For Quick Alerts
ALLOW NOTIFICATIONS  
For Daily Alerts

ನಿದ್ದೆಯಲ್ಲಿ ನಡೆಯುವ ಅಭ್ಯಾಸವಿದೆಯೇ? ಕಾರಣ ತಿಳಿದುಕೊಳ್ಳಿ

By Staff
|

ಕೆಲವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. ನಡುರಾತ್ರಿ ನಿದ್ದೆಯಲ್ಲಿದ್ದಂತೆಯೇ ಹಗಲಿನಲ್ಲಿ ನಡೆಯುವಷ್ಟೇ ಸರಾಗವಾಗಿ ಮನೆಯಲ್ಲೆಲ್ಲಾ ಓಡಾಡಿ, ಕೆಲವೊಮ್ಮೆ ಮನೆಯಿಂದ ಹೊರಗೆ ರಸ್ತೆ, ಉದ್ಯಾನಗಳಲ್ಲೂ ಓಡಾಡಿ ಮತ್ತೆ ಮೊದಲಿದ್ದ ಸ್ಥಳಕ್ಕೇ ಬಂದು ಮಲಗಿಬಿಡುತ್ತಾರೆ. ಮರುದಿನ ಬೆಳಿಗ್ಗೆ ಈ ಬಗ್ಗೆ ಕೇಳಿದರೆ ಇವೆಲ್ಲಾ ಅವರಿಗೆ ನೆನಪಿರುವುದೇ ಇಲ್ಲ.

ಕುವೆಂಪು, ಚಂದ್ರಶೇಖರ ಕಂಬಾರ, ಕಾರಂತರ ಕೆಲವು ಕಥೆಗಳಲ್ಲಿಯೂ ನಿದ್ದೆಯಲ್ಲಿ ನಡೆಯುವ ಅಭ್ಯಾಸವನ್ನು ವರ್ಣಿಸಲಾಗಿದೆ. somnambulism ಎಂಬು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುವ ಈ ತೊಂದರೆ ಮೆದುಳಿಗೆ ಸಂಬಂಧಪಟ್ಟಿದೆ. ಚಿಕ್ಕಂದಿನಲ್ಲಿ ಕಂಡುಬರುವ ಈ ಅಭ್ಯಾಸ ಹತ್ತು ವರ್ಷ ವಯಸ್ಸಾದಂತೆ ತನ್ನಿಂತಾನಾಗಿಯೇ ಕೊನೆಗೊಳ್ಳುತ್ತದೆ.

ಆದರೆ ಕೆಲವರಲ್ಲಿ ಈ ಅಭ್ಯಾಸ ವಯಸ್ಕರಾದ ಬಳಿಕವೂ ಉಳಿದುಕೊಳ್ಳುತ್ತದೆ. ಥಾಮಸ್ ಎಡಿಸನ್, ಜೆನಿಫರ ಅನಿಸ್ಟನ್ ರಂತಹ ಖ್ಯಾತನಾಮರೂ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಹೊಂದಿದ್ದರು. ಒಂದು ಸಮೀಕ್ಷೆಯ ಪ್ರಕಾರ ಸುಮಾರು ಐದು ಶೇಖಡಾ ಭಾರತೀಯ ವಯಸ್ಕರು ನಿದ್ದೆಯಲ್ಲಿ ನಡೆಯುವ ಅಭ್ಯಾಸ ಹೊಂದಿದ್ದಾರೆ. ಅಯ್ಯೋ ನಿದ್ದೆ ಮಾತ್ರೆಯ ಸಹವಾಸ ಬೇಡಪ್ಪಾ ಬೇಡ!

