ಅಪ್ಪಟ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ, ಆರೋಗ್ಯದ ಕೀಲಿಕೈ

By: manu
Subscribe to Boldsky

ನೆಲ್ಲಿಕಾಯಿಯನ್ನು ಕೊಂಚ ಹೊತ್ತಿನ ಕಾಲ ಅಗಿದು ನುಂಗಿದ ಬಳಿಕ ನೀರು ಕುಡಿದರೆ ಆ ನೀರು ಸಿಹಿಯಾಗಿರುತ್ತದೆ. ಇದರಲ್ಲೇನೋ ಮಹತ್ವವಿದೆ ಎಂದು ಆಗಲೇ ಮನದಟ್ಟಾಗುತ್ತದೆ. ಈ ಭಾವನೆಯನ್ನು ನೆಲ್ಲಿಕಾಯಿ ಸುಳ್ಳು ಮಾಡುವುದಿಲ್ಲ. ನೆಲ್ಲಿಕಾಯಿಯ ಸೇವನೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉತ್ತಮವಾಗಿದೆ. ಆದರೆ ಇದರ ಕೊಂಚ ಒಗರು ರುಚಿಯನ್ನು ಹೆಚ್ಚಿನವರು ಇಷ್ಟಪಡದೇ ಇರುವ ಕಾರಣ ನೆಲ್ಲಿಕಾಯಿಗೆ ಗಿರಾಕಿ ಕಡಿಮೆ.

ಆದರೆ ಒಂದು ವೇಳೆ ಈ ನೆಲ್ಲಿಕಾಯಿಯ ಒಗರು ರುಚಿ ಇಲ್ಲದೇ ಸಿಹಿಯಾಗಿದ್ದರೆ? ಉತ್ತಮ ಕಲ್ಪನೆ. ಈ ಕಲ್ಪನೆಯನ್ನು ಜೇನಿನ ಮೂಲಕ ನಿಜವಾಗಿಸಿಕೊಳ್ಳಬಹುದು. ಅಂದರೆ ಜೇನಿನಲ್ಲಿ ನೆಲ್ಲಿಕಾಯಿಯನ್ನು ಕೆಲವು ಕಾಲ ನೆನೆಸಿಟ್ಟರೆ ಬಹುಕಾಲ ನೆಲ್ಲಿಕಾಯಿ ಕೆಡದೇ ಇರುತ್ತದೆ ಹಾಗೂ ಇದರ ಆರೋಗ್ಯಕಾರಿ ಗುಣಗಳು ಮತ್ತು ಜೇನಿನ ಗುಣಗಳು ಜೊತೆಗೂಡಿ ಒಂದು ಅದ್ಭುತವಾದ ಆರೋಗ್ಯವರ್ಧಕವಾಗಿ ಪರಿಣಮಿಸುತ್ತದೆ. ಅಷ್ಟೇ ಅಲ್ಲ, ಈಗ ಈ ನೆಲ್ಲಿಕಾಯಿಯ ರುಚಿ ಸಿಹಿಯಾಗಿದ್ದು ಒಂದು ತಿಂದ ಬಳಿಕ ಇನ್ನೊಂದು ತಿನ್ನಲು ಪ್ರೇರೇಪಿಸುತ್ತದೆ. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ ಹುಳಿಮಿಶ್ರಿತ ಸಿಹಿಯಾಗಿದ್ದು ಇದನ್ನು ಇಷ್ಟಪಡದವರು ಯಾರೂ ಇರಲಾರರು. ಈ ನೆಲ್ಲಿಕಾಯಿಯನ್ನು ಪ್ರತಿನಿತ್ಯ ಬೆಳಿಗ್ಗೆ ತಿಂದರೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ಇದನ್ನು ನೆನೆಸಿಡಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಗಾಳಿಯಾಡದ ಭರಣಿ ಅಥವಾ ಗಾಜಿನ ಜಾಡಿಯ ಒಳಗೆ (ಪ್ಲಾಸ್ಟಿಕ್ಕಿನ, ಉಕ್ಕಿನ ಡಬ್ಬಿಗಳು ಇದಕ್ಕೆ ಸೂಕ್ತವಲ್ಲ!) ಅರ್ಧದಷ್ಟು ಅಪ್ಪಟ ಜೇನನ್ನು ತುಂಬಿ ಉಳಿದರ್ಧ ಭಾಗಕ್ಕೆ ನೆಲ್ಲಿಕಾಯಿಯನ್ನು ತುಂಬಿ. ಅಂದರೆ ನೆಲ್ಲಿಕಾಯಿ ತುಂಬಿದ ಬಳಿಕ ಜೇನು ಜಾಡಿಯ ಕುತ್ತಿಗೆಯವರೆಗೆ ತುಂಬಬೇಕು. ಬಳಿಕ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ ಕೆಲವು ದಿನಗಳ ಕಾಲ ಹಾಗೇ ಇಡಬೇಕು. ನೆಲ್ಲಿಕಾಯಿ ಎಷ್ಟು ಬಲಿತಿರುತ್ತದೆಯೋ ಅಷ್ಟು ಹೆಚ್ಚು ದಿನ ಮೆತ್ತಗಾಗಲು ತೆಗೆದುಕೊಳ್ಳುತ್ತದೆ. ಸಿಹಿ ಜೇನುತುಪ್ಪವೇ, ಏನು ನಿನ್ನ ಹನಿಗಳ ಲೀಲೆ..! 

