For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ಬಿಳಿ ಭಾಗವು ಕೂಡ ದೇಹಕ್ಕೆ ಅಪಾಯ ತಂದೊಡ್ಡಬಹುದು!

|

ನೀವು ಪ್ರತಿ ದಿನ ಮೊಟ್ಟೆಯ ಬಿಳಿಭಾಗಗಳನ್ನು ಸೇವಿಸುತ್ತೀರಾ? ಹಾಗಾದರೆ ನೀವು ಮೊಟ್ಟೆಯ ಬಿಳಿಭಾಗದ ಪ್ರಯೋಜನಗಳ ಕುರಿತು ತಿಳಿದುಕೊಂಡಿರುತ್ತೀರಿ. ಆದರೆ ಅವುಗಳ ಅಡ್ಡ ಪರಿಣಾಮಗಳ ಕುರಿತು ತಿಳಿದುಕೊಂಡಿರುವಿರಾ? ಹೌದು ಮೊಟ್ಟೆಯ ಬಿಳಿಭಾಗದಲ್ಲಿ ಸಹ ಅಡ್ಡಪರಿಣಾಮಗಳು ಇರುತ್ತವೆ. ಅವುಗಳು ಏನು ಎಂದು ತಿಳಿಯುವ ಆಸೆ ನಿಮಗಿದೆಯೇ? ಈ ಅಂಕಣವನ್ನು ಓದಿ ನಿಮಗೆ ತಿಳಿಯುತ್ತದೆ.

ಮೊಟ್ಟೆಯ ಬಿಳಿಭಾಗದಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂದು ನೀವು ಕುತೂಹಲಗೊಂಡಿದ್ದೀರಾ? ಮೊಟ್ಟೆಯ ಬಿಳಿ ಭಾಗಗಳು ಆರೋಗ್ಯಕರವಲ್ಲವೇ, ಎಂದು ನೀವು ವಾದ ಮಾಡಬಹುದು. ಆದರೆ ಈ ಮೊಟ್ಟೆಯ ಬಿಳಿಭಾಗದ ಅಡ್ಡ ಪರಿಣಾಮವು ನೀವು ವಾದ ಮಾಡಿದರು, ಮಾಡದಿದ್ದರು, ನಿಮ್ಮ ದೇಹದ ಮೇಲೆ ಪ್ರಭಾವ ಬೀರುತ್ತದೆ. ಬನ್ನಿ ಅದು ಹೇಗೆ ಎಂದು ಈ ಕೆಳಗೆ ವಿವರಿಸಿದ್ದೇವೆ ಓದಿ:

Surprising Side Effects Of Egg White

ಸಲ್ಮೊನೆಲ್ಲದ ಅಧಿಕ ಅಪಾಯ
ಕಚ್ಛಾ ಮೊಟ್ಟೆಗಳಲ್ಲಿ, ಅಲ್ಬುಮಿನ್ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರುತ್ತದೆ. ಸಲ್ಮೊನೆಲ್ಲ ಎಂಬ ಬ್ಯಾಕ್ಟೀರಿಯಾವು ಕೋಳಿಗಳ ಕರುಳಿನಲ್ಲಿ ಕಂಡು ಬರುತ್ತದೆ. ಇದು ಒಮ್ಮೊಮ್ಮೆ ಮೊಟ್ಟೆಗಳ ಹೊರ ಭಾಗದಲ್ಲಿ ಹಾಗು ಒಳಭಾಗದಲ್ಲಿ ಸಹ ಕಂಡು ಬರುತ್ತದೆ. ಈ ಸಲ್ಮೊನೆಲ್ಲವನ್ನು ನಾಶ ಮಾಡಲು ತುಂಬಾ ಸಮಯ ಬೇಯಿಸಬೇಕು. ಜೊತೆಗೆ ಇದರ ಉಷ್ಣಾಂಶವು ಸಹ ಅಧಿಕವಾಗಿರಬೇಕು. ಹಾಗಾಗಿ ಬೇಯಿಸಿದ ಮೊಟ್ಟೆಗಳು ಆರೋಗ್ಯಕರವಾಗಿದ್ದರೆ, ಅರೆ ಬೇಯಿಸಿದ ಮೊಟ್ಟೆಗಳು ಬ್ಯಾಕ್ಟೀರಿಯಾಕಾರಕಗಳಾಗಿರುತ್ತವೆ. ಮೊಟ್ಟೆಯ ಬಿಳಿಭಾಗದ ಬೆರಗುಗೊಳಿಸುವ ಅಡ್ಡಪರಿಣಾಮಗಳು

ಬಯೊಟೀನ್‌ನ ಕ್ಷೀಣತೆ
ಕಚ್ಛಾ ಮೊಟ್ಟೆಗಳನ್ನು ಸೇವಿಸುವುದು ಎಂದರೆ ಬಯೊಟೀನ್‌ ಅನ್ನು ಕ್ಷೀಣಗೊಳಿಸಿಕೊಳ್ಳುವುದು ಎಂದರ್ಥ. ಬಯೊಟೀನ್‌ ಎಂಬುದು ವಿಟಮಿನ್ ಎಚ್ ಅಥವಾ ವಿಟಮಿನ್ ಬಿ7 ಎಂಬ ಪ್ರಸಿದ್ಧ ವಿಟಮಿನ್ ಆಗಿರುತ್ತದೆ. ಇದರ ಕೊರತೆಯು ಕ್ರೇಡೆಲ್ ಟಾಪ್ ( ಎಳೆಯ ಮಕ್ಕಳಲ್ಲಿ ಕಂಡು ಬರುವ ತ್ವಚೆಯ ಸಮಸ್ಯೆ) ಮತ್ತು ಸೆಬೊರ್ರೆಹಿಕ್ ರ‍್ಯಾಶ್ (ವಯಸ್ಕರಲ್ಲಿ ಕಂಡು ಬರುತ್ತದೆ) ಉಂಟು ಮಾಡುತ್ತದೆ. ಈ ಬಯೊಟೀನ್‌ನ ಕೊರತೆಯಿಂದ ಮಾಂಸ ಖಂಡಗಳು ತೆಳ್ಳಗೆ ಆಗುತ್ತವೆ, ಮೈ-ಕೋವು ನೋವು, ಕೂದಲು ಉದುರುವಿಕೆ ಹಾಗು ಇನ್ನಿತರ ಸಮಸ್ಯೆಗಳು ಕಂಡು ಬರುತ್ತವೆ.


