For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!

By Manu
|

ಭೂಮಿ ಮೇಲೆ ಸಿಗುವ ಪ್ರತಿಯೊಂದು ವಸ್ತುವೂ ಮಾನವನ ಉಪಯೋಗಕ್ಕೆ ಬರುವಂತದ್ದಾಗಿದೆ. ಅದರಲ್ಲೂ ಹಣ್ಣು ಹಾಗೂ ತರಕಾರಿ ಜನರಿಗೆ ತುಂಬಾ ಹತ್ತಿರವಾಗಿರುವಂತಹದ್ದು. ಮಾಂಸಹಾರಿಗಳಾಗಳಲಿ ಅಥವಾ ಸಸ್ಯಹಾರಿಗಳಾಗಲಿ ಹಣ್ಣು ಹಾಗೂ ತರಕಾರಿಗಳನ್ನು ಬಳಸಿಯೇ ಬಳಸುತ್ತಾರೆ. ಹಣ್ಣುಗಳಲ್ಲಿ ಇರುವಂತಹ ಕೆಲವೊಂದು ವಿಟಮಿನ್, ಖನಿಜಾಂಶಗಳು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸಿ ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ

ಹೆಚ್ಚಿನ ಹಣ್ಣುಗಳಲ್ಲಿ ವಿಟಮಿನ್, ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ, ಮೆಗ್ನಿಶಿಯಂ, ಕಬ್ಬಿಣಾಂಶ ಮತ್ತು ಇತರ ಕೆಲವೊಂದು ಪೋಷಕಾಂಶಗಳಿವೆ. ಕೆಲವೊಂದು ಹಣ್ಣುಗಳು ದ್ವಿಪಾತ್ರದಲ್ಲಿ ಕೆಲಸ ಮಾಡುತ್ತವೆ. ಇದನ್ನು ಹಣ್ಣು ಹಾಗೂ ತರಕಾರಿಯಾಗಿ ಬಳಸುತ್ತಾರೆ. ಇಂತಹ ಜಾತಿಗೆ ಸೇರುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಒಂದಾಗಿದೆ. ಪಪ್ಪಾಯಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಇಂತಹ ಪಪ್ಪಾಯಿಯು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಎನ್ನುವ ಮಾತನ್ನು ನಂಬಲು ಸ್ವಲ್ಪ ಕಷ್ಟವಾಗುತ್ತದೆ. ಸರ್ವಗುಣ ಸಂಪನ್ನ- ಪಪ್ಪಾಯಿ ಹಣ್ಣಿನ ಬೀಜ

ಕೆಲವೊಂದು ಅಧ್ಯಯನಗಳಿಂದ ತಿಳಿದುಬಂದ ಅಂಶವೆಂದರೆ ಪಪ್ಪಾಯಿ ದೇಹಕ್ಕೆ ತುಂಬಾ ಒಳ್ಳೆಯ ಹಣ್ಣು. ಆದರೆ ಇದನ್ನು ಅತಿಯಾಗಿ ಸೇವಿಸಬಾರದು. ಪಪ್ಪಾಯಿಯಲ್ಲಿ ಕೆಲವೊಂದು ಆ್ಯಂಟಿಆಕ್ಸಿಡೆಂಟ್ ಗಳು ಒಳಗೊಂಡಿದ್ದು, ಇದನ್ನು ಅತಿಯಾಗಿ ಸೇವಿಸಿದಾಗ ಅದು ದೇಹಕ್ಕೆ ತುಂಬಾ ಕಠಿಣವಾಗುತ್ತದೆ. ಇದರಿಂದಾಗಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಆದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಎಂದು ಅದನ್ನು ತಿನ್ನುವುದನ್ನು ಬಿಡುವ ಬದಲು ಅದರಿಂದ ಆಗುವ ಕೆಲವೊಂದು ಲಾಭಗಳ ಬಗ್ಗೆ ಇಲ್ಲಿ ಚರ್ಚಿಸಬೇಕಾಗಿದೆ.

ಜೀರ್ಣಕ್ರಿಯೆ ಸರಾಗ

ಜೀರ್ಣಕ್ರಿಯೆ ಸರಾಗ

ಪಪ್ಪಾಯಿ ತಿನ್ನುವ ದೊಡ್ಡ ಲಾಭವೆಂದರೆ ಅದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದರಲ್ಲಿನ ಪಪೈನ್ ಎನ್ನುವ ಕಿಣ್ವವು ಜೀರ್ಣ ಕ್ರಿಯೆಗೆ ಉತ್ತಮ ಪರಿಣಾಮವನ್ನು ಉಂಟುಮಾಡುತ್ತದೆ. ಪಪ್ಪಾಯಿ ನಿಯಮಿತವಾಗಿ ತಿನ್ನುವುದರಿಂದ ಹೊಟ್ಟೆಯ ಕೆಲವೊಂದು ಸಣ್ಣಪುಟ್ಟ ರೋಗಗಳನ್ನು ನಿವಾರಿಸುವುದರೊಂದಿಗೆ ಇದು ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.