ನಿದ್ದೆಯಲ್ಲಿ ನಡೆಯುವ ಅಭ್ಯಾಸ ನೇರವಾಗಿ ಅಪಾಯಕರವಲ್ಲದಿದ್ದರೂ ಹೊಸ ಸ್ಥಳಕ್ಕೆ ಹೋದಾಗ ಅಥವಾ ಮನೆಯ ಹೊರಗೇ ರಸ್ತೆಯಿದ್ದು ವಾಹನಗಳು ಓಡಾಡುತ್ತಿರುವಾಗ, ಮಲಗುವ ಕೋಣೆ ಮೇಲಂತಸ್ತಿನಲ್ಲಿದ್ದು ಕೆಳಕ್ಕೆ ಬೀಳುವ ಸಂಭವವಿದ್ದಾಗ ಪರೋಕ್ಷವಾಗಿ ಮಾರಣಾಂತಿಕವಾಗಿ ಪರಿಣಮಿಸಬಹುದು. ಹೆಚ್ಚಿನ ಪಕ್ಷದಲ್ಲಿ ಇದು ವಂಶಪಾರಂಪರಿಕವಾಗಿಯೂ ಬಂದಿರಬಹುದು. ಕೆಲವರು ಕಣ್ಣು ಬಿಟ್ಟುಕೊಂಡು ಎಚ್ಚರವಿದ್ದಂತೆಯೇ ವರ್ತಿಸುತ್ತಿದ್ದರೆ ಕೆಲವರು ಕಣ್ಣು ಮುಚ್ಚಿಕೊಂಡೇ ನಡೆಯುತ್ತಾರೆ. ಕೆಲವರಂತೂ ಯಾವುದೋ ಭೂತ ಅಥವಾ ಕಾಡುಪ್ರಾಣಿ ಅಟ್ಟಿಸಿಕೊಂಡು ಬಂದರೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವಂತೆ ಓಡುತ್ತಾರೆ. ಇನ್ನೂ ಕೆಲವರು ಆರಾಮವಾಗಿ ಊಟದ ಮೇಜಿನ ಮೇಲೆ ಕುಳಿತು ಊಟ ಮಾಡಿ ಕೈತೊಳೆದು ಬಂದು ಮಲಗುತ್ತಾರೆ. ಅಧಿಕ ನಿದ್ದೆ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು!

ನಿದ್ದೆಯಲ್ಲಿ ನಡೆಯುವ ಅಭ್ಯಾಸಕ್ಕೆ ಪ್ರಮುಖ ಕಾರಣಗಳು

ನಿದ್ದೆಯಲ್ಲಿ ನಡೆಯುವ ಅಭ್ಯಾಸಕ್ಕೆ ಪ್ರಮುಖ ಕಾರಣಗಳು

ಹೆಚ್ಚಾಗಿ ಇದು ವಂಶಪಾರಂಪರ್ಯವಾಗಿ ಬರುವ ಕಾರಣವೆಂದು ತಜ್ಞರು ತಿಳಿಸಿದರೂ ದೈನಂದಿನ ಕೆಲಸದ ಅಥವಾ ಯಾವುದೋ ಒಂದು ವಿಷಯದ ಒತ್ತಡ ಮೆದುಳಿನ ಮೇಲೆ ಪ್ರಭಾವ ಬೀರಿ ನಿದ್ದೆಯಲ್ಲಿ ನಡೆಯುವ ಮತ್ತು ಇತರ ಘಟನೆಗಳಿಗೆ ಕಾರಣವಾಗಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ. ಆದ್ದರಿಂದ ಎಷ್ಟೇ ಒತ್ತಡವಿದ್ದರೂ ನಿದ್ದೆಯ ಸಮಯದಲ್ಲಿ ನಿರಾಳವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

ನಿದ್ದೆಯ ಕೊರತೆ

ನಿದ್ದೆಯ ಕೊರತೆ

ವಯಸ್ಕರಿಗೆ ದಿನಕ್ಕೆ ಕನಿಷ್ಟ ಆರು ಗಂಟೆಯ ನಿದ್ದೆ ಬೇಕು, ಎಂಟು ಗಂಟೆಯಾದರೆ ಉತ್ತಮ ಎಂದು ವಿಜ್ಞಾನ ತಿಳಿಸುತ್ತದೆ. ಆದರೆ ಕೆಲವರಿಗೆ ನಿದ್ದೆಯೇ ಬರದೇ ಹೊರಳಾಡುತ್ತಾ ಕೇವಲ ಮೂರು ನಾಲ್ಕು ಗಂಟೆಗಳ ನಿದ್ದೆ ಪಡೆಯುವುದರಿಂದ ಮರುದಿನ ಅಥವಾ ನಂತರದ ದಿನಗಳಲ್ಲಿ ನಿದ್ದೆಯಲ್ಲಿ ನಡೆಯುವ ಸಾಧ್ಯತೆ ಕಂಡುಬಂದಿದೆ. ಭಾರತದ ಖ್ಯಾತ ನಟ ಶಾರುಖ್ ಖಾನ್, ಸಂಗೀತ ನಿರ್ದೇಶಕ ವಿಶಾಲ್ ದಾದ್ಲಾನಿ ಮೊದಲಾದವರೂ ಈ ತೊಂದರೆಗೆ ಒಳಗಾಗಿದ್ದಾರೆ.

