For Quick Alerts
ALLOW NOTIFICATIONS  
For Daily Alerts

ಮನಸ್ಸಿನ ನೆಮ್ಮದಿಗೆ, ಮಾಡಿ ನೋಡಿ ಇಂತಹ ಸರಳ ಟ್ರಿಕ್ಸ್!

By Arshad
|

ನಾವು ಸಾಕಷ್ಟು ಬಾರಿ ಸಾಕಷ್ಟು ಕಾರಣಗಳಿಗಾಗಿ ಖಿನ್ನತೆಗೆ ಒಳಗಾಗುತ್ತೆವೆ. ಕೆಲವರಿಗಂತೂ ಇದರಿಂದ ಹೊರಬರುವುದೇ ಅಸಾಧ್ಯ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡ ಮನಸ್ಥಿತಿ ಅವರದ್ದಾಗಿರುತ್ತದೆ.

ಇಂತಹ ಮನಸ್ಥಿತಿಯನ್ನು ಹೊಂದಿರುವವರಿಗೆ ಯಾವುದೇ ಸಾಧನೆಯನ್ನು, ಕಾರ್ಯವನ್ನು ಮಾಡುವುದು ಅಸಾಧ್ಯ. ಆದ್ದರಿಂದ ನಮಗೆ ನಾವೇ ಸಮಾಧಾನ ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಖಿನ್ನತೆಯಿಂದ ಹೊರಬರುವುದಕ್ಕೆ ಕೆಲವು ಉತ್ತಮ ಸಲಹೆಗಳು ಇಲ್ಲಿವೆ.

ಖಾರವಾದ ಆಹಾರಗಳನ್ನು ಸೇವಿಸಿ

ಖಾರವಾದ ಆಹಾರಗಳನ್ನು ಸೇವಿಸಿ

ಸಂಶೋಧನೆಯಿಂದ ಸಾಬೀತಾದ ಈ ವಿಧಾನದಲ್ಲಿ ನಿಮ್ಮ ಆಹಾರದಲ್ಲಿ ಸಾಕಷ್ಟು ಖಾರವಿರುವಂತೆ ಸಲಹೆ ನೀಡಲಾಗುತ್ತದೆ. ಹಸಿ ಮೆಣಸು, ಒಣಮೆಣಸು, ಕಾಳುಮೆಣಸು ಮೊದಲಾದ ಖಾರವಾದ ವಸ್ತುಗಳಿರುವ ಖಾದ್ಯಗಳನ್ನು ಮಿತವಾದ ಪ್ರಮಾಣದಲ್ಲಿ ಸೇವಿಸಿ. (ಪ್ರಮಾಣ ಹೆಚ್ಚಾದರೆ ಮಲವಿಸರ್ಜನೆಯ ವೇಳೆ ಉರಿ ಹೆಚ್ಚಾಗುತ್ತದೆ) ಅಂತೆಯೇ ಸಾಕಷ್ಟು ಪ್ರಮಾಣದಲ್ಲಿ ಮೊಸರನ್ನೂ ಸೇವಿಸುವುದು ಅವಶ್ಯಕ.

ಖಾರವಾದ ಆಹಾರಗಳನ್ನು ಸೇವಿಸಿ

ಖಾರವಾದ ಆಹಾರಗಳನ್ನು ಸೇವಿಸಿ

ಖಾರ ಪದಾರ್ಥಗಳು ಜೀರ್ಣಾಂಗಗಳಿಗೆ ರವಾನೆಯಾದೊಡನೆಯೇ ಮೆದುಳು ಇವುಗಳ ಉರಿಯನ್ನು ಕಡಿಮೆಮಾಡಲು ಎಂಡಾರ್ಫಿನ್ (endorphin) ಎಂಬ ರಸದೂತಗಳನ್ನು ಬಿಡುಗಡೆಮಾಡಲು ಆದೇಶ ನೀಡುತ್ತದೆ. ಇದು ಉರಿಯನ್ನು ಕಡಿಮೆ ಮಾಡುವ ಜೊತೆಗೇ ಖಿನ್ನತೆಗೆ ಕಾರಣವಾಗಿದ್ದ ಕಣಗಳನ್ನೂ ಶಾಂತಗೊಳಿಸಿ ನಿಮ್ಮ ಮನದಲ್ಲಿ ಹರ್ಷದ ಹೊನಲು ಹರಿಯುವಂತೆ ಮಾಡುತ್ತದೆ. ಚಿಕ್ಕವರಿದ್ದಾದ ಹುಳಿಮಾವಿನಕಾಯಿಗೆ ಉಪ್ಪು ಖಾರ ಹಾಕಿ ತಿಂದ ಬಳಿಕ ಮನಸ್ಸಿನಲ್ಲಾಗಿದ್ದ ಉಲ್ಲಾಸ ಈಗ ನೆನಪಿಗೆ ಬಂತೇ? ಮನಸ್ಸು ವ್ಯಗ್ರಗೊಂಡಿದ್ದಾಗ ಮಾವಿನಕಾಯಿ ಅಥವಾ ಸೌತೆಕಾಯಿಯನ್ನು ಉಪ್ಪು ಕಾರ ಹಾಕಿ ತಿನ್ನಿ.

