For Quick Alerts
ALLOW NOTIFICATIONS  
For Daily Alerts

ಜ್ವರ-ಶೀತಕ್ಕೆ ಮನೆಯಂಗಳದ ತುಳಸಿ ಎಲೆಗಳೇ ಸಾಕು!

By Manu
|

ಮಳೆಗಾಲ ಬಂತೆಂದರೆ ಎಲ್ಲರಿಗೂ ಶೀತ, ನೆಗಡಿ, ಜ್ವರಗಳು ಸಾಮಾನ್ಯವಾಗಿ ಆವರಿಸುತ್ತವೆ. ಹೆಚ್ಚಿನವರಿಗೆ ಸೋಂಕು ವಿಪರೀತವಾಗಿರುತ್ತದೆ. ಅದರಲ್ಲೂ ನೆಗಡಿ ಮತ್ತು ಶೀತ ಒಬ್ಬರಿಂದೊಬ್ಬರಿಗೆ ಶೀಘ್ರವಾಗಿ ಹರಡುತ್ತದೆ. ಪರಿಣಾಮವಾಗಿ ಜ್ವರ, ತಲೆಸಿಡಿತ, ಮೈಕೈನೋವು ಮೊದಲಾದವು ಆವರಿಸುತ್ತವೆ. ಹೆಚ್ಚಿನವರ ಮನದಲ್ಲಿ ಜ್ವರ ಬಂದರೆ ಪ್ಯಾರಸಿಟಮಾಲ್ ಮಾತ್ರೆಯನ್ನು ನುಂಗಿದರೆ ಸಾಕು ಎಂಬ ವಿಷಯ ಅಚ್ಚೊತ್ತಿದೆ. ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ಆದರೆ ವಾಸ್ತವವಾಗಿ ಪ್ಯಾರಸಿಟಮಾಲ್ ಜ್ವರವನ್ನು ಕಡಿಮೆಗೊಳಿಸುವ ಯಾವುದೇ ಕೆಲಸ ಮಾಡುವುದಿಲ್ಲ. ಇದರ ಕೆಲಸವೇನಿದ್ದರೂ ನಮ್ಮ ಜೀವಕೋಶಗಳು ನೋವು ಮತ್ತು ತೊಂದರೆಯ ಸೂಚನೆಗಳನ್ನು ಮೆದುಳಿಗೆ ತಲುಪಿಸುವುದನ್ನು ತಡೆಯುವುದು ಮಾತ್ರ. ಒಂದರ್ಥದಲ್ಲಿ ಹಲ್ಲು ಕೀಳುವ ಮೊದಲು ನೀಡುವ ಅರವಳಿಕೆ ಇದ್ದ ಹಾಗೆ. ಪ್ಯಾರಸಿಟಮಾಲ್ ನೋವನ್ನು ಕಡಿಮೆ ಮಾಡುವುದಿಲ್ಲ, ಬದಲಿಗೆ ನೋವಿನ ಸೂಚನೆ ಅದೃಷ್ಟಹೀನ ದೇವತೆ ತುಳಸಿ ಪರಮಪಾವನೆಯಾಗಿದ್ದು ಹೇಗೆ?

ಆದ್ದರಿಂದ ಈ ಬಾರಿ ಶೀತ ನೆಗಡಿ, ಜ್ವರ ಬಾಧಿಸಿದರೆ ಸುಮ್ಮನೇ ಆತ್ಮವಂಚನೆ ಮಾಡಿಕೊಳ್ಳುವ ಬದಲು ಜ್ವರವನ್ನು ನಿಜವಾಗಿಯೂ ಕಡಿಮೆ ಮಾಡಲು ಸಮರ್ಥವಾಗಿರುವ ತುಳಸಿಯ ಸೇವೆ ಪಡೆಯುವುದೇ ಒಳ್ಳೆಯದು. ತುಳಸಿ ಎಲೆ ಔಷಧೀಯ ಗುಣಗಳು ಶೀತ ನೆಗಡಿ ತಲೆನೋವು ಮೊದಲಾದವುಗಳನ್ನು ದೇಹದ ರೋಗ ನಿರೋಧಕ ಶಕ್ತಿಯೇ ಉಡುಗಿಸುವಂತೆ ಬಲಪಡಿಸುವ ಮೂಲಕ ಉತ್ತಮ ಪರಿಹಾರ ನೀಡುತ್ತದೆ. ಬನ್ನಿ, ಈ ತುಳಸಿ ಎಲೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ: ತುಳಸಿ-ಗ್ರೀನ್ ಟೀಯ ಜೋಡಿ-ಮಾಡಲಿದೆ ಕಮಾಲಿನ ಮೋಡಿ

ಜ್ವರಕ್ಕೆ ತುಳಸಿ ಟೀ

ಜ್ವರಕ್ಕೆ ತುಳಸಿ ಟೀ

ಜ್ವರ ತೀವ್ರವಾಗಿದ್ದರೆ ಈ ಟೀ ಉತ್ತಮವಾಗಿದೆ. ಒಂದು ಕಪ್ ಕುದಿಯುತ್ತಿರುವ ನೀರಿಗೆ ಒಂದು ಮುಷ್ಟಿಯಷ್ಟು ತುಳಸಿ ಎಲೆಗಳನ್ನು ಹಾಕಿ ಕೊಂಚ ಟೀ ಪುಡಿ ಸೇರಿಸಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕುದಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜ್ವರಕ್ಕೆ ತುಳಸಿ ಟೀ

ಜ್ವರಕ್ಕೆ ತುಳಸಿ ಟೀ

ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಎರಡು ಬಾರಿ ಒಂದು ಲೋಟದಂತೆ ಕುಡಿಯಿರಿ. ಇದರಿಂದ ಜ್ವರ ಶೀಘ್ರವೇ ಕಡಿಮೆಯಾಗುವುದು ಮತ್ತು ಮಲೇರಿಯಾ ಮತ್ತು ಡೆಂಗ್ಯೂ ಜ್ವರದಂತಹ ಮಾರಕ ಜ್ವರಗಳು ಆವರಿಸುವ ಸಾಧ್ಯತೆಯನ್ನೂ ಕಡಿಮೆಯಾಗಿಸುತ್ತದೆ.

