For Quick Alerts
ALLOW NOTIFICATIONS  
For Daily Alerts

  ಎಚ್ಚರ: ನೀವು ಅಂದುಕೊಂಡಷ್ಟು, ಬ್ರೆಡ್ ಆರೋಗ್ಯಕರವಲ್ಲ!

  By Manu
  |

  ಇತ್ತೀಚಿನ ದಿನಗಳಲ್ಲಿ ಸಮಯದ ಆಭಾವದಿಂದಾಗಿ ಹೆಚ್ಚಿನವರು ಈಗ ಸಿದ್ಧ ಅಹಾರ, ಥಟ್ಟನೇ ಬೆಣ್ಣೆ ಜಾಮ್ ಹಚ್ಚಿ ತಿನ್ನಬಹುದಾದ ಬಿಳಿ ಬ್ರೆಡ್, ಬನ್ ಮೊದಲಾದವುಗಳನ್ನೇ ಸೇವಿಸಿ ತಮ್ಮ ಆರೋಗ್ಯವನ್ನು ಪಣಕ್ಕಿಡುತ್ತಿದ್ದಾರೆ. ಇದರ ಪರಿಣಾಮಗಳ ಬಗ್ಗೆ ಅರಿವು ಇಲ್ಲದ ಕಾರಣ ಹೆಚ್ಚಿನವರು ಯಾವುದೇ ಅನುಮಾನವಿಲ್ಲದೇ ತಿನ್ನುತ್ತಿದ್ದಾರೆ.

  ಅದರಲ್ಲೂ ಕೆಲವರಂತು ಯಾವ ಪರಿಯ ಮನೋಭಾವವನ್ನು ಹೊಂದಿರುತ್ತಾರೆ ಎಂದರೆ, ಏನೋ ಹೊಟ್ಟೆ ಹಸಿದಾಗ ತಿನ್ನುವಂತಹದು ಏನೇ ಸಿಕ್ಕರು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಅದಕ್ಕೆ ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಕಾರಣವಾಗಿರುತ್ತವೆ. ಕೆಲವೊಂದು ಆಹಾರಗಳು ನಮಗೆ ಪೂರ್ವಜರಿಂದ ಬಂದರೆ, ಇನ್ನು ಕೆಲವೊಂದು ವಿದೇಶಿಯರಿಂದ ಬಂದ ಆಹಾರಗಳು ಈಗ ನಮ್ಮ ನಡುವೆ ಇದೆ. ವಿದೇಶದಿಂದ ಬಂದವೆಲ್ಲಾ, ಒಳ್ಳೆಯದು ಅಲ್ಲ, ಹಾಗೆಂದು ಎಲ್ಲವೂ ಕೆಟ್ಟದ್ದು ಅಲ್ಲ. ಬಿಳಿ ಬ್ರೆಡ್: ಹಣ ಕೊಟ್ಟು ಕಾಯಿಲೆ ಖರೀದಿಸಬೇಡಿ!

  ಒಳ್ಳೆಯದೋ, ಕೆಟ್ಟದ್ದೋ ಎಂದು ತಿಳಿದುಕೊಂಡು ಇವುಗಳನ್ನು ಸೇವಿಸುವುದು ಒಳ್ಳೆಯದು. ಇಂತಹ ಆಹಾರದಲ್ಲಿ ಬ್ರೆಡ್ ಸಹ ಸೇರಿದೆ. ಏನು ತಿನ್ನಲು ಇಲ್ಲ ಎಂದರೆ ಕನಿಷ್ಠ ಬ್ರೆಡ್ ಆದರೂ ತೆಗೆದುಕೊಂಡು ಬಂದು ತಿನ್ನುವ ಪರಿಪಾಠ ನಮ್ಮಲ್ಲಿ ಇದೆ. ಅದರಲ್ಲೂ ಕರ್ನಾಟಕದ ಪ್ರಮುಖ ಊರುಗಳಲ್ಲಿ ಬೇಕರಿಗಳು ಬೀದಿಗೆ ನಾಲ್ಕು ಇರುತ್ತವೆ. ಬೇರೆ ರಾಜ್ಯಗಳಲ್ಲಿ ಇದರ ಪರಿಸ್ಥಿತಿಯೇ ಬೇರೆ, ಊರೆಲ್ಲಾ ಹುಡುಕಿದರೆ ಒಂದೆರಡು ಬೇಕರಿ ಸಿಕ್ಕುವುದಿಲ್ಲ!.