ಆದರೆ ಎಳೆಯ ಮತ್ತು ರಸಭರಿತ ನೆಲ್ಲಿಕಾಯಿ ಸುಮಾರು ಮೂರು ವಾರಗಳಲ್ಲಿಯೇ ಜೇನನ್ನು ಹೀರಿಕೊಂಡಿರುತ್ತದೆ. ಇದನ್ನು ಪರೀಕ್ಷಿಸಲು ಒಂದು ನೆಲ್ಲಿಕಾಯಿ ಹೊರತೆಗೆದು ಒತ್ತಿ ನೋಡಬೇಕು. ಇದು ಬೀಜದವರೆಗೂ ಮೆತ್ತಗಾಗಿದ್ದರೆ ತಿನ್ನಲು ಸೂಕ್ತ ಎಂದು ತಿಳಿಯಬೇಕು. ಇಲ್ಲದಿದ್ದರೆ ಇನ್ನಷ್ಟು ದಿನ ಹಾಗೇ ಬಿಡಬೇಕಾಗಬಹುದು. ಇದಕ್ಕಾಗಿ ರಸಭರಿತ ದೊಡ್ಡ ಗಾತ್ರದ ನೆಲ್ಲಿಕಾಯಿಗಳೇ ಸೂಕ್ತ. ಒಣಗಿದ, ಚಿಕ್ಕ ನೆಲ್ಲಿಕಾಯಿಗಳು ಬಹಳ ಹೆಚ್ಚು ದಿನ ತೆಗೆದುಕೊಳ್ಳುತ್ತವೆ. ನೆಲ್ಲಿಕಾಯಿ ಹೊರತೆಗೆದಾಗ ಅದರೊಂದಿಗೆ ಅಂಟಿಕೊಂಡಿರುವ ಜೇನನ್ನೂ ಜೊತೆಯಾಗಿಯೇ ತಿನ್ನಬೇಕು. ಬೀಜ ಮಾತ್ರ ತಿನ್ನಬಾರದು. ಬನ್ನಿ, ಈ ಜೋಡಿ ನಮಗೆ ಎಷ್ಟು ಉಪಯುಕ್ತ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಯಕೃತ್‌ನ ಕಾರ್ಯಕ್ಷಮತೆ ಕಡಿಮೆಯಾದರೆ ಕಾಮಾಲೆ ಬರುವ ಸಾಧ್ಯತೆ ಹೆಚ್ಚು. ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯೊಂದನ್ನು ನಿತ್ಯವೂ ಬೆಳಿಗ್ಗೆ ಸೇವಿಸಿದರೆ ಕಾಮಾಲೆ ಆಗುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಅಷ್ಟೇ ಅಲ್ಲ, ಒಂದು ವೇಳೆ ಈಗಾಗಲೇ ಕಾಮಾಲೆ ಆವರಿಸಿದ್ದು ಪ್ರಾರಂಭಿಕದಿಂದ ಮಧ್ಯಮ ಹಂತದಲ್ಲಿದ್ದರೆ ಇದನ್ನು ಗುಣಪಡಿಸುತ್ತದೆ ಕೂಡಾ. ಶರೀರದಲ್ಲಿ ಸಂಗ್ರಹವಾಗಿದ್ದ ಪಿತ್ತ ಮತ್ತು ಯಕೃತ್ ನಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಲು ಈ ಜೋಡಿ ತಕ್ಕುದಾಗಿದೆ.

