For Quick Alerts
ALLOW NOTIFICATIONS  
For Daily Alerts

ಹಿಮಾಲಯನ್ ಉಪ್ಪಿನ ಮಹತ್ವ ಹಾಗೂ ಆರೋಗ್ಯದ ಮಹಾತ್ಮೆ

By Super
|

ಉಪ್ಪು ಎಂಬುದು ಒಂದು ಆಹಾರ ತಯಾರಿಸಲು ಬಳಸುವ ಮೂಲ ವಸ್ತುಗಳಲ್ಲಿ ಒಂದು. ಉಪ್ಪಿಲ್ಲದ ಊಟ ಅದು ಸಿಹಿಯಾಗಿದ್ದಲ್ಲಿ ತಿನ್ನಲು ಪರವಾಗಿಲ್ಲ ಎನಿಸಿದರು, ಉಪ್ಪನ್ನು ಬಳಸಿ ಮಾಡಿದ ಆಹಾರದ ರುಚಿಯೇ ಬೇರೆ. ಊಟದ ರುಚಿಯನ್ನು ಅದ್ಭುತ ಎನಿಸಬಲ್ಲ ಒಂದು ಪದಾರ್ಥ ಅದು ಉಪ್ಪು, ಖಾರ ಹೆಚ್ಚಾದರು, ಕಡಿಮೆಯಾದವರು ತಿನ್ನುವವರು ಇದ್ದಾರೆ. ಆದರೆ ಉಪ್ಪು ಹೆಚ್ಚು ಕಡಿಮೆಯಾದರೆ ಅದೆಂತಹದೇ ಊಟವಾದರು ರುಚಿಯನ್ನು ನೀಡುವುದರಲ್ಲಿ ಸೋಲುತ್ತದೆ. ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು

ಉಪ್ಪನ್ನು ಹೆಚ್ಚಾಗಿ ತಿನ್ನಬೇಡಿ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ನಿಜ, ಆದರೆ ಹಿಮಾಲಯನ್ ಉಪ್ಪನ್ನು ನಿಮ್ಮ ಆಹಾರಕ್ಕೆ ಸೇರಿಸುವುದರ ಮೂಲಕ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹಿಮಾಲಯನ್ ಉಪ್ಪೇ, ಅರೆ ಇದು ಯಾವುದು? ಎಂದು ನೀವು ಅಚ್ಚರಿಪಡುತ್ತಿರಬಹುದಲ್ಲವೇ? ಗುಲಾಬಿ ಬಣ್ಣದ ಈ ಉಪ್ಪನ್ನು ಪ್ರತಿಯೊಂದು ಸೂಪರ್ ಮಾರ್ಕೆಟ್‌ನಲ್ಲಿ ಇದನ್ನು ನೀವು ನೋಡಬಹುದು.

ಈ ಉಪ್ಪು ತನ್ನಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಈ ಗುಲಾಬಿ ಬಣ್ಣದ ಉಪ್ಪು ರಕ್ತದೊತ್ತಡ, ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ, ಸೈನಸ್ ಅನ್ನು ಸಹ ಗುಣಪಡಿಸುವ ಅಂಶಗಳನ್ನು ತನ್ನಲ್ಲಿ ಹೊಂದಿರುತ್ತದೆ. ಹಾಗಾದರೆ ಹಿಮಾಲಯನ್ ಉಪ್ಪು ಹೇಗೆ ತಯಾರಾಗುತ್ತದೆ ಅಥವಾ ಸೃಷ್ಟಿಯಾಗುತ್ತದೆ? ನೋಡೋಣ ಬನ್ನಿ.

ಭೂಮಿಯ ಮೇಲಿನ ಪದರಗಳು ಅಥವಾ ಪ್ಲೇಟ್ ಟೆಕ್ಟಾನಿಕ್‌ಗಳು ಲಕ್ಷಾಂತರ ವರ್ಷಗಳಿಂದ ಸರಿಯಲು ಆರಂಭಿಸಿ ನಿರ್ಮಿಸಿದ ಉಬ್ಬುಗಳೇ ನಮಗೆ ಕಾಣುವ ಹಿಮಾಲಯ ಪರ್ವತಗಳು. ಸಮುದ್ರದಿಂದ ಆವಿಯಾದ ನೀರು ಬಾಷ್ಪೀಕರಣಗೊಂಡು ಸೂರ್ಯನ ಶಾಖದಿಂದ ಹರಳಿನ ರೂಪ ಪಡೆದುಕೊಳ್ಳುತ್ತವೆ. ಹೀಗೆ ಹರಳಿನ ರೂಪ ಪಡೆದುಕೊಂಡ ಆ ಪದಾರ್ಥವು ಹಿಮಾಲಯದಲ್ಲಿ ದೊರೆಯುತ್ತದೆ. ಹಾಗಾಗಿ ಅದನ್ನು ಹಿಮಾಲಯದ ಉಪ್ಪು ಎಂದು ಕರೆಯುತ್ತಾರೆ. ದೇಹದ ಸುವ್ಯವಸ್ಥೆಯ ಮೂಲವೇ ಉಪ್ಪು ಏಕೆ?