  ಈ ಬೇಕರಿಗಳಲ್ಲಿ ಬ್ರೆಡ್, ಬನ್ ಮತ್ತು ಪಪ್ಸ್ ವಿಶೇಷವಾಗಿ ದೊರೆಯುತ್ತವೆ. ಬೆಳಗಿನ ಉಪಾಹಾರಕ್ಕೆ ರೋಗಿಗಳಿಗೆ ಮತ್ತು ಮಕ್ಕಳಿಗೆ ಹಾಗು ಕೆಲಸಕ್ಕೆ ಹೋಗುವವರಿಗೆ ಮೊದಲು ಸಿಕ್ಕುವ ಆಯ್ಕೆ ಬ್ರೆಡ್. ಆದರೆ ಬ್ರೆಡ್ ಅನ್ನು ಪ್ರತಿದಿನ ಸೇವಿಸಿದರೆ ಅದರಿಂದ ದೇಹದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಬನ್ನಿ ಇದರ ಮೇಲೆ ನಡೆಸಿದ ಅಧ್ಯಯನದಿಂದ ಬಂದಿರುವ ಫಲಿತಾಂಶವನ್ನು ನೋಡೋಣ.               ಬ್ರೆಡ್ ಹೆಚ್ಚಾಗಿ ತಿನ್ನುವುದನ್ನು ಇಂದೇ ನಿಲ್ಲಿಸಿ!

  ಇದರ ಫಲಿತಾಂಶ ಏನು ಹೇಳುತ್ತದೆಯೆಂದರೆ, ಬ್ರೆಡ್ ವಯಸ್ಕರಿಗೆ ಒಳ್ಳೆಯದಲ್ಲವಂತೆ. ವಯಸ್ಕರಿಗೆ ಇದು ಒಳ್ಳೆಯದಲ್ಲ ಎಂದರೆ ಇನ್ನು ಮಕ್ಕಳಿಗೆ ಇದು ಒಳ್ಳೆಯದೇ? ನೀವೇ ಆಲೋಚಿಸಿ. ಆದ್ದರಿಂದ ಮಕ್ಕಳಿಗೂ ಸಹ ಇದನ್ನು ಪ್ರತಿದಿನ ಸೇವಿಸಲು ನೀಡಬೇಡಿ. ಇದರಿಂದ ಅವರ ಜೀರ್ಣಾಂಗವ್ಯೂಹದ ಮೇಲೆ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಖಂಡಿತ. ಏಕೆ ನೀಡಬಾರದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದಲ್ಲಿ, ಮುಂದೆ ಓದಿ...

  ಬ್ರೆಡ್ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ

  ಬ್ರೆಡ್ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ

  ಬ್ರೆಡ್ ಸೇವಿಸಿದರೆ ಅದರಲ್ಲಿರುವ ಸಕ್ಕರೆ ಪ್ರಮಾಣವು ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಯಾವಾಗ ರಕ್ತದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತದೆಯೋ, ಆಗ ಅದು ದೇಹಕ್ಕೆ ಅಪಾಯವನ್ನು ಹೆಚ್ಚಿಸುತ್ತದೆ. ಬ್ರೆಡ್‌ನಲ್ಲಿ ಅಮೈಲೊಪೆಕ್ಟಿನ್ ಎಂಬ ಅಂಶವು ಇರುತ್ತದೆ, ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿರಂತರವಾಗಿ ಏರಿಸುತ್ತಾ ಹೋಗುತ್ತದೆ.

  ಪ್ರತಿದಿನ ಸೇವಿಸುತ್ತಿದ್ದರೆ ಅದು ಚಟವಾಗಿ ಪರಿಣಮಿಸುತ್ತದೆ

  ಪ್ರತಿದಿನ ಸೇವಿಸುತ್ತಿದ್ದರೆ ಅದು ಚಟವಾಗಿ ಪರಿಣಮಿಸುತ್ತದೆ

  ಯಾವುದನ್ನೆ ಆಗಲಿ ಪ್ರತಿದಿನ ಮಾಡುತ್ತಿದ್ದರೆ, ಅದು ಅಭ್ಯಾಸವಾಗಿ ಆಮೇಲೆ ದುರಭ್ಯಾಸವಾಗಿ ಪರಿಣಮಿಸುತ್ತದೆ. ಬ್ರೆಡ್ ಅನ್ನು ಪ್ರತಿದಿನ ಸೇವಿಸಿದರೆ ಅದು ಚಟವಾಗಿ ಪರಿಣಮಿಸುತ್ತದೆ ಎಂದು ಅಮೆರಿಕಾದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಹೆಲ್ತ್ ತಿಳಿಸಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಪ್ರತಿದಿನ ಸೇವಿಸುತ್ತಿದ್ದರೆ ಅದು ಚಟವಾಗಿ ಪರಿಣಮಿಸುತ್ತದೆ