 ತುಳಸಿ ಎಲೆಗಳನ್ನು ಬೆರೆಸಿದ ಹಾಲು

ತುಳಸಿ ಎಲೆಗಳನ್ನು ಬೆರೆಸಿದ ಹಾಲು

ಒಂದು ವೇಳೆ ಜ್ವರ ಚಿಕ್ಕದಾಗಿದ್ದರೆ ಒಂದು ಲೋಟ ತುಳಸಿ ಎಲೆ ಬೆರೆಸಿದ ಹಾಲು ಸಾಕಾಗುತ್ತದೆ. ಇದನ್ನು ತಯಾರಿಸಲು ಅರ್ಧ ಲೀಟರ್ ಹಾಲಿನಲ್ಲಿ ಕೊಂಚ ತುಳಸಿ ಎಲೆಗಳು, ಪುಡಿಮಾಡಿದ ಒಂದೆರಡು ಏಲಕ್ಕಿ ಹಾಕಿ ಕುದಿಸಿ. ಬಳಿಕ ಕೊಂಚ ಸಕ್ಕರೆ ಸೇರಿಸಿ ಬಿಸಿಬಿಸಿಯಿದ್ದಂತೆಯೇ ದಿನಕ್ಕೆ ಎರಡು ಬಾರಿ ಕುಡಿಯಿರಿ. ಜ್ವರ ಶೀಘ್ರವೇ ಇಳಿಯುತ್ತದೆ. ತುಳಸಿ ಎಲೆಗಳನ್ನು ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ

ತುಳಸಿಯ ಜ್ಯೂಸ್

ತುಳಸಿಯ ಜ್ಯೂಸ್

ಜ್ವರ ಮಧ್ಯಮವಾಗಿದ್ದರೆ ತುಳಸಿಯ ಜ್ಯೂಸ್ ಸಾಕು. ಮಕ್ಕಳಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಇದಕ್ಕಾಗಿ ಸುಮಾರು ಹತ್ತು ಹದಿನೈದು ತುಳಸಿ ಎಲೆಗಳನ್ನು ಕೊಂಚ ನೀರಿನೊಂದಿಗೆ ಅರೆದು ಹಿಂಡಿ ರಸವನ್ನು ಸಂಗ್ರಹಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತುಳಸಿಯ ಜ್ಯೂಸ್

ತುಳಸಿಯ ಜ್ಯೂಸ್

ಈ ರಸವನ್ನು ಕೊಂಚ ತಣ್ಣೀರಿನೊಂದಿಗೆ ಬೆರೆಸಿ ಪ್ರತಿ ಎರಡರಿಂದ ಮೂರು ಬಾರಿ ರೋಗಿಗೆ ಕುಡಿಸಿ. ಜ್ವರ ಶೀಘ್ರವೇ ಇಳಿಯುತ್ತದೆ.

ಅತ್ಯುತ್ತಮ ಚಿಕಿತ್ಸಕ ಗುಣಗಳು

ಅತ್ಯುತ್ತಮ ಚಿಕಿತ್ಸಕ ಗುಣಗಳು

ತುಳಸಿಯನ್ನು ಪವಿತ್ರ ತುಳಸಿ ಎಂದು ಸಹ ಕರೆಯುತ್ತಾರೆ. ಈ ಅದ್ಭುತವಾದ ಗಿಡ ಮೂಲಿಕೆಯು ಹಿಂದೂಗಳ ಪಾಲಿಗೆ ದೇವರ ಸಮಾನ ಎಂಬುದು ಗೊತ್ತಿರುವ ವಿಚಾರವೇ. ಬೆಳಗ್ಗೆ, ಸಂಜೆ ತುಳಸಿಗೆ ಕೈ ಮುಗಿಯದಿದ್ದರೆ ಅವರ ದಿನ ಪರಿಪೂರ್ಣವಾಗುವುದೇ ಇಲ್ಲ. ಸರ್ವ ರೋಗಗಳಿಗು ತುಳಸಿ ತೀರ್ಥವನ್ನೆ ಇವರು ಆಂಟಿ ಬಯೋಟಿಕ್ ರೀತಿಯಲ್ಲಿ ಸೇವಿಸುತ್ತಾರೆ. ಇನ್ನು ದೇವಾಲಯದಲ್ಲಿ ಸಹ ಇದೇ ತೀರ್ಥವನ್ನು ನಮಗೆ ಬಹುತೇಕ ಕಡೆ ನೀಡುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಚಿಕಿತ್ಸಕ ಗುಣಗಳು. ಅದಕ್ಕೆ ಇದನ್ನು ಪ್ರತಿ ಮನೆಯಲ್ಲೂ ಬೆಳೆಸುವುದು.

English summary

Home remedies using tulsi leaves for fever and cold

Whether it is due to the cold weather or low immunity, most of us fall prey to infections, and the most common is cold and fever. But instead of taking a paracetamol to bring your temperature down or gulping down a spoonful of cough syrup to treat a cough and cold at home, use tulsi leaves this time. Commonly found in every Indian household, tulsi leaves are packed with medicinal values. Right from boosting your immunity to helping you deal with stress, headache and sinusitis as well. Here are common health benefits of tulsi leaves you need to be aware of.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more