ವೃದ್ಧಾಪ್ಯವನ್ನು ದೂರವಾಗಿಸುತ್ತದೆ.

ವೃದ್ಧಾಪ್ಯವನ್ನು ದೂರವಾಗಿಸುತ್ತದೆ.

ಪ್ರತಿನಿತ್ಯ ಒಂದು ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯನ್ನು ಸೇವಿಸುವ ಮೂಲಕ ತಾರುಣ್ಯ ಬಹುಕಾಲ ಉಳಿಯಲು ಸಾಧ್ಯವಾಗುತ್ತದೆ. ಇದು ನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನೂ ಪೋಷಕಾಂಶಗಳನ್ನೂ ನೀಡುತ್ತದೆ. ವಿಶೇಷವಾಗಿ ಚರ್ಮಕ್ಕೆ ನೀಡುವ ಪೋಷಣೆಯಿಂದ ಚರ್ಮದ ನೆರಿಗೆಗಳು ಮತ್ತು ಮುಖದ ಅತಿ ಸೂಕ್ಷ್ಮ ಗೆರೆಗಳನ್ನು ನಿವಾರಿಸಿ ವೃದಾಪ್ಯವನ್ನು ದೂರವಾಗಿಸುತ್ತದೆ.

ಅಸ್ತಮಾ ತೊಂದರೆಯಿಂದ ರಕ್ಷಿಸುತ್ತದೆ

ಅಸ್ತಮಾ ತೊಂದರೆಯಿಂದ ರಕ್ಷಿಸುತ್ತದೆ

ಪ್ರತಿದಿನ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯೊಂದನ್ನು ಸೇವಿಸುವ ಮೂಲಕ ಅಸ್ತಮಾ, ಬ್ರಾಂಕೈಟಿಸ್ ಹಾಗೂ ಇನ್ನಿತರ ಶ್ವಾಸಸಂಬಂಧಿ ರೋಗಗಳಿಂದ ಬಳಲುತ್ತಿರುವವರಿಗೆ ಉತ್ತಮ ಪೋಷಣೆ ದೊರೆತು ಈ ತೊಂದರೆಗಳಿಂದ ಶೀಘ್ರ ಉಪಶಮನ ದೊರಕುತ್ತದೆ.

ಅಸ್ತಮಾ ತೊಂದರೆಯಿಂದ ರಕ್ಷಿಸುತ್ತದೆ

ಅಸ್ತಮಾ ತೊಂದರೆಯಿಂದ ರಕ್ಷಿಸುತ್ತದೆ

ಇದರಲ್ಲಿ ಹೇರಳವಾಗಿರುವ ಆಂಟಿ ಆಕ್ಸಿಡೆಂಟುಗಳ ಕಾರಣ ಇವು ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಿ ಹಲವು ಕ್ಯಾನ್ಸರ್ ರೋಗಗಳಿಂದ ರಕ್ಷಿಸುತ್ತದೆ. ಶ್ವಾಸನಾಳಗಳು ಕಿರಿದಾಗಲು ಇವೇ ಕಣಗಳು ಕಾರಣವಾಗಿದ್ದು ಇದರ ಮೂಲಕ ಬರಬಹುದಾದ ಅಸ್ತಮಾ ಆಘಾತದ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ಕೆಮ್ಮು, ಶೀತ ಮತ್ತು ಗಂಟಲ ಸೋಂಕನ್ನು ಗುಣಪಡಿಸುತ್ತದೆ

