Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆಯಲ್ಲಿ ಕಣ್ತುಂಬ ನಿದ್ರೆಗೆ, ಆಹಾರಕ್ರಮ ಹೀಗಿರಲಿ
ಮನೆಯಿಂದ ಹೊರಗಡೆ ಕಾಲಿಟ್ಟರೆ ಸಾಕು ಬಿಸಿಲಿನ ತಾಪಕ್ಕೆ ಮೈಯೆಲ್ಲಾ ಒದ್ದೆಯಾಗಿ ಯಾಕಪ್ಪಾ ಇಂತಹ ಸೆಕೆ ಎಂದು ಹೇಳುತ್ತಾ ಹತ್ತಿರದ ಅಂಗಡಿಗೆ ಹೋಗಿ ತಂಪು ಪಾನೀಯವನ್ನು ಕುಡಿಯುವುದು ಇಂದಿನ ದಿನಗಳಲ್ಲಿ ಸಹಜವಾಗಿದೆ. ಯಾಕೆಂದರೆ ಈ ವರ್ಷ ರಾಷ್ಟ್ರದೆಲ್ಲೆಡೆ ಬಿಸಿಲಿನ ತಾಪ ತಡೆಯಲು ಸಾಧ್ಯವಿರದಷ್ಟು ಹೆಚ್ಚಾಗಿದೆ. ಕೆಲವರು ಬಿಸಿಲಿನ ತಾಪಕ್ಕೆ ನಲುಗಿ ಸತ್ತು ಹೋಗಿದ್ದಾರೆ.
ರಾಜ್ಯದಲ್ಲೂ ಕೂಡ ಈಗಾಗಲೇ ಕೆಲವು ಕಡೆ ಗರಿಷ್ಠ ತಾಪಮಾನ ದಾಖಲಾಗಿದೆ. ದಿನವಿಡಿ ಬಿಸಿಲಿನ ತಾಪವೆಂದು ರಾತ್ರಿಯಾಗಲಿ ಎಂದು ಬಯಸಿದರೆ ಆಗಲೂ ಸೆಕೆ ತಡೆಯಲು ಸಾಧ್ಯವಾಗುತ್ತಿಲ್ಲ. ಸೆಕೆಯಿಂದಾಗಿ ನಿದ್ರೆಯಿಲ್ಲದೆ ರಾತ್ರಿ ಕಳೆಯುವಂತಾಗಿದೆ. ಆದರೆ ರಾತ್ರಿ ವೇಳೆ ನೀವು ತಿನ್ನುವಂತಹ ಆಹಾರ ಕೂಡ ದೇಹದ ಉಷ್ಣತೆ ಹೆಚ್ಚಾಗಲು ಕಾರಣವಾಗಿದೆ. ಬೇಸಿಗೆಯಲ್ಲಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕೆಂದರೆ ಆಗ ನೀವು ಪೋಷಕಾಂಶ ಹಾಗೂ ದೇಹಕ್ಕೆ ನೀರಿನಾಂಶವನ್ನು ಒದಗಿಸಿಕೊಡಬಲ್ಲ ಲಘು ಆಹಾರವನ್ನು ಸೇವನೆ ಮಾಡಬೇಕು. ಈ ಬೇಸಿಗೆಯಲ್ಲಿ ನಿಮಗೆ ಸಕತ್ ನಿದ್ದೆ ಕೊಡಬಲ್ಲ ಕೆಲವೊಂದು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ, ಮುಂದೆ ಓದಿ...

ಉದ್ದಗಿನ ಸೋರೆ ಕಾಯಿ
ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಾಪಾಡಲು ಸೋರೆಕಾಯಿ ಒಳ್ಳೆಯ ತರಕಾರಿ. ಬಾಟಲಿ ಗಾತ್ರದಂತೆ ಇರುವ ಇದು ತೆಳು ಹಸಿರು ಬಣ್ಣವನ್ನು ಹೊಂದಿರುತ್ತದೆ. ರಾತ್ರಿ ವೇಳೆ ಇದನ್ನು ತಿಂದರೆ ಇದರಲ್ಲಿನ ನೀರಿನಾಂಶವು ದೇಹದಲ್ಲಿನ ನೀರಿನ ಮಟ್ಟವನ್ನು ಕಾಪಾಡುತ್ತದೆ. ರಾತ್ರಿ ನಿದ್ರಿಸುವ ಮೊದಲು ಇದನ್ನು ತಿಂದರೆ ಆರಾಮವಾಗಿ ನಿದ್ರೆ ಮಾಡಬಹುದು.