ಹುಸಿನಗೆ ಬೀರಿ

ಹುಸಿನಗೆ ಬೀರಿ

ಇತ್ತೀಚೆಗೆ ಲಾಪ್ಟರ್ ಥೆರಪಿ (laughter therapy) ಎಂಬ ಗೀಳು ಪಟ್ಟಣಗಳಲ್ಲಿ ಜನಪ್ರಿಯವಾಗುತ್ತಿದೆ. ನಗುವ ಮೂಲಕ ಮುಖದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ದೇಹದಲ್ಲಿ ಎಂಡಾರ್ಫಿನ್ ರಸದೂತ ಸ್ರಾವಗೊಳ್ಳುತ್ತದೆ.

ಹುಸಿನಗೆ ಬೀರಿ

ಹುಸಿನಗೆ ಬೀರಿ

ನಗು ಸಾಂಕ್ರಾಮಿಕ 'ನೀನು ನಕ್ಕರೆ ಜಗ ನಿನ್ನೊಂದಿಗೆ ನಗುವುದು, ನೀ ಅತ್ತರೆ ನೀನೋಬ್ಬನೇ ಅಳಬೇಕಾಗುವುದು' ಎಂಬ ಆಂಗ್ಲ ಸುಭಾಷಿತ ನಗುವಿನ ಮಹತ್ವವನ್ನು ಸಾರುತ್ತದೆ. ಖಿನ್ನರಾಗಿದ್ದ ಸಮಯದಲ್ಲಿ ನಗು ಬಾರದಿದ್ದರೂ ಹುಸಿಯಾಗಿ ನಗುವ ಮೂಲಕ ನಿಮ್ಮ ಮನಸ್ಸನ್ನು ನಿರಾಳಗೊಳಿಸಬಹುದು.

ನಿದ್ದೆಗೆ ಶರಣಾಗಿ

ನಿದ್ದೆಗೆ ಶರಣಾಗಿ

ಒಂದು ವೇಳೆ ಮನ ಖಿನ್ನತೆಗೆ ಬಲಿಯಾಗಿದ್ದರೆ ಎಚ್ಚರವಿದ್ದಷ್ಟೂ ಹೊತ್ತು ಋಣಾತ್ಮಕ ಚಿಂತನೆಗಳು ನಿಮ್ಮನ್ನು ಮತ್ತಷ್ಟು ಕಂದಕಕ್ಕೆ ದೂಡುತ್ತವೆ. ಆದ್ದರಿಂದ ಪರಿಸ್ಥಿತಿ ಹದಗೆಡುವ ಮುನ್ನ ಯಾವುದೇ ಕಾರಣ ಅಡ್ಡಿಯಾಗದಂತೆ ಸುಮಾರು ಒಂಬತ್ತು ಗಂಟೆಗಳ ಕಾಲ ನಿದ್ರಿಸುವುದರಿಂದ ಮನ ನಿರಾಳಗೊಳ್ಳಲು ಸಾಧ್ಯವಾಗುತ್ತದೆ.

