For Quick Alerts
ALLOW NOTIFICATIONS  
For Daily Alerts

ಮದ್ಯಪಾನದಿಂದ ಮುಕ್ತರಾಗಲು ಸ್ಟೆಪ್ ಬೈ ಸ್ಟೆಪ್ ಟಿಪ್ಸ್

By Jaya subramanya
|

ಮದ್ಯಪಾನವು ಸ್ಲೋಪಾಯಿಸನ್ ಎಂದೇ ಕರೆಯಿಸಿಕೊಂಡಿದ್ದು ವಿಶ್ವದಾದ್ಯಂತ 76 ಮಿಲಯನ್ ಜನರು ಈ ದುಶ್ಚಟದಿಂದ ಬಳಲುತ್ತಿದ್ದಾರೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ. ಬರಿಯ ಫ್ಯಾಷನ್ ಹೆಸರಿನಲ್ಲಿ ಅಭ್ಯಾಸವಾದ ಮದ್ಯಪಾನ ಸೇವನೆ ನಂತರ ನಿಧಾನವಾಗಿ ಚಟಕ್ಕೆ ತಿರುಗುತ್ತದೆ ಎನ್ನಲಾಗಿದೆ. ಸರ್ವ ಕೆಡುಕುಗಳ ಮೂಲ ಮದ್ಯಪಾನದಿಂದ ಮುಕ್ತಿ ಹೇಗೆ?

ಮದ್ಯಪಾನದ ಚಟಕ್ಕೆ ದಾಸರಾಗುವುದು ದೊಡ್ಡ ಸಮಸ್ಯೆಯ ಗುರುತಾಗಿದ್ದು, ಪ್ರಾಣಕ್ಕೆ ಸಂಚಕಾರ ತರುವಷ್ಟರ ಮಟ್ಟಿಗೆ ಇದು ರೋಗಿಯನ್ನು ಅಣು ಅಣುವಾಗಿ ಕೊಲ್ಲುತ್ತದೆ ಎನ್ನಲಾಗಿದೆ. ಈ ಚಟದಿಂದ ಹೊರಬರಲು ಸಾಧ್ಯ ಇಲ್ಲವೇ ಎಂಬುದು ನಿಮ್ಮ ಮನದಾಳದ ಪ್ರಶ್ನೆಯಾಗಿದ್ದರೆ ಖಂಡಿತ ಇದು ಸಾಧ್ಯ ಎಂಬುದು ನಮ್ಮ ಮಾತಾಗಿದೆ. ನಿಮ್ಮ ಆಹಾರದಲ್ಲಿಯೇ ನೈಸರ್ಗಿಕ ಪರಿಹಾರಗಳನ್ನು ತೆಗೆದುಕೊಳ್ಳುವ ಮೂಲಕ ಮದ್ಯಪಾನದಂತಹ ಚಟಕ್ಕೆ ಇತಿಶ್ರೀ ಹಾಡಬಹುದಾಗಿದೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಮದ್ಯಪಾನ ದೇಹಕ್ಕೆ ಉಂಟುಮಾಡುವ ಅಡ್ಡಪರಿಣಾಮಗಳನ್ನು ತಡೆಗಟ್ಟುವ ನೈಸರ್ಗಿಕ ಆಹಾರಗಳಿದ್ದು ಅವುಗಳ ಪ್ರಸ್ತುತಿಯನ್ನೇ ಇಂದಿನ ಲೇಖನದಲ್ಲಿ ನಾವು ಮಾಡಲಿರುವೆವು. ಎಂಟು ಪರಿಣಾಮಕಾರಿ ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇವುಗಳು ಮದ್ಯಪಾನ ಚಟದಿಂದ ಹೇಗೆ ವ್ಯಸನಿಗಳನ್ನು ಹೇಗೆ ಮುಕ್ತರಾಗಿಸುತ್ತದೆ ಎಂಬುನ್ನು ನೋಡೋಣ.

