For Quick Alerts
ALLOW NOTIFICATIONS  
For Daily Alerts

ಕ್ಷುಲ್ಲಕ ಕಾರಣಗಳಿಗಾಗಿ ನಿದ್ದೆ ಹಾಳು ಮಾಡಿಕೊಳ್ಳಬೇಡಿ!

|

ನಿದ್ದೆಯು ನಮ್ಮ ಆರೋಗ್ಯಕ್ಕೆ ಅತ್ಯಾವಶ್ಯಕವಾದ ಅಂಶವಾಗಿರುತ್ತದೆ. ಸರಿಯಾಗಿ ನಿದ್ದೆ ಮಾಡಲಿಲ್ಲವಾದಲ್ಲಿ, ನಮಗೆ ಮರುದಿನ ಸುಸ್ತು ಆವರಿಸಿಕೊಳ್ಳುವುದು ಸಹಜ. ನಿದ್ದೆ ಮಾಡುವಾಗ ನಮಗೆ ಮಾತ್ರ ವಿಶ್ರಾಂತಿ ದೊರೆಯುವುದಿಲ್ಲ. ಜೊತೆಗೆ ಇಡೀ ದೇಹದ ಅಂಗಗಳು ಪುನಃಶ್ಚೇತನಗೊಳ್ಳುತ್ತದೆ ಮತ್ತು ನಿರ್ಜೀವ ಕೋಶಗಳು ಕಳಚಿಕೊಂಡು, ಹೊಸ ಕೋಶಗಳು ಜನಿಸುತ್ತವೆ.

ಯಾವ ವ್ಯಕ್ತಿಯು ಸರಿಯಾಗಿ ರಾತ್ರಿಯ ಹೊತ್ತು ನಿದ್ದೆ ಮಾಡುವುದಿಲ್ಲವೋ, ಆತ ಹಲವಾರು ರೋಗ ರುಜಿನಗಳಿಗೆ ಗುರಿಯಾಗುತ್ತಾನೆ. ನಿದ್ದೆ ಇಲ್ಲದಿದ್ದರೆ, ಕೊರ್ಟಿಸೊಲ್ ಎಂಬ ಒತ್ತಡಕಾರಿ ಹಾರ್ಮೋನ್ ದೇಹದಲ್ಲಿ ಅಧಿಕವಾಗುತ್ತದೆ ಮತ್ತು ಇದರಿಂದ ಇಡೀ ದಿನ ನೀವು ಒತ್ತಡದಲ್ಲಿ ನರಳಬೇಕಾಗುತ್ತದೆ. ಅಲ್ಲದೆ ನಿದ್ರಾಹೀನತೆಯು ಮರುದಿನ ನಿಮ್ಮ ಯೋಜನೆಗಳನ್ನೆಲ್ಲ ತಲೆ ಕೆಳಗೆ ಮಾಡುತ್ತದೆ. ಇದಕ್ಕೆ ಕಾರಣ, ಅವಿಶ್ರಾಂತಿ ಮತ್ತು ಗೊಂದಲ. ಯಾರು ಚೆನ್ನಾಗಿ ಮಾಡುತ್ತಾರೋ, ಅವರು ಸದೃಢವಾದ ರೋಗ ನಿರೋಧಕ ಶಕ್ತಿ ಮತ್ತು ಮಾನಸಿಕ ದೃಢತೆಯನ್ನು ಹೊಂದಿರುತ್ತಾರೆ. ಮಲಗಿದ ತಕ್ಷಣ ನಿದ್ದೆ ಬರಬೇಕೆ? ಈ ಆಹಾರಗಳನ್ನು ತಿನ್ನಿ

