For Quick Alerts
ALLOW NOTIFICATIONS  
For Daily Alerts

ಪಾನೀಯದಲ್ಲಿ ನೈಸರ್ಗಿಕ ಸತ್ವ ಸೇರಿಸಿ, ಆರೋಗ್ಯಕ್ಕೆ ಹಿತಕರ

By Manu
|

ಪಾನೀಯಗಳನ್ನು ಹೆಚ್ಚಿನವರು ದಣಿವನ್ನು ನಿವಾರಿಸಿಕೊಳ್ಳಲು ಸೇವಿಸುತ್ತಾರೆ. ರೋಗಿಗಳು ದೇಹದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸೇವಿಸುತ್ತಾರೆ. ಇನ್ನೂ ಕೆಲವರಿಗೆ ತಂಪಾದ ಪಾನೀಯ ಸೇವಿಸುವುದೆಂದರೆ ತುಂಬಾ ಪ್ರಿಯವೆನಿಸುತ್ತದೆ. ಅಂಗಡಿಗಳಲ್ಲಿ ನಾನಾ ರೀತಿಯ ಸಂಸ್ಕರಿಸಿದ ಪಾನೀಯಗಳು ಲಭ್ಯವಿದೆ. ಅನೇಕ ಜನರು ಹಣ್ಣಿನ ಅಥವಾ ತರಕಾರಿಗಳ ಪಾನೀಯ ಸೇವಿಸುವ ಬದಲು ಸಂಸ್ಕರಿಸಿದ ಪಾನೀಯಗಳನ್ನು ಸೇವಿಸುತ್ತಿದ್ದಾರೆ.

ಈ ರೀತಿಯ ರಾಸಾಯನಿಕಯುಕ್ತ ರುಚಿರಹಿತ ಪಾನೀಯಗಳ ಸೇವನೆಯಿಂದ ನಿಮ್ಮ ಜೀವಕೋಶಗಳು ಪ್ರತಿಕ್ರಯಿಸಿ ನಿಮಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಹಾಗಾಗಿ ನೀವು ಸೇವಿಸುವ ಪಾನೀಯದಲ್ಲಿ ನೈಸರ್ಗಿಕ ಸತ್ವಗಳನ್ನು ಬೆರೆಸಿದರೆ ನಿಮ್ಮ ಆರೋಗ್ಯಕ್ಕೆ ಇನ್ನೂ ಹೆಚ್ಚಿನ ಉಪಯೋಗಗಳಾಗುತ್ತವೆ. ಅದರಲ್ಲೂ ನೀವು ಮನೆಯಲ್ಲಿಯೇ ಹಣ್ಣುಗಳು ಮತ್ತು ತರಕಾರಿಗಳಿಂದ ತಯಾರಿಸುವ ಪಾನೀಯಗಳಿಗೆ ನಾವು ತಿಳಿಸುವ ಐದು ನೈಸರ್ಗಿಕ ಪದಾರ್ಥಗಳನ್ನು ಬೆರೆಸಿಕೊಂಡು ಸೇವಿಸಿದರೆ ನಿಮ್ಮ ಆರೋಗ್ಯವು ಇನ್ನೂ ಹೆಚ್ಚು ಉತ್ತಮಗೊಳ್ಳುತ್ತದೆ ಎಂದು ಪೌಷ್ಠಿಕಾಂಶ ತಜ್ಞರು ಖಚಿತಪಡಿಸಿದ್ದಾರೆ. ಇದರಿಂದ ನಿಮ್ಮ ದೈಹಿಕ ಸಾಮರ್ಥ್ಯ ಹೆಚ್ಚಾಗಿ ಇತರೆ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತವೆ. ವಿವರಗಳಿಗೆ ಮುಂದೆ ಓದಿ..

ಕೊತ್ತಂಬರಿ ಬೀಜ

ಕೊತ್ತಂಬರಿ ಬೀಜ

ಕೊತ್ತಂಬರಿ ಬೀಜದ ಪುಡಿಯಲ್ಲಿ ದೇಹದಲ್ಲಿನ ಸಕ್ಕರೆ ಅಂಶವನ್ನು ಸಮತೋಲನದಲ್ಲಿಡುವ ವಿಶಿಷ್ಟ ಗುಣವಿದ್ದು, ದಿನೇ ದಿನೇ ಉಂಟಾಗುವ ಅಧಿಕ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರ ಸೇವನೆಯಿಂದ ನಿಮ್ಮ ರಕ್ತದಲ್ಲಿರುವ ಹಾನಿಕಾರಕ ಅನುಪಯುಕ್ತ ಅಂಶವನ್ನು ಹೊರಹಾಕಿ ದೇಹವನ್ನು ಸದೃಢವಾಗಿಸಲು ನೆರವಾಗುತ್ತದೆ.

ಪುದೀನಾ

ಪುದೀನಾ

ಒಂದಿಷ್ಟು ಪುದಿನಾ ಸೊಪ್ಪನ್ನು ಜಜ್ಜಿ, ಅದನ್ನು ನೀರಿನಲ್ಲಿ ನೆನೆಯಲು ಬಿಡಿ. ಒಂದು ಗಂಟೆ ನೆನೆದ ನಂತರ ನೀವು ಆಹ್ಲಾದಕರವಾದ ಮತ್ತು ತಂಪಾದ ರುಚಿಯನ್ನು ಹೊಂದಿರುವ ನೀರನ್ನು ಪಡೆಯುವಿರಿ.