ಸೋಂಕು ತಡೆಯುವುದು

ಸೋಂಕು ತಡೆಯುವುದು

ಪಪ್ಪಾಯಿಯಲ್ಲಿರುವ ಕೆಲವೊಂದು ಅಂಶಗಳು ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಅದು ಬರದಂತೆ ತಡೆಯುತ್ತದೆ. ಹೊಟ್ಟೆಯ ಹುಳ ಮತ್ತು ಇತರ ಕೆಲವೊಂದು ಕ್ರಿಮಿಗಳ ವಿರುದ್ಧ ಪಪ್ಪಾಯಿಯಲ್ಲಿನ ಅಂಶಗಳು ಹೋರಾಡುತ್ತದೆ. ಇದರ ಪರಿಣಾಮ ಸೋಂಕು ದೇಹವನ್ನು ಆಕ್ರಮಿಸುವುದು ತಡೆಯುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಟ

ಕ್ಯಾನ್ಸರ್ ವಿರುದ್ಧ ಹೋರಾಟ

ಪಪ್ಪಾಯಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಎನ್ನುವ ವಿಚಾರವನ್ನು ಇತ್ತೀಚೆಗೆ ಅಧ್ಯಯನವೊಂದು ಅಲ್ಲಗಳೆದಿದೆ. ಆದರೆ ಇದರಲ್ಲಿನ ಕೆಲವೊಂದು ಅಂಶಗಳನ್ನು ಬಳಸಿಕೊಂಡು ಕ್ಯಾನ್ಸರ್ ನ ಕೋಶಗಳ ವಿರುದ್ಧ ಹೋರಾಡುವ ಔಷಧಿಗಳಲ್ಲಿ ಬಳಸಲಾಗುತ್ತಿದೆ ಎನ್ನಲಾಗಿದೆ. ಇದು ಎಲ್ಲಾ ರೀತಿಯ ಕ್ಯಾನ್ಸರ್ ಗಳನ್ನು ತಡೆಯಲು ಪರಿಣಾಮಕಾರಿಯಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕ್ಯಾನ್ಸರ್ ವಿರುದ್ಧ ಹೋರಾಟ

ಕ್ಯಾನ್ಸರ್ ವಿರುದ್ಧ ಹೋರಾಟ

ಅದರಲ್ಲಿ ಮೇಧೋಜೀರಕ ಗ್ರಂಥಿ ಮತ್ತು ಸ್ತನದ ಕ್ಯಾನ್ಸರ್ ವಿರುದ್ಧ ಇದು ಹೆಚ್ಚು ಪರಿಣಾಮಕಾರಿ. ಕ್ಯಾನ್ಸರ್ ಗೆ ಬಳಸುವ ಕೆಲವೊಂದು ಔಷಧಿಗಳು ಪಪ್ಪಾಯಿಯನ್ನು ಮೂಲ ಅಂಶವಾಗಿ ಬಳಸುತ್ತಿದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

ಚರ್ಮದ ಆರೈಕೆ

ಚರ್ಮದ ಆರೈಕೆ

ಪಪ್ಪಾಯಿಯಲ್ಲಿರುವ ಕೆಲವೊಂದು ಅಂಶಗಳು ಇತ್ತೀಚೆಗೆ ಚರ್ಮದ ಆರೈಕೆಗೆ ಬಳಸುವ ಉತ್ಪನ್ನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪಪ್ಪಾಯಿಯಲ್ಲಿರುವ ಕೆಲವೊಂದು ಗುಣಗಳು ಚರ್ಮವನ್ನು ಆರೋಗ್ಯಕಾರಿ ಹಾಗೂ ಹೊಳೆಯುವಂತೆ ಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಆರೈಕೆ

ಚರ್ಮದ ಆರೈಕೆ

ಲೋವೆರಾ ಜತೆಗೆ ಪಪ್ಪಾಯಿಯನ್ನು ಉಪಯೋಗಿಸುವಂತಹ ಚರ್ಮದ ಆರೈಕೆಯ ಉತ್ಪನ್ನಗಳು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಪಪ್ಪಾಯಿಯಲ್ಲಿನ ಕೆಲವೊಂದು ಅಂಶಗಳು ಚರ್ಮದ ಆರೈಕೆಯಲ್ಲಿ ನಿಮಗೆ ನೆರವಾಗುವುದರಲ್ಲಿ ಸಂಶಯವೇ ಇಲ್ಲ.

ಉರಿಯೂತ ಶಮನಕಾರಿ ಗುಣ

ಉರಿಯೂತ ಶಮನಕಾರಿ ಗುಣ

ಪಪ್ಪಾಯಿಯಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಎಂದು ಅದನ್ನು ಕಡೆಗಣಿಸುವವರು ಈ ವಿಷಯವನ್ನು ಗಂಭೀರವಾಗಿ ಪರಿಣಿಸಬೇಕು. ಮೊಡವೆ, ಗುಳ್ಳೆ ಹಾಗೂ ಚರ್ಮದ ಇತರ ಕೆಲವೊಂದು ಸಮಸ್ಯೆಗಳಿಗೆ ಪಪ್ಪಾಯಿ ಅತ್ಯುತ್ತಮ ಔಷಧಿಯಾಗಿದೆ. ಇಷ್ಟೆಲ್ಲಾ ಗುಣಗಳು ಪಪ್ಪಾಯಿಯಲ್ಲಿ ಇರುವಾಗ ಅದನ್ನು ಕಣ್ಣುಮುಚ್ಚಿಕೊಂಡು ತಿನ್ನಬೇಕು. ದೇಹದ ಉಷ್ಣತೆ ಹೆಚ್ಚಾಗುತ್ತದೆ ಎನ್ನುವ ಚಿಂತೆ ಬಿಡಬೇಕು. ಪಪ್ಪಾಯಿ ತಿಂದ ಕೂಡಲೇ ಅದರ ಪರಿಣಾಮಗಳು ನಿಮಗೆ ತಿಳಿದುಬರಲಿದೆ.

English summary

Does Papaya Increase Body Heat?

The nature has blessed the humans with some precious natural gifts. Among these gifts, one should easily consider the wide variety of fruits and vegetables that are available all over the world. These fruits and vegetables form the largest part of everyday diet of humans. Most of these food items have their own nature and characteristics.
X
Desktop Bottom Promotion