For Quick Alerts
ALLOW NOTIFICATIONS  
For Daily Alerts

ರಕ್ತದಾನ ಮಾಡುವ ಮುನ್ನ ಮುನ್ನೆಚ್ಚರಿಕೆ ಕ್ರಮ ಅರಿಯಿರಿ

By Super
|

ರಕ್ತದಾನವೆಂದರೆ ಜೀವದಾನ, ಒಂದು ಜೀವವನ್ನುಳಿಸಲು ಬಳಸಲಾಗುವ ನಮ್ಮ ರಕ್ತವನ್ನು ದಾನರೂಪದಲ್ಲಿ ನೀಡುವ ಮೂಲಕ ಸಮಾಜ ಮತ್ತು ಮಾನವತೆಗಾಗಿ ನಾವು ಮಾಡಬಹುದಾದ ನಿಃಸ್ವಾರ್ಥ ಮತ್ತು ಒಂದು ಶ್ರೇಷ್ಠವಾದ ದಾನವಾಗಿದೆ. ದಾನರೂಪದಲ್ಲಿ ನೀಡಿದ ರಕ್ತ ಕೆಲವೇ ಗಂಟೆಗಳಲ್ಲಿ ನಮ್ಮ ದೇಹದಲ್ಲಿ ಮತ್ತೆ ಸೃಷ್ಟಿಯಾಗುವುದರಿಂದ ಆತಂಕಕ್ಕೆ ಕಾರಣವೇ ಇಲ್ಲ. ರಕ್ತದಾನ ಮಾಡುವುದರಿಂದ ಲಾಭಗಳೇನು?

ಅಲ್ಲದೇ ಪರೋಕ್ಷವಾಗಿ ರಕ್ತದಾನ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಆದರೆ ರಕ್ತದಾನ ಮಾಡುವ ಮುನ್ನ ಕೆಲವು ಎಚ್ಚರಿಕೆಗಳನ್ನು ಖಂಡಿತಾ ವಹಿಸಬೇಕು. ರಕ್ತ ತೆಗೆದುಕೊಳ್ಳುವ ಮೊದಲು ವೈದ್ಯರು ಈ ವಿಷಯಗಳನ್ನು ಪರಿಶೀಲಿಸುತ್ತಾರಾದರೂ ಕೆಳಗಿನ ಸಂಗತಿಗಳನ್ನು ಮೊದಲೇ ಅರಿತಿದ್ದರೆ ಅಗತ್ಯ ಸಂದರ್ಭಗಳಲ್ಲಿ ನಿಮ್ಮ ರಕ್ತದ ತುರ್ತಾಗಿ ಅಗತ್ಯವಿದ್ದರೆ ಮತ್ತು ಕೆಳಗಿನ ನಿಯಮಗಳಲ್ಲಿ ಒಂದನ್ನಾದರೂ ನೀವು ಪಾಲಿಸದಿದ್ದರೆ (ಅರಿವಿರದೇ) ನೀವು ಹತ್ತಿರವಿದ್ದೂ ರೋಗಿ ಅದರ ಪ್ರಯೋಜನ ಪಡೆಯಲಾರ. ಆಗ ನಿಮ್ಮನ್ನು ನೀವೇ ದೂಷಿಸಿಕೊಳ್ಳುವ ದ್ವಂದ್ವವನ್ನು ಕೆಳಗಿನ ಸ್ಲೈಡ್ ಶೋ ದೂರಮಾಡಲಿದೆ.

ರಕ್ತದಾನಕ್ಕೂ ಮುನ್ನ ಏನಾದರೂ ಆಹಾರ ಸೇವಿಸಿ

ರಕ್ತದಾನಕ್ಕೂ ಮುನ್ನ ಏನಾದರೂ ಆಹಾರ ಸೇವಿಸಿ

ಹಸಿವಿನಿಂದಿದ್ದಾಗ ಮತ್ತು ಉಪವಾಸವಿರುವಾಗ ರಕ್ತದಾನ ಮಾಡುವಂತಿಲ್ಲ. ಏಕೆಂದರೆ ಕಳೆದುಕೊಂಡ ರಕ್ತವನ್ನು ಮರುಪೂರೈಕೆ ಮಾಡಲು ದೇಹ ಅದೇ ಕ್ಷಣದಿಂದ ಕಾರ್ಯತತ್ಪರವಾಗುವುದರಿಂದ ಇದಕ್ಕೆ ಹೆಚ್ಚಿನ ಶಕ್ತಿಯ ಮತ್ತು ಪೋಷಕಾಂಶಗಳ ಅಗತ್ಯವಿದೆ. ರಕ್ತದಾನದ ಬಳಿಕ ಸುಸ್ತಾಗುವುದು ಮತ್ತು ತಲೆಸುತ್ತುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಕ್ತದಾನಕ್ಕೂ ಮುನ್ನ ಏನಾದರೂ ಆಹಾರ ಸೇವಿಸಿ

