For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜಿನ ಸಮಸ್ಯೆ: ಪುರುಷರ ಸಂಖ್ಯೆಯೇ ಜಾಸ್ತಿ!

|

ಇತ್ತೀಚಿನ ದಿನಗಳಲ್ಲ೦ತೂ ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಸಹ ಆರೋಗ್ಯದ ಕುರಿತಾದ ಚಿ೦ತನೆಯು ಹೆಚ್ಚುತ್ತಿದೆ. ಅನಾರೋಗ್ಯಕರವಾದ ಜೀವನಶೈಲಿ ಹಾಗೂ ಅಸಮ೦ಜಸವಾದ ಆಹಾರ ಸೇವನೆಯ ಚಟಗಳು, ಹೊಟ್ಟೆಯ ಸುತ್ತಲಿನ ಬೊಜ್ಜಿನ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿವೆ.

ಹೊಟ್ಟೆಯ ಬೊಜ್ಜಿನ೦ತಹ ಗ೦ಭೀರವಾದ ಸಮಸ್ಯೆಯು ಸಣ್ಣ ವಯಸ್ಸಿನ ಮಕ್ಕಳನ್ನೂ ಬಿಟ್ಟಿಲ್ಲ. ಈ ಹೊಟ್ಟೆಯ ಸುತ್ತಲೂ ಸ೦ಗ್ರಹಗೊಳ್ಳುವ ಕೊಬ್ಬಿನ ಕುರಿತು ಮುತುವರ್ಜಿವಹಿಸದಿದ್ದರೆ, ಇದೇ ಮು೦ದಕ್ಕೆ ಮಾರಣಾ೦ತಿಕವಾದ ಅನೇಕ ರೋಗಗಳಿಗೆ ಪ್ರಮುಖ ಕಾರಣವಾಗಬಲ್ಲದು...!

ಅದರಲ್ಲಿಯೂ ಇತ್ತೀಚಿನ ಯುವಜನತೆ ಆಧುನಿಕತೆಯ ಭರದಲ್ಲಿ ತಾವು ಏನು ಮಾಡುತ್ತಿದ್ದೇವೆ ಎನ್ನುವುದನ್ನೇ ಮರೆತುಹೋಗಿದ್ದಾರೆ. ಬೆಳಿಗ್ಗೆ ಕಚೇರಿಗೆ ಹೊರಟರೆ ಮಧ್ಯಾಹ್ನ ಊಟಕ್ಕೆ ಫಿಜ್ಜಾ, ಬರ್ಗರ್ ತಿಂದು, ರಾತ್ರಿಯಾಗುತ್ತಿದ್ದಂತೆ ಗೆಳೆಯರೊಂದಿಗೆ ಪಬ್, ಹೋಟೆಲ್‌ಗಳಲ್ಲಿ ಬೇಕುಬೇಡದೆಲ್ಲವನ್ನು ತಿನ್ನುತ್ತಾರೆ.

What Causes Belly Fat In Men?

