Latest Updates
-
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲಬದ್ಧತೆಯ ಸಮಸ್ಯೆಯೇ? ಇನ್ನು ಚಿಂತೆ ಬಿಡಿ...
ಅನಾರೋಗ್ಯಕರ ಆಹಾರ ಕ್ರಮ, ಒತ್ತಡದ ಜೀವನ ಶೈಲಿಯಿಂದಾಗಿ ಇಂದಿನ ದಿನಗಳಲ್ಲಿ ಜನರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮನೆಯಿಂದ ಹೊರಗಡೆ ಏನೇ ತಿಂದರೂ ಅದು ಅಜೀರ್ಣವಾಗಿ ಸಮಸ್ಯೆಯನ್ನು ಉಂಟುಮಾಡಬಹುದು. ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ಅದೇ ಮಲಬದ್ಧತೆ.
ಪ್ರತಿಯೊಬ್ಬರು ಒಂದಲ್ಲಾ ಒಂದು ದಿನ ಮಲಬದ್ಧತೆಗೆ ಒಳಗಾಗುತ್ತಾರೆ. ಇದು ಹೆಚ್ಚಿನ ಸಮಯ ಯಾರನ್ನೂ ಕಾಡುವುದಿಲ್ಲ. ಆದರೆ ಕೆಲವೊಮ್ಮೆ ಇದು ತುಂಬಾ ನೋವನ್ನು ಉಂಟುಮಾಡುವ ಸ್ಥಿತಿ ನಿರ್ಮಾಣ ಮಾಡುತ್ತದೆ. ಆಹಾರ ಕ್ರಮ, ನೀರು ಕಡಿಮೆ ಕುಡಿಯುವುದು ಮತ್ತು ಜೀವನಶೈಲಿ ಇದಕ್ಕೆ ಪ್ರಮುಖ ಕಾರಣವಾಗಿದೆ.
ಮಲಬದ್ಧತೆಯು ಒಂದು ದಿನಕ್ಕಿಂತ ಹೆಚ್ಚು ನಿಮ್ಮನ್ನು ಕಾಡಲು ಆರಂಭಿಸಿದರೆ ಆಗ ತಕ್ಷಣ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಬೇಕು. ಯಾಕೆಂದರೆ ಇದು ಮುಂದೆ ದೊಡ್ಡ ಸಮಸ್ಯೆ ಕಾಡಲಿದೆ ಎನ್ನುವ ಸುಳಿವಾಗಿರಬಹುದು. ಕೆಲವೊಂದು ಸಂದರ್ಭಗಳಲ್ಲಿ ಪ್ಲೆಥ್ರಾ ಎನ್ನುವ ಔಷಧಿಯನ್ನು ನೀಡಲಾಗುತ್ತದೆ. ಆದರೆ ಯಾವಾಗಲೂ ಇದನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುವುದು.

ಆದರೆ ಮನೆಯಲ್ಲಿ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಮಲಬದ್ಧತೆಯನ್ನು ನಿವಾರಿಸಬಹುದಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಮತ್ತು ಸುರಕ್ಷಿತ ಕೂಡ. ಇದರಲ್ಲಿ ಪ್ರಮುಖವಾದ ಮನೆಮದ್ದು ಆಲಿವ್ ಎಣ್ಣೆ, ಕಾಫಿ ಅಥವಾ ಕಿತ್ತಳೆ ಜ್ಯೂಸ್. ಶತಮಾನಗಳಿಂದಲೂ ಆಲಿವ್ ಎಣ್ಣೆಯನ್ನು ಅಜೀರ್ಣ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕೆಲವೊಂದು ರೋಗಗಳಿಗೆ ಬಳಸಲಾಗುತ್ತಿದೆ. ಕರುಳಿನ ಸರಿಯಾದ ಚಲನೆಯಲ್ಲಿ ಆಲಿವ್ ಎಣ್ಣೆ ಮ್ಯಾಜಿಕ್ ನಂತೆ ಕೆಲಸ ಮಾಡುತ್ತದೆ.
ಆಲಿವ್ ಎಣ್ಣೆಯಲ್ಲಿರುವ ಕೆಲವೊಂದು ಅಂಶಗಳು ಮಲವು ಸರಾಗವಾಗಿ ವಿಸರ್ಜನೆಯಾಗಲು ನೆರವಾಗುವುದು. ಇದನ್ನು ಕಾಫಿಯ ಜತೆ ಸೇರಿಸಿ ಕುಡಿದರೆ ಆಗ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಮ್ಮ ಕರುಳಿನ ಸಮಸ್ಯೆಯನ್ನು ಸರಿಯಾದ ಸ್ಥಿತಿಗೆ ಮರಳಿ ತರಲು ಈ ಸರಳ ಮದ್ದನ್ನು ಪರೀಕ್ಷಿಸಿ. ಮಲಬದ್ಧತೆ ಸಮಸ್ಯೆಗೆ ಗುಡ್ ಬೈ ಹೇಳಲು ಸೂಪರ್ ಟಿಪ್ಸ್
ಸಾಮಗ್ರಿಗಳು
*1 ಚಮಚ ಎಕ್ಸ್ ಟ್ರಾ ವರ್ಜಿನ್ ಆಲಿವ್ ಎಣ್ಣೆ
*1 ಕಪ್ ಕಾಫಿ
*1 ಗ್ಲಾಸ್ ಕಿತ್ತಳೆ ಜ್ಯೂಸ್
ಬಳಸುವ ವಿಧಾನ
*ಒಂದು ಚಮಚ ಆಲಿವ್ ಎಣ್ಣೆಯನ್ನು ಒಂದು ಕಪ್ ಕಾಫಿ ಅಥವಾ ಒಂದು ಲೋಟ ಜ್ಯೂಸ್‌ಗೆ ಸೇರಿಸಿ. ಇದು ಅದ್ಭುತವಾಗಿ ಕೆಲಸ ಮಾಡಬೇಕೆಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು.
*ಆರಂಭದಲ್ಲಿ ಇದನ್ನು ಸ್ವಲ್ಪ ಸ್ವಲ್ಪವೇ ಸೇವಿಸಿ ಇದಕ್ಕೆ ನಿಮ್ಮ ದೇಹವು ಯಾವ ರೀತಿ ಹೊಂದಿಕೊಳ್ಳಲಿದೆ ಎನ್ನುವುದನ್ನು ತಿಳಿದುಕೊಳ್ಳಿ. ಇದರ ಬಳಿಕ ಹೆಚ್ಚು ಸೇವಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
