For Quick Alerts
ALLOW NOTIFICATIONS  
For Daily Alerts

  ಕೋಕಂ ಶರಬತ್ತು- ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..

  By manu
  |

  ನಮಗೆಲ್ಲಾ ನಮ್ಮ ಹಿತ್ತಲ ಮರದಲ್ಲಿ ಬೆಳೆದ ಯಾವುದೇ ಹಣ್ಣಾದರೂ ಅದು ಬೇಡ. ಆದರೆ ಇದೇ ಹಣ್ಣನ್ನು ಯಾವುದೋ ಬಹುರಾಷ್ಟ್ರೀಯ ಸಂಸ್ಥೆ ಸುಂದರವಾದ ಹೊರಕವಚವಿರುವ ಡಬ್ಬಿಯಲ್ಲಿ ಸಂರಕ್ಷಕ ದ್ರವಗಳೊಂದಿಗೆ ಸೇರಿಸಿ ಮಾರಿದರೆ ಅದು ನಮಗೆ ಅಮೃತಸಮಾನ. ನಮ್ಮ ಕರಾವಳಿಯಲ್ಲಿ, ಮಲೆನಾಡಿನಲ್ಲಿ, ಹೇರಳವಾಗಿ ಬೆಳೆಯುವ ಪುನರ್ಪುಳಿಯನ್ನು (ಕೋಕಂ, ಮುರುಗನ ಹುಳಿ) ಕೇಳುವವರಿಲ್ಲ. ಆದರೆ ಮಹಾರಾಷ್ಟ್ರದಿಂದ ಇತ್ತೀಚೆಗೆ ಸುಂದರ ಬಾಟಲಿಗಳಲ್ಲಿ ಲಭ್ಯವಾಗುತ್ತಿರುವ ಕೋಕಂ ಶರಬತ್ ಅಥವಾ ಕೋಕಂ ಡ್ರಿಂಕ್ ಎಂಬ ಹೆಸರಿನಲ್ಲಿ ಬಂದಾಕ್ಷಣ ಎಲ್ಲರೂ ಹೊಸರುಚಿಯಂತೆ ಕುಡಿದು ಚಪ್ಪರಿಸುತ್ತಾರೆ.

  ಇದರ ಆರೋಗ್ಯಕರ ಗುಣಗಳನ್ನು ಆ ಬಾಟಲಿಯ ಮೇಲೂ ಮುದ್ರಿಸಲಾಗಿರುತ್ತದೆ. ಆದರೆ ಈ ಆರೋಗ್ಯಕರ ಗುಣಗಳನ್ನು ಸಂಪೂರ್ಣವಾಗಿ ಪಡೆಯಬೇಕಾದರೆ ಸಂರಕ್ಷಕಗಳಿಲ್ಲದ ಪುನರ್ಪುಳಿ ದ್ರವವನ್ನು ಸೇವಿಸಬೇಕು. Garcinia indica ಎಂಬ ವೈಜ್ಞಾನಿಕ ಹೆಸರಿರುವ ಈ ಹುಳಿಮಿಶ್ರಿತ ಸಿಹಿಹಣ್ಣು ಭಾರತಾದ್ಯಂತ ಬೆಳೆಯಲಾಗುತ್ತದಾದರೂ ಪಶ್ಚಿಮ ಘಟ್ಟಗಳಲ್ಲೇ ಬೆಳೆ ಹೆಚ್ಚು. ಪ್ರಖರ ಕೆಂಪು ಬಣ್ಣದ ಮತ್ತು ಹುಳಿ ಇರುವ ಈ ಹಣ್ಣನ್ನು ಹಾಗೇ ತಿನ್ನಬಹುದು ಅಥವಾ ಒಣಗಿಸಿ ವರ್ಷವಿಡೀ ಸೇವಿಸಬಹುದು.