ತುಳಸಿ ಎಲೆ

ತುಳಸಿ ಎಲೆ

ತಾಜಾ, ಹಸಿರಾದ ಮತ್ತು ಸುವಾಸನೆಯುಕ್ತ ತುಳಸಿ ಎಲೆಗಳಲ್ಲಿ ಹಿತಕರ ಅನುಭವ ನೀಡುವ ಗುಣಲಕ್ಷಣವಿದ್ದು, ಒತ್ತಡ ಮತ್ತು ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ ಸತ್ವ, ಅನುಪಯುಕ್ತ ಜೀವಕೋಶಗಳ ನಾಶಕ ಸತ್ವ ಮತ್ತು ಶಿಲೀಂಧ್ರ ನಿರೋಧಕ ಸತ್ವವು ಹೇರಳವಾಗಿದ್ದು, ಅನೇಕ ಸೋಂಕಿನ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ಗಿಡಮೂಲಿಕೆಗಳ ರಾಣಿ 'ತುಳಸಿ'-ಆರೋಗ್ಯದ ಸಂಜೀವಿನಿ

ಪಾರ್ಸ್ಲಿ

ಪಾರ್ಸ್ಲಿ

ಪಾರ್ಸ್ಲಿಯನ್ನು ಇದನ್ನು ಸಾಮಾನ್ಯವಾಗಿ ಅಜ್ವನಾ ಎಂದು ಸಹ ಕರೆಯುತ್ತಾರೆ, ಇದರಲ್ಲಿರುವ ಕ್ಯಾರೊಟೀನ್ಸ್, ಪೌಷ್ಠಿಕಾಂಶಗಳು ಮತ್ತು ಕ್ಲೊರೊಫಿಲ್ ಸತ್ವಗಳು ಯಥೇಚ್ಛವಾಗಿದ್ದು, ನಿಮ್ಮ ಕೆಂಪು ರಕ್ತ ಕಣಗಳನ್ನು ನವೀಕರಿಸಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ತಕ್ಷಣಕ್ಕೆ ದೈಹಿಕ ಶಕ್ತಿಯು ಗಣನೀಯವಾಗಿ ಏರಿಕೆಯಾಗುತ್ತದೆ. ಇದು ನಿಮ್ಮ ಮೂತ್ರ ಕೋಶದ ಸೋಂಕನ್ನು ನಿವಾರಿಸಲು ಹೆಚ್ಚು ನೆರವಾಗುತ್ತದೆ.

ರೋಸ್‌ಮೆರಿ

ರೋಸ್‌ಮೆರಿ

ರೋಸ್‌ಮೆರಿಯಲ್ಲಿ ವಿಟಮಿನ್ ಇ ಸತ್ವವು ಹೇರಳವಾಗಿದ್ದು, ಇದು ನಿಮ್ಮ ಚರ್ಮದ ಆರೈಕೆಗೆ ಹೆಚ್ಚು ಉಪಯುಕ್ತ. ಇದರಲ್ಲಿರುವ ಉತ್ಕರ್ಷಣಾ ನಿರೋಧಕ ಸತ್ವವು ನಿಮ್ಮ ಪಾನೀಯಕ್ಕೆ ಹೊಸ ಹುರುಪನ್ನು ನೀಡಿ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡುತ್ತದೆ.

ಜೀರಿಗೆಯ ಸ್ವಾದ

ಜೀರಿಗೆಯ ಸ್ವಾದ

ಸಾಮಾನ್ಯವಾಗಿ ಕರಾವಳಿ ಕಡೆ ಬಿಸಿ ನೀರಿಗೆ ಜೀರಿಗೆಯನ್ನು ಹಾಕುವುದು ಒಂದು ಸಂಪ್ರದಾಯ. ಜೀರಿಗೆ ಮಿಶ್ರಿತ ನೀರು ನಿಮ್ಮ ಗಂಟಲು ಕಟ್ಟುವುದನ್ನು ನಿವಾರಿಸುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ. ಮಲಗುವ ಮೊದಲು ಈ ನೀರನ್ನು ಸೇವಿಸುವುದರಿಂದ ನಿಮ್ಮ ನರಗಳು ತಟಸ್ಥಗೊಳ್ಳುತ್ತವೆ ಮತ್ತು ನಿದ್ದೆಯು ಚೆನ್ನಾಗಿ ಬರುತ್ತದೆ.

ಲಿಂಬೆ ರಸ

ಲಿಂಬೆ ರಸ

ನಿಂಬೆರಸವನ್ನು ಹಿಂಡಿ ನೀರಿಗೆ ರುಚಿಯನ್ನು ತರಲು ಮಾಡಬಹುದಾದ ಮತ್ತೊಂದು ಸುಲಭವಾದ ವಿಧಾನ, ನೀರಿಗೆ ನಿಂಬೆಹಣ್ಣನ್ನು ಹಿಂಡುವುದು. ಇದರಿಂದ ನೀರಿನ ರುಚಿ ಉತ್ತಮಗೊಳ್ಳುತ್ತದೆ. ಇದರಿಂದಾಗಿ ನೀವು ಸ್ವಲ್ಪ ಹೆಚ್ಚಿನ ತಾಜಾ ವಿಟಮಿನ್ ಸಿಯನ್ನು ಪಡೆದುಕೊಳ್ಳಬಹುದು.

English summary

Herbs that will boost your juice's healing power

Herbs can sure lend a refreshing taste to your fresh juices. What you may not be aware is that they can add additional health benefits to your fresh juices too. Here are five herbs recommended by nutritionist Khusboo Sahijwani that will boost the healing power of the fruit and vegetable juice you make at home.
Story first published: Thursday, February 4, 2016, 15:10 [IST]
X
Desktop Bottom Promotion