For Quick Alerts
ALLOW NOTIFICATIONS  
For Daily Alerts

ಎಲೆಮರೆ ಕಾಯಿಯಂತಿರುವ ಇಂತಹ ಎಣ್ಣೆಗಳ ಬಗ್ಗೆ ತಿಳಿದಿದೆಯೇ?

By Vivek
|

ಮಾರುಕಟ್ಟೆಯಲ್ಲಿ ಹತ್ತು ಹಲವಾರು ಸಂಸ್ಥೆಗಳು ತಮ್ಮ ತಮ್ಮ ಉತ್ಪನ್ನಗಳಲ್ಲಿ ಏನೆಲ್ಲಾ ಒಳ್ಳೆಯ ಅಂಶಗಳಿವೆ ಎಂಬ ಪಟ್ಟಿಯನ್ನು ನೀಡಿ ನಿಮಗೆ ಆಯ್ಕೆ ನೀಡುತ್ತವೆ. ಹಾಗಾಗಿ ಅದರಲ್ಲಿ ಸೂಕ್ತವಾದ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವ ಸರದಿ ನಮ್ಮದು. ಈ ಆಯ್ಕೆಯನ್ನು ಸುಲಭಗೊಳಿಸಲು ಬೋಲ್ಡ್ ಸ್ಕೈ ತಂಡ ನಿಮಗೆ ಈ ಕೆಳಗಿನ ಮಾಹಿತಿಗಳೊಂದಿಗೆ ಸಹಕರಿಸುತ್ತಿದೆ.

ಎಣ್ಣೆಯು ಕೇವಲ ಮನೆಯಲ್ಲಿ ಅಡುಗೆಗೆ ಮಾತ್ರ ಕೆಲಸಕ್ಕೆ ಬರುವುದಿಲ್ಲ. ಇದರ ಜೊತೆಗೆ ನಮ್ಮ ಆರೋಗ್ಯಕರ ಜೀವನಕ್ಕೆ ಬೇಕಾದ ಔಷಧೀಯ ಗುಣಗಳನ್ನು ಸಹ ಇವು ಒಳಗೊಂಡಿದೆ. ಮೊದಲು ನಿಮ್ಮ ಮನೆಯ ಅಡುಗೆ ಮನೆಯಲ್ಲಿರುವ ಅಂಶಗಳ ಉಪಯೋಗಗಳನ್ನು ನಿಮ್ಮದಾಗಿಸಿಕೊಳ್ಳಿ. ಇಲ್ಲಿ ನಿಮಗಾಗಿ, ನಿಮ್ಮ ಆರೋಗ್ಯದ ವೃದ್ಧಿಗಾಗಿ ನಾವು ಸುಲಭವಾದ ಮತ್ತು ಅಗ್ಗವಾದ 10 ಅದ್ಭುತವಾದ ಎಣ್ಣೆಗಳ ಪಟ್ಟಿಯನ್ನು ನೀಡುತ್ತಿದ್ದೇವೆ: ದೇಹದ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರವಾದ ಅಡುಗೆ ಎಣ್ಣೆ ಯಾವುದು?

ಲವಂಗದ ಎಣ್ಣೆ

ಲವಂಗದ ಎಣ್ಣೆ

ಲವಂಗದ ಎಣ್ಣೆಯು ಪ್ರಕೃತಿಯ ಒಂದು ಅದ್ಭುತವಾಗಿದೆ. ಇದೊಂದು ಅರಿವಳಿಕೆಕಾರಿ ಮತ್ತು ನಂಜುನಿವಾರಕ ಔಷಧಿಯಾಗಿ ದಂತ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಡುತ್ತದೆ. ಹಲ್ಲುನೋವಿಗೆ ಮತ್ತು ಹಲ್ಲಿನ ಸವಕಳಿಗೆ ಇದೊಂದು ಉತ್ತಮ ಮನೆ ಔಷಧಿಯಾಗಿ ಬಳಸಲ್ಪಡುತ್ತದೆ. ಇದರಲ್ಲಿ ಕಬ್ಬಿಣ, ವಿಟಮಿನ್ ಎ ಮತ್ತು ಸಿ ಯಥೇಚ್ಛವಾಗಿದ್ದು, ಇವುಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ.