ಕೆಲವು ಔಷಧಿಗಳ ಅಡ್ಡಪರಿಣಾಮಗಳು

ಕೆಲವು ಔಷಧಿಗಳ ಅಡ್ಡಪರಿಣಾಮಗಳು

ಕೆಲವು ಔಷಧಿಗಳನ್ನು ತುಂಬಾ ಕಾಲದವರೆಗೆ ಸೇವಿಸುತ್ತಾ ಬಂದಿರುವುದರಿಂದ ಆಗುವ ಅಡ್ಡಪರಿಣಾಮಗಳಲ್ಲಿ ನಿದ್ದೆಯಲ್ಲಿ ನಡೆಯುವ ಅಭ್ಯಾಸವೂ ಒಂದು. ಅದರಲ್ಲೂ ಹೆಚ್ಚಾಗಿ ನಿದ್ದೆ ಬರಿಸುವ ಔಷಧಿಗಳ ಪ್ರಭಾವ ಇದರಲ್ಲಿ ಹೆಚ್ಚು.

ಹೃದಯ ಸಂಬಂಧಿ ತೊಂದರೆಗಳು

ಹೃದಯ ಸಂಬಂಧಿ ತೊಂದರೆಗಳು

ನಿದ್ದೆಯಲ್ಲಿ ನಡೆಯುವ ಅಭ್ಯಾಸವುಳ್ಳವರು ಸಾಮಾನ್ಯ ಹೃದಯದ ತೊಂದರೆಯಿಂದಲೂ ಬಳಲುತ್ತಿರುತ್ತಾರೆ. ಇದಕ್ಕೆ ನೇರವಾದ ಸಂಬಂಧ ಏನು ಎಂಬುದು ಇದುವರೆಗೆ ಬಗೆಹರಿಯದ ರಹಸ್ಯವಾಗಿದ್ದು ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ.

ವ್ಯಸನಕ್ಕೆ ಒಳಗಾದವರು

ವ್ಯಸನಕ್ಕೆ ಒಳಗಾದವರು

ಯಾವುದಾದರೂ ದುಃಶ್ಚಟಕ್ಕೆ ಒಳಗಾಗಿ ವ್ಯಸನಿಗಳಾದವರು ನಿದ್ದೆಯಲ್ಲಿ ನಡೆಯುವುದು ಮಾತ್ರವಲ್ಲ, ಅಪಾಯಕಾರಿ ವ್ಯಕ್ತಿಗಳೂ ಆಗಬಹುದು. ವಿಶೇಷವಾಗಿ ಮೂಗಿನ ಮತ್ತು ರಕ್ತದ ಮೂಲಕ ಮಾದಕ ದ್ರವ್ಯಗಳನ್ನು ಸೇವಿಸುವವರು ನಡುರಾತ್ರಿ ಹೊರಹೋಗಿ ಕೊಲೆ,ಅತ್ಯಾಚಾರಗಳನ್ನು ಎಸಗಿರುವುದು ಬೆಳಕಿಗೆ ಬಂದಿದೆ. ಮದ್ಯಪಾನವೂ ಇನ್ನೊಂದು ಕಾರಣವಾಗಿದೆ. ಮದ್ಯಪಾನದ ಅಭ್ಯಾಸ ಹೆಚ್ಚಿರುವವರೂ, ಸದಾ ಮದ್ಯಪಾನ ಮಾಡುತ್ತಿದ್ದು ಒಂದೆರಡು ದಿನ ಮಾಡದಿದ್ದವರೂ ನಿದ್ದೆಯಲ್ಲಿ ನಡೆಯುವುದನ್ನೂ ಇತ್ತೀಚಿನ ಸಂಶೋಧನೆಗಳು ಸಾಬೀತುಪಡಿಸಿವೆ.

