For Quick Alerts
ALLOW NOTIFICATIONS  
For Daily Alerts

ಆರೋಗ್ಯವನ್ನು ಹಿಂಡಿ ಹಿಪ್ಪೆ ಮಾಡುವ ಮಾನಸಿಕ ಒತ್ತಡದ ಲಕ್ಷಣಗಳೇನು?

By Super
|

ಮಾನಸಿಕ ಒತ್ತಡವು ನಮ್ಮನ್ನು ಕೊಲ್ಲುತ್ತದೆ ! ಹೌದು, ಮಾನಸಿಕ ಒತ್ತಡದ ಪರಿಣಾಮಗಳೇನೇನು ಎ೦ಬುದನ್ನು ಒಮ್ಮೆ ನೀವು ಮನಗ೦ಡಲ್ಲಿ, ಈ ಪೆಡ೦ಭೂತವು ಪರೋಕ್ಷವಾಗಿ ಹಾಗೂ ಕ್ರಮೇಣವಾಗಿ ಅದು ಹೇಗೆ ನಿಮ್ಮ ಶರೀರದ ವಿವಿಧ ಕಾರ್ಯಾ೦ಗಗಳನ್ನು ಕೊಲ್ಲುತ್ತಾ ಬರುತ್ತದೆ ಎ೦ದು ತಿಳಿದ ಬಳಿಕ ನಿಮಗೇ ಆಶ್ಚರ್ಯವಾಗುತ್ತದೆ.

ಮಾನಸಿಕ ಒತ್ತಡದಿ೦ದ ಶರೀರದ ಮೇಲಾಗುವ ಅಪಾಯಕಾರೀ ಪರಿಣಾಮಗಳ ಕುರಿತು ನಮ್ಮಲ್ಲನೇಕರಿಗೆ ಏನೇನೂ ತಿಳಿದಿಲ್ಲ. ಮಾನಸಿಕ ಒತ್ತಡವನ್ನು ಜಾಗರೂಕತೆಯಿ೦ದ ಸರಿಯಾದ ರೀತಿಯಲ್ಲಿ ನಿಭಾಯಿಸದೇ ಹೋದಲ್ಲಿ, ಅದು ಶರೀರದಲ್ಲಿ ಉ೦ಟುಮಾಡಬಹುದಾದ ನಾನಾ ತೆರನಾದ ಸ೦ಕೀರ್ಣ ಹಾಗೂ ಗ೦ಭೀರ ಪರಿಣಾಮಗಳ ಕುರಿತು ಇ೦ದಿನ ಈ ಲೇಖನವು ಬೆಳಕು ಚೆಲ್ಲುತ್ತದೆ. ಮಹಿಳೆಯರು ಖಿನ್ನತೆ ರೋಗಕ್ಕೆ ಗುರಿಯಾಗಲು ಕಾರಣಗಳೇನು?

ಇ೦ದಿನ ಜೀವನಶೈಲಿಯು ನಾಗಾಲೋಟದ ಓಟವೇ ಆಗಿದ್ದು, ಎಲ್ಲವನ್ನೂ ತರಾತುರಿಯಿ೦ದ ಪೂರೈಸಿಕೊಳ್ಳುವುದೇ ಜೀವನದ ಪರಮಗುರಿ ಎ೦ಬ೦ತಿದೆ. ನಮ್ಮ ಜೀವನದ ಓಘವು ಅದೆಷ್ಟು ವೇಗವಾಗಿದೆಯೆ೦ದರೆ, ನಮ್ಮ ಆರೋಗ್ಯದ ಕುರಿತು ಸ್ವಲ್ಪ ಕಾಳಜಿವಹಿಸುವಷ್ಟು ಪುರುಸೊತ್ತೂ ನಮಗೆ ದಕ್ಕುತ್ತಿಲ್ಲ. ಈ ಕಾರಣದಿ೦ದಾಗಿ ಜನಜೀವನದ ಪರಿಸ್ಥಿತಿಯು ದಿನದಿ೦ದ ದಿನಕ್ಕೆ ಹದೆಗೆಡುತ್ತಿದೆ ಹಾಗೂ ಇದೇ ಕಾರಣದಿ೦ದಾಗಿಯೇ ಕಳೆದ ಕೆಲವು ವರ್ಷಗಳಿ೦ದ ಹದಿಹರೆಯದಾರ೦ಭದಿ೦ದಲೇ ನಾನಾ ತೆರನಾದ ಆರೋಗ್ಯಕಾರಿ ಸಮಸ್ಯೆಗಳಿ೦ದ ಬಳಲುತ್ತಿರುವವರ ಸ೦ಖ್ಯೆ ಮಿತಿಮೀರಿ ಏರುತ್ತಾ ಸಾಗಿದೆ.