ಇಷ್ಟೇ ಸಾಕು ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗಲು ಹೌದು, ಒಂದು ಸಮೀಕ್ಷೆಯ ಪ್ರಕಾರ ಶೇ. 76ರಷ್ಟು ಪುರುಷರು ಅಧಿಕ ತೂಕ ಹೊಂದಿರುವವರು ಎಂದು ತಿಳಿದುಬಂದಿದೆ! ಆದರೆ ಇದರಿಂದಾಗಿ ಮಾತ್ರ ಕೊಬ್ಬು ಸಂಗ್ರಹವಾಗುತ್ತದೆ ಎಂದಲ್ಲ..! ಸಾಮಾನ್ಯವಾಗಿ ಹೊಟ್ಟೆಯ ಸುತ್ತಲೂ ಕೊಬ್ಬು ಸ೦ಚಯನಗೊಳ್ಳಲು ಒ೦ದಲ್ಲ, ಎರಡಲ್ಲ, ಅನೇಕ ಕಾರಣಗಳಿವೆ. ಆದ್ದರಿ೦ದ, ಈ ಕಾರಣಗಳನ್ನು ಗುರುತಿಸುವುದು ಅತ್ಯಗತ್ಯ ಹಾಗೂ ಅನ೦ತರ ಅವುಗಳ ಕುರಿತು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಹೊಟ್ಟೆಯ ಬೊಜ್ಜು ತನ್ನ ಸ೦ಗಾತಿಗಳ ರೂಪದಲ್ಲಿ ತ೦ದೊಡ್ಡಬಹುದಾದ ರೋಗಗಳು ಹೃದಯ, ರಕ್ತದೊತ್ತಡ, ಮೂತ್ರಪಿ೦ಡಗಳು ಇವೇ ಮೊದಲಾದ ಪ್ರಮುಖ ಅ೦ಗಾ೦ಗಳಿಗೆ ಸ೦ಬ೦ಧಿಸಿದವುಗಳಾಗಿದ್ದು, ಇದರಿಂದ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಮತ್ತು ಹಲವಾರು ಸ೦ದರ್ಭಗಳಲ್ಲಿ ಅರ್ಬುದ ರೋಗ ಅಥವಾ ಕ್ಯಾನ್ಸರ್ ರೋಗಕ್ಕೂ ಸಹ ಈ ಹೊಟ್ಟೆಯ ಬೊಜ್ಜು ಕಾರಣವಾಗಬಲ್ಲದು!

ನೆನಪಿನಲ್ಲಿಟ್ಟುಕೊಳ್ಳಿ, ಅಲ್ಪಪ್ರಮಾಣದ ಹೊಟ್ಟೆಯ ಬೊಜ್ಜು ಸಹ ಅಪಾಯಕಾರಿಯಾಗಬಲ್ಲದು. ಬನ್ನಿ ಹೊಟ್ಟೆಯ ಬೊಜ್ಜಿಗೆ ಸಾಮಾನ್ಯ ಕಾರಣಗಳೇನು ಎಂಬುದನ್ನು ನೋಡೋಣ... ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

ಬಿಯರ್

What Causes Belly Fat In Men?

ಹೌದು, ಬಿಯರ್ ಬೊಜ್ಜನ್ನು ಉಂಟು ಮಾಡುತ್ತದೆ. ಮದ್ಯಪಾನದ ಅಭ್ಯಾಸವಿರುವ ಪುರುಷರು ಆಲ್ಕೋಹಾಲ್ ತ್ಯಜಿಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಆಲ್ಕೋಹಾಲ್ ಮೂಲಕ ನಿಮ್ಮ ದೇಹವನ್ನು ಸೇರುವಂತಹ ಅಧಿಕ ಕ್ಯಾಲರಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ.

ಜಡತ್ವದ ಉದ್ಯೋಗ

ಇಂದಿನ ಅತ್ಯಾಧುನಿಕ ಉದ್ಯೋಗಗಳು ಜಡತ್ವವನ್ನು ಉಂಟು ಮಾಡುತ್ತಿದೆ. ಇಂತಹ ಉದ್ಯೋಗದಲ್ಲಿ ಸಮಯ ಕಳೆಯುವ ಹೆಚ್ಚಿನ ಪುರುಷರು ದೈಹಿಕ ಚಟವಟಿಕೆಯಿಲ್ಲದೆ ಬೊಜ್ಜು ಬೆಳೆಸಿಕೊಳ್ಳುತ್ತಾರೆ.

ವ್ಯಾಯಾಮಕ್ಕೆ ಸಮಯದ ಕೊರತೆ

ನಿಯಮಿತವಾಗಿ ವ್ಯಾಯಾಮ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆಗೆ ಸಾಮಾನ್ಯವಾಗಿ ಕೇಳಿ ಬರುವಂಹತ ಉತ್ತರ ಸಮಯದ ಅಭಾವ. ಈ ಕಾರಣವನ್ನು ಬದಿಗಿರಿಸಿದರೆ ವ್ಯಾಯಾಮದ ಕೊರತೆಯು ಪುರುಷರ ಹೊಟ್ಟೆಯಲ್ಲಿ ಬೊಜ್ಜು ಬೆಳೆಯಲು ಪ್ರಮುಖ ಕಾರಣವಾಗಿದೆ.