ರಕ್ತದಾನಕ್ಕೂ ಮುನ್ನ ಏನಾದರೂ ಆಹಾರ ಸೇವಿಸಿ

ಈ ಪರಿಸ್ಥಿತಿಗೆ ಒಳಗಾಗದಿರಲು ರಕ್ತದಾನಕ್ಕೂ ಮುನ್ನ ಕೊಂಚವಾದರೂ ಆಹಾರ ಸೇವಿಸುವುದು ಅಗತ್ಯ. ಉಪವಾಸವಿದ್ದವರ ರಕ್ತವನ್ನು ಪಡೆಯಲು ಸಾಧ್ಯವಿಲ್ಲ. ವೈದ್ಯರು ಇದಕ್ಕೆ ಅವಕಾಶ ನೀಡುವುದೂ ಇಲ್ಲ. ಬಳಿಕ ಸಾಕಷ್ಟು ದ್ರವಾಹಾರಗಳನ್ನು ಸೇವಿಸಬೇಕು. ರಕ್ತದಾನದ ಅಗತ್ಯಬೀಳಬಹುದು ಎಂದು ಮೊದಲೇ ಅರಿವಿದ್ದರೆ ಒಂದು ವಾರಕ್ಕೂ ಮೊದಲಿನಿಂದ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು, ಉದಾಹರಣೆಗೆ ಬಸಲೆ ಸೊಪ್ಪು, ಹೆಚ್ಚಾಗಿ ಸೇವಿಸಿ.

ಶಾರೀರಿಕ ತಪಾಸಣೆಯನ್ನು ನಿರೀಕ್ಷಿಸಿ

ಶಾರೀರಿಕ ತಪಾಸಣೆಯನ್ನು ನಿರೀಕ್ಷಿಸಿ

ರಕ್ತದಾನಕ್ಕೂ ಮೊದಲು ವೈದ್ಯರು ಅಥವಾ ರಕ್ತವನ್ನು ಸ್ವೀಕರಿಸುವ ಘಟಕದ ಪ್ರತಿನಿಧಿಯೊಬ್ಬರು ದಾನಿಗಳ ಬಗ್ಗೆ ಕೆಲವು ವಿವರಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ ಒಂದು ತೊಟ್ಟು ರಕ್ತವನ್ನು ಪರಿಶೀಲಿಸಿ ಕೆಲವೊಂದು ಸಾಂಕ್ರಾಮಿಕ ರೋಗಗಳಿಗಾಗಿ ಪರೀಕ್ಷೆಗೆ ಒಡ್ಡುತ್ತಾರೆ. ಇವೆಲ್ಲಾ ಯಾವುದೂ ಇಲ್ಲ ಎಂದು ಖಚಿತವಾದ ಬಳಿಕವೇ ನಿಮ್ಮ ರಕ್ತ ದಾನವಾಗಿ ಪಡೆಯಲು ಅರ್ಹ ಎಂಬ ಸೂಚನೆ ನೀಡುತ್ತಾರೆ. ನಿಮ್ಮ ಶಾರೀರಿಕ ಸ್ಥಿತಿ, ಅಂದರೆ ತೂಕ, ರಕ್ತದಲ್ಲಿನ ಹೀಮೋಗ್ಲೋಬಿನ್ ಮಟ್ಟ, ರಕ್ತದ ಒತ್ತಡ, ದಾನಿಯ ಇತಿಹಾಸ ಮೊದಲಾದ ಮಾಹಿತಿಗಳನ್ನು ಕಲೆಹಾಕಿದ ಬಳಿಕವೇ ರಕ್ತವನ್ನು ಸ್ವೀಕರಿಸಲು ಅನುಮತಿ ನೀಡುತ್ತಾರೆ. ಈ ಅನುಮತಿಯ ಹೊರತಾಗಿ ದಾನ ಮಾಡುವುದು ಅಪಾಯಕರ!