ಹರಳೆಣ್ಣೆ

ಹರಳೆಣ್ಣೆ

ಹೊಟ್ಟೆಯ ಉಪಚಾರವನ್ನು ಈ ಎಣ್ಣೆ ಬಳಸಿಕೊಂಡು ಮಾಡಲಾಗುತ್ತದೆ, ಅದೇ ರೀತಿ ನಿಮ್ಮ ತ್ವಚೆಯನ್ನು ಈ ಎಣ್ಣೆ ಬಳಸಿಕೊಂಡು ಸುಂದರಗೊಳಿಸಲಾಗುತ್ತದೆ. ಎರಡು ಚಮಚ ಹರಳೆಣ್ಣೆ ಮತ್ತು ಸ್ವಲ್ಪ ಉಪ್ಪು ತೆಗೆದುಕೊಂಡು ಮಿಶ್ರ ಮಾಡಿ ನಿಮ್ಮ ಮುಖಕ್ಕೆ ಮಸಾಜ್ ಮಾಡಿ. ಎಣ್ಣೆ ಅಂಶದಿಂದ ಕೂಡಿರುವ ಚರ್ಮ ಮತ್ತು ಸೂಕ್ಷ್ಮ ತ್ವಚೆಗಾಗಿ ಈ ಎಣ್ಣೆಯನ್ನು ಬಳಸಿ.

ನಿಂಬೆ ಹಣ್ಣಿನ ಎಣ್ಣೆ

ನಿಂಬೆ ಹಣ್ಣಿನ ಎಣ್ಣೆ

ನಿಂಬೆಹಣ್ಣಿನ ಎಣ್ಣೆಯು ಪ್ರಕೃತಿಯ ಅತ್ಯಂತ ಶ್ರೇಷ್ಠ ಲಸಿಕೆಯಾಗಿದೆ. ನಿಂಬೆಯು ತನ್ನ ಸ್ವಾದವನ್ನು ನೀಡುವ ಗುಣದ ಹೊರತಾಗಿ ತನ್ನಲ್ಲಿರುವ ರೋಗ ನಿರೋಧಕ ವಿಟಮಿನ್ ಮತ್ತು ಮಿನರಲ್‍ಗಳಿಂದ ಎಲ್ಲೆಡೆ ಆದರಣೆಗೆ ಪಾತ್ರವಾಗಿದೆ. ಇದರ ಜೊತೆಗೆ ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ, ನಮ್ಮ ಮನಸ್ಸು ಮತ್ತು ದೇಹವನ್ನು ನೆಮ್ಮದಿಯಾಗಿಡುತ್ತದೆ. ಇದರ ಮತ್ತೊಂದು ವಿಶೇಷತೆಯೇನೆಂದರೆ ಇದು ಇನ್ನಿತರ ಎಲ್ಲಾ ಎಣ್ಣೆಗಳು ಮಾಡುವ ಕಾರ್ಯವನ್ನು ಮಾಡುತ್ತದೆ.

ಗುಲಾಬಿ ಎಣ್ಣೆ

ಗುಲಾಬಿ ಎಣ್ಣೆ

ಗುಲಾಬಿ ಎಣ್ಣೆಯು ತನ್ನ ಕಾಮೋತ್ತೇಜಕ ಗುಣದ ಹೊರತಾಗಿಯು ಮಾನವನ ದೇಹಕ್ಕೆ ಅತ್ಯಂತ ಅವಶ್ಯಕವಾಗಿದೆ. ಈ ಅತ್ಯಾವಶ್ಯಕ ಎಣ್ಣೆಯು ನಮ್ಮ ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತವೆ. ಅಲ್ಲದೆ ಇದು ಉದ್ವೇಗ, ಒತ್ತಡ ಮತ್ತು ಭೀತಿಗಳನ್ನು ನಿವಾರಿಸಿ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ.

