For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ ಬೀಟ್‌ರೂಟ್‌ನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ..?

By Super
|

ಕತ್ತರಿಸಿದಾಗ ರಕ್ತದಂತೆ ಕೆಂಪಗಿರುತ್ತದೆ ಎಂಬ ಏಕಮಾತ್ರ ಕಾರಣಕ್ಕೆ ಹೆಚ್ಚಿನವರು ಬೀಟ್ರೂಟನ್ನು ಇಷ್ಟಪಡುವುದಿಲ್ಲ. ಒಂದು ವೇಳೆ ನೀವೂ ಇದೇ ಕಾರಣಕ್ಕೆ ಬೀಟ್ರೂಟನ್ನು ದೂರ ಮಾಡಿದ್ದಿದ್ದಿರೆ ಏನನ್ನು ಕಳೆದುಕೊಂಡಿದ್ದೀರಿ ಎಂದು ತಿಳಿದ ಬಳಿಕ ವ್ಯಾಕುಲರಾಗಬಹುದು. ಇದರಲ್ಲಿರುವ ಹಲವು ವಿಟಮಿನ್, ಖನಿಜಗಳು ಮತ್ತು ವಿಶೇಷವಾಗಿ ನೈಟ್ರೇಟುಗಳು ರಕ್ತಸಂಚಾರವನ್ನು ಉತ್ತಮಗೊಳಿಸುತ್ತವೆ. ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖ ಸಿಂಡರಿಸಬೇಡಿ...

ಇದು ಪ್ರಮುಖವಾಗಿ ನಿಮಿರು ದೌರ್ಬಲ್ಯ, ಮಧುಮೇಹ, ಅಧಿಕರಕ್ತದೊತ್ತಡ, ಸ್ಮರಣಶಕ್ತಿ ಉತ್ತಮಗೊಳಿಸುವಿಕೆ, ರಕ್ತದಲ್ಲಿ ಕೆಂಪುರಕ್ತಕಣಗಳ ಸಂಖ್ಯೆಯಲ್ಲಿ ವೃದ್ಧಿ, ಚರ್ಮಕ್ಕೆ ಕಾಂತಿ, ಕೂದಲಿಗೆ ಹೊಳಪು ಮೊದಲಾದ ಹತ್ತು ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದ್ದರಿಂದ ವಾರದಲ್ಲಿ ಕೆಲವು ಬಾರಿಯಾದರೂ ಬೀಟ್ರೂಟ್ ಸೇವನೆ ಆರೋಗ್ಯಕ್ಕೆ ಅಗತ್ಯವಾಗಿದೆ. ಬೀಟ್ರೂಟನ್ನು ಸೇವಿಸುವ ಬಗ್ಗೆ ಕೆಲವು ಅಗತ್ಯವಾದ ಮಾಹಿತಿಯನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ...

ಬೇಯಿಸಿದ ಬೀಟ್ರೂಟ್

ಬೇಯಿಸಿದ ಬೀಟ್ರೂಟ್

ಈ ತರಕಾರಿಯನ್ನು ಹಸಿಯಾಗಿ ಸೇವಿಸಬಹುದಾದರೂ ಬೇಯಿಸಿ ತಿಂದರೆ ಇದರ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ ಅತಿಹೆಚ್ಚಿರುವ ಕಬ್ಬಿಣದ ಅಂಶದ ಕಾರಣ ರಕ್ತಹೀನತೆ ಹೋಗಲಾಡಿಸಲು ಅತ್ಯಂತ ಸಮರ್ಥವಾದ ಆಹಾರವಾಗಿದ್ದು ಬಾಣಂತಿಯರಿಗೆ ಮತ್ತು ಮಹಿಳೆಯರ ಮಾಸಿಕ ದಿನಗಳಲ್ಲಿ ಸೇವಿಸಲು ಅತ್ಯಂತ ಸೂಕ್ತವಾದ ಆಹಾರವಾಗಿದೆ. ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಮರ್ಥವಿರುವ ಕಾರಣ ಕೊಂಚವೇ ಉಪ್ಪು ಸೇರಿಸಿದ ಬೇಯಿಸಿದ ಬೀಟ್ರೂಟ್ ಪಲ್ಯ ಅತ್ಯಂತ ಉತ್ತಮವಾದ ಆಹಾರವಾಗಿದೆ.