ಮುಳ್ಳುಸೌತೆಕಾಯಿ
ಬೇಸಿಗೆಯಲ್ಲಿ ರಾತ್ರಿ ಊಟದಲ್ಲಿ ಈ ತರಕಾರಿಯನ್ನು ನೀವು ಅಗತ್ಯವಾಗಿ ಬಳಸಿಕೊಳ್ಳಲೇಬೇಕು. ಮುಳ್ಳುಸೌತೆಯಲ್ಲಿ ಶೇಕಡಾ 96ರಷ್ಟು ನೀರಿನಾಂಶವಿರುತ್ತದೆ ಮತ್ತು ಇದು ಜೀರ್ಣಾಂಗ ವ್ಯವಸ್ಥೆಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ರಾತ್ರಿಯ ಸುಖನಿದ್ದೆಗೆ ನೆರವಾಗುತ್ತದೆ.

ಕುಂಬಳಕಾಯಿ
ಪೊಟಾಶಿಯಂ ಮತ್ತು ನಾರಿನಾಂಶದಿಂದ ಸಮೃದ್ಧವಾಗಿರುವ ಕುಂಬಳಕಾಯಿಯಲ್ಲಿ ದೇಹವನ್ನು ತಂಪುಗೊಳಿಸುವ ಗುಣಗಳು ಇದೆ. ಇದು ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಬೇಸಿಗೆಗೆ ಒಳ್ಳೆಯ ಆಹಾರ.

ಸೋರೆಕಾಯಿ
ಬೇಸಿಗೆಯಲ್ಲಿ ಇದನ್ನು ಬಳಸಿದರೆ ಅತ್ಯುತ್ತಮ ಉಪಯೋಗವನ್ನು ಪಡೆದುಕೊಳ್ಳಬಹುದು. ಇದು ಹೊಟ್ಟೆಗೆ ತುಂಬಾ ಒಳ್ಳೆಯದು ಮತ್ತು ಬೇಗನೆ ಜೀರ್ಣವಾಗುತ್ತದೆ. ಬೇಸಿಯಲ್ಲಿ ರಾತ್ರಿ ವೇಳೆ ಇದನ್ನು ಸೇವಿಸುವುದರಿಂದ ನಿಮಗೆ ಅಜೀರ್ಣದ ಸಮಸ್ಯೆ ಕಾಡುವುದಿಲ್ಲ.

ಬೇಯಿಸಿದ ಆಲೂಗಡ್ಡೆ
ಕಾರ್ಬೋಹೈಡ್ರೆಡ್ ನಿಂದ ತುಂಬಿರುವ ಬಟಾಟೆಯನ್ನು ಬೇಯಿಸಲು ಹಾಗೂ ತಿನ್ನಲು ಸುಲಭ. ಇದು ದೇಹದಲ್ಲಿನ ಉಷ್ಣತೆಯನ್ನು ಹೊರಹಾಕಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ನೆರವಾಗುತ್ತದೆ.

ಮೊಸರು
ಮೊಸರಿನಲ್ಲಿ ಹೆಚ್ಚಿನ ಮಟ್ಟದ ಪೋಷಕಾಂಶ ಹಾಗೂ ಕ್ಯಾಲ್ಸಿಯಂ ಒಳಗೊಂಡಿದೆ. ರಾತ್ರಿ ಊಟಕ್ಕೆ ಮೊಸರನ್ನು ಬಳಸಿಕೊಂಡರೆ ಆಗ ರಾತ್ರಿಯಿಡಿ ಯಾವುದೇ ಅಡೆತಡೆಯಿಲ್ಲದೆ ನೀವು ಸರಿಯಾಗಿ ನಿದ್ರೆ ಮಾಡಬಹುದು. ಬೇಸಿಗೆಯಲ್ಲಿ ಇದನ್ನು ದಿನಾಲೂ ಸೇವಿಸುತ್ತಾ ಇದ್ದರೆ ಅದು ನಿಮ್ಮ ದೇಹವನ್ನು ತಂಪಾಗಿಡುತ್ತದೆ. ಹಗಲು ಮತ್ತು ರಾತ್ರಿ ವೇಳೆ ನೀವು ಹೆಚ್ಚಿನ ನೀರನ್ನು ಸೇವಿಸುತ್ತಾ ಇದ್ದರೆ ಅದು ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಬೇಸಿಗೆಯಲ್ಲಿ ನೀರಿನಾಂಶವಿರುವ ಆಹಾರವನ್ನು ಸೇವಿಸಿ ಸರಿಯಾಗಿ ನಿದ್ರೆ ಮಾಡಿ.



Click it and Unblock the Notifications