  ಇದರ ಜ್ಯೂಸ್ ಸಹಾ ಪೋಷಕಾಂಶಗಳ ಆಗರವಾಗಿದ್ದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮತ್ತು ಪೊಟ್ಯಾಶಿಯಂ, ಮ್ಯಾಂಗನೀಸ್, ಮೆಗ್ನೀಶಿಯಂ ಮೊದಲಾದ ಖನಿಜಗಳೂ ಇವೆ. ಇವೆಲ್ಲವೂ ಆರೋಗ್ಯವನ್ನು ವೃದ್ಧಿಸುವಲ್ಲಿ ಒಂದಲ್ಲ ಒಂದು ರೀತಿ ಸಹಕರಿಸುತ್ತವೆ. ಟ್ಯಾನ್ ಆಗೋದನ್ನು ತಪ್ಪಿಸಿಕೊಳ್ಳಲು ಕೋಕಂ ಕೇರ್

  ವಿಶೇಷವಾಗಿ ಒಂದು ಲೋಟ ಕೋಕಂ ಜ್ಯೂಸ್ ಅನ್ನು ಊಟದ ಬಳಿಕ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಒಣಗಿಸಿದ ತಿರುಳು ಸಹಾ ಪೋಷಕಾಂಶಗಳ ಆಗರವಾಗಿದೆ. ಹುಣಸೆ ಹುಳಿಯ ಬದಲಿಗೆ ಇದನ್ನು ಮಂಗಳೂರಿನ ಕರಾವಳಿ ಕಡೆಗಳಲ್ಲಿ ಹಾಗೂ ಕೇರಳದಲ್ಲಿ ಮೀನಿನ ಸಾರಿಗೆ ಉಪಯೋಗಿಸುತ್ತಾರೆ.

  ಇದರ ಹುಳಿಯಾದ ರುಚಿಗೆ ಇದರಲ್ಲಿರುವ ಮ್ಯಾಲಿಕ್ ಆಮ್ಲ, ಅಸೆಟಿಕ್ ಆಮ್ಲ, ಹೈಡ್ರೋಸಿಟ್ರಿಕ್ ಆಮ್ಲ ಮತ್ತು ಹೈಡ್ರಾಕ್ಸಿ ಸಿಟ್ರಿಕ್ ಆಮ್ಲಗಳು ಕಾರಣವಾಗಿವೆ. ಇವುಗಳ ಉಪಸ್ಥಿತಿಯ ಕಾರಣ ಇದೊಂದು ಉತ್ತಮ ಬ್ಯಾಕ್ಟೀರಿಯಾ ನಿವಾರಕ, ಸೋಂಕು ನಿವಾರಕ, ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ನಿವಾರಕವೂ ಆಗಿದೆ. ನಿಯಮಿತವಾಗಿ ಕೋಕಂ ಶರಬತ್ತು ಕುಡಿಯುತ್ತಾ ಬರುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳಿವೆ. ಬನ್ನಿ, ಕೆಳಗಿನ ಸ್ಲೈಡ್ ಶೋ ಮೂಲಕ ಈ ಲಾಭಗಳ ಬಗ್ಗೆ ಅರಿಯೋಣ....

  ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

  ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

  ಅಜೀರ್ಣಕ್ಕೆ ಪುನರ್ಪುಳಿ ಜ್ಯೂಸ್ ಉತ್ತಮ ಪರಿಹಾರವಾಗಿದೆ. ಅಜೀರ್ಣದ ಕಾರಣ ಉದ್ಭವವಾಗುವ ಹೊಟ್ಟೆಯಲ್ಲಿ ಉರಿ, ಮಲಬದ್ದತೆ, ಕರುಳಿನ ಹುಣ್ಣು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ. ಏಕೆಂದರೆ ಇದರಲ್ಲಿರುವ ಆಮ್ಲಗಳು ಜಠರರಸವನ್ನು ಸಮರ್ಪಕ ಆಮ್ಲೀಯತೆಯಲ್ಲಿಡಲು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಲಿತವಾಗಿಸುತ್ತದೆ.

  ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

  ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

  ಅಲ್ಲದೇ ಒಂದು ವೇಳೆ ಇತರ ಆಹಾರಗಳ (ವಿಶೇಷವಾಗಿ ಅಜಿನೋಮೋಟೋ ಇರುವ ಆಹಾರಗಳು) ಕಾರಣ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗುವುದಿದ್ದರೆ ಆ ಆಮ್ಲೀಯತೆಯ ಪ್ರಖರತೆಯನ್ನು ಕಡಿಮೆಗೊಳಿಸಿ ತೊಂದರೆಯಾಗುವುದರಿಂದ ರಕ್ಷಿಸುತ್ತದೆ.

  ಅಲರ್ಜಿಯನ್ನು ಗುಣಪಡಿಸುತ್ತದೆ

  ಅಲರ್ಜಿಯನ್ನು ಗುಣಪಡಿಸುತ್ತದೆ

  ಕೆಲವರಿಗೆ ಹೂವಿನ ಪರಾಗ, ಧೂಳಿನಿಂದಲೂ ಅಲರ್ಜಿಯುಂಟಾಗಿ ಚರ್ಮದ ಕೆಲವೆಡೆ ಅತೀವ ತುರಿಕೆಯುಂಟಾಗುತ್ತದೆ. ಇದರಿಂದ ಚರ್ಮದ ಮೇಲೆ ಚಿಕ್ಕ ದದ್ದುಗಳು ಎದ್ದು ಕೆರೆತದ ಕಾರಣ ಚರ್ಮದಲ್ಲಿ ಗಾಯಗಳಾಗುತ್ತವೆ.

  ಅಲರ್ಜಿಯನ್ನು ಗುಣಪಡಿಸುತ್ತದೆ

  ಅಲರ್ಜಿಯನ್ನು ಗುಣಪಡಿಸುತ್ತದೆ

  ಇದಕ್ಕೆ ಸಾಮಾನ್ಯವಾಗಿ ದೇಹದಲ್ಲಿ ಆಮ್ಲೀಯತೆ ಹೆಚ್ಚಾಗಿರುವುದೇ ಕಾರಣ. ಪುನರ್ಪುಳಿಯ ಸೇವನೆಯಿಂದ ಈ ಆಮ್ಲೀಯತೆ ನಿವಾರಣೆಯಾಗುವ ಮೂಲಕ ಚರ್ಮದ ಅಲರ್ಜಿ ಕಡಿಮೆಯಾಗಿ ಚರ್ಮದ ತುರಿಕೆಯನ್ನು ನಿಲ್ಲಿಸುತ್ತದೆ. ಅಷ್ಟೇ ಅಲ್ಲ, ಕೆಲವು ಬಗೆಯ ಆಹಾರದ ಅಲರ್ಜಿಗಳನ್ನೂ ನಿವಾರಿಸುತ್ತದೆ.

  ತೂಕ ಇಳಿಸಲು ಸಹಕರಿಸುತ್ತದೆ

  ತೂಕ ಇಳಿಸಲು ಸಹಕರಿಸುತ್ತದೆ

  ಇದರಲ್ಲಿರುವ ಹೈಡ್ರಾಕ್ಸಿಲ್ ಸಿಟ್ರಿಕ್ ಆಮ್ಲವನ್ನು ಕರಗಿಸಲು ದೇಹಕ್ಕೆ ಹೆಚ್ಚು ಕಷ್ಟಪಡಬೇಕಾಗುತ್ತದೆ. ಅಂದರೆ ಶೇಖರವಾಗಿದ್ದ ಕೊಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾಗಿ ಬರುತ್ತದೆ, ಪರೋಕ್ಷವಾಗಿ ಇದು ತೂಕ ಇಳಿಯಲು ನೆರವಾಗುತ್ತದೆ. ಅಲ್ಲದೇ ಇತರ ಆಮ್ಲಗಳು ದೇಹದ ಚಟುವಟಿಕೆಗೆ ನೆರವಾಗುವ ಮೂಲಕ ಇನ್ನಷ್ಟು ಕೊಬ್ಬು ಕರಗುವಂತೆ ಮಾಡುತ್ತವೆ. ಎರಡೂ ಕಡೆಯ ಹೊಡೆತಗಳಿಂದ ತತ್ತರಿಸಿದ ಕೊಬ್ಬಿನ ಭಂಡಾರ ನಿಧಾನವಾಗಿ ಕರಗತೊಡಗುತ್ತದೆ.