ಖರ್ಜೂರ

ಖರ್ಜೂರ

ಮದ್ಯಪಾನ ಸಮಸ್ಯೆಯನ್ನು ದೂರಮಾಡಲು ಇದು ಹೆಚ್ಚು ಪರಿಣಾಮಕಾರಿ ಆಹಾರವಾಗಿದೆ. ಉತ್ಕರ್ಷಣ ನಿರೋಧಿ ಅಂಶಗಳು ಇದರಲ್ಲಿದ್ದು ಪಿತ್ತಜನಕಾಂಗವನ್ನು ನಿರ್ವಿಷಗೊಳಿಸುವ ಟ್ಯಾನಿನ್‌ಗಳನ್ನು ಇದು ಹೊಂದಿದೆ. ನೀರಿನೊಂದಿಗೆ ಖರ್ಜೂರವನ್ನು ನಿತ್ಯವೂ ಸೇವಿಸಿ ಇದು ಮದ್ಯಪಾನ ಮಾಡಬೇಕು ಎನ್ನುವ ಬಯಕೆಗೆ ತಡೆಯೊಡ್ಡುತ್ತದೆ.

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್‌ನಲ್ಲಿರುವ ಆರೋಗ್ಯ ಪ್ರಯೋಜನಗಳು ಲೆಕ್ಕವಿಲ್ಲದ್ದಾಗಿದೆ. ಪೊಟಾಶಿಯಮ್ ಶ್ರೀಮಂತವಾಗಿರುವ ಕ್ಯಾರೆಟ್, ಕ್ಯಾಲ್ಶಿಯಮ್ ಮತ್ತು ಇತರ ಮಿನರಲ್‌ಗಳನ್ನು ಒಳಗೊಂಡಿದ್ದು ಮದ್ಯಪಾನ ಸೇವನೆಯ ಪ್ರಚೋದನೆಗೆ ತಡೆಯನ್ನೊಡ್ಡುತ್ತದೆ.

ಹಾಗಲಕಾಯಿ

ಹಾಗಲಕಾಯಿ

ಹಾಗಲಕಾಯಿ, ಮದ್ಯಪಾನ ಸೇವನೆಯ ಬಯಕೆಗೆ ತಡೆಹಾಕುವ ಫಲಪ್ರದ ತರಕಾರಿಯಾಗಿದೆ. ನಿತ್ಯವೂ ಮುಂಜಾನೆ ಹಾಗಲಕಾಯಿ ಜ್ಯೂಸ್ ಅನ್ನು ಸೇವಿಸಿ ಮದ್ಯಪಾನ ಚಟಕ್ಕೆ ಮಂಗಳ ಹಾಡಬಹುದು.

ಸೇಬು

ಸೇಬು

ನಿತ್ಯವೂ ಮದ್ಯಪಾನ ಸೇವಿಸುವುದು ದೇಹದಲ್ಲಿ ವಿಷವನ್ನು ಉಂಟುಮಾಡುತ್ತದೆ. ಇಂತಹ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಸೇಬು ಪ್ರಮುಖ ಪಾತ್ರ ವಹಿಸುತ್ತದೆ. ಮದ್ಯಪಾನ ವ್ಯಸನಿಗಳು ಸೇಬು ಅಥವಾ ಸೇಬಿನ ಜ್ಯೂಸ್ ಸೇವಿಸುವುದರಿಂದ ಮದ್ಯಪಾನ ಸೇವನೆಯಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಸೆಲೆರಿ ಜ್ಯೂಸ್

ಸೆಲೆರಿ ಜ್ಯೂಸ್

ರಕ್ತದಲ್ಲಿರುವ ವಿಷವನ್ನು ಪರಿಣಾಮಕಾರಿಯಾಗಿ ಹೊರಹಾಕುವ ನೈಸರ್ಗಿಕ ಕ್ಲೆನ್ಸರ್ ಆಗಿದೆ ಸೆಲೆರಿ ಜ್ಯೂಸ್. ಮದ್ಯಪಾನದೊಂದಿಗೆ ಇದು ಪರಿಣಾಮಕಾರಿಯಾಗಿ ಹೋರಾಡುತ್ತದೆ. ನಿತ್ಯವೂ ಈ ಜ್ಯೂಸ್ ಅನ್ನು ಸೇವಿಸುವುದು ಕುಡಿಯಬೇಕೆಂಬ ನಿಮ್ಮ ತುಡಿತವನ್ನು ನಿಗ್ರಹಿಸುತ್ತದೆ.