ಬ್ಲೀಚ್ ಮಾಡಿದ ಉಪ್ಪಿಗೆ ಹೋಲಿಸಿದರೆ ಹಿಮಾಲಯದ ಉಪ್ಪಿನಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ದೊರೆಯುತ್ತವೆ. ನಿಮ್ಮ ಊಹೆಗೂ ನಿಲುಕದ ಈ ಪ್ರಯೋಜನಗಳನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ ಬನ್ನಿ. ನೀವು ಸೇವಿಸುವ ಆಹಾರದಲ್ಲಿ ಈ ಹಿಮಾಲಯದ ಉಪ್ಪನ್ನು ಸೇರಿಸಲು ಇರುವ 8 ಕಾರಣಗಳು ಈ ಮುಂದಿನ ಸ್ಲೈಡ್‌ನಲ್ಲಿದೆ ವೀಕ್ಷಿಸಿ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಬ್ಲೀಚ್ ಮಾಡಲಾದ ಉಪ್ಪಿನ ಜೊತೆಗೆ ಈ ಗುಲಾಬಿ ಬಣ್ಣದ ಉಪ್ಪನ್ನು ಬೆರೆಸುವುದರಿಂದ ನಿಮ್ಮ ಜೀರ್ಣ ಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು. ಅತ್ಯಂತ ಮುಖ್ಯವಾಗಿ, ಇದು ನಿಮ್ಮ ಜೀರ್ಣ ಕ್ರಿಯೆಯ ವೇಗವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನಿಮ್ಮ ದೇಹದಲ್ಲಿನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದಾಗಿ ನಿಮ್ಮ ಹೊಟ್ಟೆ ಯಾವಾಗಲು ತುಂಬಿದ ಅನುಭವವನ್ನು ನೀಡುತ್ತದೆ. ಹಸಿವಾದ ಅನುಭವವನ್ನು ನೀಡುವುದಿಲ್ಲ.

ಅತ್ಯುತ್ತಮ ಡೀಟಾಕ್ಸ್ ಪದಾರ್ಥ

ಅತ್ಯುತ್ತಮ ಡೀಟಾಕ್ಸ್ ಪದಾರ್ಥ

ಹಿಮಾಲಯನ್ ಉಪ್ಪು ನಿಮಗೆ ಉತ್ತಮ ಡೀಟಾಕ್ಸಿಫೈಯರ್ ಆಗಿ ಕೆಲಸ ಮಾಡುತ್ತದೆ. ಈ ಉಪ್ಪು ನಿಮ್ಮ ತ್ವಚೆಯಲ್ಲಿರುವ ಟಾಕ್ಸಿನ್‌ಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ ಈ ಅದ್ಭುತ ಸ್ವಾಭಾವಿಕ ಉಪ್ಪು ನಿಮ್ಮ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಸಾಮಾನ್ಯವಾಗಿ ಉಪ್ಪು ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಅದಕ್ಕಾಗಿ ಹಲವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಲ್ಲಿ, ಉಪ್ಪನ್ನು ಬಳಸುವುದನ್ನು ನಿಲ್ಲಿಸುತ್ತಾರೆ. ಆದರೆ ಒಂದು ವಿಚಾರ ನೆನಪಿಡಿ, ಸ್ವಾಭಾವಿಕ ಮತ್ತು ಬ್ಲೀಚ್ ಮಾಡಲಾದ ಉಪ್ಪಿನ ನಡುವೆ ಒಂದು ವ್ಯತ್ಯಾಸವಿರುತ್ತದೆ. ಹಿಮಾಲಯದ ಉಪ್ಪು ನಿಮ್ಮ ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುವುದಿಲ್ಲ, ಆದ್ದರಿಂದ ಇದು ನಿಮಗೆ ಅಧಿಕ ರಕ್ತದೊತ್ತಡವನ್ನು ಉಂಟು ಮಾಡುವುದಿಲ್ಲ.

ದೇಹಕ್ಕೆ ವಿಶ್ರಾಂತಿ ಮತ್ತು ಚೈತನ್ಯ ನೀಡುತ್ತದೆ

ದೇಹಕ್ಕೆ ವಿಶ್ರಾಂತಿ ಮತ್ತು ಚೈತನ್ಯ ನೀಡುತ್ತದೆ

ಸುಸ್ತಾದಂತೆ ಅನಿಸುತ್ತಿದೆಯೇ? ಬಹುಶಃ ನಿಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಕೊರತೆಯಾಗಿರಬಹುದು. ನಿಮ್ಮ ದೇಹದಲ್ಲಿ ಚೈತನ್ಯವನ್ನು ಮತ್ತೆ ತರಲು ಒಂದೆರಡು ಹರಳು ಉಪ್ಪನ್ನು ನಿಮ್ಮ ಬಾಯಿಗೆ ಹಾಕಿಕೊಂಡು ಚೀಪಿ. ಇದರಿಂದ ನಿಮ್ಮ ಚೈತನ್ಯದ ಮಟ್ಟವು ಮತ್ತೆ ಬರುತ್ತದೆ.