What Causes Belly Fat In Men?

ಅಡಗಿದ ರಾಕ್ಷಸ

ಇಂದಿನ ದಿನಗಳಲ್ಲಿ ಉದ್ಯೋಗದೊಂದಿಗೆ ನಮಗೆ ಉಚಿತವಾಗಿ ಬರುವ ಉಡುಗೊರೆಯೆಂದರೆ ಒತ್ತಡ. ಎಲ್ಲಾ ಸಮಯದಲ್ಲಿ ಗೆಲ್ಲಲೇಬೇಕಾದ ಒತ್ತಡ ಮತ್ತು ಪ್ರತೀ ದಿನವೂ ಪರಿಪೂರ್ಣವಾಗಿರುವುದು ಪುರುಷರನ್ನು ಹಿಂದಿಗಿಂತಲೂ ಹೆಚ್ಚು ಒತ್ತಡಕ್ಕೆ ಸಿಲುಕಿಸಿದೆ. ಒತ್ತಡದಿಂದಾಗಿ ಹಾರ್ಮೋನಿನಲ್ಲಿ ಬದಲಾವಣೆಯಾಗಿ ಪುರುಷರ ಆಹಾರ ತಿನ್ನುವ ಅಭ್ಯಾಸವನ್ನು ಹೆಚ್ಚಿಸಬಹುದು. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಪ್ರಚೋದನೆಗೊಳಗಾಗುವುದು

ಕೇವಲ ಮಹಿಳೆಯರು ಮಾತ್ರ ಜಂಕ್ ಫುಡ್ ಅನ್ನು ಇಷ್ಟಪಡುತ್ತಾರೆಂದು ನಾವು ಭಾವಿಸಿದ್ದೇವೆ ಆದರೆ ಪುರುಷರು ಕೂಡ ಗೌಪ್ಯವಾಗಿ ಇದನ್ನು ಇಷ್ಟಪಡುತ್ತಾರೆ. ಇದು ನಿಜವಲ್ಲವೆಂದು ವಾದಿಸುತ್ತಿದ್ದರೆ ಪುರುಷರ ಹೊಟ್ಟೆಯ ಬೊಜ್ಜು ಇದನ್ನು ಸಾಬೀತುಪಡಿಸುತ್ತದೆ.

What Causes Belly Fat In Men?

ಅತಿಯಾದ ಪಾರ್ಟಿ

ಪುರುಷರ ಒಳಗಿನ ಪಾರ್ಟಿ ಮಾಡುವಂತಹ ಪ್ರಾಣಿಯು ಒಮ್ಮೆ ಜಾಗೃತವಾದರೆ ಆಗ ಅವರು ತುಂಬಾ ಕುಡಿಯುತ್ತಾರೆ ಮತ್ತು ತಮ್ಮ ಆರೋಗ್ಯಕ್ಕೆ ಎಷ್ಟು ತೊಂದರೆ ಉಂಟುಮಾಡುತ್ತಿದ್ದೇವೆಂದು ಯೋಚಿಸದೆ ಮಿತಿಮೀರಿ ತಿನ್ನುತ್ತಾರೆ.

English summary

What Causes Belly Fat In Men?

A recent survey indicated that 76% of today's young men are overweight!! If you are overweight, you don't need to panic but if your excess weight is mainly due to belly fat, then you have more than one reason to panic. Belly fat kills! Most of the women think that belly fat in men is mainly due to beer but there are other reasons behind it. What causes belly fat? Well, your belly is the first place where your excess fat gets stored.
Story first published: Friday, July 17, 2015, 23:14 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more