ಬಳಸಿ.

ಸೌತೆಕಾಯಿಯು ಒಂದು ಮೆದು ರುಚಿಯನ್ನು ಒಳಗೊಂಡಿರುತ್ತದೆ. ಇದನ್ನು ಇತರೆ ಹಣ್ಣು ಅಥವಾ ತರಕಾರಿಗಳ ಜೊತೆಗೆ ಸೇವಿಸಬಹುದು. ಇದನ್ನು ಸೇವಿಸಿ ತ್ವಚೆ ಸೇರಿದಂತೆ ದೇಹದ ಹೊರ ಮತ್ತು ಒಳಗಿನ ಟಾಕ್ಸಿನ್‌ಗಳನ್ನು ಹೊರಗೆ ಹಾಕುವ ಪ್ರಕ್ರಿಯೆಯನ್ನು ಮಾಡುತ್ತದೆ. ಆದ್ದರಿಂದ ದಿನ ನಿತ್ಯ ಸೌತೆಕಾಯಿಯನ್ನು ಸೇವಿಸುವ ಪರಿಪಾಠವನ್ನು ಇರಿಸಿಕೊಳ್ಳಿ.

English summary

How Can Cucumber Juice Benefit You?

There are a variety of cucumber juice advantages found by using cucumbers as part of a detoxification diet programme or as a natural cleanser. A cucumber can offer health advantages both inside and out, plus they contain vitamins such as vitamins K, C and A, as well as potassium and calcium. Cucumber is, in fact, a popular ingredient in acne skin care products. Silica is a trace mineral that contributes to the conditioning of the body connective tissues.
X
Desktop Bottom Promotion