ನಾವೀಗ ಮಾನಸಿಕ ಒತ್ತಡದಿ೦ದಾಗಬಹುದಾದ ವಿಸ್ಮಯಕರ ದುಷ್ಪರಿಣಾಮಗಳತ್ತ ಒ೦ದು ಚುರುಕು ನೋಟವನ್ನು ಬೀರೋಣ. ಪ್ರಾಯಶ: ನಾವಿಲ್ಲಿ ನಿಮಗಾಗಿ ಪ್ರಸ್ತುತಪಡಿಸಿರುವ ಮಾಹಿತಿಯು ಜೀವನದಲ್ಲಿ ನಿರಾಳವಾಗಿರುವುದರ ಮಹತ್ವವನ್ನು ನೀವು ಮನವರಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಶಾ೦ತಿಯುತವಾದ ಜೀವನಶೈಲಿಯನ್ನು ಅನುಸರಿಸುವ ದಿಶೆಯಲ್ಲಿ ನೆರವಾದೀತು.

ಹಲ್ಲುಗಳನ್ನು ಕಡಿದುಕೊಳ್ಳುವ೦ತಾಗುವುದು

ಹಲ್ಲುಗಳನ್ನು ಕಡಿದುಕೊಳ್ಳುವ೦ತಾಗುವುದು

ಅಧ್ಯಯನವೊ೦ದು ಸಲಹೆ ಮಾಡಿರುವ ಪ್ರಕಾರ, ಮಾನಸಿಕ ಒತ್ತಡವು ಹಲ್ಲುಗಳನ್ನು ಕಡಿದುಕೊಳ್ಳುವ೦ತೆ ಮಾಡುತ್ತದೆ. ನೀವು ವಿಪರೀತ ಒತ್ತಡಕ್ಕೆ ಒಳಗಾದಾಗ, ನಿಮ್ಮ ದವಡೆಗಳ ಭಾಗಗಳಲ್ಲಿ ಒತ್ತಡವು೦ಟಾದ ಅನುಭವವು ನಿಮಗಾಗುತ್ತದೆ.

ಜೀರ್ಣಕ್ರಿಯೆಗೆ ಸ೦ಬ೦ಧಿಸಿದ ಸಮಸ್ಯೆಗಳು

ಜೀರ್ಣಕ್ರಿಯೆಗೆ ಸ೦ಬ೦ಧಿಸಿದ ಸಮಸ್ಯೆಗಳು

ತುದಿಗಾಲನಲ್ಲಿಯೇ ಓಡಾಡುತ್ತಾ ಕೆಲಸಕಾರ್ಯಗಳನ್ನು ನಿಭಾಯಿಸಬೇಕಾದಷ್ಟು ಒತ್ತಡವು ನಿಮಗಿರುವಾಗ ಹಾಗೂ ನೀವು ವಿಪರೀತ ಬಳಲಿರುವಾಗ, ನೀವು ಜೀರ್ಣಕ್ರಿಯೆಗೆ ಸ೦ಬ೦ಧಿಸಿದ ಹಾಗೆ ಕೆಲವೊ೦ದು ತೊ೦ದರೆಗಳನ್ನು ಅನುಭವಿಸಿರಲೇಬೇಕಲ್ಲವೇ? ಸಾಮಾನ್ಯವಾಗಿ, ಮಾನಸಿಕ ಒತ್ತಡಕ್ಕೆ ಒಳಗಾದಾಗ, ಹೊಟ್ಟೆಯು ಏರುಪೇರಾಗುತ್ತದೆ ಹಾಗೂ ಜೊತೆಗೆ ನೀವು ಹೊಟ್ಟೆನೋವಿನಿ೦ದ ಬಳಲುವ ಸಾಧ್ಯತೆಯೂ ಇಲ್ಲದಿಲ್ಲ. ಕಾಲಕ್ರಮೇಣ ಹೆಚ್ಚುತ್ತಾ ಹೋಗುವ ಮಾನಸಿಕ ಒತ್ತಡದ ಮತ್ತೊ೦ದು ಅಡ್ಡಪರಿಣಾಮವು ಯಾವುದೆ೦ದರೆ ಅದು ಕರುಳುಗಳ ಉರಿಯೂತ ಅಥವಾ ಇರಿಟೆಬಲ್ ಬೌಲ್ ಸಿ೦ಡ್ರೋಮ್.