ಇತರ ಕಾರಣಗಳು

ಇತರ ಕಾರಣಗಳು

ನಿದ್ದೆಯಲ್ಲಿ ನಡೆಯುವವರಲ್ಲಿ ಕೆಲವೊಮ್ಮೆ ಯಾವುದೇ ತೊಂದರೆ ಕಂಡುಬರದಿದ್ದು ಕೇವಲ ಮಾನಸಿಕ ಕಾರಣಗಳಿರಬಹುದು. ಇದನ್ನು ಮನಃಶಾಸ್ತ್ರಜ್ಞರಿಂದ ಮಾತ್ರ ಕಂಡುಕೊಳ್ಳಲು ಸಾಧ್ಯ. ಏಕೆಂದರೆ ಕೆಲವರು ಮನಸ್ಸಿನಲ್ಲಿಯೇ ಕೊರಗನ್ನು ಹಚ್ಚಿಕೊಂಡು ಯಾರಿಗೂ ಹೇಳದೇ ಒಳಗೇ ಒದ್ದಾಡುತ್ತಿರುತ್ತಾರೆ. ಮದುವೆಯಾಗಿ ಹೆಂಡತಿಯನ್ನು ಊರಲ್ಲಿ ಬಿಟ್ಟು ನಗರಕ್ಕೆ ಬಂದ ಯುವಕನ ನಿದ್ದೆಯಲ್ಲಿ ನಡೆಯುವ ಕಾರಣವನ್ನು ಅಭ್ಯಸಿಸಿದ ವೈದ್ಯರು ಹೆಂಡತಿಯನ್ನು ಬಳಿಗೆ ಕರೆಸಿಕೊಳ್ಳಲು ಹೇಳುತ್ತಾರೆ. ಆ ಬಳಿಕ ಒಂದು ದಿನವೂ ಆತ ನಿದ್ದೆಯಲ್ಲಿ ನಡೆದ ನಿದರ್ಶನವಿಲ್ಲ! ಕೆಲವರಿಗೆ ಈಗಾಗಲೇ ಭಾರೀ ಮಾನಸಿಕ ಆಘಾತವಾಗಿದ್ದು (ಉದಾಹರಣೆಗೆ ಆಪ್ತರ ಮರಣ) ಆ ಗುಂಗಿನಿಂದ ಹೊರಬರಲು ಸಾಧ್ಯವಾಗದೇ ಇದ್ದರೂ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಕಂಡುಬರಬಹುದು. ಇದಕ್ಕೆ ಮಾನಸಿಕ ತಜ್ಞರ ಚಿಕಿತ್ಸೆ ಅಗತ್ಯ.

Sleep Apnea ಎಂಬ ಅವಸ್ಥೆ

Sleep Apnea ಎಂಬ ಅವಸ್ಥೆ

ನಿದ್ದೆಯಲ್ಲಿದ್ದಾಗ ಉಸಿರಾಟ ಕೆಲವು ಕ್ಷಣಗಳವರೆಗೆ ನಿಂತೇ ಹೋಗಿ ಬಳಿಕ ಮತ್ತೆ ಪ್ರಾರಂಭವಾಗುವ Sleep Apnea ಎಂಬ ಅವಸ್ಥೆಯೂ ನಿದ್ದೆಯಲ್ಲಿ ನಡೆಯುವ ಪ್ರಕ್ರಿಯೆಗೆ ಚಾಲನೆ ನೀಡಬಹುದು. ಇತ್ತೀಚಿನವರೆಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದು ಈಗ ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು ಇದಕ್ಕೆ ಕಾರಣ ಮತ್ತು ಚಿಕಿತ್ಸೆಯ ಬಗ್ಗೆ ವಿವರಗಳು ಇನ್ನಷ್ಟೇ ಬರಬೇಕಾಗಿದೆ.

ನಿಮ್ಮ ಆಪ್ತರಿಗೆ ಈ ತೊಂದರೆಯಿದ್ದಾಗ ಏನು ಮಾಡಬೇಕು

ನಿಮ್ಮ ಆಪ್ತರಿಗೆ ಈ ತೊಂದರೆಯಿದ್ದಾಗ ಏನು ಮಾಡಬೇಕು

ನಿಮ್ಮ ಆಪ್ತರಿಗೆ ನಿದ್ದೆಯಲ್ಲಿ ನಡೆಯುವ ತೊಂದರೆಯಿದ್ದರೆ ಮನೆಯವರು ಸಾಕಷ್ಟು ತಾಳ್ಮೆ ವಹಿಸಿ ಕೆಳಗಿನ ಸೂಚನೆಗಳನ್ನು ಅನುಸರಿಸಬೇಕು

