For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಆರೋಗ್ಯಕ್ಕೆ ದಿನಕ್ಕೊಂದು ಕಪ್ ಶುಂಠಿ ಜ್ಯೂಸ್!

By Manu
|

ಹಸಿಶುಂಠಿ ಯಾವುದಕ್ಕೆ ಮದ್ದು ಎನ್ನುವುದಕ್ಕಿಂತ ಯಾವುದಕ್ಕೆ ಮದ್ದಲ್ಲ ಎಂದು ಕೇಳುವುದೇ ಸೂಕ್ತ. ಏಕೆಂದರೆ ಇದರ ಚಿಕಿತ್ಸಕ ಮತ್ತು ಔಷಧೀಯ ಗುಣಗಳು ಆರೋಗ್ಯವನ್ನು ಹತ್ತು ಹಲವು ರೀತಿಯಲ್ಲಿ ಉತ್ತಮಗೊಳಿಸುತ್ತವೆ ಹಾಗೂ ದೇಹಕ್ಕೆ ಎದುರಾದ ಕಾಯಿಲೆಗಳನ್ನು ವಾಸಿಗೊಳಿಸುವಲ್ಲಿಯೂ ಮಹತ್ತರ ಪಾತ್ರ ವಹಿಸುತ್ತದೆ. ಇದರ ಔಷಧೀಯ ಗುಣಗಳನ್ನು ಪರಿಗಣಿಸದ ನಾವು ಇದರ ರುಚಿಯನ್ನು ಮಾತ್ರ ಪರಿಗಣಿಸಿ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತೇವೆ.

Amazing health benefits of ONE cup of ginger juice

ಆದರೆ ಶುಂಠಿಯನ್ನು ಔಷಧಿಯ ರೂಪದಲ್ಲಿ ಸೇವಿಸಿದಾಗ, ಅಂದರೆ ಇದರ ರಸವನ್ನು ಕುಡಿದಾಗ ಶೀತ, ಕೆಮ್ಮು, ಜ್ವರ, ಅಜೀರ್ಣ, ವಾಕರಿಕೆ, ಗರ್ಭಾವಸ್ಥೆಯ ವಾಕರಿಕೆ, ಗಂಟಲ ಬೇನೆ, ಕಫ ಮೊದಲಾದ ಹಲವು ತೊಂದರೆಗಳನ್ನು ನಿವಾರಿಸಲು ನೆರವಾಗುತ್ತದೆ. ಅತ್ಯುತ್ತಮ ಪರಿಣಾಮ ಪಡೆಯಲು ಶುಂಠಿಯ ಚಿಕ್ಕ ತುಂಡನ್ನು ಹಸಿಯಾಗಿಯೇ ಜಗಿದು ರಸವನ್ನು ನುಂಗುವುದೇ ಉತ್ತಮ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಏಕೆಂದರೆ ಜೊಲ್ಲಿನಲ್ಲಿ ಮಿಶ್ರಣವಾದ ಶುಂಠಿಯ ರಸದಲ್ಲಿ ರೋಗಗಳ ವಿರುದ್ಧ ಹೋರಾಡಲು ಅದ್ಭುತ ಶಕ್ತಿ ಹೊಂದಿರುತ್ತದೆ. ಆದರೆ ಹೆಚ್ಚಿನವರಿಗೆ ಶುಂಠಿಯ ಖಾರ ಸಹಿಸಲು ಸಾಧ್ಯವಿಲ್ಲದ ಕಾರಣ ಇದರ ರಸವನ್ನು ಬಿಸಿನೀರಿನೊಂದಿಗೆ ಸೇವಿಸಬಹುದು. ಇದು ಜಗಿದು ನುಂಗಿದಾಗ ಇರುವಷ್ಟು ಪ್ರಬಲವಲ್ಲದಿದ್ದರೂ ಕಾಯಿಲೆಗಳನ್ನು ನಿಭಾಯಿಸಲು ಸಾಕಷ್ಟು ಪ್ರಬಲವಾಗಿರುತ್ತದೆ.

ಯಾವುದೇ ಕಾಯಿಲೆ ಇಲ್ಲದಿದ್ದಾಗಲೂ ಪ್ರತಿದಿನ ಒಂದು ಲೋಟ ಹಸಿಶುಂಠಿಯ ರಸವನ್ನು ಸೇರಿಸಿದ ನೀರನ್ನು ಕುಡಿಯುತ್ತಾ ಬಂದರೆ ಏನೇನು ಉಪಯೋಗಗಳಿವೆ ಎಂಬುದನ್ನು ಕೆಳಗಿನ ಸ್ಲೈಡ್ ಷೋ ಮೂಲಕ ಈಗ ನೋಡೋಣ. ಈ ರಸವನ್ನು ತಯಾರಿಸುವುದು ಹೇಗೆ ಎಂಬುದನ್ನು ಲೇಖನದ ಕೊನೆಯ ಪ್ಯಾರಾದಲ್ಲಿ ನೀಡಿದ್ದೇವೆ, ಮುಂದೆ ಓದಿ... ಶುಂಠಿ-ಅರಿಶಿನದ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ

ಮಧುಮೇಹ ನಿಯಂತ್ರಿಸಲು ನೆರವಾಗುತ್ತದೆ
ಮಧುಮೇಹಿಗಳಿಗೆ ಸಕ್ಕರೆ ಇರುವ ಯಾವುದೇ ಆಹಾರವನ್ನು ಮಿತಿಗಿಂತ ಹೆಚ್ಚಾಗಿ ತಿನ್ನುವಂತಿಲ್ಲ. ಶುಂಠಿರಸದಲ್ಲಿ ಮಧುಮೇಹ ನಿಯಂತ್ರಕ ಗುಣವಿದ್ದು ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸಿ ಮಧುಮೇಹವನ್ನು ಹತೋಟಿಗೆ ತರಲು ನೆರವಾಗುತ್ತದೆ.

