For Quick Alerts
ALLOW NOTIFICATIONS  
For Daily Alerts

ದೇಹದ ದುರ್ಗಂಧ ನಿವಾರಣೆಗೆ ಪ್ರಯತ್ನಿಸಿ 'ಮೆಂತೆ ಚಹಾ'

|

ಸಾಮಾನ್ಯವಾಗಿ ಕೆಲವರ ಮೈ ಬೆವರು ಹೆಚ್ಚು ಕಮಟು ವಾಸನೆಯನ್ನು ಹೊಂದಿರುತ್ತದೆ. ಉತ್ತಮ ಗುಣಮಟ್ಟದ ಸೋಪು ಬಳಸಿ ಸ್ನಾನ ಮಾಡಿದರೂ, ಮೈಗೆ ಹಚ್ಚುವ ಸುಗಂಧ ಪೂಸಿದರೂ ಕೆಲವು ಗಂಟೆಗಳ ಬಳಿಕ ಇದರ ಪ್ರಭಾವ ಇಲ್ಲವಾಗುತ್ತದೆ. ಸಾಮಾನ್ಯವಾಗಿ ದಿನದ ಹೆಚ್ಚಿನ ಹೊತ್ತು ಹೊರಗೇ ಇರಬೇಕಾದಾಗ ಈ ತೊಂದರೆ ಬಹಳವಾಗಿ ಕಾಡುತ್ತದೆ. ಅದರಲ್ಲೂ ಮಹಿಳೆಯರಿಗೆ ಈ ತೊಂದರೆ ಇನ್ನೂ ಹೆಚ್ಚು ಕಾಡುತ್ತದೆ.

ದುರ್ಗಂಧದ ಕಾರಣ ಅಕ್ಕಪಕ್ಕದವರು ಮೂಗು ಮುಚ್ಚಿಕೊಳ್ಳುವುದು ಮುಜುಗರ ತರಿಸುತ್ತದೆ. ಒಂದು ವೇಳೆ ಈ ಸ್ಥಿತಿ ನಿಮಗೂ ಎದುರಾಗಿದ್ದರೆ ದುಬಾರಿ ಸುಗಂಧ, ಪರ್ಫ್ಯೂಮ್ ಎಂದೆಲ್ಲಾ ಮಾರುಕಟ್ಟೆ ಅಲೆಯುವ ಬದಲು ಈ ತೊಂದರೆಯನ್ನು ಒಳಗಿನಿಂದಲೇ ನಿವಾರಿಸುವ ಸುಲಭವಾದ ಮನೆಮದ್ದನ್ನು ಅನುಸರಿಸಬಹುದು-ಅದೇ ಮೆಂತೆ.

Fenugreek tea — the best natural remedy to fight body odour

ಶರೀರದ ದುರ್ಗಂಧಕ್ಕೆ ಪ್ರಮುಖ ಕಾರಣ ನಮ್ಮ ಶರೀರದಲ್ಲಿ ಸಂಗ್ರಹವಾಗುವ ವಿಷಕಾರಿ ವಸ್ತುಗಳು ಹಾಗೂ ಗಟ್ಟಿಯಾಗಿರುವ ಕಫ. ಮೂಗಿನಿಂದ ಪ್ರಾರಂಭವಾಗಿ ಶ್ವಾಸನಾಳ, ಶ್ವಾಸಕೋಶ, ಮೂತ್ರಕೋಶ, ಮೂತ್ರನಾಳ ಮತ್ತು ವಿಸರ್ಜನಾ ನಾಳಗಳವರೆಗೆ ರಕ್ತದಿಂದ ಶೋಧಿಸಲ್ಪಟ್ಟ ವಿಷಕಾರಿ ವಸ್ತುಗಳು ದೇಹದಲ್ಲಿ ಉಳಿದಿರುತ್ತವೆ. ರಕ್ತದ ಮೂಲಕ ಇವುಗಳ ಕೊಂಚ ಅಂಶ ದೇಹದ ಎಲ್ಲೆಡೆ ಹರಡುತ್ತವೆ. ಬಳಿಕ ಮೂತ್ರ ಮತ್ತು ಬೆವರಿನ ಮೂಲಕ ಹೊರಹಾಕಲ್ಪಡುತ್ತವೆ. ಆದರೆ ಕೊಂಚವೇ ಕೊಂಚ ಬೆವರಿನಲ್ಲಿ ಉಳಿದಿರುತ್ತದೆ.