  ಕ್ಯಾನ್ಸರ್ ಗುಣಪಡಿಸುತ್ತದೆ

  ಕ್ಯಾನ್ಸರ್ ಗುಣಪಡಿಸುತ್ತದೆ

  ಇದರ ನಿಸರ್ಗದತ್ತ ಕ್ಯಾನ್ಸರ್ ನಿವಾರಕ ಗುಣಕ್ಕೆ ಇದರಲ್ಲಿರುವ garcinol ಎಂಬ ಕಣವೇ ಕಾರಣ. ಕ್ಯಾನ್ಸರ್ ಎಂದರೆ ಯಾವುದೋ ಅಂಗಾಂಶ ಲಂಗು ಲಗಾಮಿಲ್ಲದೇ ಬೆಳೆಯುತ್ತಾ ಹೋಗುವುದು.ಗಾರ್ಸಿನಾಲ್ ಈ ಬೆಳವಣಿಗೆಗೆ ಅಡ್ಡಗಾಲು ಹಾಕಿ ಕ್ಯಾನ್ಸರ್ ಇನ್ನು ಮುಂದುವರೆಯದಂತೆ ತಡೆಯುವ ಮೂಲಕ ಕ್ಯಾನ್ಸರ್ ರೋಗವನ್ನು ಹತ್ತಿಕ್ಕಲು ಸಹಕರಿಸುತ್ತದೆ.

  ಕ್ಯಾನ್ಸರ್ ಗುಣಪಡಿಸುತ್ತದೆ

  ಕ್ಯಾನ್ಸರ್ ಗುಣಪಡಿಸುತ್ತದೆ

  ಅಲ್ಲದೆ ದೇಹದ ರೋಗ ನಿರೋಧಕ ವ್ಯವಸ್ಥೆ ಇದುವರೆಗೆ ಆದ ಹಾನಿಯನ್ನು ಹಿಂದೆ ಪಡೆಯುವ ಮೂಲಕ ಕ್ಯಾನ್ಸರ್ ನಿಧಾನವಾಗಿ ಹಿಂದೆ ಸರಿಯುತ್ತದೆ. ಇದರ ನಿಯಮಿತ ಸೇವನೆಯಿಂದ ಯಕೃತ್, ಬಾಡಲಿ ( pancreas), ಕರುಳು, ನಾಲಿಗೆ ಮತ್ತು ಚರ್ಮದ ಕ್ಯಾನ್ಸರ್ ಗಳನ್ನು ಸಮರ್ಥವಾಗಿ ತಡೆಗಟ್ಟಬಹುದು.

  ದೇಹವನ್ನು ತಂಪಾಗಿರಿಸುತ್ತದೆ

  ದೇಹವನ್ನು ತಂಪಾಗಿರಿಸುತ್ತದೆ

  ದೇಹದ ತಾಪಮಾನವನ್ನು ತಂಪಾಗಿಡುವಲ್ಲಿ ಕೋಕಂ ಸಹಾ ಲಿಂಬೆ ಶರಬತ್ತಿನಂತೆಯೇ ಉತ್ತಮವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಬಿಸಿಲ ಧಗೆಗೆ ಬಳಲುವ ದೇಹಕ್ಕೆ ಕೋಕಂ ಶರಬತ್ತು ಅತ್ಯುತ್ತಮ ಆರೈಕೆ ನೀಡುತ್ತದೆ.