ಯಾವಾಗ ನೀವು ದಿನದ ಸಮಯದಲ್ಲಿ ಸುಸ್ತಾಗುತ್ತೀರೋ, ಆಗ ನಿಮ್ಮ ದೇಹವು ಮೆದುಳಿಗೆ ವಿಶ್ರಾಂತಿ ಬೇಕು ಎಂಬ ಸಂಕೇತವನ್ನು ಕಳುಹಿಸುತ್ತಲೆ ಇರುತ್ತದೆ. ನಿಮ್ಮ ಮೆದುಳಿನಲ್ಲಿರುವ ನಿದ್ದೆ ಕೇಂದ್ರವು ಆಗ ಸಕ್ರಿಯಗೊಳ್ಳುತ್ತದೆ ಮತ್ತು ನೀವು ಈ ಸಮಯದಲ್ಲಿ ನಿದ್ದೆಗೆ ಜಾರುತ್ತೀರಿ. ಕೆಲವೊಮ್ಮೆ ನಿಮ್ಮ ದೇಹವು ಹಲವು ಕಾರಣಗಳಿಂದಾಗಿ, ನೀವು ಸುಸ್ತಾಗಿದ್ದೀರಿ ಎಂಬ ಸಂಕೇತವನ್ನು ಮೆದುಳಿಗೆ ಕಳುಹಿಸುವುದಿಲ್ಲ. ಆಗ ನಿದ್ದೆ ಮಾಡಬೇಕು ಎಂಬ ಭಾವನೆ ನಿಮಗೆ ಬರುವುದಿಲ್ಲ. ಬನ್ನಿ ಇದರ ಹಿಂದೆ ಯಾವ ಯಾವ ಕಾರಣಗಳು ಇರಬಹುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನ ಓದಿ. ನಿಮ್ಮನ್ನು ನಿದ್ದೆ ಮಾಡದಂತೆ ತಡೆಯುವ ಅಂಶಗಳನ್ನು ನಾವು ಈ ಮುಂದೆ ನೀಡಿದ್ದೇವೆ. ಮುಂದೆ ಓದಿ..

ಗಂಭೀರ ಚರ್ಚೆಗಳನ್ನು ಮಾಡುವುದು

ಗಂಭೀರ ಚರ್ಚೆಗಳನ್ನು ಮಾಡುವುದು

ನೀವು ನಿದ್ದೆ ಮಾಡುವ ಸಂದರ್ಭದಲ್ಲಿ ಗಂಭೀರವಾದ ಚರ್ಚೆಗಳನ್ನು ಮಾಡುವುದು, ಅದರಲ್ಲಿಯೂ ನಕಾರಾತ್ಮಕ ಚಿಂತನೆಗಳಿರುವ ಚರ್ಚೆಗಳನ್ನು ಮಾಡುವುದರಿಂದ, ನಿಮಗೆ ಕಿರಿಕಿರಿಯುಂಟಾಗುತ್ತದೆ ಮತ್ತು ಕ್ಷೋಭೆಗೊಳಗಾಗುತ್ತೀರಿ. ಒಂದು ಅಧ್ಯಯನದ ಪ್ರಕಾರ ನೀವು ಮಲಗುವಾಗ ಯಾರೊಂದಿಗಾದರು ಜಗಳವಾಡಿದರೆ, ಅದರ ನಕಾರಾತ್ಮಕ ಚಿಂತನೆಗಳು ನೀವು ಬೆಳಗ್ಗೆ ಏಳುವವರೆಗೆ ಕಾಡುತ್ತಲೆ ಇರುತ್ತವಂತೆ.

ಕುತೂಹಲಕಾರಿ ಕಥೆಗಳನ್ನು ಓದಬೇಡಿ

ಕುತೂಹಲಕಾರಿ ಕಥೆಗಳನ್ನು ಓದಬೇಡಿ

ನಿದ್ದೆಗೆ ಮುನ್ನ ಒಂದು ಕಾದಂಬರಿಯನ್ನು ಅಥವಾ ಪುಸ್ತಕವನ್ನು ಓದುವುದರಿಂದ ನೀವು ಬೇಗ ನಿದ್ದೆಗೆ ಜಾರುತ್ತೀರಿ. ಆದರೂ ಕುತೂಹಲಕಾರಿ ಕಥೆಯನ್ನು ಓದುವುದರಿಂದ, ಆ ಕುತೂಹಲವೇ ನಿಮ್ಮನ್ನು ನಿದ್ದೆಗೆ ಜಾರದಂತೆ ತಡೆಯುತ್ತದೆ. ಹೀಗೆ ನೀವು ನಿದ್ದೆ ಮಾಡುವುದಿಲ್ಲ.