ಶಾರೀರಿಕ ತಪಾಸಣೆಯನ್ನು ನಿರೀಕ್ಷಿಸಿ

ಶಾರೀರಿಕ ತಪಾಸಣೆಯನ್ನು ನಿರೀಕ್ಷಿಸಿ

ಆರೋಗ್ಯವಂತ ರೋಗಿಗೆ ಕೆಳಗಿನ ಅರ್ಹತೆಗಳಿರಬೇಕು:

*ವಯಸ್ಸು: 18- 60 ವರ್ಷಗಳು

*ತೂಕ: 45ಕೇಜಿಗೂ ಹೆಚ್ಚಿರಬೇಕು.

*ಹೀಮೋಗ್ಲೋಬಿನ್: 12.5gm% ಕನಿಷ್ಟ ಇರಬೇಕು.

*ವೈದ್ಯಕೀಯ ಇತಿಹಾಸ: ದಾನಿ ಆರೋಗ್ಯವಂತನಾಗಿದ್ದು /ಳಾಗಿದ್ದು ಹಿಂದೆಂದೂ ಮಾರಕ ರೋಗಕ್ಕೆ ತುತ್ತಾಗಿರಬಾರದು.

ದಾನದ ಬಳಿಕ ವಿಶ್ರಾಂತಿ ಕಡ್ಡಾಯ

ದಾನದ ಬಳಿಕ ವಿಶ್ರಾಂತಿ ಕಡ್ಡಾಯ

ರಕ್ತದಾನದ ಬಳಿಕ ಕನಿಷ್ಟ ಹದಿನೈದು ನಿಮಿಷಗಳಾದರೂ ಪವಡಿಸಿ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿದೆ. ರಕ್ತದಾನದ ಮೂಲಕ ದಾನಿಯ ದೇಹದಿಂದ 350 ಮಿ.ಲೀ ರಕ್ತವನ್ನು ಪಡೆಯಲಾಗುತ್ತದೆ. ಈ ಹಂತದಲ್ಲಿ ದಾನಿಯು ಬೆನ್ನ ಮೇಲೆ ಮಲಗಿದ್ದು ಕೈಯನ್ನು ಪಕ್ಕಕ್ಕೆ ಚಾಚಿರುವಂತೆ ಇರಿಸಲಾಗುತ್ತದೆ. ಇದರಿಂದ ರಕ್ತ ಸುಲಭವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ರಕ್ತದಾನದ ಬಳಿಕ ಕೊಂಚ ತಲೆಸುತ್ತು ಮತ್ತು ಸುಸ್ತಾಗುವುದನ್ನು ನಿರೀಕ್ಷಿಸಬಹುದು. ಆದ್ದರಿಂದ ಹದಿನೈದು ನಿಮಿಷದ ಬಳಿಕವೂ ಹೆಚ್ಚಿನ ಶ್ರಮದ ಕೆಲಸಗಳನ್ನು ಮಾಡಬಾರದು.

ದಾನದ ಬಳಿಕ ವಿಶ್ರಾಂತಿ ಕಡ್ಡಾಯ

ದಾನದ ಬಳಿಕ ವಿಶ್ರಾಂತಿ ಕಡ್ಡಾಯ

ಆದ್ದರಿಂದ ಯಾವುದಾದರೂ ತುರ್ತಾದ ಮತ್ತು ಹೆಚ್ಚಿನ ದೈಹಿಹ ಶ್ರಮ ಬೇಡುವ ಕೆಲಸ ಅನಿವಾರ್ಯವಾಗಿದ್ದರೆ ಅದಕ್ಕೂ ಮುನ್ನ ರಕ್ತದಾನ ಮಾಡದಿರುವುದೇ ಲೇಸು. ಏಕೆಂದರೆ ರಕ್ತದಾನದ ಮತ್ತು ಅದರ ಮರುದಿನ ಸಾಮಾನ್ಯ ನಿತ್ಯದ ಚಟುವಟಿಕೆಗಳಿಗೆ ತೊಂದರೆಯಿಲ್ಲವಾದರೂ ಭಾರೀ ವ್ಯಾಯಾಮ, ಓಟ ಮೊದಲಾದ ಕೆಲಸಗಳಿಗೆ ವಿರಾಮ ನೀಡುವುದು ಉತ್ತಮ.