ನಿದ್ದೆಗೆ ಶರಣಾಗಿ

ನಿದ್ದೆಗೆ ಶರಣಾಗಿ

ಇದರಿಂದ ಖಿನ್ನತೆಯಿಂದಾಗಿ ಘಾಸಿಗೊಂಡಿದ್ದ ಜೀವಕೋಶಗಳು ಮರುಚೈತನ್ಯ ಪಡೆಯಲು ಸಮಯಾವಕಾಶ ಸಿಕ್ಕಂತಾಗುತ್ತದೆ. ಒಂದು ವೇಳೆ ಖಿನ್ನತೆಯಲ್ಲಿ ನಿದ್ದೆಯ ಬದಲಿಗೆ ಬೇರಾವುದೋ ದಾಸ್ಯಕ್ಕೆ ಶರಣಾದರೆ (ಬಹುತೇಕ ಜನರು ಶರಣಾಗುವುದು ಮದ್ಯ, ಧೂಮಪಾನಕ್ಕೆ) ಇದಕ್ಕಿಂತ ದೊಡ್ಡ ತಪ್ಪು ಜೀವನದಲ್ಲಿ ಇನ್ನೊಂದಿಲ್ಲ. ಸುಖವಾದ ನಿದ್ದೆಯಿಂದ ಎದ್ದ ಬಳಿಕ ಮನ ಧನಾತ್ಮಕ ಚಿಂತನೆ ನಡೆಸಲು ಶಕ್ಯವಾಗಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಈಗ ಸಕ್ಷಮವಾಗಿರುತ್ತದೆ.

ಕೆಲವು ಚಾಕಲೇಟುಗಳನ್ನು ತಿನ್ನಿ

ಕೆಲವು ಚಾಕಲೇಟುಗಳನ್ನು ತಿನ್ನಿ

ಚಾಕಲೇಟು, ವಿಶೇಷವಾಗಿ ಕಪ್ಪು ಚಾಕಲೇಟನ್ನು ಸೇವಿಸಿದಾಗ ಮನಸ್ಸನ್ನು ಉಲ್ಲಾಸಕರವಾಗಿಸುವ ಕೆಲವು ರಾಸಾಯನಿಕಗಳು ರಕ್ತದ ಮೂಲಕ ಮೆದುಳಿಗೆ ತಲುಪುತ್ತವೆ. ಇವು ಮನದ ದುಗುಡವನ್ನು ಕಡಿಮೆಗೊಳಿಸಿ ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ. ಆದರೆ ಕಪ್ಪು ಚಾಕಲೇಟಿನ ಸೇವನೆಯನ್ನು ಖಂಡಿತಾ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಡಿ. ಏಕೆಂದರೆ ಇದು ನಿಮ್ಮ ದೇಹಕ್ಕೆ ಬೇರೆ ರೀತಿಯ ತೊಂದರೆಯನ್ನು ಉಂಟುಮಾಡಬಹುದು.

ಅತಿ ಹೆಚ್ಚು ಯೋಚಿಸಬೇಡಿ

ಅತಿ ಹೆಚ್ಚು ಯೋಚಿಸಬೇಡಿ

ಖಿನ್ನತೆಗೆ ಒಳಗಾಗಿದ್ದ ಮನಸ್ಸು ಆ ಪರಿಸ್ಥಿತಿಯನ್ನೇ ನೆನೆಸಿಕೊಂಡು ಮತ್ತೆ ಮತ್ತೆ ದುಃಖ ಉಂಟುಮಾಡಿದ್ದ ಘಟನೆಯನ್ನೇ ಪುನರಾವರ್ತಿಸುವಂತೆ ಮಾಡುತ್ತದೆ. ಇದು ನಿಮ್ಮ ಆರೋಗ್ಯವನ್ನೂ, ನೆಮ್ಮದಿಯನ್ನೂ ಕೆಡಿಸುತ್ತದೆ.

ಅತಿ ಹೆಚ್ಚು ಯೋಚಿಸಬೇಡಿ

ಅತಿ ಹೆಚ್ಚು ಯೋಚಿಸಬೇಡಿ

ಬದಲಿಗೆ ನಿಮ್ಮ ಚಿಂತನೆಯನ್ನು ಬೇರೊಂದು ಕಡೆಗೆ ಹೊರಳಿಸಿ. ಸಾಧ್ಯವಾದಷ್ಟೂ ನಾಲ್ಕು ಜನರ ನಡುವೆ ಇದ್ದು ಸತತ ಸಮಾಲೋಚನೆ ಅಥವಾ ಪರ್ಯಾಯಗಳ ಬಗ್ಗೆ ಧನಾತ್ಮಕ ಚಿಂತನೆಗಳನ್ನು ನಡೆಸುವ ಮೂಲಕ ಖಿನ್ನತೆಯಿಂದ ಖಂಡಿತಾ ಹೊರಬರಬಹುದು.

English summary

Medically Proven Tips To Boost Your Mood

It is humane to feel sad and gloomy at times. But when it becomes chronic, you must do something about it as it can turn into a serious mental illness known as depression. In our society, there is a social stigma attached to visiting a psychotherapist. People feel embarrassed or shy or we fear about what people might think about visiting a psychologist.
X
Desktop Bottom Promotion