ವ್ಯಾಯಾಮ

ವ್ಯಾಯಾಮ

ವ್ಯಾಯಾಮವು ನಾವು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಆದರು ನಿದ್ದೆಗೆ ಹೋಗುವ ಮುನ್ನ ಮೂರು ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ವ್ಯಾಯಾಮ ಮಾಡುವುದರಿಂದ ನಿಮಗೆ ನಿದ್ದೆಯು ದೂರವಾಗಬಹುದು. ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ಉಷ್ಣಾಂಶವು ಅಧಿಕವಾಗುತ್ತದೆ ಮತ್ತು ಇದರಿಂದಾಗಿ ನಿಮಗೆ ನಿದ್ದೆ ಬರುವುದಿಲ್ಲ. ಇದನ್ನು ಸಹ ನಿದ್ದೆಗೆ ಮುನ್ನ ಮಾಡಬೇಡಿ.

ಇಂಟರ್‌ನೆಟ್‌ನಲ್ಲಿ ಬ್ರೌಸ್ ಮಾಡುವುದು

ಇಂಟರ್‌ನೆಟ್‌ನಲ್ಲಿ ಬ್ರೌಸ್ ಮಾಡುವುದು

ಲ್ಯಾಪ್‌ಟಾಪ್ ಬಳಕೆ ಮತ್ತು ಟಿವಿ ನೋಡುವುದು ಮುಂತಾದ ಕಾರ್ಯಗಳನ್ನು ನಿದ್ದೆಗೆ ಮುನ್ನ ಮಾಡಬೇಡಿ. ಕಂಪ್ಯೂಟರ್ ಮತ್ತು ಟಿವಿ ಪರದೆಗಳಿಂದ ಬರುವ ಬೆಳಕು, ನೀವು ನಿದ್ದೆ ಮಾಡಲು ಸಹಕರಿಸುವ ಮೆಲಟೊನಿನ್ ಎಂಬ ಹಾರ್ಮೊನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನಿದ್ದೆಗೆ ಭಂಗ ತರುವಂತಹ ಸ್ಕ್ರೀನ್ ಲೈಟ್‌ಗಳನ್ನು, ಅಂದರೆ ಮೊಬೈಲ್ ಸ್ಕ್ರೀನ್ ಲೈಟ್ ಸಹಿತ ಎಲ್ಲವನ್ನೂ ಬಂದ್ ಮಾಡಿ. ಆರಾಮವಾಗಿ ಮಲಗಿ.

ಹಾಸಿಗೆಯ ಮೇಲೆ ಕೆಲಸ ಮಾಡುವುದು

ಹಾಸಿಗೆಯ ಮೇಲೆ ಕೆಲಸ ಮಾಡುವುದು

ಹಾಸಿಗೆಯ ಮೇಲೆ ಯಾವುದೇ ಕಚೇರಿ ಕೆಲಸ ಮಾಡುವುದರಿಂದ, ನಿಮ್ಮ ಮೆದುಳಿನ ಗಮನವೆಲ್ಲ ಅದರತ್ತಲೆ ಹೋಗುತ್ತದೆ. ಇದರಿಂದ ನಿಮಗೆ ಒತ್ತಡವು ಅಧಿಕಗೊಳ್ಳುತ್ತದೆ. ಆದ್ದರಿಂದ ಇದನ್ನು ನಿದ್ದೆ ಮಾಡುವಾಗ ಮಾಡಬೇಡಿ.

English summary

Things To Avoid Before You Sleep

Sleep is important for your well-being. Not having a good night sleep makes your day tiring and you tend to get fatigued. During sleep all the body organs are healed, new cells are formed and dead cells are removed.
Story first published: Saturday, May 9, 2015, 23:19 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X