  ದೇಹವನ್ನು ತಂಪಾಗಿರಿಸುತ್ತದೆ

  ದೇಹವನ್ನು ತಂಪಾಗಿರಿಸುತ್ತದೆ

  ಅಲ್ಲದೇ ನೀರಿನ ಕೊರತೆಯಿಂದ ಉದ್ಭವವಾಗುವ ಹೊಟ್ಟೆಯ ಹುಣ್ಣುಗಳಾಗದಂತೆ ನೋಡಿಕೊಳ್ಳುತ್ತದೆ. ಬೇಸಿಗೆಯಲ್ಲಿ ಮದ್ಯಾಹ್ನ ಸೇವಿಸಲು ಕೋಕಂ ಶರಬತ್ತು ಅತ್ಯುತ್ತಮ ಪಾನೀಯವಾಗಿದೆ.

  ಆಂಟಿ ಆಕ್ಸಿಡೆಂಟುಗಳು ಹೇರಳವಾಗಿವೆ

  ಆಂಟಿ ಆಕ್ಸಿಡೆಂಟುಗಳು ಹೇರಳವಾಗಿವೆ

  ಪುನರ್ಪುಳಿಯಲ್ಲಿ ವಿಟಮಿನ್ ಸಿ ಹೇರಳವಾಗಿವೆ. ಅಲ್ಲದೇ ಇತರ ಪಾಲಿಫಿನಾಲುಗಳೂ ಉತ್ತಮ ಪ್ರಮಾಣದಲ್ಲಿವೆ. ಇವೆಲ್ಲವೂ ಆಂಟಿ ಆಕ್ಸಿಡೆಂಟುಗಳಂತೆ ವರ್ತಿಸುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಹರಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ದೇಹಕ್ಕೆ ಹಾನಿ ಮಾಡದಂತೆ ನೆರವಾಗುತ್ತವೆ. ಅಲ್ಲದೇ ಇವು ದೇಹದಿಂದ ವಿಷಕಾಗಿ ವಸ್ತುಗಳನ್ನು ಹೊರಹಾಕಲೂ ನೆರವಾಗುವ ಮೂಲಕ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ.

  ಕೋಕಂ ಶರಬತ್ತು ಮಾಡುವ ವಿಧಾನ

  ಕೋಕಂ ಶರಬತ್ತು ಮಾಡುವ ವಿಧಾನ

  ಕೋಕಂ ಹಣ್ಣಿನ ಸಿಪ್ಪೆಯನ್ನು 1 ಕಪ್ ಬಿಸಿನೀರಿನಲ್ಲಿ ಅರ್ಧ ಗಂಟೆ ಕಾಲ ನೆನಸಿಡಿ.

  *ನೀರಿನ ಬಣ್ಣ ಕೆಂಪಗಾಗುವವರೆಗೂ ಕಾಯಿರಿ, ತದನಂತರ ಕೋಕಂ ಹಣ್ಣಿನ ಸಿಪ್ಪೆಯನ್ನು ಮೆದುವಾಗಿ ಹಿಚುಕಿರಿ, ಸಿಪ್ಪೆಯನ್ನು ಪಕ್ಕಕ್ಕೆ ಇಡಿ

  *ಇನ್ನು 3 ರಿಂದ 4 ಗ್ಲಾಸ್ ನೀರು ಬೆರೆಸಿ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ 15 ನಿಮಿಷ ಫ್ರಿಡ್ಜ್‌ನಲ್ಲಿ ಇಟ್ಟರೆಕೋಕಂ ಜ್ಯೂಸ್ ರೆಡಿ

   

  English summary

  Amazing Health Benefits Of Kokum Juice

  Kokum fruit is one the healthiest fruits that is available in most parts of India. The scientific name of this fruit is Garcinia indica. It is known for its bright-red colour and sour taste. Kokum juice is a refreshing juice that has numerous health benefits associated with it. Kokum fruit is loaded with vitamin C, vitamin B complex and minerals such as potassium, manganese and magnesium
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more