ಅಲ್ಲದೇ ಮಧುಮೇಹ ಈಗ ಇಲ್ಲವಾದರೂ ಅನುವಂಶಿಕವಾಗಿ ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆ ಇರುವವರಿಗೂ ಮಧುಮೇಹ ಬರುವ ಸಾಧ್ಯತೆಯನ್ನು ದೂರಾಗಿಸುತ್ತದೆ. ಮಧುಮೇಹಿಗಳಲ್ಲಿ ಉಪವಾಸದ ಬಳಿಕ ಕಂಡುಕೊಂಡ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸಲು ನಿತ್ಯವೂ ಒಂದು ಲೋಟ ಶುಂಠಿರಸದ ಜ್ಯೂಸ್ ಕುಡಿದರೆ ಸಾಕು. ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ

ಕ್ಯಾನ್ಸರ್ ಬರದಂತೆ ತಡೆಯುತ್ತದೆ
ಶುಂಠಿರಸದ ಖಾರದ ಗುಣಕ್ಕೆ ಇದರಲ್ಲಿರುವ ಜೈವಿಕಕ್ರಿಯಾಶೀಲ ಫಿನಾಲಿಕ್ ಮತ್ತು ಜಿಂಜರಾಲ್, ಪ್ಯಾರಾಡಾಲ್, ಶೋಗಾವೋಲ್, ಜಿಂಜರೋನ್ ಮೊದಲಾದ ಪೋಷಕಾಂಶಗಳಿವೆ. ಒಂದು ಅಧ್ಯಯನದಲ್ಲಿ ಈ ಕಣಗಳೆಲ್ಲಾ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು ವಿಶೇಷವಾಗಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿರಿಸುವ ಜೊತೆಗೇ ಶುಂಠಿಯ ರಸದ ಪೋಷಕಾಂಶಗಳು ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲೂ ಸಮರ್ಥವಾಗಿವೆ.

ಸಂಧಿವಾತದ ನೋವನ್ನು ಕಡಿಮೆಗೊಳಿಸುತ್ತದೆ
ಇನ್ನೊಂದು ಸಂಶೋಧನೆಯಲ್ಲಿ ಸಂಧಿವಾತದ ಕಾರಣ ಮೂಳೆಗಳ ಸಂಧುಗಳಲ್ಲಿ ಕಾಡುವ ನೋವನ್ನು ಕಡಿಮೆಗೊಳಿಸಲು ಶುಂಠಿಯ ರಸ ಸಮರ್ಥವಾಗಿದೆ ಎಂದು ಕಂಡುಕೊಳ್ಳಲಾಗಿದೆ. ಅದರಲ್ಲೂ ಮೊಣಕಾಲಿನ ನೋವು ಇರುವ ವ್ಯಕ್ತಿಗಳಿಗೆ ಈ ಪೇಯ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಈ ಅದ್ಭುತ ರಸವನ್ನು ತಯಾರಿಸುವ ಬಗೆ

ಸುಮಾರು ಒಂದು ಇಂಚಿನಷ್ಟು ದೊಡ್ಡ ಹಸಿಶುಂಠಿಯನ್ನು ತೊಳೆದು ಸಿಪ್ಪೆ ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ. ಬಳಿಕ ಕೊಂಚವೇ ನೀರು ಸೇರಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಗೊಟಾಯಿಸಿ. ಬಳಿಕ ಒಂದು ಲೋಟವಾಗುವಷ್ಟು ನೀರು ಸೇರಿಸಿ ಇನ್ನಷ್ಟು ಕಡೆಯಿರಿ. ಈ ಮಿಶ್ರಣವನ್ನು ತೆಳುವಾದ ಬಟ್ಟೆಯಲ್ಲಿ ಗಟ್ಟಿಯಾಗಿ ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸಕ್ಕೆ ಕೊಂಚ ಜೇನು ಮತ್ತು ಅರ್ಧ ಲಿಂಬೆಯ ರಸವನ್ನು ಸೇರಿಸಿ, ಆದರೆ ಕಡ್ಡಾಯವಿಲ್ಲ. ಇವು ಕೇವಲ ಶುಂಠಿಯ ರಸದ ಖಾರವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಈ ರಸವನ್ನು ನಿತ್ಯವೂ ಒಂದು ಲೋಟ ಕುಡಿಯಿರಿ.
English summary

Amazing health benefits of ONE cup of ginger juice

Most of us know the therapeutic and medicinal benefits of ginger. It not only adds that distinct flavour to your cooking but saves you from suffering in agony of common cold and cough, indigestion, nausea during pregnancy (and also otherwise), sore throat and the list is long. However, if you don’t like to chew or suck the raw pungent herb, you can have a glass of ginger juice instead and reap its varied benefits.
X
Desktop Bottom Promotion