ಉಪ್ಪಿನಕಾಯಿ ಹಾಕಿದ ಬೀಟ್ರೂಟ್

ಉಪ್ಪಿನಕಾಯಿ ಹಾಕಿದ ಬೀಟ್ರೂಟ್

ಸಾಮಾನ್ಯವಾಗಿ ಉಪ್ಪಿನಕಾಯಿಗೆ ಉಪ್ಪು ಮತ್ತು ಇಂಗು ಸೇರಿಸಬೇಕಾಗುತ್ತದೆ. ಈ ಪ್ರಮಾಣಗಳನ್ನು ಮಿತಗೊಳಿಸಿದರೆ ಉಪ್ಪಿನಕಾಯಿ ಹಾಕಿದ ಬೀಟ್ರೂಟ್ ಸಹಾ ಉತ್ತಮ ಆಹಾರವಾಗಿದ್ದು ವಿಶೇಷವಾಗಿ ರಕ್ತಪರಿಚಲನೆ ಹೆಚಿಸಲು ಮತ್ತು ತನ್ಮೂಲಕ ಸ್ಮರಣಶಕ್ತಿಯಲ್ಲಿ ಹೆಚ್ಚಳ, ಅವಧಿಗೂ ಮುನ್ನ ಕೂದಲು ನೆರೆಯುವುದನ್ನು ತಡೆಯುವುದು, ಅಲ್ಝೀಮರ್ ಕಾಯಿಲೆ ಬರದಂತೆ ಕಾಪಾಡುವುದು ಮೊದಲಾದ ಪ್ರಯೋಜನಗಳ ಮೂಲಕ ಆರೋಗ್ಯವನ್ನು ಹೆಚ್ಚಿಸುತ್ತದೆ.

ವಿವಿಧ ತರಕಾರಿಗಳ ಮಿಶ್ರಣದೊಂದಿಗೆ

ವಿವಿಧ ತರಕಾರಿಗಳ ಮಿಶ್ರಣದೊಂದಿಗೆ

ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಎಲ್ಲಾ ತರಕಾರಿಗಳನ್ನು ಕೊಂಚಕೊಂಚವಾಗಿ ಸೇರಿಸಿ ಸಾಂಬಾರ್, ಪಲ್ಯ, ಉಪ್ಪಿನಕಾಯಿ ಮೊದಲಾದವುಗಳನ್ನು ಮಾಡುತ್ತಾರೆ. ಇದರಿಂದ ಪ್ರತಿ ತರಕಾರಿಯ ಉತ್ತಮ ಗುಣಗಳು ಇತರ ತರಕಾರಿಯ ಗುಣಗಳೊಂದಿಗೆ ಸೇರಿ ಒಟ್ಟಾರೆಯಾಗಿ ಒಂದು ಪ್ರಬಲ ಆಹಾರವಾಗಿರುತ್ತದೆ. ಅಂತೆಯೇ ಬೀಟ್ರೂಟ್ ಸಹಾ ಸೇರಿಸಿದ ವಿವಿಧ ತರಕಾರಿಗಳ ಪಲ್ಯ, ಸಾರುಗಳು ಪೋಷಕಾಂಶಗಳ ಆಗರವಾಗಿದ್ದು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಿಧ ತರಕಾರಿಗಳ ಮಿಶ್ರಣದೊಂದಿಗೆ

ವಿವಿಧ ತರಕಾರಿಗಳ ಮಿಶ್ರಣದೊಂದಿಗೆ

ಬೀಟ್ರೂಟಿನಲ್ಲಿರುವ ಬೀಟಾಸಯಾನಿನ್ ಎಂಬ ಪೋಷಕಾಂಶದ ಕಾರಣ ಇದಕ್ಕೆ ರಕ್ತದ ಬಣ್ಣ ಬಂದಿದ್ದು ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದೆ. ಇದರ ಮಹತ್ವವೆಂದರೆ ದೇಹದ ನರಗಳ ಒಳಭಾಗದಲ್ಲಿ ಅಂಟಿಕೊಳ್ಳುವ ಜಿಡ್ಡಾದ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಳೆವಣಿಕಳೆತ (oxidation) ಆಗದಂತೆ ತಡೆದು ನರಗಳ ಗೋಡೆಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಮೂಲಕ ಎದುರಾಗಬಹುದಾಗಿದ್ದ ಕಂಟಕಗಳು ಇಲ್ಲವಾಗುತ್ತವೆ.