ತುಳಸಿ ಎಣ್ಣೆ

ತುಳಸಿ ಎಣ್ಣೆ

ತುಳಸಿ ಎಣ್ಣೆಯು ಶೀತ ಮತ್ತು ಕೆಮ್ಮಿಗೆ ಅತ್ಯುತ್ತಮ ಬದಲಿ ಔಷಧವಾಗಿದೆ. ತುಳಸಿ ಎಣ್ಣೆಯ ಒಂದು ಸಣ್ಣ ಹನಿಯು ನಿಮಗೆ ಬಂದಿರುವ ಕೆಟ್ಟ ಶೀತ ಮತ್ತು ಒಣ ಕೆಮ್ಮನ್ನು ಹೊರದೋಡಿಸುತ್ತವೆ. ಈ ಎಣ್ಣೆಯಲ್ಲಿ ಸಹ ಅಂಟಿ ಆಕ್ಸಿಡೆಂಟ್, ವೈರಸ್ ಮತ್ತು ಸೂಕ್ಷಣು ನಿರೋಧಕ ಗುಣಗಳು ಇವೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಲ್ಯಾವೆಂಡರ್ ಎಣ್ಣೆಯನ್ನು ಅದರಲ್ಲಿರುವ ಚಿಕಿತ್ಸಾತ್ಮಕ ಗುಣಗಳ ಕಾರಣವಾಗಿ ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ. ಆರೋಮಾಥೆರಪಿಯಲ್ಲಿ ಇದನ್ನು ಅತ್ಯಗತ್ಯವಾದ ಎಣ್ಣೆಯಾಗಿ ಬಳಸುತ್ತಾರೆ. ಪ್ರಮುಖವಾಗಿ ಇದನ್ನು ಸ್ವಾಭಾವಿಕ ನೆಮ್ಮದಿಯ ಪರಿಣಾಮವನ್ನು ಒದಗಿಸಿ ವಿಶ್ರಾಂತಿಯನ್ನು ನೀಡುವ ಸಾಧನವಾಗಿ ಬಳಸುತ್ತಾರೆ. ಇದನ್ನು ಸಾಧಾರಣ ಸುಟ್ಟಗಾಯಗಳಿಗೆ, ಕೀಟಗಳ ಕಡಿತಕ್ಕೆ ಮತ್ತು ಮುಳ್ಳು ಚುಚ್ಚಿದ್ದಕ್ಕೆ ಸಹ ಬಳಸಬಹುದು.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಪುದೀನಾ ಎಣ್ಣೆಯನ್ನು ಸಾಂಪ್ರದಾಯಿಕ ಪೂರಕ ಪಥ್ಯ ಆಹಾರವಾಗಿ ಬಳಸಲಾಗುತ್ತದೆ. ಏಕೆಂದರೆ ಇದರಲ್ಲಿ ಜೀರ್ಣಶಕ್ತಿಯನ್ನು ಉತ್ತೇಜಿಸುವ ಅಂಶಗಳು ಇವೆ. ಇದು ಹೊಟ್ಟೆ ಉಬ್ಬುವುದು, ವಾಯು ತುಂಬಿದ ಮತ್ತು ಇನ್ನಿತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಪುದಿನಾವು ಸ್ತ್ರೀಯರ ಮಾಸಿಕ ಚಕ್ರದ ಸಮಯದಲ್ಲಿ ಬರುವ ನೋವು ಮತ್ತು ತಲೆನೋವುಗಳನ್ನು ಸಹ ಕಡಿಮೆ ಮಾಡುತ್ತದೆ. ಇದನ್ನು ತುರಿಕೆಯಾಗುವ ಜಾಗದಲ್ಲಿ ಹಚ್ಚಿದರೆ, ಅದರಿಂದಲು ಸಹ ಆರಾಮವನ್ನೊದಗಿಸುತ್ತದೆ.

English summary

Top 7 Oils for your good health

In the hunt for healthy oils, all you’re really looking for is as much fresh food as possible. As part of that varied, balanced, unadulterated diet, you’ll find good oils are naturally present and/or can be naturally extracted.
Story first published: Thursday, January 22, 2015, 19:46 [IST]
X
Desktop Bottom Promotion