* ನಿದ್ದೆಯಲ್ಲಿದ್ದವರನ್ನು ಬಲವಂತವಾಗಿ ಎಬ್ಬಿಸಲು ಯತ್ನಿಸಬೇಡಿ

* ಅವರನ್ನು ಸಾಧ್ಯವಾದಷ್ಟು ನಯವಾಗಿ ಮತ್ತೆ ತಿರುಗಿ ಅವರ ಮಲಗುವ ಹಾಸಿಗೆಯತ್ತ ಕರೆದುಕೊಂಡು ಹೋಗಿ

* ಮನೆಯ ಮುಂಬಾಗಿಲನ್ನು ಒಳಗಿನಿಂದ ಬೀಗ ಹಾಕಿ ಬೀಗದ ಕೈಯನ್ನು ಅವರಿಗೆ ಕಾಣದ ಸ್ಥಳದಲ್ಲಿಡಿ (ರಾತ್ರಿ ಮಲಗುವ ಮುನ್ನ ಅವರು ಇದನ್ನು ನೋಡಿದ್ದರೆ ಆ ಬೀಗದ ಕೈಯಿಂದ ಬಾಗಿಲು ತೆರೆದು ಹೊರಹೋದ ನಿದರ್ಶನಗಳಿವೆ)

* ಈಗಾಗಲೇ ಹೊರಹೋಗಿದ್ದರೆ ಕೇವಲ ಶಬ್ದ ಮತ್ತು ಹೆಸರು ಕರೆಯುವ ಮೂಲಕ ಎಬ್ಬಿಸಲು ಯತ್ನಿಸಿ, ಸರ್ವಥಾ ಅಲ್ಲಾಡಿಸಿ ಎಚ್ಚರಾಗಿಸಲು ಯತ್ನಿಸಬೇಡಿ. ನೆನಪಿಡಿ. ಈ ಯತ್ನ ಅವರಿಗೆ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ನಡೆಸಲು ಪ್ರೇರಣೆ ನೀಡುತ್ತದೆ. ಹೆಚ್ಚಿನ ಕೊಲೆಗಳು ಸಹಾ ಈ ಯತ್ನದಲ್ಲಿಯೇ ಆಗಿವೆ.

ಈ ತೊಂದರೆ ಇದ್ದವರು ಏನು ಮಾಡಬೇಕು

ಈ ತೊಂದರೆ ಇದ್ದವರು ಏನು ಮಾಡಬೇಕು

* ಸಾಕಷ್ಟು ಬೇಗನೇ ಮಲಗಿ ಬೇಗನೇ ಏಳಲು ಯತ್ನಿಸಿ.

* ರಾತ್ರಿಯ ಹೊರತಾಗಿ ಬೇರೆ ಸಮಯದಲ್ಲಿ ಮಲಗಬೇಡಿ

* ಉತ್ತಮ ಆಹಾರ ಮತ್ತು ವೈದ್ಯರು ನೀಡಿದ್ ಔಷಧಿಗಳನ್ನು ನಿಯಮಿತವಾಗಿ ಸೇವಿಸಿ

* ನಿಮಗೆ ನೆಮ್ಮದಿ ನೀಡುವ ಯಾವುದೇ ಚಟುವಟಿಕೆಯ ಮೂಲಕ ,ಉದಾಹರಣೆಗೆ ಪುಸ್ತಕ ಓದುವ ಅಭ್ಯಾಸ, ಮನಸ್ಸನ್ನು ನಿರಾಳವಾಗಿಸಿ ಗಾಢನಿದ್ದೆಗೆ ಒಳಪಡಲು ಯತ್ನಿಸಿ.

* ನಿಮ್ಮ ದೈನಂದಿನ ಚಿಂತನೆಗಳನ್ನು ನೆನೆಯದೇ ಬೇರೆ ವಿಷಯದ ಬಗ್ಗೆ ಚಿಂತಿಸುತ್ತಾ ಗಾಢನಿದ್ದೆಗೆ ಒಳಪಡಲು ಯತ್ನಿಸಿ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

What Causes People To Sleep Walk

What causes people to sleepwalk? Well, a disorder known as somnambulism is responsible for the sleep walking behaviour. A person suffering from this disorder tends to walk during deep sleep. A strange aspect of this disorder is that, the person may forget the incident of sleepwalking after waking up.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X