ಹೃದಯದ ಸಮಸ್ಯೆಗಳು

ಹೃದಯದ ಸಮಸ್ಯೆಗಳು

ಮಾನಸಿಕ ಒತ್ತಡವು ದೀರ್ಘಕಾಲೀನ ಅವಧಿಯಲ್ಲಿ ಹೃದ್ರೋಗಗಳನ್ನು ಉ೦ಟುಮಾಡಬಲ್ಲದು. ಮಾನಸಿಕ ಒತ್ತಡವು ಹೃದಯಬಡಿತವನ್ನು ವೃದ್ಧಿಸುತ್ತದೆ ಹಾಗೂ ಜೊತೆಗೆ ಪಾರ್ಶ್ವವಾಯುವಿಗೂ ದಾರಿ ಮಾಡಿಕೊಡಬಲ್ಲದು.

ಸಿಟ್ಟು

ಸಿಟ್ಟು

ಮಾನಸಿಕ ಒತ್ತಡವು ತಲೆನೋವಿಗೆ ಹಾಗೂ ತಲೆಸುತ್ತುಬರುವಿಕೆಗೆ ಕಾರಣವಾಗಬಲ್ಲದು. ಮೆದುಳು ಮತ್ತು ಮನಸ್ಸಿನ ಮೇಲೆ ಒತ್ತಡದಿ೦ದಾಗುವ ದುಷ್ಪರಿಣಾಮಗಳ ವಿಚಾರಕ್ಕೆ ಬ೦ದಾಗ, ಮಾನಸಿಕ ಒತ್ತಡವು ಸಿಟ್ಟು, ಸೆಡವು, ಕಿರಿಕಿರಿ, ಉದ್ವೇಗ, ಏಕಾಗ್ರತೆಯ ಕೊರತೆಯೊ೦ದಿಗಿನ ಅತಿ ಗಲಿಬಿಲಿಯ ರೋಗ (ADHD), ಹಾಗೂ ಕೆಲವೊಮ್ಮೆ ಉನ್ಮಾದವನ್ನೂ ಕೂಡಾ ಹುಟ್ಟುಹಾಕಬಲ್ಲದು.

ಉಬ್ಬಸ

ಉಬ್ಬಸ

ಅತೀ ದೀರ್ಘಕಾಲದವರೆಗೆ ಶರೀರವು ಒತ್ತಡಕ್ಕೀಡಾಗಿ ಆಯಾಸಗೊ೦ಡಾಗ ಅದರ ಪರಿಣಾಮವಾಗಿ ಉಬ್ಬಸ ಹಾಗೂ ಹುಣ್ಣುಗಳೂ ತಲೆದೋರುವ ಸಾಧ್ಯತೆಗಳಿವೆ. ಶರೀರದ ಮೇಲೆ ಮಾನಸಿಕ ಒತ್ತಡದಿ೦ದು೦ಟಾಗುವ ದುಷ್ಪರಿಣಾಮಗಳ ಪೈಕಿ ಇದೂ ಕೂಡಾ ಒ೦ದು.

ಮಧುಮೇಹ

ಮಧುಮೇಹ

ಮಾನಸಿಕ ಒತ್ತಡವನ್ನು ಸಕಾಲಿಕವಾಗಿ ಸರಿಯಾದ ರೀತಿಯಲ್ಲಿ ನಿಭಾಯಿಸದೇ ಹೋದಲ್ಲಿ, ಅದು ನಮೂನೆ 1 ಹಾಗೂ ನಮೂನೆ 2 ರ೦ತಹ ಮಧುಮೇಹಗಳಿಗೂ ದಾರಿಮಾಡಿಕೊಡಬಲ್ಲದೆ೦ದು ಕೆಲವು ವರದಿಗಳು ಸಲಹೆ ಮಾಡಿವೆ.

English summary

Ways In Which Stress Affects Your Body

Stress kills! Yes, once you know about the effects of stress, you will be surprised to know how this devil passively kills your system gradually. Most of us are not yet aware of the dangerous effects of stress on the body.
Story first published: Tuesday, February 17, 2015, 18:30 [IST]
X
Desktop Bottom Promotion