ದ್ರಾಕ್ಷಿ

ದ್ರಾಕ್ಷಿ

ಮದ್ಯಪಾನ ಸೇವಿಸಬೇಕೆಂಬ ನಿಮ್ಮ ಆಗ್ರಹವನ್ನು ಹತ್ತಿಕ್ಕುವಲ್ಲಿ ದ್ರಾಕ್ಷಿ ಕಮಾಲನ್ನೇ ಮಾಡುತ್ತದೆ. ದೇಹದ ಒಳಭಾಗವನ್ನು ಶುದ್ಧಮಾಡಲು ಈ ಹಣ್ಣು ಸಹಕಾರಿಯಾದುದು. ಅಂತೆಯೇ ಮದ್ಯಾಪಾನದಿಂದ ಉಂಟಾಗಿರುವ ಹಾನಿಯನ್ನೂ ಇದು ನಿಯಂತ್ರಿಸುತ್ತದೆ.

ಲಿಕೊರೈಸ್ ರೂಟ್

ಲಿಕೊರೈಸ್ ರೂಟ್

ಇದು ಹೆಚ್ಚು ಪರಿಣಾಮಕಾರಿಯಾಗಿರುವ ಮನೆಮದ್ದಾಗಿದ್ದು ಮದ್ಯಪಾನದೊಂದಿಗೆ ಹೋರಾಡುವ ಶಕ್ತಿಯನ್ನು ನಿಮಗೆ ಒದಗಿಸುತ್ತದೆ. ಪಿತ್ತಕೋಶ ಮತ್ತು ಉಸಿರಾಟ ಸಮಸ್ಯೆಗಳನ್ನು ನಿವಾರಿಸಲು ಇದು ಹೆಚ್ಚು ಪ್ರಯೋಜನಕಾರಿಯಾದುದು. ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವ ಲಿಕೊರೈಸ್ ಮದ್ಯಪಾನ ಸೇವನೆಯನ್ನು ನಿಮ್ಮಿಂದ ಸಂಪೂರ್ಣವಾಗಿ ದೂರಮಾಡುತ್ತದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಮುಖ್ಯ ನರವ್ಯವಸ್ಥೆಯನ್ನು ಶಕ್ತಹೀನಗೊಳಿಸುವ ಶಕ್ತಿಯನ್ನು ಮದ್ಯಪಾನದಂತಹ ದುಶ್ಚಟ ಹೊಂದಿದೆ. ಈ ಚಟವನ್ನು ದೂರಮಾಡಲು ಮುಖ್ಯ ನರವ್ಯವಸ್ಥೆಯನ್ನು ಬಲಪಡಿಸಬೇಕು. ಇದಕ್ಕಾಗಿ ಬಾದಾಮಿ ಎಣ್ಣೆಯನ್ನು ಸೇವಿಸುವುದು ಒಂದು ಪರಿಹಾರವಾಗಿದೆ. ಇದು ಅಮಿನೊ ಆಸಿಡ್, ವಿಟಮಿನ್‌ಗಳು, ಮಿನರಲ್ಸ್ ಮೊದಲಾದವುಗಳನ್ನು ಒಳಗೊಂಡಿದೆ. ಇದು ಸೂಕ್ತ ಮೆದುಳಿನ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಮದ್ಯಪಾನ ಮುಕ್ತರಾಗಲು ನಿತ್ಯವೂ ಬಾದಾಮಿ ಎಣ್ಣೆ ಸೇವಿಸಿ.

English summary

Home Remedies That Will Help You Stop Drinking Naturally

According to a recent study, more than 76 million people worldwide suffer from alcohol use disorder. It could be either alcohol dependence or abuse. In this article, we at Boldsky will let you know about 8 of the most effective home remedies that will help you stop drinking, naturally. Take a look at these:
X
Desktop Bottom Promotion