ದಿನದ ಮುಂದಿನ ಹೊತ್ತಿನಲ್ಲಿ ಇನ್ನೂ ಹೆಚ್ಚಿನ ವಿಷಕಾರಿ ವಸ್ತುಗಳ ಸಂಗ್ರಹ ಹೆಚ್ಚುತ್ತಿದ್ದಂತೆಯೇ ಇದು ಬೆವರಿನಲ್ಲಿ ಉಳಿದಿದ್ದ ದ್ರವವನ್ನು ಹೊರದೂಡಿ ಅಲ್ಲಿ ಸಂಗ್ರಹವಾಗುತ್ತದೆ. ಬೆವರಿನ ದುರ್ಗಂಧ ಕೊಂಚ ತಡವಾಗಿ ಪ್ರಾರಂಭವಾಗಲು ಇದೇ ಕಾರಣ. ಈ ಪ್ರಮಾಣ ಪಾದ, ಕಂಕುಳು, ಬೆನ್ನಿನ ಕೆಳಭಾಗ, ಕುತ್ತಿಗೆ ಮೊದಲಾದ ಅಂಗಗಳಲ್ಲಿ ಹೆಚ್ಚು, ಇದಕ್ಕಾಗಿ ಮೆಂತೆ ಟೀ ಸೇವನೆ ಅತ್ಯುತ್ತಮ ಪರಿಹಾರವಾಗಿದೆ. ಮೆಂತೆಯಲ್ಲಿರುವ ಪೋಷಕಾಂಶಗಳು ಈ ಉಳಿದಿರುವ ಬೆವರನ್ನೂ ಹೊರದೂಡಿ ಅಲ್ಲಿ ಅಪ್ಪಟ ನೀರಿನ ಸಂಗ್ರಹ ಹೆಚ್ಚುವಂತೆ ನೋಡಿಕೊಳ್ಳುತ್ತದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಬೆವರಿನಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗದಂತೆ ನೋಡಿಕೊಳ್ಳುತ್ತದೆ ಹಾಗೂ ಸೋಂಕು ಉಂಟಾಗದೇ, ತನ್ಮೂಲಕ ಬೆವರಿನಲ್ಲಿ ದುರ್ಗಂಧ ಇರದಂತೆ ನೋಡಿಕೊಳ್ಳುತ್ತದೆ.

ಮೆಂತೆ ಟೀ ಮಾಡುವುದು ಹೇಗೆ?
ಕಾಲು ಲೀಟರ್ ನೀರಿಗೆ ಒಂದು ಚಿಕ್ಕ ಚಮಚ ಮೆಂತೆ ಸೇರಿಸಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ಚಿಕ್ಕದಾಗಿಸಿ. ಈ ನೀರು ಅರ್ಧದಷ್ಟಾಗುವವರೆಗೂ ಕುದಿಸಿ. ಈ ಚಹಾವನ್ನು ತಣಿಸಿ ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಮುಂಜಾನೆ ಎದ್ದು ಮುಖ ತೊಳೆದುಕೊಂಡ ಬಳಿಕ ಈ ನೀರನ್ನು ಕೊಂಚವೇ ಬಿಸಿ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಇಡಿಯ ದಿನ ದೇಹದಿಂದ ದುರ್ಗಂಧ ಬರದೇ ಇರಲು ಸಾಧ್ಯವಾಗುತ್ತದೆ.

ದೇಹದ ವಿಷಕಾರಿ ವಸ್ತುಗಳು ಸುಲಭವಾಗಿ ನಿವಾರಣೆಯಾಗುವ ಕಾರಣ ಆರೋಗ್ಯ ವೃದ್ಧಿಸುತ್ತದೆ ಹಾಗೂ ಮೂತ್ರದ ತೊಂದರೆಗಳು ನಿವಾರಣೆ ಯಾಗುತ್ತವೆ. ಉರಿಮೂತ್ರಕ್ಕೆ ಈ ಟೀ ಅತ್ಯುತ್ತಮವಾಗಿದೆ. ಇನ್ನೊಂದು ವಿಧಾನವೆಂದರೆ ಇಡಿಯ ರಾತ್ರಿ ಒಂದು ಲೋಟ ತಣ್ಣೀರಿನಲ್ಲಿ ಒಂದು ಚಿಕ್ಕ ಚಮಚ ಮೆಂತೆ ಹಾಕಿ ನೆನೆಸಿಡಿ ಬೆಳಿಗ್ಗೆದ್ದ ಬಳಿಕ ಕೊಂಚವೇ ಬಿಸಿ ಮಾಡಿ ಸೋಸಿ ಪ್ರಥಮವಾಗಿ ಕುಡಿಯಿರಿ. ಇದರಿಂದ ಮೈ ದುರ್ಗಂಧದ ಜೊತೆಗೇ ಬಾಯಿಯ ದುರ್ಗಂಧವೂ ಇಲ್ಲವಾಗುತ್ತದೆ.

English summary

Fenugreek tea — the best natural remedy to fight body odour

Body odour — even after you have taken a shower with a fragrant soap, few hours later you do not smell so ‘fresh’. Be it after hours of travelling or staying indoors for the entire day, unpleasant body odour is quite common, that not only makes you,but also the people around you uncomfortable. If this is the case with you, rather than investing in those expensive perfumes to mask body odour, here is a simple natural remedy you can try — fenugreek seeds.
Story first published: Tuesday, February 16, 2016, 15:23 [IST]
X
Desktop Bottom Promotion