ಸೈನಸ್‌ನಿಂದ ಮುಕ್ತರಾಗಲು

ಸೈನಸ್‌ನಿಂದ ಮುಕ್ತರಾಗಲು

ಹಿಮಾಲಯನ್ ಉಪ್ಪು ನಿಮ್ಮ ಮೂಗಿನಲ್ಲಿ ಕಲುಷಿತ ಗಾಳಿಯಿಂದ ಸೇರಿಕೊಂಡ ಕೊಳೆಯನ್ನು ಹೊರಹಾಕಲು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲ್ಲು ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ಮೂಗಿನ ನಾಳವನ್ನು ಶುಚಿಗೊಳಿಸಲು ಈ ಉಪ್ಪನ್ನು ಬಳಸಿ. ಇದು ಬ್ಲೀಚ್ ಮಾಡಿದ ಉಪ್ಪಿಗಿಂತ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆ.

ನಿದ್ದೆಯನ್ನು ಸುಧಾರಿಸುತ್ತದೆ

ನಿದ್ದೆಯನ್ನು ಸುಧಾರಿಸುತ್ತದೆ

ಒಂದು ವೇಳೆ ನಿಮಗೆ ನಿದ್ರಾಹೀನತೆಯ ಸಮಸ್ಯೆ ಇದ್ದಲ್ಲಿ, ಈ ಉಪ್ಪು ನಿಮ್ಮ ನೆರವಿಗೆ ಬರುತ್ತದೆ. ಇದಕ್ಕಾಗಿ ಒಂದು ಸಣ್ಣ ಬಟ್ಟಲನ್ನು ತೆಗೆದುಕೊಂಡು, ಅದರಲ್ಲಿ ಹಿಮಾಲಯದ ಉಪ್ಪು ಮತ್ತು ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಇವೆರಡನ್ನು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಈಗ ಇದನ್ನುನಿಮ್ಮ ನಾಲಿಗೆಯ ಮೇಲೆ ಇರಿಸಿ, ಉಪ್ಪು ಕರಗುವವರೆಗೆ ಕಾಯಿರಿ. ಈ ಮಿಶ್ರಣದಲ್ಲಿ ಪೊಟಾಶಿಯಂ ಮತ್ತು ಮೆಗ್ನಿಷಿಯಂ ಇದ್ದು,ಇವು ನಿಮಗೆ ಉತ್ತಮ ನಿದ್ದೆಯನ್ನು ನೀಡಲು ಸಹಕರಿಸುತ್ತದೆ.

ಆಸಿಡಿಟಿಯಿಂದ ಬಳಲುವಾಗ

ಆಸಿಡಿಟಿಯಿಂದ ಬಳಲುವಾಗ

ಹೊಟ್ಟೆಯಲ್ಲಿರುವ ಆಸಿಡಿಟಿಯನ್ನು ನಿವಾರಿಸಲು ಈ ಉಪ್ಪು ಸಹಾಯ ಮಾಡುತ್ತದೆ. ಇದಕ್ಕಾಗಿ ಈ ಉಪ್ಪನ್ನು ಸ್ವಲ್ಪ ನೀರಿನ ಜೊತೆಗೆ ಬೆರೆಸಿಕೊಂಡು ಸೇವಿಸಿ. ಇದು ದೇಹದಲ್ಲಿರಿವ ಪಿಎಚ್ ಮೌಲ್ಯವನ್ನು ಸಹ ಸಮತೋಲನ ಮಾಡುತ್ತದೆ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ.

ಆರ್ಟೆರಿಸ್‌ಗೆ ಒಳ್ಳೆಯದು

ಆರ್ಟೆರಿಸ್‌ಗೆ ಒಳ್ಳೆಯದು

ಈ ಉಪ್ಪನ್ನು ಬಳಸುವುದರಿಂದ ನಿಮ್ಮ ಆರ್ಟೆರಿಗಳು ಆರೋಗ್ಯಕರವಾಗಿರುತ್ತವೆ. ಇದು ನಿಮ್ಮ ಆರ್ಟೆರಿಗಳಲ್ಲಿನ ಸ್ಪೈಡರ್ ವೇನ್ ಅಥವಾ ವೆರಿಕೋಸ್ ವೇನ್‌‍ಗಳಿಗೆ ಯಾವುದೇ ಹಾನಿಯನ್ನು ಮಾಡುವ ಅಂಶಗಳನ್ನು ಹೊರ ಹಾಕುತ್ತದೆ.

English summary

Himalayan Salt & It's Many Health Benefits

Salt is the basic ingredient you need to add in any meal while preparing it. It is salt that enhances the taste of the food, and it is salt that gives a whole new taste. If you've been advised not to add salt to your food, it is safe to say that a little bit of Himalayan salt will do you good. so, here are reasons why you should sprinkle this salt into your food, take a look:
X
Desktop Bottom Promotion