  ಪ್ರತಿದಿನ ಸೇವಿಸುತ್ತಿದ್ದರೆ ಅದು ಚಟವಾಗಿ ಪರಿಣಮಿಸುತ್ತದೆ

  ಬ್ರೆಡ್‌ನಲ್ಲಿರುವ ಗ್ಲುಟೆನ್ ಎಂಬ ಅಂಶವು ಯುಫೋರಿಯಾದಲ್ಲಿ ಸಂವೇದನೆಯನ್ನುಂಟು ಮಾಡುತ್ತದೆ. ವ್ಯಕ್ತಿ ದಿನಾಲೂ ಇದನ್ನು ಸೇವಿಸಿದರೆ, ಇದು ಚಟವಾಗುತ್ತದೆ ಎಂದು ಇದು ತಿಳಿಸಿದೆ.

  ಅಧಿಕ ಶೀತ

  ಅಧಿಕ ಶೀತ

  ಬ್ರೆಡ್ ಬಾರ್ಲಿ, ಸಣ್ಣ ಗೋಧಿ ಮತ್ತು ಓಟ್ಸ್‌ನಿಂದ ಮಾಡಲ್ಪಟ್ಟಿರುತ್ತದೆ. ಆದ್ದರಿಂದ ಇದನ್ನು ಸೇವಿಸಿದರೆ ದೇಹದಲ್ಲಿ ಶೀತ ಅಧಿಕಗೊಳ್ಳುತ್ತದೆ. ಇದರಿಂದ ವ್ಯಕ್ತಿಯು ಮೂಗು ಕಟ್ಟುವಿಕೆ ಮತ್ತು ಶ್ವಾಸಕೋಶದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಮಕ್ಕಳಿಗೆ ಇದರಿಂದ ಹೆಚ್ಚಿನ ಸಮಸ್ಯೆಯುಂಟಾಗುತ್ತದೆ.

  ಪೋಷಕಾಂಶಭರಿತವಾಗಿಲ್ಲ

  ಪೋಷಕಾಂಶಭರಿತವಾಗಿಲ್ಲ

  ಮಾನವರು ಪೋಷಕಾಂಶಭರಿತ ಆಹಾರವನ್ನು ಸೇವಿಸಿದರೆ ಒಳ್ಳೆಯದು. ಹೊಟ್ಟೆ ಹಸಿಯುತ್ತದೆ ಎಂದು ಸಿಕ್ಕಿದ್ದನ್ನು ಸೇವಿಸುವುದು ಮಾನವರು ಮಾತ್ರ. ಅವರಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬ ವಿಚಾರ ಗೊತ್ತಿದ್ದರು, ಗೊತ್ತಿಲ್ಲದಿದ್ದರು ಸಿಕ್ಕಿದ್ದನ್ನು ಸೇವಿಸುವುದು ಇವರ ಕಾರ್ಯವಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಪೋಷಕಾಂಶಭರಿತವಾಗಿಲ್ಲ

  ಪೋಷಕಾಂಶಭರಿತವಾಗಿಲ್ಲ

  ಪ್ರತಿದಿನ ಪೋಷಕಾಂಶಭರಿತವಾಗಿಲ್ಲದ ಆಹಾರವನ್ನು ಸೇವಿಸುತ್ತಿದ್ದಲ್ಲಿ, ಅದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಕುಂದುತ್ತಾ ಬರುತ್ತದೆ. ಹಾಗಾಗಿ ಈ ಆಹಾರವನ್ನು ಸೇವಿಸಬೇಡಿ.

   

  English summary

  Dangers Of Eating Bread

  Whatever be the food habit of a person, people always show a liking towards eating bread. Made with some junk ingredients, bread has been a favourite food for many people, especially in the form of breakfast. However, modern study reports have revealed that eating bread on a regular basis can cause some high-risk dangers that can result into a lot of ailments in the body. These study reports show the harmful effects of eating bread daily.
  Story first published: Wednesday, June 1, 2016, 16:39 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more