ಬೀಟ್ರೂಟ್ ಜ್ಯೂಸ್

ಬೀಟ್ರೂಟ್ ಜ್ಯೂಸ್

ಬೇಯಿಸಿ ತಿಂದಂತೆಯೇ ಹಸಿ ಬೀಟ್ರೂಟ್ ನ ರಸವೂ ಆರೋಗ್ಯವನ್ನು ಹಲವು ರೀತಿಯಿಂದ ರಕ್ಷಿಸುತ್ತದೆ. ನಿಮಿರು ದೌರ್ಬಲ್ಯವಿದ್ದವರ ರಕ್ತದಲ್ಲಿ ನೈಟ್ರೇಟುಗಳ ಪ್ರಮಾಣ ಹೆಚ್ಚಾಗಿದ್ದು ಇದು ವಿಶೇಷವಾಗಿ ಜನನಾಂಗದ ನರಗಳಲ್ಲಿ ರಕ್ತ ತುಂಬಿಕೊಳ್ಳಲು ಅಡ್ಡಿಯಾಗುತ್ತದೆ. ಬೀಟ್ರೂಟ್ ರಸದಲ್ಲಿರುವ ಪೋಷಕಾಂಶಗಳು ಈ ನೈಟ್ರೇಟುಗಳ ಪ್ರಭಾವ ಕಡಿಮೆಗೊಳಿಸುವ ಮೂಲಕ ನಿಮಿರುದೌರ್ಬಲ್ಯ ಕಡಿಮೆಯಾಗಲು ಸಾಧ್ಯವಾಗಿಸುತ್ತದೆ. the Journal of Nursing and Health Science ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಪ್ರತಿದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಅನ್ನು ಇಪ್ಪತ್ತು ದಿನಗಳವರೆಗೆ ಕುಡಿದವರ ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು ರಕ್ತಹೀನತೆಯ ತೊಂದರೆ ಸಾಕಷ್ಟು ಸುಧಾರಿಸಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೀಟ್ರೂಟ್ ಜ್ಯೂಸ್

ಬೀಟ್ರೂಟ್ ಜ್ಯೂಸ್

ಪ್ರತಿದಿನ ಅರ್ಧ ಕೇಜಿ ಬೀಟ್ರೂಟಿನಿಂದ ಹಿಂಡಿ ತೆಗೆದ ರಸವನ್ನು ಸತತವಾಗಿ ಎರಡು ವಾರಗಳವರೆಗೆ ಕುಡಿದರೆ ಜ್ಯೂಸ್ ಕುಡಿದ ಆರು ಘಂಟೆಗಳಲ್ಲಿಯೇ ಅಧಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ಹಸಿಯಾಗಿ ತಿನ್ನಲು ಬೀಟ್ರೂಟ್ ಎಲೆ

ಹಸಿಯಾಗಿ ತಿನ್ನಲು ಬೀಟ್ರೂಟ್ ಎಲೆ

ಬೀಟ್ರೂಟಿನ ಎಲೆಗಳು ಗಾಢ ಹಸಿರು ಬಣ್ಣ ಹೊಂದಿದ್ದು ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಕೆ ಇದೆ. ಇದು ರಕ್ತವನ್ನು ಹೆಪ್ಪುಗಟ್ಟಿಸಲು ಅಗತ್ಯವಾದ ಅಂಶವಾಗಿದೆ. ಆದ್ದರಿಂದ ಬೀಟ್ರೂಟ್ ನೊಂದಿಗೆ ಇದರ ಎಲೆಗಳು ಸಿಕ್ಕರೆ ಎಸೆಯದೇ ಸೂಪ್ ಅಥವಾ ಸಾಲಾಡ್ ನೊಂದಿಗೆ ಸೇವಿಸಿ

ಬೀಟ್ರೂಟ್ ಸಿಪ್ಪೆ

ಬೀಟ್ರೂಟ್ ಸಿಪ್ಪೆ

ಸಿಪ್ಪೆ ಸುಲಿದ ಬಳಿಕ ಈ ಸಿಪ್ಪೆಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇದೊಂದು ಉತ್ತಮ ಸೌಂದರ್ಯವರ್ಧಕವಾಗಿದೆ. ಈ ಸಿಪ್ಪೆಗಳನ್ನು ಮಿಕ್ಸಿಯಲ್ಲಿ ಅರೆದು ಈ ಲೇಪನವನ್ನು ತೆಳ್ಳಗೆ ಮುಖಕ್ಕೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ನಯವಾದ, ಕಲೆಯಿಲ್ಲದ ಮತ್ತು ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೂಕ್ಷ್ಮರಂಧ್ರಗಳಿಂದ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಮರ್ಥವಾಗಿದ್ದು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತವೆ.

English summary

Benefits of Beetroot You Probably Don’t Know

If you don’t like this root vegetable, then you are in for a great deal of loss. Because beetroots are a storehouse of vital minerals, vitamins and nitrates that help in boosting blood circulation correcting problems like erectile dysfunction, diabetes, hypertension, enhancing memory improving blood count and giving your skin and hair a natural sheen. Here are ways in which you can include beetroot in your diet.
X
Desktop Bottom Promotion