ಕೆಮ್ಮು, ಶೀತ ಮತ್ತು ಗಂಟಲ ಸೋಂಕನ್ನು ಗುಣಪಡಿಸುತ್ತದೆ

ನೆಲ್ಲಿಕಾಯಿಯನ್ನು ಹೊರತೆಗೆದು ಬೀಜ ನಿವಾರಿಸಿ ಜಜ್ಜಿ ನಯವಾದ ಮಿಶ್ರಣ ತಯಾರಿಸಿ ಒಂದು ದೊಡ್ಡ ಚಮಚದಷ್ಟನ್ನು ನೇರವಾಗಿ ಸೇವಿಸಿದರೆ ಕೆಮ್ಮು, ಶೀತ, ಕಫ ಮೊದಲಾದ ತೊಂದರೆಗಳಿಂದ ಶೀಘ್ರ ಉಪಶಮನ ದೊರಕುತ್ತದೆ. ಇದಕ್ಕೆ ಕೊಂಚ ಹಸಿಶುಂಠಿಯ ರಸವನ್ನು ಸೇರಿಸಿದರೆ ಅತ್ಯುಗ್ರ ಶೀತ ಮತ್ತು ಕೆಮ್ಮು ಸಹಾ ಗುಣವಾಗುತ್ತದೆ.

ಕೆಮ್ಮು, ಶೀತ ಮತ್ತು ಗಂಟಲ ಸೋಂಕನ್ನು ಗುಣಪಡಿಸುತ್ತದೆ

ಕೆಮ್ಮು, ಶೀತ ಮತ್ತು ಗಂಟಲ ಸೋಂಕನ್ನು ಗುಣಪಡಿಸುತ್ತದೆ

ನೆಲ್ಲಿಕಾಯಿ ಮತ್ತು ಜೇನಿನ ಸೋಂಕುನಿವಾರಕ ಗುಣಗಳು ಒಂದಕ್ಕೊಂದು ಪೂರಕವಾಗಿರುವ ಕಾರಣ ಇವು ಅದ್ಭುತಪರಿಣಾಮಗಳನ್ನು ನೀಡುತ್ತವೆ.

ಜೀರ್ಣಶಕ್ತಿಯ ತೊಂದರೆಗಳನ್ನು ಸರಿಪಡಿಸುತ್ತವೆ

ಜೀರ್ಣಶಕ್ತಿಯ ತೊಂದರೆಗಳನ್ನು ಸರಿಪಡಿಸುತ್ತವೆ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯ ಸೇವನೆಯಿಂದ ಅಜೀರ್ಣ, ಹೊಟ್ಟೆಯಲ್ಲಿ ಉರಿ, ಹುಳಿತೇಗು ಮೊದಲಾದ ತೊಂದರೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಇದು ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ.

ಜೀರ್ಣಶಕ್ತಿಯ ತೊಂದರೆಗಳನ್ನು ಸರಿಪಡಿಸುತ್ತವೆ

ಜೀರ್ಣಶಕ್ತಿಯ ತೊಂದರೆಗಳನ್ನು ಸರಿಪಡಿಸುತ್ತವೆ

ಇದರ ನಿಯಮಿತ ಸೇವನೆಯಿಂದ ಮೂಲವ್ಯಾಧಿ ಮತ್ತು ಮಲಬದ್ದತೆ ಸಹಾ ತೊಂದರೆಯಾಗುತ್ತದೆ. ಒಂದು ವೇಳೆ ಈ ಎರಡು ತೊಂದರೆಗಳು ಈಗಾಗಲೇ ಆವರಿಸಿದ್ದರೆ ದಿನಕ್ಕೆ ಎರಡು ನೆಲ್ಲಿಕಾಯಿಯ ಸೇವನೆ ಉತ್ತಮ ಪರಿಹಾರ ನೀಡುತ್ತದೆ.