ರಕ್ತದಾನದ ಬಳಿಕ ಆಹಾರ ಸೇವಿಸಿ

ರಕ್ತದಾನದ ಬಳಿಕ ಆಹಾರ ಸೇವಿಸಿ

ರಕ್ತದಾನದ ಬಳಿಕ ದೇಹ ಕಳೆದುಕೊಂಡಿರುವ ರಕ್ತದ ಮೂಲಕ ದೇಹ ನೀರನ್ನೂ ಕಳೆದುಕೊಳ್ಳುವ ಕಾರಣ ರಕ್ತದಾನದ ಬಳಿಕ ಸಾಕಷ್ಟು ದ್ರವಾಹಾರವನ್ನು ಸೇವಿಸುವುದು ಅಗತ್ಯ. ಇದನ್ನು ಮನಗಂಡ ಸಂಸ್ಥೆಗಳು ಮೊದಲೇ ಕೊಂಚ ಬಿಸ್ಕತ್ತು ಮತ್ತು ಜ್ಯೂಸ್ ಗಳನ್ನು ವ್ಯವಸ್ಥೆ ಮಾಡಿರುತ್ತವೆ. ಆದರೂ ಒಂದು ವೇಳೆ ಅವರ ವ್ಯವಸ್ಥೆಗೂ ಮೀರಿ ಹೆಚ್ಚಿನ ದಾನಿಗಳು ಆಗಮಿಸಿದ್ದರೆ, ದಾನ ಪಡೆಯುವುದು ಅತ್ಯಂತ ಅನಿರೀಕ್ಷಿತವಾಗಿ ಇದಕ್ಕೆ ಸಿದ್ಧತೆ ನಡೆಸಿಲ್ಲದೇ ಜ್ಯೂಸ್ ಲಭ್ಯವಿಲ್ಲದಿದ್ದರೆ ದಾನಿ ಹೆಚ್ಚು ಸುಸ್ತಾಗಬಹುದು.

ರಕ್ತದಾನದ ಬಳಿಕ ಆಹಾರ ಸೇವಿಸಿ

ರಕ್ತದಾನದ ಬಳಿಕ ಆಹಾರ ಸೇವಿಸಿ

ಇದಕ್ಕಾಗಿ ರಕ್ತದಾನದ ಬಳಿಕ ತಕ್ಷಣ ಕೆಲವು ದ್ರವಾಹಾರ ಮತ್ತು ಘನ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು. ದಾನದ ಬಳಿಕ ಕೆಫೀನ್ ಇರುವ ಯಾವುದೇ ಪಾನೀಯ, ಉದಾಹರಣೆಗೆ ಕಾಫಿ, ಟೀ, ಮತ್ತು ಮಾರಕ ಪಾನೀಯಗಳಾದ ಮದ್ಯ ಮತ್ತು ನೊರೆಬರುವ ಲಘು ಪಾನೀಯಗಳಿಂದ ದೂರವಿರಿ. ರಕ್ತದಾನದ ಬಳಿಕ ಸೇವಿಸಲೇಬೇಕಾದ ಅತ್ಯಂತ ಸಮರ್ಪಕ ದ್ರವಾಹಾರವೆಂದರೆ ಎಳನೀರು. ಜೊತೆಗೇ ಮೂಸಂಬಿ ಮೊದಲಾದ ಆಹಾರ ಸೇವಿಸುವುದು ಉತ್ತಮ.

ರಕ್ತದಾನದ ಬಳಿಕ ಖರ್ಜೂರ ಸೇವಿಸಿ

ರಕ್ತದಾನದ ಬಳಿಕ ಖರ್ಜೂರ ಸೇವಿಸಿ

ದೇಹಕ್ಕೆ ಚೇತನ ನೀಡುವ ಇನ್ನೊಂದು ಆಹಾರವೆಂದರೆ ಖರ್ಜೂರ. ಕೆಲವು ಖರ್ಜೂರಗಳನ್ನು ಜೇಬಿನಲ್ಲಿಟ್ಟುಕೊಂಡು ಹೋಗಿ ರಕ್ತದಾನದ ಬಳಿಕ ಸೇವಿಸಿದರೆ ದೇಹ ಮರುಶಕ್ತಿ ಪಡೆಯಲು ಶೀಘ್ರವಾಗಿ ಸ್ಪಂದಿಸುತ್ತದೆ.

English summary

Things You Must Know When Donating Blood

Donating blood is one of the simplest and selfless things one can offer society. The blood you give can help save a life and requires very little effort and time from you. This donated blood is restored back quickly and doesn’t cause any kind of a health deficit in your body. But if you are considering donating blood, you must keep a few things in mind. Here are a few must knows when donating blood.
X
Desktop Bottom Promotion