ಕಚ್ಛಾ ಅಲ್ಬುಮಿನ್‌ನಲ್ಲಿ ಅವಿಡಿನ್ ಎಂಬ ಪ್ರೋಟಿನ್ ಇರುತ್ತದೆ. ಇದೇನು ವಿಷಕಾರಿ ಅಂಶವಲ್ಲ. ಆದರೆ ಇದು ನಿಮ್ಮ ದೇಹದಿಂದ ಬಯೋಟಿನ್ ಅಂಶವನ್ನು ಹೀರಿಕೊಂಡು ಬಿಡುತ್ತದೆ. ನಾವು ಯಾವಾಗ ಪ್ರತಿದಿನ ಮೊಟ್ಟೆಯ ಬಿಳಿಭಾಗವನ್ನು ಸೇವಿಸಲು ಆರಂಭಿಸುತ್ತೇವೆಯೋ, ಆಗ ವಾರದೊಳಗೆ ನಾವು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತೇವೆ. ಈ ಸಮಸ್ಯೆಗಳು ನಾವು ಕಾಯಿಲೆ ಬಿದ್ದಾಗ ವಿಕೋಪಕ್ಕೆ ಹೋಗುತ್ತವೆ.

ಅಲರ್ಜಿಗಳು


ಹಲವಾರು ಸಂದರ್ಭಗಳಲ್ಲಿ, ಅಲರ್ಜಿ ಇರುವವರಲ್ಲಿ ಮೊಟ್ಟೆಯ ಬಿಳಿಭಾಗಗಳು ಅಲರ್ಜಿಯನ್ನು ಹೆಚ್ಚಿಸುತ್ತವೆ, ಜೊತೆಗೆ ಅಲ್ಬುಮಿನ್ ಪ್ರೋಟಿನ್‌ಗಳಿಗು ಸಹ ಇವು ಅಲರ್ಜಿಯನ್ನುಂಟು ಮಾಡುತ್ತವೆ. ಈ ಅಲರ್ಜಿಗಳು ದದ್ದುಗಳು, ಊತ, ನಾಸಿಯಾ, ಡಯೇರಿಯಾ, ವಾಂತಿ, ಉಬ್ಬಸ, ಕೆಮ್ಮು, ಸೀನು ಇತ್ಯಾದಿ ರೂಪದಲ್ಲಿ ಕಂಡು ಬರುತ್ತವೆ.

ಪ್ರೋಟೀನ್‌ಗಳ ಓವರ್ ಲೋಡ್
ವೈದ್ಯರ ಪ್ರಕಾರ ಅಧಿಕ ಪ್ರಮಾಣದ ಪ್ರೋಟೀನ್‌ಗಳನ್ನು ಸೇವಿಸುವುದು ಅಪಾಯಕಾರಿ. ಇದರಿಂದ ಮೂತ್ರಪಿಂಡಗಳ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆಯಂತೆ. ಕಡಿಮೆ ಗ್ಲೊಮರ್ಕ್ಯುಲರ್ ಫಿಲ್ಟ್ರೇಷನ್ ದರ ಇರುವ ಜನರಲ್ಲಿ (GFR, ಇದು ಮೂತ್ರಪಿಂಡಗಳಲ್ಲಿ ಹರಿಯುವ ದ್ರವದ ದರವಾಗಿದೆ) ಮೂತ್ರಪಿಂಡದ ಗಾಯಕ್ಕೆ ಕಾರಣವಾಗುತ್ತದೆಯಂತೆ. ಇದಕ್ಕೆ ಅಧಿಕ ಪ್ರೋಟಿನ್‌ಗಳು ಸಹ ಕಾರಣ.


0.6 ರಿಂದ 0.8 ಗ್ರಾಂ ಪ್ರೋಟೀನ್‌ನ್ನು ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿರುವವರು ಸೇವಿಸಬೇಕು. ಆದರೂ ವೈದ್ಯರು 60% ರಷ್ಟು ಪ್ರೋಟಿನ್‌ಗಳನ್ನು ನಾವು ಮೊಟ್ಟೆಗಳಿಂದಲೆ ಸೇವಿಸುತ್ತೀವಿ ಎಂದು ಹೇಳುತ್ತಾರೆ. ಇದಕ್ಕೆ ಮೂತ್ರ ಪಿಂಡದ ಸಮಸ್ಯೆ ಎದುರಿಸುತ್ತಿರುವವರು ಸಹ ಹೊರತಲ್ಲ. ಹಾಗಾಗಿ ಮೊಟ್ಟೆಯನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
English summary

Surprising Side Effects Of Egg White

Do you eat egg whites on a daily basis? Then you would be very much aware of the benefits they offer. But what about the side effects? Yes. Even egg whites do have side effects. Would you like to know what they are? Go ahead and read this post!
Story first published: Wednesday, April 22, 2015, 11:47 [IST]
X
Desktop Bottom Promotion