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ನಿತ್ಯದ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯೊಂದರ ಸೇವನೆಯಿಂದ ದಿನದಲ್ಲಿ ಸೇವಿಸಿದ್ದ ಅನಾರೋಗ್ಯಕರ ಆಹಾರಗಳ ಮೂಲಕ ದೇಹದಲ್ಲಿ ಪ್ರವೇಶ ಪಡೆದಿದ್ದ ವಿಷಕಾರಿ ವಸ್ತುಗಳು, ಆಹಾರ ಜೀರ್ಣವಾದ ಬಳಿಕ ಉತ್ಪತ್ತಿಯಾದ ವಿಷಕಾರಿ ವಾಯು, ಆಮ್ಲಗಳು, ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಕಣಗಳು ಮೊದಲಾದವುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ.

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ಅಲ್ಲದೇ ರಕ್ತದಲ್ಲಿರುವ ವಿಷಕಾರಿ ವಸ್ತುಗಳೂ ದೇಹದಿಂದ ಹೊರಹೋಗಲು ನೆರವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕೊಂಚ ನೀರು ಕುಡಿದ ಬಳಿಕ ಸೇವಿಸುವುದು ಉತ್ತಮ.

ಸಂತಾನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಸಂತಾನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಎಲ್ಲವೂ ಸರಿಯಾಗಿದ್ದು ಯಾವುದೋ ಅಗೋಚರ ಕಾರಣದಿಂದ ಸಂತಾನಭಾಗ್ಯದಿಂದ ವಂಚಿತ ಮಹಿಳೆಯರಿಗೆ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ ಫಲವಂತಿಕೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಮಾಸಿಕ ರಜಾದಿನಗಳಲ್ಲಿ ಕೆಳಹೊಟ್ಟೆಯಲ್ಲಿ ಕಾಣಬರುವ ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮಾಸಿಕ ಋತುಚಕ್ರ ಅನಿಯಮಿತವಾಗಿದ್ದರೆ ನಿಯಮಿತವಾಗಿ ನಡೆಯಲು ಸಾಧ್ಯವಾಗುತ್ತದೆ.

ಕೂದಲನ್ನು ಸೊಂಪಾಗಿಸುತ್ತದೆ

ಕೂದಲನ್ನು ಸೊಂಪಾಗಿಸುತ್ತದೆ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಗೆ ಅಂಟಿಕೊಂಡಿರುವ ಜೇನನ್ನು ನಿವಾರಿಸಿ ಕೇವಲ ನೆಲ್ಲಿಕಾಯಿಯ ತಿರುಳನ್ನು ಮಾತ್ರ ಅರೆದು ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಕೂದಲ ಬುಡಕ್ಕೆ ಮತ್ತು ಕೂದಲ ಉದಕ್ಕೂ ಸವರಿಕೊಳ್ಳುವ ಮೂಲಕ ದುರ್ಬಲವಾದ ಕೂದಲನ್ನು ಸೊಂಪಾಗಿಸಬಹುದು.

ಕೂದಲನ್ನು ಸೊಂಪಾಗಿಸುತ್ತದೆ

ಕೂದಲನ್ನು ಸೊಂಪಾಗಿಸುತ್ತದೆ

ಇನ್ನೂ ಉತ್ತಮವೆಂದರೆ ಸ್ನಾನದಲ್ಲಿ ಬಳಸುವ ಕಂಡೀಶನರ್ ಬದಲಿಗೆ ನೆಲ್ಲಿಕಾಯಿಯ ಲೇಪನವನ್ನು ಬಳಸುವುದು. ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ, ಕೂದಲು ಕಾಂತಿಯುಕ್ತವಾಗುತ್ತದೆ ಹಾಗೂ ತುದಿಗಳು ಸೀಳುವ ಪ್ರಮೇಯ ಇಲ್ಲವಾಗುತ್ತದೆ.

 
English summary

Amazing Health Benefits Of Amla Soaked In Honey

You might have heard many health benefits of amla, also known as an Indian gooseberry. However, having amla along with honey comes with a unique set of health benefits. It also makes those sour green amlas a tasty treat to eat. Soaking amlas in honey not only preserves them but also enhances their health benefits and their taste as well. Honey in amla will preserve the amlas for months and 
 will tingle your taste buds for sure.
Please Wait while comments are loading...
Subscribe Newsletter